ಬಹು ವಿವಾದ ಸೃಷ್ಟಿಸಿದ್ದ ಓ ಮೈ ಗಾಡ್-2 ಚಿತ್ರದ ಜೀವ ಎನಿಸಿರುವ ಶಿವನ ಪಾತ್ರಕ್ಕೇ ಕತ್ತರಿ ಹಾಕುವಂತೆ ಸೆನ್ಸಾರ್ ಮಂಡಳಿ ಹೇಳಿದ್ದು, ಈ ಚಿತ್ರಕ್ಕೆ ಅಡಲ್ಟ್ ಸರ್ಟಿಫಿಕೇಟ್ ನೀಡಲಾಗಿದೆ.
ನಟ ಅಕ್ಷಯ್ ಕುಮಾರ್ (Akshay Kumar) ಗ್ರಹಗತಿ ಸದ್ಯದ ಮಟ್ಟಿಗೆ ಸರಿಯಿದ್ದಂತಿಲ್ಲ. ಅವರು ನಟಿಸುವ ಚಿತ್ರಗಳು ಒಂದರ ಮೇಲೊಂದರಂತೆ ಸೋಲು ಕಾಣುತ್ತಿವೆ. ಈಗ ಅವರ ಭರವಸೆ ಹೆಚ್ಚಿರುವುದು ಮುಂಬರುವ ಚಿತ್ರ ಓ ಮೈ ಗಾಡ್-2 (OMG 2) ಮೇಲೆ. ಶಿವನ ಪಾತ್ರಧಾರಿಯಾಗಿರುವ ನಟ ಅಕ್ಷಯ್ ಕುಮಾರ್ ಅವರ ಫೋಟೋ ವೈರಲ್ ಆಗಿದ್ದ ಬೆನ್ನಲ್ಲೇ ವಿವಾದದ ಸುಳಿ ಸುತ್ತಿಕೊಂಡಿದೆ. ಬರುವ ಆಗಸ್ಟ್ 11 ರಂದು ‘ಓ ಮೈಗಾಡ್ 2’ ಸಿನಿಮಾ ರಿಲೀಸ್ ಮಾಡುವುದಾಗಿ ಚಿತ್ರತಂಡ ಹೇಳಿತ್ತು. ಆದರೆ ಈ ಚಿತ್ರಕ್ಕೆ ಕೇಂದ್ರ ಚಲನಚಿತ್ರ ಪ್ರಮಾಣೀಕೃತ ಮಂಡಳಿ ಸೆನ್ಸಾರ್ ಪತ್ರವನ್ನು ಕೊಡಲು ನಿರಾಕರಿತ್ತು. ಆದರೆ ಇದೀಗ ಚಿತ್ರತಂಡಕ್ಕೆ ಆಘಾತಕಾರಿಯಾಗುವ ಸಂಗತಿಯೊಂದು ಹೊರಬಂದಿದೆ. ಅದೇನೆಂದರೆ ಇದೀಗ ಶಿವನ ಪಾತ್ರಕ್ಕೆ ಕತ್ತರಿ ಹಾಕುವಂತೆ ಸೆನ್ಸಾರ್ ಮಂಡಳಿ ಹೇಳಿದೆ ಎನ್ನಲಾಗಿದೆ. ಕೇಂದ್ರ ಚಲನಚಿತ್ರ ಪ್ರಮಾಣೀಕೃತ ಮಂಡಳಿಯು ಶಿವನ ಪಾತ್ರವನ್ನೇ ಕೈ ಬಿಡುವಂತೆ ಹಾಗೂ ಶಿವನ ಬದಲು ಶಿವ ದೂತನನ್ನಾಗಿ ಚಿತ್ರೀಕರಿಸುವಂತೆ ಸಲಹೆ ನೀಡಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಅಷ್ಟೇ ಅಲ್ಲದೇ, ಅಕ್ಷಯ್ ಕುಮಾರ್ ಮೈ ಬಣ್ಣವನ್ನು ನೀಲಿ ಮಾಡಿಕೊಂಡು ಶಿವನ ಅವತಾರವೆಂಬಂತೆ ಕಾಣಿಸುವ ಕಾರಣ, ಆ ಬಣ್ಣವನ್ನೂ ಬದಲಿಸಲು ಹೇಳಿರುವುದಾಗಿ ವರದಿಯಾಗಿದೆ!
