ಶಾರುಖ್ ಮನೆಯಲ್ಲಿರುವ ಒಟ್ಟು ಟಿವಿಗಳೆಷ್ಟು? ಬೆಲೆ ಕೇಳಿದ್ರೆ ನಿಜಕ್ಕೂ ಅಚ್ಚರಿ ಪಡುತ್ತೀರಿ

Published : May 26, 2022, 03:42 PM IST
ಶಾರುಖ್ ಮನೆಯಲ್ಲಿರುವ ಒಟ್ಟು ಟಿವಿಗಳೆಷ್ಟು? ಬೆಲೆ ಕೇಳಿದ್ರೆ ನಿಜಕ್ಕೂ ಅಚ್ಚರಿ ಪಡುತ್ತೀರಿ

ಸಾರಾಂಶ

ಇದೀಗ ಶಾರುಖ್ ಮತ್ತೊಂದು ವಿಚಾರಕ್ಕೆ ಸುದ್ದಿಯಾಗಿದ್ದಾರೆ. ಶಾರುಖ್ ತಮ್ಮ ಮನೆಯಲ್ಲಿರುವ ಟಿವಿಗಳ ವಿಚಾರವಾಗಿ ಸದ್ದು ಮಾಡುತ್ತಿದ್ದಾರೆ. ಇತ್ತೀಚಿಗಷ್ಟೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಶಾರುಖ್ ತಮ್ಮ ಮನೆಯಲ್ಲಿರುವ ಟಿವಿಗಳ ಸಂಖ್ಯೆ ಎಷ್ಟು ಮತ್ತು ಅವುಗಳ ಒಟ್ಟು ಬೆಲೆ ಎಷ್ಟು ಎಂದು ವಿವರಿಸಿದ್ದಾರೆ.

ಬಾಲಿವುಡ್ ಸ್ಟಾರ್ ನಟ ಶಾರುಖ್ ಖಾನ್(Shah Rukh Khan) ಸಿನಿಮಾಗಳು ರಿಲೀಸ್ ಆಗದೆ ಅನೇಕ ವರ್ಷಗಳೇ ಆಗಿವೆ. ಆದರೂ ಕಿಂಗ್ ಖಾನ್ ಶಾರುಖ್ ಒಂದಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಅತ್ಯಂತ ಶ್ರೀಮಂತ ನಟರಲ್ಲಿ ಒಬ್ಬರಾಗಿರುವ ಶಾರುಖ್ ಮುಂಬೈನ ಪ್ರತಿಷ್ಠಿತ ಪ್ರದೇಶದಲ್ಲಿರುವ ಮನ್ನತ್ ಬಂಗಲೆಯಲ್ಲಿ ವಾಸುತ್ತಿದ್ದಾರೆ. ಇತ್ತೀಚಿಗಷ್ಟೆ ಮನ್ನತ್ ಬಂಗಲೆ ಸಿಕ್ಕಾಪಟ್ಟೆ ಸುದ್ದಿಯಾಗಿತ್ತು. ಮನ್ನತ್ ಬಂಗಲೆಯ ನಾಮಫಲಕ ಬದಲಾವಣೆ ಮಾಡುವ ಮೂಲಕ ಶಾರುಖ್ ಸದ್ದು ಮಾಡಿದ್ದರು. ಅಷ್ಟಕ್ಕೂ ನಾಮಫಲಕ ಒಂದಕ್ಕೆ ಶಾರುಖ್ ಬರೋಬ್ಬರಿ 20 ರಿಂದ 25 ಲಕ್ಷ ಖರ್ಚು ಮಾಡಿದ್ದರು. ಬೆಲೆ ಕೇಳಿ ಅಭಿಮಾನಿಗಳು ಅಚ್ಚರಿ ಪಟ್ಟಿದ್ದರು.

ಇದೀಗ ಶಾರುಖ್ ಮತ್ತೊಂದು ವಿಚಾರಕ್ಕೆ ಸುದ್ದಿಯಾಗಿದ್ದಾರೆ. ಶಾರುಖ್ ತಮ್ಮ ಮನೆಯಲ್ಲಿರುವ ಟಿವಿಗಳ ವಿಚಾರವಾಗಿ ಸದ್ದು ಮಾಡುತ್ತಿದ್ದಾರೆ. ಇತ್ತೀಚಿಗಷ್ಟೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಶಾರುಖ್ ತಮ್ಮ ಮನೆಯಲ್ಲಿರುವ ಟಿವಿಗಳ ಸಂಖ್ಯೆ ಎಷ್ಟು ಮತ್ತು ಅವುಗಳ ಒಟ್ಟು ಬೆಲೆ ಎಷ್ಟು ಎಂದು ವಿವರಿಸಿದ್ದಾರೆ. 'ನಾನು ಮಲಗುವ ಕೋಣೆಯಲ್ಲಿ ಒಂದು ಟಿವಿ ಇದೆ. ನಮ್ಮ ಮನೆಯ ಲಿವಿಂಗ್ ರೂಮ್ ನಲ್ಲಿ ಒಂದು ಟಿವಿ ಇದೆ. ನನ್ನ ಪುಟ್ಟ ಮಗ ಅಬ್ರಾಮ್ ಕೋಣೆಯಲ್ಲಿ ಒಂದು ಟಿವಿ, ಆರ್ಯನ್ ಕೋಣೆಯಲ್ಲಿ ಒಂದು ಮತ್ತು ಮಗಳು ಸುಹಾನಾ ಕೋಣೆಯಲ್ಲಿಯೂ ಒಂದು ಟಿವಿ ಇದೆ. ಇನ್ನು ಜಿಮ್ ರೂಮ್ ನಲ್ಲಿದ್ದ ಟಿವಿ ಹಾಳಾಗಿದೆ. ಹಾಗಾಗಿ ಹಳೆಯ ಟಿವಿಗಳು ಯಾವಾಗ ಹಾಳಾಗುತ್ತವೆ ಎಂದು ಕಾಯುತ್ತಿದ್ದೇನೆ. ಬಳಿಕ ನಾನು ಎಲ್ ಜಿ ಟಿವಿ ಕೊಂಡುಕೊಳ್ಳುತ್ತೇನೆ ಎಂದು ಹೇಳಿದ್ದಾರೆ.

