ರವಿಚಂದ್ರನ್ ಬರ್ತಡೇ ಸಂಭ್ರಮದಲ್ಲಿ 'ರಣಧೀರ' ಸುಂದರಿ; 'ನನ್ನ ತಾಯಿ ಜೀವಂತವಾಗಿರಲು ನೀವೆ ಕಾರಣ; ಎಂದ ಖುಷ್ಬೂ

Published : May 26, 2022, 11:08 AM IST
ರವಿಚಂದ್ರನ್ ಬರ್ತಡೇ ಸಂಭ್ರಮದಲ್ಲಿ 'ರಣಧೀರ' ಸುಂದರಿ; 'ನನ್ನ ತಾಯಿ ಜೀವಂತವಾಗಿರಲು ನೀವೆ ಕಾರಣ; ಎಂದ ಖುಷ್ಬೂ

ಸಾರಾಂಶ

ರವಿಚಂದ್ರನ್ ಅವರಿಗಾಗಿ ನಟಿ ಖುಷ್ಬೂ ರಣಧೀರ ಸುಂದರಿ ಡ್ರಾಮ ಜೂನಿಯರ್ಸ್ ಶೋನಲ್ಲಿ ಕಾಣಿಸಿಕೊಂಡಿದ್ದಾರೆ. ರವಿಚಂದ್ರನ್ ಜೊತೆ ವೇದಿಕೆ ಮೇಲೆ ಹೆಜ್ಜೆಹಾಕಿ ಸಂಭ್ರಮಿಸಿದ್ದಾರೆ. ರವಿಚಂದ್ರನ್ ಜೊತೆ ನಟಿ ಖುಷ್ಬೂ ಒಂದಿಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಸೂಪರ್ ಹಿಟ್ ಸಿನಿಮಾ ಮತ್ತು ಹಾಡುಗಳನ್ನು ನೀಡಿದ್ದಾರೆ. ಇಬ್ಬರ ಕಾಂಬಿನೇಷನ್ ಕನ್ನಡ ಸಿನಿ ಪ್ರೇಕ್ಷಕರ ಹೃದಯಗೆದ್ದಿತ್ತು.

ಸ್ಯಾಂಡಲ್ ವುಡ್‌ನ ಕ್ರೇಜಿಸ್ಟಾರ್ ರವಿಚಂದ್ರನ್ (V Ravichandran) ಅವರ ಹುಟ್ಟುಹಬ್ಬ(Birthday) ಸಮೀಸುತ್ತಿದೆ. ಇನ್ನೇನು ಕೆಲವೇ ದಿನಗಳು ಬಾಕಿ ಇದೆ. ಮೇ 30 ರವಿಚಂದ್ರನ್ ಅವರ ಹುಟ್ಟುಹಬ್ಬ. ಈಗಾಗಲೇ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ವಿಶ್ ಮಾಡುತ್ತಿದ್ದಾರೆ. ನೆಚ್ಚಿನ ನಟನಿಗೆ ಪ್ರೀತಿಯ ಶುಭಾಶಯ ತಿಳಿಸುತ್ತಿದ್ದಾರೆ. ರವಿಚಂದ್ರನ್ ಸದ್ಯ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಡ್ರಾಮ ಜೂನಿಯರ್ಸ್ ರಿಯಾಲಿಟಿ ಶೋನಲ್ಲಿ ಜಡ್ಜ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹಿರಿಯ ನಟಿ ಲಕ್ಷ್ಮಿ, ರಚಿತಾ ರಾಮ್ ಜೊತೆ ರವಿಚಂದ್ರನ್ ಕೂಡ ಜಡ್ಜ್ ಸ್ಥಾನ ಅಲಂಕರಿಸಿದ್ದಾರೆ. ಇದೇ ವೇದಿಕೆಯಲ್ಲಿ ರವಿಚಂದ್ರನ್ ಅವರ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಸೆಲೆಬ್ರೇಟ್ ಮಾಡಲಾಗಿದೆ.

