ಮೆಕ್ಕಾದಲ್ಲಿ ಉಮ್ರಾ ನೆರವೇರಿಸಿದ ರಾಖಿ: ಈಗ ನಂಗಾ ನಾಚ್​ ಶುರುನಾ ಕೇಳ್ತಿದ್ದಾರೆ ಫ್ಯಾನ್ಸ್​!

Published : Aug 28, 2023, 08:04 PM IST
 ಮೆಕ್ಕಾದಲ್ಲಿ ಉಮ್ರಾ ನೆರವೇರಿಸಿದ ರಾಖಿ: ಈಗ ನಂಗಾ ನಾಚ್​ ಶುರುನಾ ಕೇಳ್ತಿದ್ದಾರೆ ಫ್ಯಾನ್ಸ್​!

ಸಾರಾಂಶ

ಡ್ರಾಮಾ ಕ್ವೀನ್​ ರಾಖಿ ಸಾವಂತ್​ ಇಸ್ಲಾಂಗೆ ಮತಾಂತರಗೊಂಡ ಬಳಿಕ ಈಗ ಮೆಕ್ಕಾಗೆ ಹೋಗಿ ಉಮ್ರಾ ನೆರವೇರಿಸಿದ್ದಾರೆ. ಕಮೆಂಟಿಗರು ಈಕೆಯ ಕಾಲೆಳೆಯುತ್ತಿದ್ದಾರೆ.  

ಬಾಲಿವುಡ್​ ನಟಿ ರಾಖಿ ಸಾವಂತ್​ ಮತ್ತು ಅವರ ಮಾಜಿ ಪತಿ ಮೈಸೂರಿನ ಯುವಕ ಆದಿಲ್​ ಖಾನ್​ ನಡುವಿನ ಜಟಾಪಟಿ ಕಳೆದೊಂದು ವಾರದಿಂದ ತಾರಕಕ್ಕೇರಿತ್ತು. ಒಬ್ಬರ ಮೇಲೊಬ್ಬರು ಗೂಬೆ ಕೂರಿಸುತ್ತಾ ನಿತ್ಯವೂ ಪತ್ರಿಕಾಗೋಷ್ಠಿ ಮಾಡುತ್ತಿದ್ದರು.  ಇವರಿಬ್ಬರ ಮದುವೆಯ ಸುದ್ದಿ ಹಾಗೂ ನಂತರ ನಡೆದ ಡ್ರಾಮಾ ಎಲ್ಲರಿಗೂ ತಿಳಿದ ವಿಷಯವೇ.  ಆದಿಲ್​ ಖಾನ್​ ಮೊದಲು ಮದುವೆಯನ್ನು ನಿರಾಕರಿಸಿದ್ದು, ರಾಖಿ ರಂಪಾಟ ಮಾಡಿದ್ದು, ಕೊನೆಗೂ ಆದಿಲ್​  ಮದುವೆಯನ್ನು ಒಪ್ಪಿಕೊಂಡಿದ್ದು ಎಲ್ಲವೂ ಯಾವ ಸಿನಿಮಾ ಕಥೆಗಿಂತಲೂ ಭಿನ್ನವಾಗಿರಲಿಲ್ಲ. ಎಲ್ಲವೂ ಸುಖಾಂತ್ಯಗೊಂಡಿತು ಎನ್ನುವಾಗಲೇ  ಆದಿಲ್ ತಮಗೆ ಮೋಸ ಮಾಡುತ್ತಿದ್ದಾರೆ, ಹಲ್ಲೆ ಮಾಡಿದ್ದಾರೆ, ಇನ್ನೊಬ್ಬಳ ಜೊತೆ ಅಕ್ರಮ ಸಂಬಂಧ ಹೊಂದಿದ್ದಾರೆ,  ಆದಿಲ್‌ಗಾಗಿ   ಇಸ್ಲಾಂಗೆ ಮತಾಂತರ ಮಾಡಿಕೊಂಡಿರುವೆ. ನಾನು ಇಸ್ಲಾಂ ಧರ್ಮವನ್ನು ಒಪ್ಪಿಕೊಂಡು ಆದಿಲ್‌ನ ಮದುವೆ ಆಗಿದ್ದೇನೆ ಎಂದೆಲ್ಲಾ ಆರೋಪಿಸಿದ್ದ ರಾಖಿ ಕೊನೆಗೆ ದೂರು ಕೊಟ್ಟರು. ಇದರಿಂದ ಆದಿಲ್​ (Adil Khan Durrani) ವಿರುದ್ಧ ಎಫ್​ಐಆರ್​ ದಾಖಲಾಗಿದ್ದು ಸದ್ಯ ಅವರು ನ್ಯಾಯಾಂಗ ಬಂಧನದಲ್ಲಿದ್ದರು. ಇದೀಗ ಅವರು ಬಿಡುಗಡೆಗೊಂಡಿದ್ದಾರೆ. 

