Viral Video: ಸಾರಾ ಅಲಿ ಖಾನ್​ ಮೇಲೆ ಮಾಟ ಮಂತ್ರ? ವಿಚಿತ್ರವಾಗಿ ಕುತ್ತಿಗೆಗೆ ಕೈ ಹಾಕಿದ ಮಹಿಳೆ!

By Suvarna NewsFirst Published Aug 28, 2023, 8:15 PM IST
Highlights

ವಿಮಾನ ನಿಲ್ದಾಣದಲ್ಲಿ ಮಹಿಳೆಯೊಬ್ಬಳು ನಟಿ ಸಾರಾ ಅಲಿ ಖಾನ್​ ಜೊತೆ ವಿಚಿತ್ರವಾಗಿ ನಡೆದುಕೊಂಡಿದ್ದು, ಆಕೆಯ ಮೇಲೆ ಮಾಟ ಮಂತ್ರ ಮಾಡಲು ಪ್ರಯತ್ನಿಸಿದ್ದಾಳೆ ಎನ್ನಲಾಗುತ್ತಿದೆ. 
 

ಸೈಫ್ ಅಲಿ ಖಾನ್ ಮಗಳು ಸಾರಾ ಅಲಿ ಖಾನ್ (Sara Ali Khan) ಕೆಲ ದಿನಗಳ ಹಿಂದೆ ಅತ್ಯಂತ ಕ್ಲಿಷ್ಟ ಎನ್ನುವ ಅಮರನಾಥ ಯಾತ್ರೆ ಕೈಗೊಂಡು ತುಂಬಾ ಸುದ್ದಿಯಾಗಿದ್ದಾರೆ.  ಸಾಹಸಮಯ ಎನ್ನಲಾಗುವ ಈ ಯಾತ್ರೆಯನ್ನು ಸಾರಾ ಅಲಿ ಖಾನ್​ ಕೈಗೊಂಡಿದ್ದು, ಅದರ ವಿಡಿಯೋ ಶೇರ್​ ಮಾಡಿಕೊಂಡಿದ್ದರು. ಅಪ್ಪ ಮುಸ್ಲಿಂ ಆಗಿದ್ದರೂ ಹಿಂದೂ ಸಂಪ್ರದಾಯವನ್ನು ಪಾಲಿಸುತ್ತಿರುವ ಸಾರಾ ಅಲಿ ಇದಾಗಲೇ ಇದೇ ವಿಷಯಕ್ಕೆ ಒಂದು ವರ್ಗದಿಂದ ಸಕತ್​ ಟ್ರೋಲ್​ ಆಗಿದ್ದೂ ಇದೆ. ಆದರೆ ಯಾವುದೇ ಟ್ರೋಲ್​ಗೆ ಕೇರೇ ಮಾಡದೇ ಆಗಾಗ್ಗೆ ಅವರು ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ.  ಕೆಲ ದಿನಗಳ ಹಿಂದೆ  ಕೇದಾರನಾಥಕ್ಕೆ ಭೇಟಿ ಕೊಟ್ಟರು.  ಇದು ಕೂಡ ಸಾಮಾಜಿಕ ಜಾಲತಾಣದಲ್ಲಿ ಸಕತ್​ ಸೌಂಡ್​ ಮಾಡಿತ್ತು. ಇದಾಗಲೇ ಸೈಫ್​ ಅಲಿ ಖಾನ್​ ಪುತ್ರಿ ಎನ್ನುವ ಕಾರಣಕ್ಕೆ ಸ್ಟಾರ್​ ಕಿಡ್​ ಆಗಿ ಸುಲಭದಲ್ಲಿ ಸಿನಿಮಾಗಳಲ್ಲಿ ಅವಕಾಶ ಲಭಿಸಿಕೊಂಡಿದ್ದಾರೆ ಎನ್ನುವ ವಿಚಾರದಲ್ಲಿಯೂ ಆಗಾಗ್ಗೆ ಇಲ್ಲಸಲ್ಲದ ಹೇಳಿಕೆಗಳನ್ನು ಕೇಳುತ್ತಿರುವ ನಟಿ ಸಾರಾ ಅವರು ಈಗ ದೇವಸ್ಥಾನದ ವಿಷಯದಲ್ಲಿ ಚರ್ಚೆಯಲ್ಲಿ ಇರುವ ನಟಿ.  ಆದರೆ ಯಾವ ಟ್ರೋಲ್​​ಗೂ ಸಾರಾ ಜಗ್ಗುವುದಿಲ್ಲ, ಬಗ್ಗುವುದಿಲ್ಲ. ಆದ್ದರಿಂದಲೇ ಆಕೆಯನ್ನು  ರಿಯಲ್​  ಮತ್ತು ರೀಲ್ ಜೀವನದಲ್ಲಿ ತುಂಬಾ ಕೂಲ್ ಎಂದು ಪರಿಗಣಿಸಲಾಗಿದೆ. 

