3ನೇ ಮಗುವಿಗೆ ತಾಯಿ ಆಗ್ತಿದ್ದಾರಾ ಸಿಂಗರ್ ಸುನಿತಾ? ಖ್ಯಾತ ಗಾಯಕಿಯ ರಿಯಾಕ್ಷ್ ಹೀಗಿತ್ತು

Published : Feb 15, 2023, 11:33 AM ISTUpdated : Feb 15, 2023, 11:34 AM IST
3ನೇ ಮಗುವಿಗೆ ತಾಯಿ ಆಗ್ತಿದ್ದಾರಾ ಸಿಂಗರ್ ಸುನಿತಾ?  ಖ್ಯಾತ ಗಾಯಕಿಯ ರಿಯಾಕ್ಷ್ ಹೀಗಿತ್ತು

ಸಾರಾಂಶ

ಖ್ಯಾತ ಗಾಯಕಿ ಸುನಿತಾ 3ನೇ ಮಗುವಿಗೆ ತಾಯಿ ಆಗುತ್ತಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು. ಈ ಬಗ್ಗೆ ಸುನಿತಾ ಪ್ರತಿಕ್ರಿಯೆ ನೀಡಿದ್ದಾರೆ. 

ಸೆಲೆಬ್ರಿಟಿಗಳು ಮದುವೆ ಆಗುತ್ತಿದ್ದಂತೆ ಪ್ರೆಗ್ನೆಂಟ್ ಎನ್ನುವ ವದಂತಿ ವೈರಲ್ ಆಗುತ್ತದೆ. ಬಹುತೇಕರು ಮಗು ಮಾಡಿಕೊಳ್ಳುವ ಬಗ್ಗೆಯೇ ಪ್ರಶ್ನೆ ಮಾಡುತ್ತಿರುತ್ತಾರೆ. ಈ ಪ್ರಶ್ನೆ ಹಾಗೂ ವದಂತಿ ಖ್ಯಾತ ಗಾಯಕಿ ಸುನಿತಾ ಅವರನ್ನು ಬಿಟ್ಟಿಲ್ಲ. ತೆಲುಗು ಮೂಲದ ದಕ್ಷಿಣ ಭಾರತದ ಖ್ಯಾತ ಗಾಯಕಿ ಸುನಿತಾ 3ನೇ ಮಗುವೆಗೆ ತಾಯಿ ಆಗುತ್ತಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು. 2021ರಲ್ಲಿ ರಾಮ ಕೃಷ್ಣ ಜೊತೆ 2ನೇ ಮದುವೆಯಾದ ಗಾಯಕಿ ಸುನಿತಾ ಗರ್ಭಿಣಿ ಎನ್ನುವ ಸುದ್ದಿ ಹರಿದಾಡುತ್ತಿತ್ತು. ಈ ಬಗ್ಗೆ ಖ್ಯಾತ ಗಾಯಕಿ ಪ್ರತಿಕ್ರಿಯೆ ನೀಡುವ ಮೂಲಕ ಗರ್ಭಿಣಿ ವದಂತಿಗೆ ಸ್ಪಷ್ಟನೆ ನೀಡಿದ್ದಾರೆ. 

ಮಾಧ್ಯಮದ ಜೊತೆ ಮಾತನಾಡಿದ ಗಾಯಕಿ ಸುನಿತಾ ಗರ್ಭಿಣಿ ವದಂತಿಗೆ ಪ್ರತಿಕ್ರಿಯೆ ನೀಡಿದ್ದಾರೆ. 'ಏನು ಪ್ರೆಗ್ನೆಂಟ್ ಹಾ? ಅದು ನನಗೂ ಗೊತ್ತಿಲ್ಲ. ಈ ವದಂತಿಗೂ ನನಗೂ ನನ್ನ ಜೀವನಕ್ಕೂ ಯಾವುದೇ ಸಂಬಂಧವಿಲ್ಲ, ವಾಸ್ತವವಾಗಿ, ಇದು ಈ ವದಂತಿಗಳನ್ನು ಪ್ರಾರಂಭಿಸಿದ ಜನರ ಚಿಂತನೆಯ ಪ್ರಬುದ್ಧತೆಗೆ ಸಂಬಂಧಿಸಿದೆ' ಎಂದು ಹೇಳಿದ್ದಾರೆ.  ಈ ಮೂಲಕ ಗರ್ಭಿಣಿ ವದಂತಿ ತಳ್ಳಿ ಹಾಕಿದ್ದಾರೆ.  
 
ಇದೇ ವೇಳೆ ಪ್ರೇಮಿಗಳ ದಿನದ ಆಚರಣೆಯ ಬಗ್ಗೆ ಕೇಳಿದಾಗ ಸುನೀತಾ, ಎಲ್ಲಾ ದಿನದಂತೆ ಈ ದಿನ ಕೂಡ ಎಂದು ಹೇಳಿದ್ದಾರೆ. 'ನಾನು ಮನೆಗೆ ಬಂದಾಗ ನನ್ನ ಪತಿ ನನ್ನನ್ನು ಹೂವುಗಳೊಂದಿಗೆ ಸ್ವಾಗತಿಸಬೇಕು ಎಂದು ನಾನು ನಿರೀಕ್ಷಿಸುವುದಿಲ್ಲ. ಆದರೆ ನಾನು ಹೂಗುಚ್ಛವನ್ನು ಮನೆಗೆ ತೆಗೆದುಕೊಂಡು ಹೋಗಲು ಬಯಸುತ್ತೇನೆ. ಯಾವಾಗಲೂ ಹುಡುಗರೇ ಯಾಕೆ ಹೂವುಗಳನ್ನು ನೀಡಬೇಕು? ಎಲ್ಲಾ ಹುಡುಗಿಯರು ತಮ್ಮ ಜೀವನದಲ್ಲಿ ಪ್ರೀತಿಸುವ ಎಲ್ಲರಿಗೂ ಹೂವುಗಳನ್ನು ಕಳುಹಿಸಲು ನಾನು ಸಲಹೆ ನೀಡುತ್ತೇನೆ' ಎಂದು ಸುನಿತಾ ಹೇಳಿದರು.

2ನೇ ಮದ್ವೆಗೆ ಓಕೆ ಎಂದ ಗಾಯಕಿ; ಮಕ್ಕಳ ಸಮ್ಮುಖದಲ್ಲಿ ನಡೆಯಿತು ನಿಶ್ಚಿತಾರ್ಥ!

ಸಿಂಗರ್ ಸುನಿತಾ ತನ್ನ 43ನೇ ವಯಸ್ಸಿಗೆ 2ನೇ ಮದುವೆಯಾದರು. 2021ರಲ್ಲಿ ರಾಮ್ ಜೊತೆ ಸುನಿತಾ ದಾಂಪತ್ಯಕ್ಕೆ ಕಾಲಿಟ್ಟರು. ವಿಶೇಷ ಎಂದರೆ ಅಮ್ಮನ ಮದುವೆಯನ್ನು ಇಬ್ಬರೂ ಮಕ್ಕಳೇ ಮುಂದೆ ನಿಂತು ಮಾಡಿದರು. ಸುನಿತಾ ಪತಿ ರಾಮ್ ಡಿಜಿಟಲ್ ಮೀಡಿಯಾ ಸಂಸ್ಥೆಯ ಸಿಇಒ ಆಗಿ ಕೆಲಸ ಮಾಡಿದ್ದಾರೆ. 

ಮೊದಲ ಮಗು ಜನಿಸಿ ವರ್ಷದೊಳಗೆ ರಿಹಾನಾ ಮತ್ತೆ ಪ್ರೆಗ್ನೆಂಟ್; ಲೈವ್ ಶೋನಲ್ಲಿ ಬೇಬಿ ಬಂಪ್ ಪ್ರದರ್ಶಿಸಿದ ಖ್ಯಾತ ಗಾಯಕಿ

ಮೊದಲ ಮದುವೆ ಬಗ್ಗೆ 

ಸುನಿತಾ ಅವರಿಗೆ 19 ನೇ ವರ್ಷಕ್ಕೆ ಮದುವೆ ಮಾಡಲಾಗಿತ್ತು. ಮೊದಲ ಪತಿ, ಪತ್ರಕರ್ತ ಕಿರಣ್ ಗೋಪುರಾಜು ಇಂದ ವಿಚ್ಛೇಧನ ಪಡೆದು ಹಲವು ವರ್ಷಗಳಾಗಿದ್ದವು. ಮೊದಲ ಪತಿ ಕಿರಣ್ ದಾಂಪತ್ಯಕ್ಕೆ ಮಗ ಆಕಾಶ್ ಮತ್ತು ಮಗಳು ಶ್ರೇಯಾ ಎನ್ನುವ ಇಬ್ಬರು ಮಕ್ಕಳಿದ್ದಾರೆ. ಕಿರಣ್ ಅವರಿಂದ ದೂರ ಆದ ಬಳಿಕ ಸುನಿತಾ ಸಿಂಗಲ್ ಆಗಿದ್ದರು. ಬಳಿಕ ರಾಮ್ ಅವರನ್ನು ಪ್ರೀತಿಸಿ ಮದುವೆಯಾದರು. ಗಾಯಕಿ ಸುನಿತಾ ತೆಲುಗು ಮಾತ್ರವಲ್ಲದೇ ತಮಿಳು ಮತ್ತು ಕನ್ನಡದಲ್ಲೂ ಸಾಕಷ್ಟು ಹಾಡಿಗಳಿಗೆ ಧ್ವನಿ ನೀಡಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Samantha: ಪತಿ ರಾಜ್ ನಿಡಿಮೋರುಗೆ ಸಮಂತಾ ಮುದ್ದಾಗಿ ಏನ್ ಕರೀತಾರೆ ಗೊತ್ತಾ? ನಿಕ್‌ನೇಮ್ ಸೀಕ್ರೆಟ್ ರಿವೀಲ್!
Anushka Shetty: ರಾಜಮೌಳಿ ಬಗ್ಗೆ ದೇವಸೇನಾ ಹೇಳಿದ ಮಾತು ವೈರಲ್: ಬಾಹುಬಲಿ ರಹಸ್ಯ ಬಯಲು