
ಶಾರುಖ್ ಖಾನ್ ನಟನೆಯ ಪಠಾಣ್ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಧೂಳ್ ಎಬ್ಬಿಸಿದೆ. ಕೋಟಿ ಕೋಟಿ ಬಾಚಿಕೊಂಡಿರುವ ಪಠಾಣ್ ಸಿನಿಮಾ 2ನೇ ದಿನಕ್ಕೆ 200 ಕೋಟಿಗೂ ಅಧಿಕ ಹಣ ಬಾಚಿಕೊಂಡಿದೆ. ಪಠಾಣ್ ಸೂಪರ್ ಸಕ್ಸಸ್ ಬೆನ್ನಲ್ಲೇ ನೆಟ್ಟಿಗರು ಶಾರುಖ್ ಖಾನ್ ಅವರಿಗೆ ಕಮ್‌ಬ್ಯಾಕ್ ಎಂದು ಹೇಳುತ್ತಿದ್ದಾರೆ. ಕಮ್‌ಬ್ಯಾಕ್ ಎಂದವರಿಗೆ ಶಾರುಖ್ ಖಾನ್ ಪ್ರತಿಕ್ರಿಯೆ ನೀಡಿದ್ದಾರೆ. ತಾನು ಮತ್ತೆ ಹಿಂದಕ್ಕೆ ಹೋಗಲು ಇಷ್ಟಪಡಲ್ಲ ಎಂದು ಹೇಳಿದ್ದಾರೆ. ಸರಳವಾಗಿ ಮುಂದಕ್ಕೆ ಹೋಗುತ್ತಿರಬೇಕು ಎಂದು ಶಾರುಖ್ ಸಲಹೆ ನೀಡಿದ್ದಾರೆ.
1997ರಲ್ಲಿ ಬಂದ ಅಮೆರಿಕನ್ ಸೈನ್ಸ್ ಫಿಕ್ಷನ್ ಸಿನಿಮಾ ಗಟ್ಟಾಕ ಚಿತ್ರವನ್ನು ಶಾರುಖ್ ಉಲ್ಲೇಖ ಮಾಡಿದ್ದಾರೆ. ‘ಹಿಂದಕ್ಕೆ ಹೋಗೋಕೆ ಯಾವ ಆಸಕ್ತಿಯೂ ಉಳಿದಿಲ್ಲ’ ಎಂದು ಶಾರುಖ್ ಖಾನ್ ಹೇಳಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಶಾರುಖ್,‘ಹಿಂದಕ್ಕೆ ಹೋಗಲು ಯಾವ ಆಸಕ್ತಿಯೂ ಉಳಿದಿಲ್ಲ. ನನ್ನ ಪ್ರಕಾರ ಜೀವನ ಯಾವಾಗಲೂ ಹಾಗೆಯೇ. ಜೀವನದಲ್ಲಿ ಮತ್ತೆ ಹಿಂದೆ ಹೋಗುವ ಬಗ್ಗೆ ಆಲೋಚಿಸಲು ನೀವು ಬಯಸಲ್ಲ. ನೀವು ಮುಂದೆ ಸಾಗುತ್ತಾ ಇರಬೇಕು. ನೀವು ಏನನ್ನು ಆರಂಭಿಸಿದ್ದೀರೋ ಅದನ್ನು ಪೂರ್ಣಗೊಳಿಸಬೇಕು. ಇದು ಕೇವಲ 57 ವರ್ಷದವರ ಸಲಹೆಗಳು’ ಎಂದು ಶಾರುಖ್ ಖಾನ್ ಬರೆದುಕೊಂಡಿದ್ದಾರೆ.
ಕೇವಲ 2 ದಿನದಲ್ಲಿ 100 ಕೋಟಿ ಕ್ಲಬ್ ಸೇರಿದ ಮೊದಲ ಹಿಂದಿ ಚಿತ್ರ ಪಠಾಣ್!