22 ವರ್ಷದ Shah Rukh ಪುತ್ರಿ ಬೋಲ್ಡ್‌ನೆಸ್‌ನಲ್ಲಿ ಯಾರಿಗೂ ಕಡಿಮೆ ಇಲ್ಲ!

ಶಾರುಖ್ ಮನೆಯಲ್ಲಿ ಒಟ್ಟು 12 ಟಿವಿಗಳಿವೆ. ಪ್ರತಿ ಟಿವಿಯ ಬೆಲೆ ಸುಮಾರು ಒಂದರಿಂದ ಒಂದೂವರೆ ಹಾಗೂ ಎರಡು ಲಕ್ಷದ್ದು ಎಂದು ಹೇಳಿದ್ದಾರೆ. ಒಟ್ಟು ಶಾರುಖ್ ಮನೆಯಲ್ಲಿ 30 ರಿಂದ 40 ಲಕ್ಷ ರೂಪಾಯಿ ಟಿವಿ ಎಂದು ಹೇಳಿದ್ದಾರೆ. ಶಾರುಖ್ ಅವರ ಟಿವಿ ಬೆಲೆ ಇದೀಗ ಅಭಿಮಾನಿಗಳ ತಲೆಕೆಡಿಸಿದೆ. ಶಾರುಖ್ ಅವರು ತಮ್ಮ ಮನೆಯ ಟಿವಿಗಳ್ಬಗ್ಗೆ ಮಾತನಾಡಿರುವ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಶೇರ್ ಮಾಡಿದ್ದಾರೆ.

ಇದನ್ನು ನೋಡಿದ ಅಭಿಮಾನಿಗಳು ತರಹೇವಾರಿ ಪ್ರಶ್ನೆ ಮಾಡುತ್ತಿದ್ದಾರೆ. ನಮ್ಮ ಮನೆಯ ಒಟ್ಟು ವೆಚ್ಚವೇ ಇಷ್ಟು ಇರುವುದಿಲ್ಲ ಎಂದು ಅಭಿಮಾನಿಯೊಬ್ಬ ಕಾಮೆಂಟ್ ಮಾಡಿದ್ದಾರೆ. ಇದಕ್ಕೆ ಕಿಂಗ್ ಎಂದು ಕರೆಯುವುದು ಎಂದು ಮತ್ತೊಬ್ಬ ಅಭಿಮಾನಿ ಕಾಮೆಂಟ್ ಮಾಡಿದ್ದಾರೆ. ಶಾರುಖ್ ಅವರ ಮಾತು ಕೇಳಿ ನಾನು ಈಗ ಬಡವ ಎನ್ನುವ ಫೀಲ್ ಆಗುತ್ತಿದೆ ಎಂದಿದ್ದಾರೆ. ಹೀಗೆ ಅಭಿಮಾನಿಗಳಿಂದ ತರಹೇವಾರಿ ಕಾಮೆಂಟ್ ಗಳು ಹರಿದುಬಂದಿವೆ.

Shah Rukh Khan: ಬಾಲಿವುಡ್‌ಗೆ ಎಂಟ್ರಿ ಕೊಟ್ಟ ಕಿಂಗ್ ಖಾನ್ ಪುತ್ರಿ ಸುಹಾನಾ ಖಾನ್!

ಅಂದಹಾಗೆ ಶಾರುಖ್ ಖಾನ್ ಮನೆಯ ಇಂಟೀರಿಯರ್ ಡಿಸೈನ್ ಅನ್ನು ಅವರ ಪತ್ನಿ ಗೌರಿ ಖಾನ್ ಅವರೇ ಮಾಡಿದ್ದಾರೆ. ಬಾಲಿವುಡ್‌ನ ಅನೇಕ ಸ್ಟಾರ್ ಮನೆಯ ಇಂಟೀರಿಯರ್ ಡಿಸೈನ್ ಮಾಡಿದ್ದಾರೆ. ತನ್ನ ಮನೆಯನ್ನು ಸುಂದರವಾಗಿ ಅಲಂಕರಿಸಿದ್ದಾರೆ. ಮನೆಯ ವಿಚಾರಕ್ಕೆ ಶಾರುಖ್ ಆಗಾಗ ಸದ್ದು ಮಾಡುತ್ತಲೇ ಇರುತ್ತಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಾಜ್ ನಿಧಿಮೋರುಗಾಗಿ ಧರ್ಮ ಬದಲಾಯಿದ್ರಾ ಸಮಂತಾ? ಮದುವೆಯ ರಹಸ್ಯ ರಿವೀಲ್!
ಧುರಂಧಾರ್ ಚಿತ್ರೀಕರಣ ಪಾಕಿಸ್ತಾನದಲ್ಲಿ ಆಗಿತ್ತಾ? ಸಿನಿಮಾದಲ್ಲಿನ ದೃಶ್ಯಗಳ ರಹಸ್ಯ ಬಯಲು ಮಾಡಿದ ನಟ!