100 ರೂ. ಇಟ್ಕೊಂಡು ಮುಂಬೈಗೆ ಬಂದು 11 ಸಾವಿರ ಕೋಟಿ ದುಡಿದ ಶಾರುಖ್ ಖಾನ್ ಪಕ್ಕದ ಮನೆ ವ್ಯಕ್ತಿ!

By Vaishnavi ChandrashekarFirst Published Aug 2, 2023, 9:07 AM IST
Highlights

ಏನೂ ಇಲ್ಲದೆ ಮುಂಬೈಗೆ ಬಂದು ಸಾವಿರಾರೂ ಕೋಟಿ ಹಣ ಮಾಡಿದ ಶಾರುಖ್‌ ಖಾನ್‌ ಪಕ್ಕದ ಮನೆ ವ್ಯಕ್ತಿ. ಕ್ಯೂರಿಯಾಸಿಟಿ ಹೆಚ್ಚಿಸಿದ ವ್ಯಕ್ತಿ ಯಾರು?

ಬಾಲಿವುಡ್ ಕಿಂಗ್ ಶಾರುಖ್ ಖಾನ್ ವಾಸವಿರುವ ಮುಂಬೈ ಮನೆ ಪ್ರವಾಸಿಗರ ಜನಪ್ರಿಯ ತಾಣವಾಗಿದೆ. ಮನ್ನತ್ ಒಳಗೆ ಹೇಗಿದೆ ಗೊತ್ತಿಲ್ಲ ಆದರೆ ಆ ರಸ್ತೆಯಲ್ಲಿ ಹೋಗಿ ಮನೆ ನಂಬರ್ ಬೋರ್ಡ್ ಮುಂದೆ ನಿಂತುಕೊಂಡು ಫೋಟೋ ಕ್ಲಿಕ್ ಮಾಡಿಕೊಂಡರೆ ಅಭಿಮಾನಿಗಳ ಒಂದು ರೀತಿ ಖುಷಿ. ಶಾರುಖ್ ಮನೆ ಅಂದ್ಮೇಲೆ ಅಕ್ಕ ಪಕ್ಕ ಇರುವ ಮನೆಗಳಿಗೂ ಹೆಚ್ಚಿಗೆ ಡಿಮ್ಯಾಂಡ್ ಇರುತ್ತದೆ. ಅದರಲ್ಲೂ ಸುಭಾಷ್ ರನ್ವಾಲ್ ಅನ್ನೋ ವ್ಯಕ್ತಿ ಹೆಸರು ನೆಟ್ಟಿಗರ ಗಮನ ಸೆಳೆದಿದೆ. 

ಹೌದು! ಶಾರುಖ್ ಖಾನ್ ಮನೆ ಪಕ್ಕದಲ್ಲಿರುವ ಮನೆ ಸುಭಾಷ್ ರನ್ವಾಲ್ ಎಂಬುವ ಉದ್ಯಮಿಗೆ ಸೇರಿದ್ದು. ಕೇವಲ 100 ರೂ. ಹಿಡಿದುಕೊಂಡು ಮುಂಬೈಗೆ ಬಂದ ವ್ಯಕ್ತಿ ಈಗ 11,500 ಕೋಟಿ ಹಣ ಸಂಪಾದಿಸಿದ್ದಾರೆ. ಖಾನ್‌ ರಷ್ಟೇ ಫೇಮಸ್ ಹಾಗೂ ಸಿರಿವಂತ ವ್ಯಕ್ತಿ ಎನ್ನಬಹುದು.  80 ವರ್ಷದ ಸುಭಾಷ್ ರನ್ವಾಲ್ ಮಿಡಲ್ ಕ್ಲಾಸ್‌ ಜನರಿಗೆ ಸ್ವಂತ ಮನೆ ಕಟ್ಟುಕೊಳ್ಳುವ ಆಸೆಗೆ ಸಾಥ್ ಕೊಡುತ್ತಾರೆ. ರನ್ವಾಲ್ ಗ್ರೂಪ್ಸ್‌ ಸಂಸ್ಥೆಯ ಚೇರ್‌ ಪರ್ಸನ್ ಆಗಿದ್ದು ಐಷಾರಾಮಿ ಅಪಾರ್ಟ್ಮೆಂಟ್‌ಗಳು ಮತ್ತು ಮಾಲ್‌ಗಳನ್ನು ಕಟ್ಟಿಸಿದ್ದಾರೆ. 