ಇಷ್ಟೇ ಅಲ್ಲದೇ, ಓ ಮೈ ಗಾಡ್ ಚಿತ್ರಕ್ಕೆ 25 ಕಡೆ ಕತ್ತರಿ ಬಿದ್ದಿದೆ. ಇದನ್ನು ವಯಸ್ಕರ ಚಿತ್ರ ಎಂದು ಹೇಳಲಾಗಿದ್ದು, ಎ ಸರ್ಟಿಫಿಕೇಟ್ (Adult Certificate) ನೀಡಲಾಗಿದೆ. ಈಗಾಗಲೇ ಚಿತ್ರದ ಟೀಸರ್ ಹಾಗೂ ಹಾಡುಗಳು ಬಿಡುಗಡೆಯಾಗಿದ್ದು, ಜನರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಳ್ಳುತ್ತಿದ್ದರೂ ಟ್ರೋಲ್ಗೆ ಒಳಗಾಗಿತ್ತು. 2012ರಲ್ಲಿ ‘ಒಎಂಜಿ’ ಸಿನಿಮಾ ತೆರೆಕಂಡು ಸೂಪರ್ ಹಿಟ್ ಆಗಿತ್ತು. ಅದಕ್ಕೆ ಸೀಕ್ವೆಲ್ ಆಗಿ ‘ಒಎಂಜಿ 2’ ಸಿನಿಮಾ ಈಗ ಬಿಡುಗಡೆ ಆಗುತ್ತಿದೆ. ಅಕ್ಷಯ್ ಕುಮಾರ್ ಜೊತೆ ಪಂಕಜ್ ತ್ರಿಪಾಠಿ ಅವರು ಪ್ರಮುಖ ಮಾತ್ರ ಮಾಡಿದ್ದಾರೆ. ನಟಿ ಯಾಮಿ ಗೌತಮಿ ಅವರು ಲಾಯರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಮಿತ್ ರೈ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಆದರೆ ಈ 2ನೇ ಭಾಗಕ್ಕೆ ಈಗ ಗ್ರಹಚಾರ ಒಕ್ಕರಿಸಿದೆ. ಈ ಸಿನಿಮಾದ ಕಥೆ ಸಲಿಂಗ ಕಾಮಕ್ಕೆ (Homosexuality) ಸಂಬಂಧಿಸಿದ್ದು ಎಂಬ ಸುದ್ದಿ ಹರಡಿದೆ. ಶಿವನ ಪಾತ್ರದ ಮೂಲಕ ಲೈಂಗಿಕ ಶಿಕ್ಷಣವನ್ನು ಹೇಳಲು ಹೊರಟಿದ್ದಾರೆ ಎಂದು ಹೇಳಲಾಗುತ್ತಿದೆ. ಜೊತೆಗೆ ಇದು ಸಲಿಂಗಕಾಮದ ಚಿತ್ರವಾಗಿದೆ ಎನ್ನುವ ಸುದ್ದಿಯೂ ಇನ್ನೊಂದೆಡೆ ಹರಡಿದೆ. ಇದೇ ಕಾರಣಕ್ಕೆ ಎ ಸರ್ಟಿಫಿಕೇಟ್ ನೀಡಲಾಗಿದೆ.
OMG-2: ವೇಷ ಶಿವಂದು, ಕಥೆ ಸಲಿಂಗ ಕಾಮದ್ದಾ! ಏನಿದು ಅಕ್ಷಯ್ ಕುಮಾರ್ ಚಿತ್ರದ ವಿವಾದ?
ಸೆನ್ಸಾರ್ ಬೋರ್ಡ್ (Sensor Board) ಸೂಚಿಸಿದ ಬದಲಾವಣೆಗಳು ಚಿತ್ರದ ಮೇಲೆ ತೀವ್ರ ಪರಿಣಾಮ ಬೀರಬಹುದು ಎನ್ನಲಾಗಿದೆ. ಕೆಲ ಸೀನ್‌ಗಳನ್ನು ತೆಗೆದುಹಾಕುವುದು ಅಥವಾ ಬಣ್ಣವನ್ನು ಡಿಜಿಟಲ್ ಆಗಿ ಬದಲಾಯಿಸುವುದು ಹೆಚ್ಚುವರಿ ಸಮಯ ತೆಗೆದುಕೊಳ್ಳುತ್ತದೆ. ಆದ್ದರಿಂದ ಚಿತ್ರ ಬಿಡುಗಡೆ ಮುಂದೂಡಲೇಬೇಕಾಗುತ್ತಿದೆ. ಎ ಸರ್ಟಿಫಿಕೇಟ್ ದೊರೆತಿರುವುದಕ್ಕೆ ಚಿತ್ರ ನಿರ್ಮಾಪಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದು ಲೈಂಗಿಕ ಶಿಕ್ಷಣದ ವಿಷಯವನ್ನು ಎಲ್ಲಾ ವಯಸ್ಸಿನ ಜನರು ನೋಡಬೇಕು ಎಂದು ಹೇಳಿದ್ದಾರೆ. ಸಿನಿಮಾದಲ್ಲಿ ಸಾಮಾಜಿಕ ಸಂದೇಶ ಇರುವ ಕಾರಣ 18 ವರ್ಷವೊಳಗಿನ ವಯೋಮಾನದವರೂ ಈ ಚಿತ್ರ ನೋಡಬೇಕು ಎಂಬ ಸಲುವಾಗಿ ಸೆನ್ಸಾರ್ ಮಂಡಳಿಯಿಂದ ‘ಯು / ಎ’ ಸರ್ಟಿಫಿಕೇಟ್ ಪಡೆಯಲು ಚಿತ್ರತಂಡ ಸಕಲ ಪ್ರಯತ್ನ ನಡೆಸುತ್ತಿದೆ.
ದೇವರಾಗಿಬಿಟ್ಟರು ಬಾಲಿವುಡ್ ನಟ-ನಟಿಯರು;ಕೋಟಿಯಲ್ಲಿ ಹಣ ಪಡೆದರೂ ಫ್ಲಾಪ್ ಯಾಕೆ?