ಶಾರುಖ್ 'ಪಠಾಣ್' ಗೆಲುವು ಯಾರಿಗೆ ಸಲ್ಲಬೇಕೆಂದ ಅಗ್ನಿಹೋತ್ರಿ; ತೆಗಳಿದ್ದಾ, ಹೊಗಳಿದ್ದಾ ಎಂದ ನೆಟ್ಟಿಗರು

Published : Feb 15, 2023, 04:14 PM IST
ಶಾರುಖ್ 'ಪಠಾಣ್' ಗೆಲುವು ಯಾರಿಗೆ ಸಲ್ಲಬೇಕೆಂದ ಅಗ್ನಿಹೋತ್ರಿ;  ತೆಗಳಿದ್ದಾ, ಹೊಗಳಿದ್ದಾ ಎಂದ ನೆಟ್ಟಿಗರು

ಸಾರಾಂಶ

ಶಾರುಖ್ ಖಾನ್ ನಟನೆಯ ಪಠಾಣ್ ಸಿನಿಮಾದ ಸಕ್ಸಸ್ ಬಗ್ಗೆ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಪ್ರತಿಕ್ರಿಯೆ ನೀಡಿದ್ದಾರೆ. ಇದು ಹೊಗಳಿದ್ದಾ ಅಥವಾ ತೆಗಳಿದ್ದಾ ಎಂದು ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ.

ಬಾಲಿವುಡ್ ಖ್ಯಾತ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಒಂದಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಇದೀಗ ಪಠಾಣ್ ಸಿನಿಮಾದ ಸಕ್ಸಸ್ ಬಗ್ಗೆ ವ್ಯಂಗ್ಯವಾಡುವ ಮೂವಕ ಮತ್ತೆ ಸದ್ದು ಮಾಡುತ್ತಿದ್ದಾರೆ. ಈ ಮೊದಲು ಬೇಷರಂ ರಂಗ್ ಹಾಡಿನ ಬಗ್ಗೆ ಪ್ರತಿಕ್ರಿಯೆ ನೀಡಿ ಟೀಕಿಸಿದ್ದ ವಿವೇಕ್ ಅಗ್ನಿಹೋತ್ರಿ ಇದೀಗ ಯಶಸ್ಸಿನ ಬಗ್ಗೆ ವ್ಯಂಗ್ಯವಾಡಿದ್ದಾರೆ. ಈ ಬಗ್ಗೆ ಮಾತನಾಡಿದ ವಿವೇಕ್ ಅಗ್ನಿಹೋತ್ರಿ, 'ಪ್ರೇಕ್ಷಕರು ಮೂರ್ಖರು ಎಂಬ ತಮ್ಮ ಮೂಲಭೂತ ನಂಬಿಕೆಗಳಿಗೆ ಅವರು ಹಿಂತಿರುಗುತ್ತಾರೆ. ಚಲನಚಿತ್ರವನ್ನು ಯಶಸ್ವಿಗೊಳಿಸಲು ಸ್ಟಾರ್ ಪವರ್ ಮತ್ತು ಸಾಕಷ್ಟು ಮಾರ್ಕೆಟಿಂಗ್ ಪ್ರಚೋದನೆಯ ಅಗತ್ಯವಿದೆ' ಎಂದು ಹೇಳಿದರು. 

'ಪಠಾಣ್ ನಂತರ ಎಲ್ಲರೂ ಅದೇ ಹಳೆಯ ವ್ಯವಸ್ಥೆಗೆ ಮರಳಿದ್ದಾರೆ ಎನ್ನುವ ಭಾವನೆ. ಯಾಕೆಂದರೆ ಪಠಾಣ್ ಸಕ್ಸಸ್ ಅನ್ನು ನಾನು ಗೆಲುವು ಎಂದು ಕರೆಯುತ್ತೇನೆ. ಇದು ವಯಸ್ಸಾದ, ಶೋಷಣೆಯ, ಸ್ವಜನಪಕ್ಷಪಾತದ ಗೆಲುವಾಗಿದೆ' ಎಂದು ಹೇಳಿದ್ದಾರೆ. 

'ಈ ಚಿತ್ರವನ್ನು ಬಹಿಷ್ಕರಿಸುವುದಾಗಿ ಬೆದರಿಕೆ ಹಾಕಿದ, ಅದರ ವಿರುದ್ಧ ಮೂರ್ಖತನದ ಹೇಳಿಕೆಗಳನ್ನು ನೀಡಿದವರಿಗೆ ಪಠಾಣ್ ಗೆಲವು ಸಲ್ಲಬೇಕು ಎಂದು ವಿವೇಕ್ ಅಗ್ನಿಹೋತ್ರಿ ಹೇಳಿದ್ದಾರೆ. ಚಿತ್ರದ ಪ್ರಚಾರ ರಾಜಕೀಯ ಪ್ರಚಾರವಾಗಿ ಬದಲಾಗಿದೆ, ಪಠಾಣ್ ಸಕ್ಸಸ್ ಸಂಪೂರ್ಣವಾಗಿ ಶಾರುಖ್ ಅವರ ವರ್ಚಸ್ಸು ಮತ್ತು ಅವರ ಅಭಿಮಾನಿಗಳಿಂದ' ಎಂದು ಹೇಳಿದ್ದಾರೆ. 