Latest Videos

ಆಟೋ ಮೇಲೆ ಪರಮಾತ್ಮನ ಫೋಟೋ; ಅರ್ಥವಾಗದ ಪ್ರೀತಿ ಎಂದ ನಟಿ ಚೈತ್ರಾ ಆಚಾರ್

ಮಹಾರಾಷ್ಟ್ರದಲ್ಲಿರುವ ದುಲಿಯಾ ಅನ್ನೋ ಊರಿನಿಂದ ಬಂದ ಸುಭಾಷ್ ರನ್ವಾಲ್ ಚಿಕ್ಕ ವಯಸ್ಸಿನಿಂದ ತಂದೆ ತಾಯಿ ಆರ್ಥಿಕ ಸಂಕಷ್ಟ ಎದುರಿಸುತ್ತಿರುವುದನ್ನು ನೋಡಿದ್ದಾರೆ. ಪೂಣೆಯಲ್ಲಿ ಕಾಮರ್ಸ್‌ ಪದವಿ ಪಡೆದ ನಂತರ ಸುಭಾಷ್‌ ಮುಂಬೈ ಮಹಾನಗರಕ್ಕೆ ಕಾಲಿಡುತ್ತಾರೆ. ಅಕೌಂಟೆಂಟ್ ಆಗಿ ಕೆಲಸ ಮಾಡಬೇಕು ಎಂದು ಕೇವಲ 100 ರೂಪಾಯಿ ಹಿಡಿದುಕೊಂಡು ಬರುತ್ತಾರೆ, ಇದು ಸಂಪಾದನೆ ಅಲ್ಲ ಕೇವಲ ಪಾಕೆಟ್ ಮನಿ ಆಗಿರುತ್ತದೆ. 1964ರಲ್ಲಿ ಮುಂಬೈಗೆ ಕಾಲಿಡುವುದು 1967ರಲ್ಲಿ ಸಿಎ ಪಾಸ್ ಮಾಡಿಕೊಂಡು Ernst & Ernst ಕಂಪನಿಯಲ್ಲಿ ಕೆಲಸ ಗಿಟ್ಟಿಸಿಕೊಳ್ಳುತ್ತಾರೆ. ವಿದೇಶದಲ್ಲಿ ಅತಿ ಹೆಚ್ಚು ಸಂಬಳ ಬರುವ ಆಫರ್‌ ಸ್ವೀಕರಿಸಿ ಕೆಲವೇ ತಿಂಗಳುಗಳಲ್ಲಿ ವಾಪಸ್‌ ಭಾರತಕ್ಕೆ ಬಂದುಬಿಟ್ಟರು. ಕೆಲವು ದಿನಗಳ ಕಾಲ ಕಿಮಿಕಲ್ ಕಂಪನಿಯಲ್ಲಿ ಕೆಲಸ ಮಾಡಿ 1978ರಲ್ಲಿ ಸ್ವಂತವಾಗಿ ಆರಂಭಿಸಬೇಕು ಎಂದು ರಿಯಲ್ ಎಸ್ಟೇಟ್‌ ಮೇಲೆ ಬಂಡವಾಳ ಹಾಕುತ್ತಾರೆ. 

