
ಕಳೆದ ವರ್ಷದವರೆಗೂ ತೃಪ್ತಿ ಡಿಮ್ರಿ ಎನ್ನುವ ಬಾಲಿವುಡ್ ನಟಿ ಇದ್ದಾರೆ ಎನ್ನುವುದೇ ಎಷ್ಟೋ ಮಂದಿಗೆ ತಿಳಿದಿರಲಿಲ್ಲ. ಆದರೆ ಇದೀಗ ಗೂಗಲ್ನಲ್ಲಿ ತೃಪ್ತಿಯ ಬಗ್ಗೆ ಸಿನಿ ಪ್ರಿಯರಿಗೆ ಇಂಟರೆಸ್ಟ್ ಜಾಸ್ತಿಯಾಗುತ್ತಿದೆ. ಯಾರೀಕೆ? ಯಾವೆಲ್ಲಾ ಚಿತ್ರಗಳಲ್ಲಿ ನಟಿಸಿದ್ದಾರೆ? ಎಲ್ಲಿಯವರು ಎಂದೆಲ್ಲಾ ಸರ್ಚ್ ಶುರುವಿಟ್ಟುಕೊಂಡಿದ್ದಾರೆ. ಪಾಳುಬಿದ್ದಿದ್ದ ಈಕೆಯ ಸೋಷಿಯಲ್ ಮೀಡಿಯಾ ಖಾತೆ ಸಕ್ರಿಯಗೊಂಡಿದ್ದು, ಈಕೆಯ ಸೋಷಿಯಲ್ ಮೀಡಿಯಾ ಕೂಡ ಸರ್ಚ್ ಮಾಡಲಾಗುತ್ತಿದೆ. ದಿಢೀರನೆ ಎಲ್ಲರ ಕಣ್ಣು ಕುಕ್ಕಿದ್ದಾರೆ ಈ ಬೆಡಗಿ. ಅಷ್ಟಕ್ಕೂ ಈ ಬೆಳವಣಿಗೆಗೆ ಕಾರಣ ಏನು ಎಂದು ಬೇರೆ ಹೇಳಬೇಕಾಗಿಲ್ಲ. ಅದೇ ಅನಿಮಲ್ ಚಿತ್ರ. ಸಿನಿಮಾಗಳಲ್ಲಿ ಯಾವುದೇ ಮುಜುಗರ ಪಟ್ಟುಕೊಳ್ಳದೇ ಧಾರಾಳವಾಗಿ ದೇಹ ಪ್ರದರ್ಶನ ಮಾಡುವ, ಸ್ತನಗಳ ಗಾತ್ರಗಳನ್ನು ದೊಡ್ಡದಾಗಿಸಿಕೊಳ್ಳಲು ಶಸ್ತ್ರಚಿಕಿತ್ಸೆ ಮಾಡಿಕೊಂಡು ಹೋದಲ್ಲಿ, ಬಂದಲ್ಲಿ ಅದರ ಪ್ರದರ್ಶನ ಮಾಡುವ ಬಹುತೇಕ ನಟಿಯರನ್ನು ಸೈಡ್ಗೆ ಹಾಕಿದ್ದಾರೆ ತೃಪ್ತಿ ಡಿಮ್ರಿ. ಇದೆಲ್ಲಾ ಸಾಧ್ಯವಾಗಿಸಿದ್ದು ಸಂಪೂರ್ಣ ಬೆತ್ತಲೆ ದೃಶ್ಯ. ಅನಿಮಲ್ ಚಿತ್ರದಲ್ಲಿ ನಟ ರಣಬೀರ್ ಕಪೂರ್ ಜೊತೆ ಈಕೆಯ ನಗ್ನ ದೃಶ್ಯಗಳನ್ನು ನೋಡುತ್ತಿದ್ದಂತೆಯೇ ದಿಢೀರನೆ ಫ್ಯಾನ್ಸ್ ಸಂಖ್ಯೆಯನ್ನೂ ಏರಿಸಿಕೊಂಡಿದ್ದಾರೆ ತಾರೆ.
ಸಂದೀಪ್ ರೆಡ್ಡಿ ವಂಗ ನಿರ್ದೇಶನದ ಈ ಚಿತ್ರದಲ್ಲಿ ರಣಬೀರ್ ಕಪೂರ್ ಮತ್ತು ರಶ್ಮಿಕಾ ಮಂದಣ್ಣ ದಂಪತಿಯಾಗಿ ಕಾಣಿಸಿಕೊಂಡಿದ್ದರೆ, ಅನಿಲ್ ಕಪೂರ್ ಮತ್ತು ಬಾಬಿ ಡಿಯೋಲ್ ಕೂಡ ಕಾಣಿಸಿಕೊಂಡಿದ್ದಾರೆ. ಆದರೆ ಚಿತ್ರ ಬಿಡುಗಡೆಗೂ ಮುನ್ನ ಹಾಡೊಂದರ ಟ್ರೇಲರ್ ರಿಲೀಸ್ ಆದಾಗ ರಶ್ಮಿಕಾ ಮಂದಣ್ಣನವರ ಹಸಿಬಿಸಿ ದೃಶ್ಯದಿಂದ ಭಾರಿ ಸುದ್ದಿಯಾಗಿತ್ತು. ಆದರೆ ಈಕೆಗಿಂತಲೂ ಒಂದು ಹೆಜ್ಜೆ ಮುಂದೆ ಹೋಗಿರುವ ಇನ್ನೋರ್ವ ನಟಿ ತೃಪ್ತಿ ಡಿಮ್ರಿ ಮತ್ತು ರಣಬೀರ್ ಕಪೂರ್ ಅವರ ಸಂಪೂರ್ಣ ಬೆತ್ತಲೆ ದೃಶ್ಯದ ಸುದ್ದಿಯಾಗುತ್ತಿದ್ದಂತೆಯೇ ರಶ್ಮಿಕಾ ಸೈಡ್ಗೆ ಹೋಗಿದ್ದಾರೆ, ಎಲ್ಲೆಲ್ಲೂ ತೃಪ್ತಿಯದ್ದೇ ಮಾತು. ರಾತ್ರೋರಾತ್ರಿ ಈಕೆ ರಶ್ಮಿಕಾ ಮಂದಣ್ಣನವರ ನ್ಯಾಷನಲ್ ಕ್ರಷ್ ಪಟ್ಟವನ್ನೂ ಕಿತ್ತುಕೊಂಡಿದ್ದಾರೆ. ಈಕೆಯ ಇನ್ಸ್ಟಾಗ್ರಾಮ್ ಖಾತೆಯ ಫಾಲೋವರ್ಸ್ ಸಂಖ್ಯೆ ದಿಢೀರನೆ ಐದಾರು ಪಟ್ಟು ಹೆಚ್ಚಾಗಿದೆ.
ಅರೆನಗ್ನ ನಟಿಯರನ್ನೆಲ್ಲಾ ಹಿಂದಿಕ್ಕಿದ 'ಅನಿಮಲ್' ಬೆತ್ತಲೆ ರಾಣಿ ತೃಪ್ತಿಗೆ ಸಿಕ್ತು ಇನ್ನೊಂದು ಪ್ರತಿಷ್ಠಿತ ಸ್ಥಾನ!
ಇದೀಗ ಚಿತ್ರ ಬಿಡುಗಡೆಯಾದ ಬಳಿಕ ತಾನು ಎಷ್ಟೋ ರಾತ್ರಿ ನಿದ್ದೆಯನ್ನೇ ಮಾಡಿಲ್ಲ ಎಂದು ನಟಿ ತೃಪ್ತಿ ಹೇಳಿಕೊಂಡಿದ್ದಾರೆ. ಅದಕ್ಕೆ ಕಾರಣವನ್ನೂ ಅವರು ನೀಡಿದ್ದಾರೆ. ಅವರ ಮಾತಿನಲ್ಲಿಯೇ ಹೇಳುವುದಾದರೆ, ಅನಿಮಲ್ ಚಿತ್ರ ಈ ಪರಿಯಲ್ಲಿ ಯಶಸ್ಸು ಕಾಣುತ್ತದೆ ಎಂದು ನನಗೆ ತಿಳಿದೇ ಇರಲಿಲ್ಲ. ಈ ಚಿತ್ರ ನನ್ನ ಜೀವನವನ್ನೇ ಬದಲಿಸಿದೆ. ಜನರಿಂದ ಬೆಟ್ಟದಷ್ಟು ಪ್ರೀತಿಯನ್ನು ಪಡೆಯುತ್ತಿದ್ದೇನೆ. ಚಿತ್ರ ಬಿಡುಗಡೆಯಾದಾಗಿನಿಂದಲೂ ಜನ ನನ್ನನ್ನು ಹುಡುಕಿ ಬರುತ್ತಿದ್ದಾರೆ. ದಿನ-ರಾತ್ರಿ ಎನ್ನದೇ ಫೋನ್ ರಿಂಗ್ ಆಗುತ್ತಲೇ ಇದ್ದವು. ಕೆಲವು ದಿನಗಳವರೆಗೂ ಇದು ಮುಂದುವರೆದಿತ್ತು. ಇದನ್ನು ಸಾಮಾಜಿಕ ಜಾಲತಾಣದಲ್ಲಿಯಂತೂ ಸಂದೇಶಗಳ ಮಹಾಪೂರವೇ ಹರಿದುಬಂದಿದೆ. ಮೊಬೈಲ್ ಫೋನ್ಗಳಿಗೆ ಬರುತ್ತಿದ್ದ ಕರೆಗಳಿಗೆ ಲೆಕ್ಕವೇ ಇಲ್ಲ. ಇದೇ ಕಾರಣಕ್ಕೆ ನನಗೆ ಎಷ್ಟೋ ರಾತ್ರಿ ನಿದ್ದೆಯೇ ಇಲ್ಲವಾಗಿತ್ತು. ಆರಂಭದಲ್ಲಿ ನನಗೆ ಬರುತ್ತಿದ್ದ ಸಂದೇಶಗಳನ್ನೆಲ್ಲಾ ಓದುತ್ತಿದ್ದೆ. ಅದಕ್ಕಾಗಿ ರಾತ್ರಿಯಿಡೀ ಕಳೆದಿದ್ದೇನೆ. ನಿದ್ದೆಯನ್ನೇ ಮಾಡಿಲ್ಲ ಎಂದಿದ್ದಾರೆ ತೃಪ್ತಿ,
ಅನಿಮಲ್ ಸಿನಿಮಾ ಡಿಸೆಂಬರ್ 1ರಂದು ಬಿಡುಗಡೆ ಆಗಿತ್ತು. ಮೊದಲ ದಿನದಿಂದಲೇ ಕಲೆಕ್ಷನ್ ವಿಚಾರದಲ್ಲಿ ದಾಖಲೆ ಬರೆದ ಈ ಚಿತ್ರ, ಇದೀಗ 23 ದಿನಗಳಲ್ಲಿ ಅಂದರೆ ಬಿಡುಗಡೆ ಆದ ಮೂರು ವಾರಗಳಲ್ಲಿ 862 ಕೋಟಿ ರೂಪಾಯಿ ಗಳಿಸಿದೆ. ರಣಬೀರ್ ಕಪೂರ್ ವೃತ್ತಿ ಜೀವನದಲ್ಲಿ ಅತಿ ಹೆಚ್ಚು ಗಳಿಕೆ ಕಂಡ ಸಿನಿಮಾ ಎಂಬ ಖ್ಯಾತಿಯೂ ಅನಿಮಲ್‌ಗೆ ಸಿಕ್ಕಿದೆ. ಇವುಗಳ ನಡುವೆಯೇ ಮತ್ತೊಂದು ಬಿರುದು ಈ ಬೆತ್ತಲೆ ರಾಣಿಯ ಕಿರೀಟಕ್ಕೆ ಸೇರಿದೆ. ಅದೇನೆಂದರೆ IMDb (Internet Movie Database) ಎಂಬ ಹೆಸರಾಂತ ಇಂಟರ್ನೆಟ್ ಮೂವಿ ಡೇಟಾಬೇಸ್, ಇತ್ತೀಚೆಗೆ ಜನಪ್ರಿಯ ಭಾರತೀಯ ಸೆಲೆಬ್ರಿಟಿಗಳ ಕುರಿತು ಮಾಹಿತಿ ನೀಡಿದೆ. ಈ ಸ್ಥಾನದಲ್ಲಿ ಎಲ್ಲಾ ನಟ-ನಟಿಯರನ್ನು ಮೀರಿ ತೃಪ್ತಿ ಡಿಮ್ರಿ ನಂ.1 ಸ್ಥಾನಕ್ಕೆ ಏರಿದ್ದಾರೆ. ಕುತೂಹಲದ ವಿಷಯ ಏನೆಂದರೆ, ಅನಿಮಲ್ ಚಿತ್ರದ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಎರಡನೇ ಸ್ಥಾನದಲ್ಲಿದ್ದಾರೆ. ಒಟ್ಟಿನಲ್ಲಿ ನಟಿ ತೃಪ್ತಿಯ ಅದೃಷ್ಟ ಖುಲಾಯಿಸಿದೆ. ಈಕೆ ಬೆತ್ತಲಾಗುತ್ತಿದ್ದಂತೆಯೇ ಬೇರೆ ಚಿತ್ರಗಳಿಂದಲೂ ಒಳ್ಳೆಯ ಆಫರ್ಗಳು ಬರುತ್ತಿವೆ. ಇನ್ನು ಉಳಿದ ನಟಿಯರು ಮುಂದೆ ಏನು ಮಾಡುತ್ತಾರೆ ಎನ್ನುವ ಪ್ರಶ್ನೆ ಸಿನಿ ರಸಿಕರನ್ನು ಕಾಡುತ್ತಿದೆ.
ರಣಬೀರ್ ಜೊತೆ ಬೆತ್ತಲಾದಾಗ ಉದ್ವೇಗಗೊಂಡೆ, ಕೈ ಉಜ್ಜಿಕೊಳ್ತಿದ್ದನ್ನು ಅಪ್ಪ ಗಮನಿಸಿ ಹೀಗೆ ಕೇಳಿದ್ರು...
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.