ರವಿಚಂದ್ರನ್ ಹುಟ್ಟುಹಬ್ಬದ ಸಂಭ್ರಮಕ್ಕೆ ಮತ್ತಷ್ಟು ಕಳೆ ತಂದಿದ್ದಾರೆ ನಟಿ ಖುಷ್ಬೂ(Kusbhoo Sundar). ರವಿಚಂದ್ರನ್ ಅವರಿಗಾಗಿ ರಣಧೀರ ಸುಂದರಿ ಡ್ರಾಮ ಜೂನಿಯರ್ಸ್ ಶೋನಲ್ಲಿ ಕಾಣಿಸಿಕೊಂಡಿದ್ದಾರೆ. ರವಿಚಂದ್ರನ್ ಜೊತೆ ವೇದಿಕೆ ಮೇಲೆ ಹೆಜ್ಜೆಹಾಕಿ ಸಂಭ್ರಮಿಸಿದ್ದಾರೆ. ರವಿಚಂದ್ರನ್ ಜೊತೆ ನಟಿ ಖುಷ್ಬೂ ಒಂದಿಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಸೂಪರ್ ಹಿಟ್ ಸಿನಿಮಾ ಮತ್ತು ಹಾಡುಗಳನ್ನು ನೀಡಿದ್ದಾರೆ. ಇಬ್ಬರ ಕಾಂಬಿನೇಷನ್ ಕನ್ನಡ ಸಿನಿ ಪ್ರೇಕ್ಷಕರ ಹೃದಯಗೆದ್ದಿತ್ತು. ನಟಿ ಖುಷ್ಬೂ ಅವರಿಗೆ ರವಿಚಂದ್ರನ್ ಮೇಲೆ ಅಪಾರವಾದ ಪ್ರೀತಿ- ಗೌರವ. ಸಮಯ ಸಿಕ್ಕಾಗಲೆಲ್ಲಾ ರವಿಚಂದ್ರನ್ ಮೇಲಿನ ಪ್ರೀತಿ ವ್ಯಕ್ತಪಡಿಸುತ್ತಿರುತ್ತಾರೆ.

ಡ್ರಾಮ ಜೂನಿಯರ್ಸ್ ವೇದಿಕೆಯಲ್ಲೂ ಖುಷ್ಬೂ, ರವಿಚಂದ್ರನ್ ಅವರನ್ನು ಹೊಗಳಿದ್ದಾರೆ. ಜೊತೆಗೆ ಅವರ ಜೊತೆ ಕೆಲಸ ಮಾಡಿದ ಅನುಭವ ಹಂಚಿಕೊಂಡಿದ್ದಾರೆ. ಸದ್ಯ ಖುಷ್ಬೂ ಕಾಣಿಸಿಕೊಂಡಿರುವ ಕಾರ್ಯಕ್ರಮದ ಪ್ರೋಮೋ ಬಿಡುಗಡೆಯಾಗಿದ್ದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ಕಾರ್ಯಕ್ರಮ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಖುಷ್ಬೂ ಮತ್ತು ರವಿಚಂದ್ರನ್ ಅವರನ್ನು ಒಟ್ಟಿಗೆ ತೆರೆಮೇಲೆ ನೋಡಲು ಉತ್ಸುಕರಾಗಿದ್ದಾರೆ.

Ravichandran: ಕ್ರೇಜಿಸ್ಟಾರ್‌ ರವಿಚಂದ್ರನ್‌ಗೆ ಬೆಂಗಳೂರು ವಿವಿ ಗೌರವ ಡಾಕ್ಟರೇಟ್

ಖುಷ್ಬೂ ಎಂಟ್ರಿ ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಎಂಟ್ರಿ ಕೊಡುತ್ತಿದ್ದಂತೆ ರವಿಚಂದ್ರನ್ ಜೊತೆ ಅವರದ್ದೆ ಸಿನಿಮಾದ ಸೂಪರ್ ಹಿಟ್ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಬಳಿಕ ರವಿಚಂದ್ರನ್ ಅವರಿಗೆ ಹುಟ್ಟುಹಬ್ಬದ ವಿಶ್ ಮಾಡಿದ್ದಾರೆ. ಹೂ ಗುಚ್ಛ ನೀಡುವ ಮೂಲಕ ಪ್ರೀತಿಯ ಶುಭಾಶಯ ತಿಳಿಸಿದ್ದಾರೆ. ಹೂವಿನ ಬಳಿಯೇ ಹೂವು ತೆಗೆದುಕೊಂಡಿದ್ದೀನಿ ಎಂದು ರವಿಚಂದ್ರನ್ ಖುಷ್ಬೂ ಅವರನ್ನು ಹೊಗಳಿದ್ದಾರೆ. ನಂತರ ರವಿಚಂದ್ರನ್ ತನಗೆ ತನ್ನ ಕುಟುಂಬಕ್ಕೆ ಹೇಗೆ ಸಹಾಯ ಮಾಡಿದರು ಎಂದು ವಿವರಿಸಿದ್ದಾರೆ.