ಸುಭಾಷ್ ರನ್ವಾಲ್ ಮೊದಲು ಖರೀದಿಸಿದ್ದು ತಾನೆಯಲ್ಲಿ 22 ಎಕರೆ ಜಾಗ.  10 ಸಾವಿರ ಜದರ ಅಡಿಯಲ್ಲಿ ಹೌಸಿಂಗ್ ಸೊಸೈಟಿ ಆರಂಭಿಸಿ ಅದಕ್ಕೆ ಕೀರ್ತಿಕರ್ ಅಪಾರ್ಟ್‌ಮೆಂಟ್‌ಗಳು ಎಂದು ಹೆಸರಿಡುತ್ತಾರೆ. ಅತಿ ಕಡಿಮೆ ಹಣದಲ್ಲಿ ಐಷಾರಾಮಿ ಮನೆ ಕಟ್ಟುವ ವ್ಯಕ್ತಿ ಎನ್ನುವ ಹೆಗ್ಗಳಿಕೆಗೆ ಪಾತ್ರವಾದರು. 1981ರಲ್ಲಿ ಫ್ಲಾಗ್‌ಶಿಪ್‌ ರುನ್ವಾಲ್ ನಗರ್‌ನಲ್ಲಿ 16 ಟವರ್‌ ಕ್ಲಸ್ಟರ್‌ ಮನೆಗಳನ್ನು ಕಟ್ಟಿಸಿದರು. ರಿಯಲ್‌ ಎಸ್ಟೇಟ್‌ ಜೊತೆಗೆ ಸ್ಟೀಲ್‌ ಮತ್ತು ಫಾರ್ಮಾ ಪ್ರಾಡೆಕ್ಟ್‌ಗಳ ಉತ್ಪಾದನೆ  ಆರಂಭಿಸಿದರು. ರಿಯಲ್‌ ಎಸ್ಟೇಟ್‌ ಹೆಸರು ಮಾಡುತ್ತಿದ್ದಂತೆ ಹಣ ಸಂಪಾದನೆ ಹೆಚ್ಚಾಗಿತ್ತು. ಎಂಬಿಎ ಪದವಿ ಪಡೆದಿರುವ ಮಕ್ಕಳು ಸಾಥ್‌ ಕೊಟ್ಟ ನಂತರ ರುನ್ವಾಲ್ ಮಾಲ್‌ ಕಟ್ಟಲು ಮುಂದಾದರು. ಮುಲುಂಡ್‌ನಲ್ಲಿ 2002ರಲ್ಲಿ ಮೊದಲ ಮಾಲ್ ಸ್ಥಾಪಿಸಿದರು. ಇದಾದ ಮೇಲೆ ಸಿಂಗಪೂರ್‌ ಸರ್ಕಾರದ ಬಂಡವಾಳದಿಂದ 1.2 ಮಿಲಿಯನ್ ಜದರ ಅಡಿಯಲ್ಲಿ ಮತ್ತೊಂದು ಆರ್‌ ಸಿಟಿ ಮಾಲ್ ಕಟ್ಟಿದರು. 

ಎರಡನೇ ಮದುವೆ ವಿಚಾರವಾಗಿ ಮಗಳ ಜೊತೆ ರಜನಿಕಾಂತ್ ಜಗಳ; ಬಾಂಬ್‌ ಸಿಡಿಸಿದ ಯುಟ್ಯೂಬರ್!

ಮುಂಬೈಗೆ ಕಾಲಿಟ್ಟಾಗ ಸುಭಾಷ್‌ ಕೇವಲ ಒಂದು ರೂಮ್‌ ಅಡುಗೆ ಮನೆಯಲ್ಲಿ ವಾಸಿಸುತ್ತಿದ್ದರು. ಕೆಲಸ ಪಡೆದ ನಂತರ ಎರಡು ರೂಮ್‌ ಇರುವ ಫ್ಲಾಟ್‌ಗೆ ಶಿಫ್ಟ್‌ ಆಗಿಬಿಟ್ಟರು. 

click me!