ಶಾರುಖ್ ಮಾತಿಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಉತ್ತಮವಾದ ಮಾತು ಎಂದು ಹೇಳುತ್ತಿದ್ದಾರೆ. ಈಗ ಎಲ್ಲಿ ವನೋಡಿದ್ರೂ ಪಠಾಣ್ ಸಿನಿಮಾದೇ ಮಾತು. ದೀಪಿಕಾ ಮತ್ತು ಶಾರುಖ್ ಜೋಡಿ ಮತ್ತೊಮ್ಮೆ ಮಾಡಿ ಮಾಡಿದೆ. ದೊಡ್ಡ ಮಟ್ಟದ ವಿವಾದ ಸೃಷ್ಟಿಸಿದ್ದ ಪಠಾಣ್ ಸಿನಿಮಾವನ್ನು ಬ್ಯಾನ್ ಮಾಡಬೇಕೆಂದು ಅನೇಕರು ಒತ್ತಾಯಿಸಿದ್ದರು. ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಮಾಡಿದ್ದರು. ದೀಪಿಕಾ ಪಡುಕೋಣೆ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಆದರೀಗ ಬಾಕ್ಸ್ ಆಫೀಸ್ ನಲ್ಲಿ ಪಠಾಣ್ ಅಬ್ಬರಿಸುತ್ತಿದೆ.
ಶಾರುಖ್ ಖಾನ್ ಅಭಿನಯದ ಪಠಾಣ್ ಚಿತ್ರ 2 ದಿನದಲ್ಲಿ ಹಿಂದಿಯಲ್ಲಿ 100 ಕೋಟಿ ರುಪಾಯಿ ದಾಟಿದ ಮೊದಲ ಬಾಲಿವುಡ್ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ, ಹಿಂದಿ ಚಿತ್ರರಂಗದ ಇತಿಹಾಸದಲ್ಲಿ ಎರಡನೇ ದಿನದ ದೊಡ್ಡ ಕಲೆಕ್ಷನ್ ಸಹ ದಾಖಲಿಸಿದೆ. ಈ ಮಧ್ಯೆ, ತಮಿಳು ಮತ್ತು ತೆಲುಗು ಡಬ್ಬಿಂಗ್ ಆವೃತ್ತಿಗಳು ಒಟ್ಟು 2 ರಿಂದ 3 ಕೋಟಿ ರೂ. ಪಠಾಣ್‌ನ ಒಟ್ಟು ವಿಶ್ವದಾದ್ಯಂತ ಬಾಕ್ಸ್ ಆಫೀಸ್ ಕಲೆಕ್ಷನ್ ಮೊದಲ ದಿನ 100 ಕೋಟಿ ರೂಪಾಯಿ ದಾಟಿತ್ತು.
ಸಿದ್ಧಾರ್ಥ್ ಆನಂದ್ ಸಾರಥ್ಯದಲ್ಲಿ ಮೂಡಿ ಬಂದಿರುವ ಪಠಾಣ್ ಸಿನಿಮಾದಲ್ಲಿ ಶಾರುಖ್ ನಾಯಕಿನಾಗಿ ಕಾಣಿಸಿಕೊಂಡರೆ ಜಾನ್ ಅಬ್ರಾಹಂ ವಿಲನ್ ಆಗಿ ಮಿಂಚಿದ್ದಾರೆ. ಶಾರುಖ್ ಖಾನ್ ಸುಮಾರು 5 ವರ್ಷಗಳ ನಂತರ ತೆರೆಗೆ ಮರಳಿದ್ದಾರೆ. ಗ್ಯಾಪ್‌ನ ಬಳಿಕ ಬಂದ ಶಾರುಖ್ ಖಾನ್ ಭರ್ಜರಿಯಾಗಿ ಎಂಟ್ರಿ ಕೊಟ್ಟಿರುವುದು ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.