'ಅವರು ಅದನ್ನು ಮಾರ್ಕೆಟ್ ಮಾಡಿದ ರೀತಿ, ಅದನ್ನು ಅವರು ಹೆಗಲ ಮೇಲೆ ಹೊತ್ತುಕೊಂಡ ರೀತಿ, ಇದು ನನ್ನ ಚಿತ್ರ ಮತ್ತು ಅದಕ್ಕೆ ನಾನು ಜವಾಬ್ದಾರನಾಗಿರುತ್ತೇನೆ' ಎನ್ನುವುದು ತುಂಬಾ ಅದ್ಭುತವಾಗಿತ್ತು.  ಮೂರ್ಖ ಹೇಳಿಕೆಗಳನ್ನು ನೀಡುವ ಜನರಿಗೆ ಸ್ವಲ್ಪ ಕ್ರೆಡಿಟ್ ಸಲ್ಲಬೇಕು ಎಂದು ನಾನು ಭಾವಿಸುತ್ತೇನೆ. ಚಲನಚಿತ್ರದ ವಿರುದ್ಧ ಮತ್ತು ಅನಗತ್ಯವಾಗಿ ಪ್ರತಿಭಟಿಸುವ ಮತ್ತು ಬಹಿಷ್ಕಾರಿಸುವಂತೆ ಹೇಳಿದ ಜನರು ಮತ್ತು ಸಾಮಾನ್ಯ ಬೈಕಾಟ್  ಗ್ಯಾಂಗ್ ಗೂ ಸಲ್ಲಬೇಕು' ಎಂದು ಹೇಳಿದ್ದಾರೆ. ಬೈಕಾಟ್ ಗ್ಯಾಂಗ್ ಅನ್ನು ಪರೋಕ್ಷವಾಗಿ ತರಾಟೆ ತೆಗೆದುಕೊಂಡ ವಿವೇಕ್ ಅಗ್ನಿಹೋತ್ರಿಗೆ ಇದು ಹೊಗಳಿದ್ದಾ ಅಥವಾ ತೆಗಳಿದ್ದಾ ಎಂದು ಪ್ರಶ್ನೆ ಮಾಡುತ್ತಿದ್ದಾರೆ.

ರೀ-ರಿಲೀಸ್ ಆಗ್ತಿದೆ ಸೂಪರ್ ಹಿಟ್ DDLJ; ನಾನು 'ಪಠಾಣ್' ನೋಡ್ತಿನಿ ಎಂದ ಶಾರುಖ್ ಖಾನ್

ಪಠಾಣ್ ಬಗ್ಗೆ 

ಪಠಾಣ್ ಸಿನಿಮಾ ಜನವರಿ 25ರಂದು ರಿಲೀಸ್ ಆಗಿದೆ. ಪ್ರೇಕ್ಷಕರಿಂದ ಉತ್ತಮ ಪ್ರದರ್ಶನ ವ್ಯಕ್ತವಾಗಿದ್ದು ಬಾಕ್ಸ ಆಫೀಸ್ ನಲ್ಲೂ ಭರ್ಜರಿ ಕಮಾಯಿ ಮಾಡಿದೆ. ಸಿದ್ಧಾರ್ಥ್ ಆನಂದ್ ಸಾರಥ್ಯದಲ್ಲಿ ಮೂಡಿ ಬಂದಿರುವ ಪಠಾಣ್ ಸಿನಿಮಾದಲ್ಲಿ ಶಾರುಖ್‌ಗೆ ಜೋಡಿಯಾಗಿ ದೀಪಿಕಾ ಕಾಣಿಸಿಕೊಂಡಿದ್ದಾರೆ. ಜಾನ್ ಅಬ್ರಹಾಂ ವಿಲನ್ ಆಗಿ ಮಿಂಚಿದ್ದಾರೆ. ಅನೇಕ ವಿವಾದಗಳ ನಡುವೆಯೂ ಅದ್ದೂರಿಯಾಗಿ ರಿಲೀಸ್ ಆದ ಪಠಾಣ್ ಸಿನಿಮಾ ದೊಡ್ಡ ಮಟ್ಟದ ಸಕ್ಸಸ್ ಕಂಡಿದೆ. 1000 ಕೋಟಿತ್ತ ಮುನ್ನುಗ್ಗುತ್ತಿರುವ ಪಠಾಣ್ ಬಾಹುಬಲಿ-2 ಮತ್ತು ಕೆಜಿಎಫ್-2 ದಾಖಲೆಯನ್ನು ಬ್ರೇಕ್ ಮಾಡುತ್ತಾ ಎನ್ನುವ ಕುತೂಹಲ ಮೂಡಿಸಿದೆ. 

'ಪಠಾಣ್' ಶೂಟಿಂಗ್‌ನಲ್ಲಿ ಶಾರುಖ್ ಪುತ್ರನನ್ನು ತಬ್ಬಿ ಮುದ್ದಾಡಿದ ದೀಪಿಕಾ; ಫೋಟೋ ವೈರಲ್

ಶಾರುಖ್ ಮುಂದಿನ ಸಿನಿಮಾಗಳು 

ಪಠಾಣ್ ರಿಲೀಸ್ ಆಗಿ ಸಕ್ಸಸ್ ಆಗುತ್ತಿದ್ದಂತೆ ಶಾರುಖ್ ಮುಂದಿನ ಸಿನಿಮಾಗಳ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಶಾರುಖ್ ಸದ್ಯ ಜವಾನ್ ಮತ್ತು ಡಂಕಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ಎರಡು ಸಿನಿಮಾಗಳ ಚಿತ್ರೀಕರಣ ಭರ್ಜರಿಯಾಗಿ ನಡೆಯುತ್ತಿದೆ. ಜವಾನ್ ಚಿತ್ರಕ್ಕೆ ಅಟ್ಲೀ ಕುಮಾರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ನಾಯನತಾರಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇನ್ನೂ ಡಂಕಿ ಸಿನಿಮಾ ರಾಜ್ ಕುಮಾರ್ ಹಿರಾನಿ ಸಾರಥ್ಯದಲ್ಲಿ ಮೂಡಿ ಬರುತ್ತಿದೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?