'ಡಂಕಿ' ಸಿನಿಮಾ ಮೊದಲ ದಿನ 30 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದರೆ, ಎರಡನೇ ದಿನ 20 ಕೋಟಿ ರೂಪಾಯಿ, ಮೂರನೇ ದಿನವಾದ ಶನಿವಾರ (ಡಿ.23) ಅಂದಾಜು 26 ಕೋಟಿ ರೂಪಾಯಿ ಮಾತ್ರ ಕಲೆಕ್ಷನ್ ದಾಖಲಿಸಿದೆ.
ಬಾಲಿವುಡ್ ಕಿಂಗ್ ಖಾನ್ ಖ್ಯಾತಿಯ ನಟ ಶಾರುಖ್ ಖಾನ್ ನಟನೆಯ ಡಂಕಿ ಸಿನಿಮಾ 21 ಡಿಸೆಂಬರ್ 2023ರಂದು ಜಗತ್ತಿನಾದ್ಯಂತ ಬಿಡುಗಡೆ ಆಗಿದೆ. ಆದರೆ, ಈ ಚಿತ್ರವು ನಿರೀಕ್ಷೆ ನಿಜವಾಗಿಸದೇ ಫ್ಲಾಪ್ ಆಗಿದೆ. ಈ ಮೊದಲಿನ 'ಜವಾನ್' ಮತ್ತು 'ಪಠಾಣ್' ಸಿನಿಮಾಗಳ ರೀತಿ 'ಡಂಕಿ' ಸಿನಿಮಾ ಕೂಡ ಅಬ್ಬರಿಸಬಹುದು ಎಂದು ಶಾರುಖ್ ಖಾನ್ ಅಭಿಮಾನಿಗಳು ನಿರೀಕ್ಷಿಸಿದ್ದರು. ಆದರೆ ಆ ನಿರೀಕ್ಷೆ ಸುಳ್ಳಾಗಿದೆ. ರಿಲೀಸ್ ಬಳಿಕ ಮೂರು ದಿನಗಳು ಕಳೆದರೂ 100 ಕೋಟಿ ರೂಪಾಯಿ ಗಡಿ ಮುಟ್ಟಲು 'ಡಂಕಿ' ಸಿನಿಮಾಗೆ ಸಾಧ್ಯವಾಗಿಲ್ಲ. ಸೋಲಿಗೆ ಕಾರಣವನ್ನು ಸಿನಿ ಪಂಡಿತರು ಲೆಕ್ಕಾಚಾರ ಹಾಕುತ್ತಿದ್ದಾರೆ
ಶಾರುಖ್ ಖಾನ್ (Shah Rukh Khan)ಅಭಿನಯದ 'ಡಂಕಿ' ಸಿನಿಮಾ (Dunki)ಡಿಸೆಂಬರ್ 21, 2023ರಂದು ಬಿಡುಗಡೆ ಆಯಿತು. ಈ ಸಿನಿಮಾದ ಮೇಲೆ ಅಭಿಮಾನಿಗಳು ಬಹಳಷ್ಟು ಬಹಳಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಅಂದುಕೊಂಡಂತೆ ಕಲೆಕ್ಷನ್ ಮಾಡುವಲ್ಲಿ 'ಡಂಕಿ' ವಿಫಲವಾಗಿದೆ. ಶಾರುಖ್ ಖಾನ್ ಸಿನಿಮಾ ಆಗಿದ್ದರೂ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರು ಮೊದಲ ದಿನ ಚಿತ್ರಮಂದಿರಕ್ಕೆ ಬಂದಿಲ್ಲ. ಫಸ್ಟ್ ಡೇ ಸಿನಿಮಾ ನೋಡಿದವರಿಂದ ಮಿಶ್ರ ಪ್ರತಿಕ್ರಿಯೆ ಬಂದ ಹಿನ್ನೆಲೆ ಚಿತ್ರದ ಕಲೆಕ್ಷನ್ (Box Office Collection)ಕಳಪೆ ಆಯ್ತು. ಭಾರತದ ಗಲ್ಲಾಪೆಟ್ಟಿಗೆಯಲ್ಲಿ ಮೂರು ದಿನಗಳಲ್ಲಿ ಈ ಸಿನಿಮಾದ ಬಾಕ್ಸ್ ಆಫೀಸ್ ಕಲೆಕ್ಷನ್ ಅಂದಾಜು 76 ಕೋಟಿ ರೂಪಾಯಿ ಅಷ್ಟೇ.
ಕೈ ಖಾಲಿ ಮಾಡಿಕೊಂಡ ನಟಿ ಸಾಯಿ ಪಲ್ಲವಿ; ದಿ ಕಾಶ್ಮೀರ್ ಫೈಲ್ಸ್ ವಿವಾದಕ್ಕೆ ಸಿಕ್ಕ ಬಹುಮಾನವೇ?
'ಡಂಕಿ' ಸಿನಿಮಾ ಮೊದಲ ದಿನ 30 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದರೆ, ಎರಡನೇ ದಿನ 20 ಕೋಟಿ ರೂಪಾಯಿ, ಮೂರನೇ ದಿನವಾದ ಶನಿವಾರ (ಡಿ.23) ಅಂದಾಜು 26 ಕೋಟಿ ರೂಪಾಯಿ ಮಾತ್ರ ಕಲೆಕ್ಷನ್ ದಾಖಲಿಸಿದೆ ಎನ್ನಲಾಗಿದೆ. ಮೂರು ದಿನಕ್ಕೆ ಈ ಸಿನಿಮಾ 76 ಕೋಟಿ ರೂಪಾಯಿ ಗಳಿಸಿದ್ದು 100 ಕೋಟಿ ರೂ. ಕ್ಲಬ್ ಸೇರಲು ಖೂಡ ಕಷ್ಟಪಡುತ್ತಿದೆ. ಆದರೆ ಪ್ರಭಾಸ್ ಅಭಿನಯದ ಸೌತ್ ಮೇಕಿಂಗ್ ಸಿನಿಮಾ ಸಲಾರ್ ಒಂದೇ ದಿನಕ್ಕೆ 100 ಕೋಟಿ ಕಲೆಕ್ಷನ್ ದಾಟಿದೆ ಎನ್ನಲಾಗಿದೆ.
ಲೂನಾದಲ್ಲಿ ಓಡಾಡ್ತಾ ಇದ್ದವ್ನ ಲ್ಯಾಂಬೋರ್ಗಿನಿ ಹತ್ತಿಸಿದ್ರಿ; ಮಂಡ್ಯ ಫ್ಯಾನ್ಸ್ ರಿಯಾಕ್ಷನ್ ನೋಡಿ!
'ಜವಾನ್' ಮತ್ತು 'ಪಠಾಣ್' ಸಿನಿಮಾಗಳ ಮೂಲಕ ಶಾರುಖ್ ಖಾನ್ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾ ಕೊಟ್ಟು ರೆಕಾರ್ಡ್ ಸ್ಥಾಪಿಸಿದ್ದರು. ಈ ವರ್ಷ ತೆರೆಕಂಡ ಆ ಎರಡೂ ಸಿನಿಮಾಗಳು ಜಾಗತಿಕ ಬಾಕ್ಸ್ ಆಫೀಸ್ನಲ್ಲಿ ಸಾವಿರಾರು ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ್ದವು. 'ಡಂಕಿ' ಸಿನಿಮಾ ಕೂಡ ಅದೇ ರೀತಿ ಅಬ್ಬರಿಸಬಹುದು, ಶಾರುಖ್ ಹ್ಯಾಟ್ರಿಕ್ ಸಕ್ಸಸ್ ಮಾಡಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಅದು ಸುಳ್ಳಾಗಿದೆ.
ಸುಮಲತಾ ಎದುರೇ ಮಾಲಾಶ್ರೀ ಹೇಳಿದ್ರು; ಅಂಬರೀಷ್ ಜತೆ ಸುಮಲತಾ ಬಂದಾಗೆಲ್ಲ ಹೊಟ್ಟೆಕಿಚ್ಚು ಆಗ್ತಿತ್ತು..!
ರಾಜ್ಕುಮಾರ್ ಹಿರಾನಿ ಶಾರುಖ್ ಅಭಿನಯದ 'ಡಂಕಿ' ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಉತ್ತಮ ಭವಿಷ್ಯ ಕಟ್ಟಿಕೊಳ್ಳುವ ಸಲುವಾಗಿ ವಿದೇಶಕ್ಕೆ ಹೋಗಲು ಸಾಹಸ ಮಾಡುವ ಸ್ನೇಹಿತರ ಒಂದು ಗುಂಪಿನ ಸಾಹಸದ ಬಗ್ಗೆ ಈ ಸಿನಿಮಾದಲ್ಲಿ ತೋರಿಸಲಾಗಿದೆ. ಶಾರುಖ್ ಖಾನ್ ಅವರಿಗೆ ಜೋಡಿಯಾಗಿ ನಟಿ ತಾಪ್ಸಿ ಪನ್ನು ನಟಿಸಿದ್ದಾರೆ. ಉಳಿದಂತೆ, ಬೊಮನ್ ಇರಾನಿ, ವಿಕ್ಕಿ ಕೌಶಲ್, ಅನಿಲ್ ಗ್ರೋವರ್, ವಿಕ್ರಮ ಕೊಚ್ಚರ್ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಒಟ್ಟಿನಲ್ಲಿ ಶಾರುಖ್ ಖಾನ್ ಡಂಕಿ ಸೋತಿದೆ.
ಕೊನೆಗೂ ಮೌನ ಮುರಿದ ಶಾರುಖ್ ಖಾನ್; 4 ವರ್ಷದಿಂದ ಬಚ್ಚಿಟ್ಟಿದ್ದ ಸೀಕ್ರೆಟ್ ರಿವೀಲ್ ಆಯ್ತು!