ನನ್ನ ತಾಯಿ ಇಂದು ಜೀವಂತವಾಗಿ ನಮ್ಮೊಂದಿಗೆ ಇದ್ದಾರೆ ಅಂದ್ರೆ ನಿಮ್ಮಿಂದಾಗಿ ಸಾರ್. ಅದಕ್ಕೆ ನಾನು ನಿಮಗೆ ಯಾವಾಗಲೂ ಖುಣಿಯಾಗಿರುತ್ತೇನೆ ಎಂದು ಹೇಳಿದ್ದಾರೆ. ಖುಷ್ಬೂ ಮಾತು ವೇದಿಕೆಯನ್ನು ಕೆಲ ಕ್ಷಣ ಭಾವುಕತೆಗೆ ತಳ್ಳಿದೆ.

ಈ ಕ್ಷಣಕ್ಕಾಗಿ ನಾನು ಹಂಬಲಿಸುತ್ತಿದ್ದೆ; ಭಾವುಕರಾದ ರವಿಚಂದ್ರನ್

ಇನ್ನು ನಟಿ ಖುಷ್ಬೂ ಅವರೇ ಈ ಪ್ರೋಮೋ ಶೇರ್ ಮಾಡಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ಪ್ರೋಮೋ ಹಂಚಿಕೊಂಡಿರುವ ಖುಷ್ಬೂ ದೀರ್ಘವಾದ ಸಾಲುಗಳನ್ನು ಬರೆದುಕೊಂಡಿದ್ದಾರೆ. ಕೆಲವರು ನಿಮ್ಮ ಜೀವನದಲ್ಲಿ ಎಲ್ಲಿಂದಲಾದರೂ ಬಂದು ಸೇರಿಕೊಂಡು ಜೀವನದ ಒಂದು ಭಾಗವಾಗುತ್ತಾರೆ. ಶಾಶ್ವತವಾಗಿ ಉಳಿದುಕೊಳ್ಳುತ್ತಾರೆ. ಕ್ರೇಜಿ ಸ್ಟಾರ್ ರವಿಚಂದ್ರನ್ ನನ್ನನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ ವ್ಯಕ್ತಿ. ಅಂತಹ ವ್ಯಕ್ತಿಗಳಲ್ಲಿ ಒಬ್ಬರು. ನಾವು 35 ವರ್ಷಗಳ ಹಿಂದೆ ರಣಧೀರ ಸೆಟ್ ನಲ್ಲಿ ಭೇಟಿಯಾದೆವು ಮತ್ತು ನಾವು ಸ್ನೇಹ, ಪ್ರೀತಿ ಮತ್ತು ಒಂದು ಕುಟುಂಬವಾಗಿ ಪಯಣವನ್ನು ಪ್ರಾರಂಭಮಾಡಿದೆವು ಎಂದು ಬರೆದುಕೊಂಡಿದ್ದಾರೆ. ಅವರ ಕಾರ್ಯಕ್ರಮದಲ್ಲಿ ಭಾಗವಾಗಲು, ಅವರ ಹುಟ್ಟುಹಬ್ಬ ಆಚರಿಸಲು ತುಂಬಾ ಹೆಮ್ಮೆಯಾಗುತ್ತದೆ ಎಂದು ಹೇಳಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

3 idiots 2 : ಬಾಕ್ಸ್ ಆಫೀಸ್ ನಲ್ಲಿ ಸುನಾಮಿ, ಬರ್ತಿದೆ 3 ಈಡಿಯಟ್ಸ್ ಸೀಕ್ವೆಲ್
ಚಿರಂಜೀವಿ ನಂತರ ಜೂ.ಎನ್‌ಟಿಆರ್ ಟಾರ್ಗೆಟ್? ಸಂಚಲನ ಮೂಡಿಸಿದ ನಿರ್ಧಾರ, ಇನ್ಮುಂದೆ ಹೀಗೆ ಮಾಡಿದ್ರೆ ಕಷ್ಟ!