ಇದೀಗ ನಟಿಗೆ ವಿಚಿತ್ರ ಅನುಭವವೊಂದು ಆಗಿದೆ. ಅದೇನೆಂದರೆ,  ವಿಮಾನ ನಿಲ್ದಾಣದಲ್ಲಿ ಸಾರಾ ಕಾಣಿಸಿಕೊಂಡಾಗ ಸಹಜವಾಗಿ ಅಭಿಮಾನಿಗಳು ಸೆಲ್ಫಿ ತೆಗೆದುಕೊಂಡಿದ್ದಾರೆ, ಕೈಕುಲುಕಿ ಸಂತೋಷ ಪಟ್ಟಿದ್ದಾರೆ. ಯಾರಿಗೂ ಸಾರಾ ಬೇಡ ಎನ್ನಲಿಲ್ಲ. ಅದೇ ವೇಳೆ ಮಹಿಳೆಯೊಬ್ಬಳು ಬಂದು ಸಾರಾ ಅವರ ಕೈಕಲುಕಿದ್ದಾರೆ. ಆದರೆ ಮುಂದಕ್ಕೆ ಹೋಗುವಾಗ ವಿಚಿತ್ರ ರೀತಿಯಲ್ಲಿ ಸಾರಾ ಅವರ ಕುತ್ತಿಗೆಯ ಬಳಿ ಈಕೆ ಕೈ ಹಾಕಿದ್ದಾರೆ. ಇದರಿಂದ ಸಾರಾ ವಿಚಲಿತರಾಗಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಹಿಂದಕ್ಕೆ ಹೋದ ಮಹಿಳೆ ವಿಚಿತ್ರವಾಗಿ ಸಾರಾ ಬಳಿ ಹಿಂದಿರುಗಿ ನೋಡಿದ್ದಾಳೆ. ಇದು ಕೂಡ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

Latest Videos

Sara Ali Khan: ಅಮರನಾಥ ಯಾತ್ರೆಯಲ್ಲಿ ಹರ್​ ಹರ್​ ಮಹಾದೇವ್ ಎಂದ ಸೈಫ್​ ಪುತ್ರಿ; ಧರ್ಮದ ಕುರಿತು ಚರ್ಚೆ ಶುರು!

ಸಾರಾ ಈ ದಿನಗಳಲ್ಲಿ ಹಿಂದೂ ಸಂಪ್ರದಾಯವನ್ನು ಹೆಚ್ಚಾಗಿ ಅನುಸರಿಸುತ್ತಿರುವ ಹಿನ್ನೆಲೆಯಲ್ಲಿ ಈಕೆಯ ವಿರುದ್ಧ ಕೆಲವರು ಕೆಂಡಾಮಂಡಲವಾಗಿದ್ದಾರೆ. ಆದ್ದರಿಂದ ಈಕೆಯ ಮೇಲೆ ಬ್ಲ್ಯಾಕ್​  ಮ್ಯಾಜಿಕ್​ ಮಾಡಲಾಗುತ್ತಿದೆ ಎಂದು ಹಲವರು ಅಭಿಪ್ರಾಯ ಪಟ್ಟಿದ್ದಾರೆ. ಆ ಮಹಿಳೆ ಕೂಡ ವಿಚಿತ್ರ ರೀತಿಯಲ್ಲಿ ವರ್ತಿಸಿದ್ದು ಹಾಗೂ ಮುಂದಕ್ಕೆ ಹೋಗಿ ಕೆಕ್ಕರಿಸಿ ನಟಿಯನ್ನು ನೋಡಿದ್ದರಿಂದ ಮಾಟ-ಮಂತ್ರದ ಪ್ರಯೋಗ ನಡೆದಿದೆ ಎನ್ನುತ್ತಿದ್ದಾರೆ ಹಲವರು. ಆದರೆ ಇದನ್ನು ಇನ್ನು ಕೆಲವರು ಒಪ್ಪುತ್ತಿಲ್ಲ. ಆಕೆಯ ಕಿವಿಯೋಲೆ ಅಥವಾ ಕತ್ತಿನಲ್ಲಿ ಇರುವ ಸರವನ್ನು ಅಪಹರಿಸಲು ಮಹಿಳೆ ಟ್ರೈ ಮಾಡಿದಂತಿದೆ ಎಂದಿದ್ದಾರೆ. ಒಟ್ಟಿನಲ್ಲಿ ಇದರ ವಿಡಿಯೋ ವೈರಲ್​ ಆಗಿದ್ದು, ಥಹರೇವಾರಿ ಕಮೆಂಟ್​ಗಳು ಬರುತ್ತಿವೆ. 

