ಆಮೀರ್ ಖಾನ್ ಹೊಸ ಪ್ಲಾನ್; IPL Finalನಲ್ಲಿ 'ಲಾಲ್ ಸಿಂಗ್ ಚಡ್ಡಾ' ಟ್ರೇಲರ್ ದರ್ಶನ

Published : May 26, 2022, 12:49 PM IST
ಆಮೀರ್ ಖಾನ್ ಹೊಸ ಪ್ಲಾನ್; IPL Finalನಲ್ಲಿ 'ಲಾಲ್ ಸಿಂಗ್ ಚಡ್ಡಾ' ಟ್ರೇಲರ್ ದರ್ಶನ

ಸಾರಾಂಶ

ಆಮೀರ್ ಖಾನ್(Aamir Khan) ನಟನೆಯ ಲಾಲ್ ಸಿಂಗ್ ಚಡ್ಡಾ(Laal Singh Chaddha) ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಸದ್ಯ ಸಿನಿಮಾತಂಡ ಟ್ರೈಲರ್ ರಿಲೀಸ್ ಮಾಡಲು ಪ್ಲಾನ್ ಮಾಡಿದ್ದು ವಿಶೇಷ ದಿನದಂದು ಅಭಿಮಾನಿಗಳ ಮುಂದೆ ಬರ್ತಿದೆ. ಹೌದು, ವಿಶ್ವದ ಗಮನ ಸೆಳೆದಿರುವ ಐಪಿಲ್ ಫೈನಲ್‌ನಲ್ಲಿ(IPL Final match) ಲಾಲ್ ಸಿಂಗ್ ಚಡ್ಡಾ ಸಿನಿಮಾದ ಟ್ರೈಲರ್ ರಿಲೀಸ್ ಆಗುತ್ತಿದೆ.

ಆಮೀರ್ ಖಾನ್(Aamir Khan) ನಟನೆಯ ಲಾಲ್ ಸಿಂಗ್ ಚಡ್ಡಾ(Laal Singh Chaddha) ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ಸಿನಿಮಾ ಸೆಟ್ಟೇರಿದಾಗಿನಿಂದ ಸಿಕ್ಕಾಪಟ್ಟೆ ಕುತೂಹಲ ಮೂಡಿಸಿದ್ದು ಆಮೀರ್ ಖಾನ್ ನನ್ನು ತೆರೆಮೇಲೆ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಸಿನಿಮಾದ ಬಗ್ಗೆ ಅಪ್ ಡೇಟ್ ಗಾಗಿ ಅಭಿಮಾನಿಗಳು ಎದುರು ನೋಡುತ್ತಿದ್ದರು. ಇದೀಗ ಚಿತ್ರದ ಟ್ರೈಲರ್ ರಿಲೀಸ್ ಮಾಡಲು ಸಿನಿಮಾತಂಡ ತಯಾರಿ ನಡೆಸಿದೆ. ಅಂದಹಾಗೆ ಟ್ರೇಲರ್ ರಿಲೀಸ್‌ಗೆ ಆಮೀರ್ ಖಾನ್ ಆಂಡ್ ತಂಡ ಭರ್ಜರಿ ಪ್ಲಾನ್ ಮಾಡಿದೆ. ವಿಶೇಷ ಸಮಯದಲ್ಲಿ ಲಾಲ್ ಸಿಂಗ್ ಚಡ್ಡಾ ಸಿನಿಮಾದ ಟ್ರೈಲರ್ ಅಭಿಮಾನಿಗಳ ಮುಂದೆ ಬರ್ತಿದೆ. ಹೌದು, ವಿಶ್ವದ ಗಮನ ಸೆಳೆದಿರುವ ಐಪಿಲ್ ಫೈನಲ್‌ನಲ್ಲಿ(IPL Final match) ಲಾಲ್ ಸಿಂಗ್ ಚಡ್ಡಾ ಸಿನಿಮಾದ ಟ್ರೈಲರ್ ರಿಲೀಸ್ ಮಾಡುತ್ತಿದೆ ಸಿನಿಮಾತಂಡ.

ಹೌದು, ಮೇ 29ರಂದು ನಡೆಯಲಿರುವ ಐಪಿಎಲ್ ಅಂತಿಮ ಪಂದ್ಯವನ್ನು ಬಾಲಿವುಡ್ ಸೂಪರ್‌ಸ್ಟಾರ್ ಅಮೀರ್ ಖಾನ್ ಆಯೋಜಿಸಲಿದ್ದಾರೆ. ಮೊದಲ ಇನ್ನಿಂಗ್ಸ್ ಮತ್ತು ಎರಡನೇ ಸ್ಟ್ರಾಟೆಜಿಕ್ ಟೈಮ್‌ಔಟ್‌ನಲ್ಲಿ ಅವರ ಮುಂಬರುವ ಚಿತ್ರ 'ಲಾಲ್ ಸಿಂಗ್ ಚಡ್ಡಾ' ಟ್ರೇಲರ್ ಅನ್ನು ಅನಾವರಣಗೊಳಿಸಲಿದ್ದಾರೆ. ಇದನ್ನು ದೃಢೀಕರಿಸಿ ಚಿತ್ರದ ನಿರ್ಮಾಪಕರು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊಂದನ್ನು ಶೇರ್ ಮಾಡಿದ್ದು ಅದರಲ್ಲಿ ಅಮೀರ್ ಖಾನ್ 'ಲಾಲ್ ಸಿಂಗ್ ಚಡ್ಡಾ' ಟ್ರೇಲರ್ ಬಿಡುಗಡೆ ಮಾಡುವುದನ್ನು ಘೋಷಿಸಿದ್ದಾರೆ.

ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಮತ್ತು ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿ 6 ರಿಂದ ನಟ ಅಂತಿಮ ಪಂದ್ಯವನ್ನು ಆಯೋಜಿಸುತ್ತಾರೆ. ಅಮೀರ್ ಖಾನ್ ಪ್ರೊಡಕ್ಷನ್ಸ್ ಮತ್ತು ಕಿರಣ್ ರಾವ್ ಮತ್ತು ವಯಾಕಾಮ್ 18 ಸ್ಟುಡಿಯೋಸ್ ನಿರ್ಮಿಸಿರುವ 'ಲಾಲ್ ಸಿಂಗ್ ಚಡ್ಡಾ' ಸಿನಿಮಾದಲ್ಲಿ ನಾಯಕಿಯಾಗಿ ಕರೀನಾ ಕಪೂರ್ ಖಾನ್ ಮಿಂಚಿದ್ದಾರೆ. ಇನ್ನು ಈ ಸಿನಿಮಾದಲ್ಲಿ ಮೋನಾ ಸಿಂಗ್ ಮತ್ತು ಚೈತನ್ಯ ಅಕ್ಕಿನೇನಿ ಕೂಡ ನಟಿಸಿದ್ದಾರೆ. 

ಬಾಯ್‌ಫ್ರೆಂಡ್ ಜೊತೆ ಬಿಕಿನಿಯಲ್ಲಿ ಇರಾ ಬರ್ತಡೇ ಸೆಲೆಬ್ರೇಟ್; ಫೋಟೋ ಹಂಚಿಕೊಂಡ ಆಮೀರ್ ಪುತ್ರಿ

ಅಂದಹಾಗೆ ಲಾಲ್ ಸಿಂಗ್ ಚಡ್ಡಾ ಸಿನಿಮಾ ಹಾಲಿವುಡ್ ಸಿನಿಮಾದ ರಿಮೇಕ್ ಆಗಿದೆ. 1994ರಲ್ಲಿ ರಿಲೀಸ್ ಆಗಿದ್ದ ಟಾಮ್ ಹ್ಯಾಂಕ್ಸ್ ಕ್ಲಾಸಿಕ್ ಅವರ 'ಫಾರೆಸ್ಟ್ ಗಂಪ್' ಚಿತ್ರವನ್ನು ಹಿಂದೆಗೆ ತಂದಿದ್ದಾರೆ ಆಮೀರ್ ಖಾನ್. ಈ ಸಿನಿಮಾಗೆ ಆಮೀರ್ ಖಾನ್‌ಗೆ 'ಸೀಕ್ರೆಟ್ ಸೂಪರ್ ಸ್ಟಾರ್' ನಿರ್ದೇಶಿಸಿದ್ದ ಅದ್ವೈತ್ ಚಂದನ್ ಆಕ್ಷನ್ ಕಟ್ ಹೇಳಿದ್ದಾರೆ. ಬಹುನಿರೀಕ್ಷೆಯ ಚಿತ್ರವು ಆಗಸ್ಟ್ 11ರಂದು ಬಿಡುಗಡೆಯಾಗಲಿದೆ.

KGF 2: ಕೆಜಿಎಫ್ 2 ಸಿನಿಮಾ ಕಂಡು ಹೆದರಿದ್ದೆ ಎಂದ ಅಮಿರ್ ಖಾನ್..!

ಆಮೀರ್ ಖಾನ್ ಕೊನೆಯದಾಗಿ ಥಗ್ಸ್ ಆಫ್ ಹಿಂದೂಸ್ತಾನ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಹೀನಾಯ ಸೋಲು ಕಂಡಿತ್ತು. 2018ರಲ್ಲಿ ಸಿನಿಮಾ ಬಿಡುಗಡೆಯಾಗಿತ್ತು. ಈ ಸಿನಿಮಾದ ಸೋಲು ಆಮೀರ್ ಅವರಿಗೆ ಭಾರಿ ನಿರಾಸೆ ಮೂಡಿಸಿತ್ತು. ಅಲ್ಲದೇ ಆಮೀರ್ ಸಿಕ್ಕಾಪಟ್ಟೆ ಟ್ರೋಲಿಗೆ ಗುರಿಯಾಗಿದ್ದರು. ಬಳಿಕ ಸ್ವಲ್ಪ ಸಮಯದ ಗ್ಯಾಪ್ ತೆಗೆದುಕೊಂಡಿದ್ದ ಮಿಸ್ಟರ್ ಪರ್ಫೆಕ್ಷನಿಸ್ಟ್ ಲಾಲ್ ಸಿಂಗ್ ಚಡ್ಡಾ ಸಿನಿಮಾ ಅನೌನ್ಸ್ ಮಾಡಿದರು. ಇದೀಗ ಆಮೀರ್ ಬರೋಬ್ಬರಿ 4 ವರ್ಷಗಳ ಬಳಿಕ ತೆರೆಮೇಲೆ ಬರ್ತಿದ್ದಾರೆ. ಬಾಲಿವುಡ್ ಸ್ಟಾರ್ ನಟನನ್ನು ನೋಡಲು ಅಭಿಮಾನಿಗಳು ಸಹ ಕಾತರರಾಗಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನನ್ನ ತಂದೆ ಕೂಡ ಗುಮ್ಮಡಿ ನರಸಯ್ಯ ಅವರಂತೆಯೇ ಜನರ ಸೇವೆ ಮಾಡಿದವರು: ನಟ ಶಿವಣ್ಣ ಹೇಳಿದ್ದೇನು?
ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?