ಬಿಡುಗಡೆಗೊಂಡ ಬೆನ್ನಲ್ಲೇ ಒಬ್ಬರಾದ ಮೇಲೆ ಒಬ್ಬರು ಪೈಪೋಟಿಗೆ ಬಿದ್ದು ಪತ್ರಿಕಾಗೋಷ್ಠಿ ಮಾಡಿದರು. ಮೊದಲು ಆದಿಲ್​ ಖಾನ್​, ರಾಖಿ ಸಾವಂತ್​ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದರು.  ಮದುವೆಯಾದ ಮೇಲೂ ಆಕೆ ಮೊದಲ ಪತಿ  ರಿತೇಶ್​ (Ritesh)  ಜೊತೆ ಸಂಬಂಧವನ್ನೂ ಇಟ್ಟುಕೊಂಡಿದ್ದಳು ಎಂದಿದ್ದರು.  ನನ್ನದಲ್ಲದ ತಪ್ಪಿಗೆ ನಾನು ಜೈಲು ಅನುಭವಿಸುವಂತಾಯಿತು. ರಾಖಿ ನನ್ನನ್ನು ಟ್ರ್ಯಾಪ್​ ಮಾಡಿದಳು ಎಂದೆಲ್ಲಾ ಹೇಳಿದ್ದರು. ಇದೇ ವೇಳೆ, ಆಕೆ ಗರ್ಭಕೋಶವನ್ನು ತೆಗೆಸಿಕೊಂಡಿದ್ದು, ಆಕೆಗೆ ಮಕ್ಕಳಾಗುವುದಿಲ್ಲ. ಈ ವಿಷಯವನ್ನೂ ನನ್ನಿಂದ ಮುಚ್ಚಿಟ್ಟಿದ್ದಾಳೆ ಎಂಬ ಗಂಭೀರ ಆರೋಪ ಮಾಡಿದ್ದರು. ಇದಾದ ಬಳಿಕ ರಾಖಿ ಸಾವಂತ್​ ಪತ್ರಿಕಾಗೋಷ್ಠಿ ಕರೆದು, ಆದಿಲ್​ ವಿರುದ್ಧ ಕಿಡಿ ಕಾರಿ ಪತಿ ಹೇಗೆಲ್ಲಾ ಮೋಸ ಮಾಡಿದರು ಎಂದು ತಿಳಿಸಿದ್ದರು.  ವೈದ್ಯೆಯನ್ನು ಭೇಟಿಯಾಗಿದ್ದ  ರಾಖಿ ಸಾವಂತ್​,  ಅವರ ಜೊತೆ ಲೈವ್​ನಲ್ಲಿ ಬಂದ್ದು,  ಗರ್ಭಕೋಶ ತೆಗೆಸಿಕೊಂಡಿರುವುದಾಗಿ ಆದಿಲ್​  ಖಾನ್​ ಸುಳ್ಳು ಹೇಳುತ್ತಿದ್ದುದನ್ನು  ವೈದ್ಯೆ ಬಾಯಿಯಿಂದ ಹೇಳಿಸಿದ್ದರು. ಇದಾದ ಬಳಿಕ ಇಸ್ಲಾಂ ಧರ್ಮ ಪಾಲನೆ ಮಾಡದ ಆದಿಲ್​ ಖಾನ್​, ಇಸ್ಲಾಂಗೆ ಮಹಾ ವಂಚನೆ ಮಾಡುತ್ತಿದ್ದಾನೆ ಎಂದು ಆರೋಪಿಸಿದ್ದರು.

ನಿನ್ನಂಥವರಿಂದಲೇ ಮುಸ್ಲಿಮರು ಕುಖ್ಯಾತರಾಗ್ತಿರೋದು: ರಾಖಿಯಿಂದ ಆದಿಲ್​ ಖಾನ್ ಹಿಗ್ಗಾಮುಗ್ಗಾ ತರಾಟೆ!