ಅಂದಹಾಗೆ ಸಾರಾ ಅವರು ಸಿಂಪಲ್​ ಎಂದೇ ಖ್ಯಾತಿ ಪಡೆದವರು. ಸೋಲಿನ ಹಾದಿಯಲ್ಲಿದ್ದ ಸಾರಾ ಅಲಿ,  ಇತ್ತೀಚೆಗೆ ಬಿಡುಗಡೆಗೊಂಡ ‘ಜರಾ ಹಟ್ಕೆ ಜರಾ ಬಚ್ಕೆ’ ಸಿನಿಮಾ ಮೂಲಕ ಸುಧಾರಿಸಿಕೊಂಡಿದ್ದಾರೆ. ಹೀಗಿದ್ದರೂ ಆಕೆ ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ಆ್ಯಕ್ಟೀವ್​. ಈಕೆ ಫೋಟೋ ಮತ್ತು ಒಂದಿಷ್ಟು ಗಾಸಿಪ್​ಗಳಿಂದ ಎಷ್ಟೇ ಟ್ರೋಲ್​ ಆಗುತ್ತಿದ್ದರೂ ಈಕೆಯನ್ನು ಪ್ರೀತಿಸುವ ಒಂದು ವರ್ಗವೂ ಇದೆ. ಹೆಚ್ಚಿನವರು ಈಕೆಯ ಸರಳತೆಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಕಳೆದ ವಾರ ಈಕೆ  ಬೀಚ್​ (Beach) ಒಂದರಿಂದ ಆಟೋದಲ್ಲಿ ಹೋದ ಸಂದರ್ಭದಲ್ಲಿಯೂ ಹಲವರು ಈಕೆಯ ಸರಳತೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು ಇದೆ. ಅದಾದ ಬಳಿಕ ವೈರಲ್​ ಆಗಿದ್ದ ವಿಡಿಯೋದಲ್ಲಿ ನಟಿ, ನಡೆದುಕೊಂಡು ಹೋಗುವುದನ್ನು ನೋಡಬಹುದಾಗಿತ್ತು. ರಸ್ತೆ ಬದಿ ಅಂಗಡಿಯಲ್ಲಿ ಸಾಮಾನ್ಯರಂತೆ ತೆರಳಿ ಬಟ್ಟೆ ಖರೀದಿ ಮಾಡಿದ್ದರು. ಈ ವಿಡಿಯೋನ ಪಾಪರಾಜಿಗಳು ಹಂಚಿಕೊಂಡಿದ್ದರು. ಸಾರಾ ಅವರನ್ನು ಎಲ್ಲರೂ ಹೊಗಳಿದ್ದಾರೆ. ಈ ಸರಳತೆ ಹೀಗೆಯೇ ಮುಂದುವರಿಯಲಿ ಎಂದು ಅನೇಕರು ಹೇಳಿದ್ದರು. 

Sara Ali Khan: ಬೀದಿ ಸುತ್ತಿ ಬಟ್ಟೆ ಖರೀದಿಸಿದ ನಟಿ; ವಿಡಿಯೋ ನೋಡಿ ಸೋ ಸಿಂಪಲ್​ ಎಂದ ಫ್ಯಾನ್ಸ್​!

click me!