ಎಸ್ ಎಸ್ ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಸಿನಿಮಾ ದಾಖಲೆ ಮೇಲೆ ದಾಖಲೆ ಬರೆಯುತ್ತಿದೆ. ಇತ್ತೀಚಿಗಷ್ಟೆ ಗೋಲ್ಡನ್ ಗ್ಲೋಬ್ಸ್‌ನಲ್ಲಿ ಪ್ರಶಸ್ತಿ ಗೆದ್ದು ಬೀಗಿದ್ದ ಆರ್ ಆರ್ ಆರ್ ಇದೀಗ ಜಪಾನ್ ನಲ್ಲಿ ಇತಿಹಾಸ ಸೃಷ್ಟಿಸಿದೆ.
ಎಸ್ ಎಸ್ ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಸಿನಿಮಾ ದಾಖಲೆ ಮೇಲೆ ದಾಖಲೆ ಬರೆಯುತ್ತಿದೆ. ಇತ್ತೀಚಿಗಷ್ಟೆ ಗೋಲ್ಡನ್ ಗ್ಲೋಬ್ಸ್‌ನಲ್ಲಿ ಪ್ರಶಸ್ತಿ ಗೆದ್ದು ಬೀಗಿದ್ದ ಆರ್ ಆರ್ ಆರ್ ಇದೀಗ ಜಪಾನ್ ನಲ್ಲಿ ಇತಿಹಾಸ ಸೃಷ್ಟಿಸಿದೆ. ಭಾರತದ ಸಿನಿಮಾಗಳು ಕೆಲವು ದೇಶಗಳಲ್ಲಿ ರಿಲೀಸ್ ಆಗುವುದೇ ಇಲ್ಲ. ಒಂದು ವೇಳೆ ರಿಲೀಸ್ ಆದರೂ ಜನ ನೋಡುವುದು ಕಡಿಮೆ. ಆದರೆ ಆರ್ ಆರ್ ಆರ್ ಹಾಗಲ್ಲ. ಎಲ್ಲೆಲ್ಲಿ ರಿಲೀಸ್ ಆಗಿದೆಯೋ ಎಲ್ಲಾ ಕಡೆ ಉತ್ತಮ ಪ್ರದರ್ಶನ ಕಂಡಿದೆ. ಜಪಾನ್ ನಲ್ಲೂ ಭರ್ಜರಿ ಪ್ರದರ್ಶನ ಕಾಣುವ ಮೂಲಕ ದಾಖಲೆ ಬರೆದಿದೆ. ಈ ಸಿನಿಮಾ ರಿಲೀಸ್ ಆಗಿ ಒಂದು ವರ್ಷವಾದರೂ ಅಬ್ಬರ ಇನ್ನೂ ಕಡಿಮೆಯಾಗಿಲ್ಲ.
ಆರ್ ಆರ್ ಆರ್ ಸಿನಿಮಾದ ಜಪಾನ್ ವರ್ಷನ್ 2022 ಅಕ್ಟೋಬರ್ ನಲ್ಲಿ ರಿಲೀಸ್ ಆಗಿತ್ತು. ಅದ್ದೂರಿಯಾಗಿ ಸಿನಿಮಾವನ್ನು ಬಿಡುಗಡೆ ಮಾಡಲಾಗಿತ್ತು. ಜಪಾನ್ ಗೆ ಇಡೀ ಸಿನಿಮಾತಂಡ ಹೋಗಿತ್ತು. ಎಸ್ ಎಸ್ ರಾಜಮೌಳಿ, ರಾಮ್ ಚರಣ್ ಮತ್ತು ಜೂ.ಎನ್ ಟಿ ಆರ್ ಜಪಾನ್‌ಗೆ ತೆರಳಿದ್ದರು. ಜಪಾನ್ ನಲ್ಲಿ ಚಿತ್ರತಂಡಕ್ಕೆ ಅದ್ದೂರಿ ಸ್ವಾಗತ ಸಿಕ್ಕಿತ್ತು. ಇದೀಗ ಆರ್ ಆರ್ ಆರ್ ದಾಖಲೆ ಇತಿಹಾಸ ಸೃಷ್ಟಿಸಿದೆ. ಜಪಾನ್ ನಲ್ಲಿ ಅತೀ ಹೆಚ್ಚು ಗಳಿಕೆ ಮಾಡಿದ ಭಾರತದ ಸಿನಿಮಾ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.
ರಿಹಾನ್ನಾ, ಲೇಡಿ ಗಾಗಾ ಸೇರಿ 4 ಹಾಡುಗಳ ಜೊತೆ ನಾಟು..ನಾಟು..ಸ್ಪರ್ಧೆ; ಆಸ್ಕರ್ ರೇಸ್‌ನಲ್ಲಿವೆ 2 ಸಾಕ್ಷ್ಯಚಿತ್ರ
ಈ ಮೂಲಕ ಆರ್ ಆರ್ ಆರ್ ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಮುತ್ತು ಸಿನಿಮಾದ ದಾಖಲೆ ಬ್ರೇಕ್ ಮಾಡಿದೆ. 24 ವರ್ಷಗಳ ಹಿಂದಿನ ಮುತ್ತು ಸಿನಿಮಾದ ದಾಖಲೆಯನ್ನು ರಾಜಮೌಳಿ ಮುರಿದಿದ್ದಾರೆ. ಅಂದಾಜಿನ ಪ್ರಕಾರ ಆರ್ ಆರ್ ಆರ್ ಜಪಾನ್ ನಲ್ಲಿ 950 ಮಿಲಿಯನ್ ಜಪಾನೀಸ್ ಯೆನ್ ಸಂಗ್ರಹಿಸಿದೆ ಎನ್ನಲಾಗಿದೆ. ಇದು ಕೆಲವೇ ದಿನಗಳಲ್ಲಿ ಒಂದು ಬಿಲಿಯನ್ ಆಗಲಿದೆ ಎಂದು ಸಿನಿ ಪಂಡಿತರು ಲೆಕ್ಕಾಚಾರ ಹಾಕಿದ್ದಾರೆ. ಭಾರತದ ಸಿನಿಮಾ ಜಪಾನ್ ನಲ್ಲಿ ಈ ಪರಿ ಕಲೆಕ್ಷನ್ ಮಾಡಿದ್ದು ಇದೇ ಮೊದಲು.
ಕುರ್ಚಿಯಿಂದ ಎದ್ದು ಕುಣಿಬೇಕು ಎನಿಸುತ್ತಿದೆ; ಹಾಲಿವುಡ್ ದಿಗ್ಗಜ ಸ್ಪೀಲ್ಬರ್ಗ್ ಮಾತಿಗೆ ರಾಜಮೌಳಿ ಫುಲ್ ಖುಷ್
ಆರ್ ಆರ್ ಆರ್ ಬಗ್ಗೆ
ಬ್ಲಾಕ್‌ಬಸ್ಟರ್ ಆರ್‌ಆರ್‌ಆರ್ ಚಿತ್ರದಲ್ಲಿ ಜೂನಿಯರ್ ಮತ್ತು ರಾಮ್ ಚರಣ್ ಸ್ವಾತಂತ್ರ್ಯ ಹೋರಾಟಗಾರರಾದ ಕೊಮರಂ ಭೀಮ್ ಮತ್ತು ಅಲ್ಲೂರಿ ಸೀತಾರಾಮ ರಾಜು ಅವರ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಈ ಸಿನಿಮಾದಲ್ಲಿ ಬಾಲಿವುಡ್ ಸ್ಟಾರ್ ಅಜಯ್ ದೇವಗನ್ ಮತ್ತು ಅಲಿಯಾ ಭಟ್ ಕೂಡ ನಟಿಸಿದ್ದಾರೆ. ಅಂದಹಾಗೆ ಆರ್ ಆರ್ ಆರ್ ಸಿನಿಮಾ ಸದ್ಯ ಆಸ್ಕರ್ ಅಂಗಳದಲ್ಲಿದೆ. ‘ನಾಟು ನಾಟು..' ಹಾಡು ಆಸ್ಕರ್ಗೆ ನಾಮಿನೇಷನ್ ಆಗಿದೆ. 95ನೇ ಅಕಾಡೆಮಿ ಅವಾರ್ಡ್ ಕಾರ್ಯಕ್ರಮ ಮಾರ್ಚ್ 12ರಂದು ಲಾಸ್ ಏಂಜಲೀಸ್ನಲ್ಲಿ ನಡೆಯಲಿದೆ. ಗೋಲ್ಡನ್ ಗ್ಲೋಬ್ಸ್ ಗೆದ್ದು ಬೀಗಿರುವ ಆರ್ ಆರ್ ಆರ್ ಆಸ್ಕರ್ ಗೆಲ್ಲುತ್ತಾರಾ ಎಂದು ಭಾರತೀಯರು ಕಾಯುತ್ತಿದ್ದಾರೆ.