ಇವೆಲ್ಲವುಗಳ ಬಳಿಕ ಈಗ ನಟಿ  ಮೆಕ್ಕಾಗೆ ಹೋಗಿದ್ದು, ಅಲ್ಲಿಯ  ಮಸ್ಜಿದ್-ಅಲ್-ಹರಾಮ್ ನಲ್ಲಿ ಉಮ್ರಾ ನೆರವೇರಿಸಿದ್ದಾರೆ. ಆಕೆಯ ಸ್ನೇಹಿತ ವಹಿದ್ ಅಲಿ ಖಾನ್ ಮತ್ತು ಅವರ ಪತ್ನಿ ಶೈಸ್ತಾ ಅಲಿ ಖಾನ್ ಜೊತೆಗೆ ಅವರು ಮೆಕ್ಕಾಗೆ ಹೋಗಿದ್ದರು. ನಿನ್ನೆಯಷ್ಟೇ ಇದರ ವಿಡಿಯೋ ಶೇರ್​ ಮಾಡಿದ್ದ ರಾಖಿ,  ಉಮ್ರಾಕ್ಕೆ ಹೊರಡುತ್ತಿದ್ದೇನೆ. ಅಲ್ಲಿಂದ ಕರೆ ಬಂದಿದೆ ಎಂದಿದ್ದರು. ಇದೀಗ ವಾಪಸಾಗಿರುವ ಫೋಟೋ ಶೇರ್​ ಮಾಡಿಕೊಂಡಿದ್ದಾರೆ.  ಉಮ್ರಾ ಎಂದರೆ ಮುಸ್ಲಿಮರು ಮೆಕ್ಕಾದಲ್ಲಿರುವ ಮಸ್ಜಿದ್ ಅಲ್-ಹರಾಮ್‌ಗೆ ಮಾಡುವ ತೀರ್ಥಯಾತ್ರೆಯಾಗಿದೆ. ಇವರನ್ನು ಫುಲ್​ ಡ್ರೆಸ್​ನಲ್ಲಿ ನೋಡಿ ಹಲವಾರು ಮಂದಿ ಖುಷಿ ಪಟ್ಟಿದ್ದಾರೆ. ರಾಖಿ ಡ್ರಾಮಾ ಹಾಗೂ ಆಕೆ ಹಾಕುವ ಬಟ್ಟೆಯ ಅರಿವಿದ್ದ ಕಮೆಂಟಿಗರು, ಈಗ ಈ ಥರ ಡ್ರೆಸ್​ ಹಾಕಿ ವಾಪಸ್​ ಬಂದ ಮೇಲೆ ನಂಗಾ ನಾಚ್​ ಮಾಡೋದು ಗೊತ್ತಿದೆ ಬಿಡಿ ಎಂದಿದ್ದಾರೆ. 

ಮತ್ತೊಂದೆಡೆ, ರಾಖಿ ಸಾವಂತ್ ಮತ್ತು ಆದಿಲ್ ಖಾನ್ ದುರಾನಿ ತಮ್ಮ ಸಾರ್ವಜನಿಕ ಸಂಘರ್ಷ ಮತ್ತು ಪರಸ್ಪರರ ವಿರುದ್ಧ ಆರೋಪಗಳಿಗಾಗಿ ಮುಖ್ಯಾಂಶಗಳನ್ನು ಮಾಡಿದ್ದಾರೆ. 2022 ರಲ್ಲಿ ಇಬ್ಬರೂ ಮದುವೆಯಾಗುವ ಮೊದಲು ರಾಖಿ ಇಸ್ಲಾಂಗೆ ಮತಾಂತರಗೊಂಡಿದ್ದಾರೆ ಮತ್ತು ಫಾತಿಮಾ ಎಂಬುದಾಗಿ ಹೆಸರು ಬದಲಾಯಿಸಿಕೊಂಡಿದ್ದಾರೆ. ನಂತರ  ಫೆಬ್ರವರಿ 7 ರಂದು ಆದಿಲ್ ಖಾನ್ ದುರಾನಿ ವಿರುದ್ಧ ವಂಚನೆ, ವಿವಾಹೇತರ ಸಂಬಂಧಗಳು ಮತ್ತು ಇತರ ವಿಷಯಗಳ ಆರೋಪ ಮಾಡಿ ಜೈಲು ಶಿಕ್ಷೆಗೆ ಕಾರಣರಾದರು. ಈಗ ಜಾಮೀನಿನ ಮೇಲೆ ಆದಿಲ್​ ಹೊರಗಡೆ ಇದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Actor Nana patekar dies at 75: ಈ ಚಿತ್ರದಲ್ಲಿ ನಟ ನಟಿ ಅಲ್ಲ, ಪೋಷಕ ನಟರಾಗಿ ರಾಷ್ಟ್ರ ಪ್ರಶಸ್ತಿ ಗೆದ್ದಿದ್ದರು ನಾನಾ!
NANA PATEKAR DEATH: ನಮ್ಮನ್ನಗಲಿದ ನಟ ನಾನಾ ಪಾಟೇಕರ್; ಕನ್ನಡದ 'ಯಕ್ಷ' ಸಿನಿಮಾದಲ್ಲಿ ದಕ್ಷ ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದರು