ಸಲ್ಮಾನ್​ ಕಂಡ್ರೆ ಸ್ನೇಹಿತ ಎನಿಸತ್ತೆ, ಶಾರುಖ್​ ಜತೆ ಪ್ರಣಯದ ಭಾವ ಹುಟ್ಟುತ್ತೆ ಅಂದ ಸುಷ್ಮಿತಾ!

By Suvarna NewsFirst Published Aug 28, 2023, 8:03 PM IST
Highlights

ಸುಷ್ಮಿತಾ ಸೇನ್​ ಅವರ ಕೆಮೆಸ್ಟ್ರಿ ಸಲ್ಮಾನ್​ ಖಾನ್​ಗೆ ಹೊಂದತ್ತೋ ಅಥವಾ ಶಾರುಖ್​ಗೋ ಎಂದಾಗ ನಟಿ ಜೋರಾಗಿ ನಕ್ಕು ಹೇಳಿದ್ದೇನು ನೋಡಿ. 
 

1994ರಲ್ಲಿ ಮಿಸ್​  ಯೂನಿವರ್ಸ್​ (Miss Universe) ಆಗಿ ಮಿಂಚಿದ್ದ ಬೆಡಗಿ ಸುಷ್ಮಿತಾ ಸೇನ್​, 1996ರಿಂದಲೂ ಬಣ್ಣದ ಲೋಕದಲ್ಲಿ ಸಕ್ರಿಯರಾಗಿದ್ದಾರೆ. ಇದಾಗಲೇ ಹಲವಾರು ಹಿಟ್​ ಚಿತ್ರಗಳನ್ನು ನೀಡಿರುವ  ಸುಷ್ಮಿತಾ ಸೇನ್​, ಈಗ ಒಟಿಟಿ ಕ್ಷೇತ್ರದಲ್ಲೂ  ಸಕ್ರಿಯರಾಗಿದ್ದಾರೆ.  ಹಿಂದಿ ಚಲನಚಿತ್ರೋದ್ಯಮದ ಆಕರ್ಷಕ ನಟಿಯರಲ್ಲಿ ಒಬ್ಬರು ಎಂದು ಕರೆಯಲ್ಪಡುವ ಸುಷ್ಮಿತಾ ಸೇನ್, 2020 ರಲ್ಲಿ ಆರ್ಯ ಎಂಬ ವೆಬ್-ಸರಣಿಯೊಂದಿಗೆ  ಪುನರಾಗಮನವನ್ನು ಮಾಡಿದರು.  ಈಗ ಸುಷ್ಮಿತಾ ಸೇನ್​ ಒಂದು ಹೊಸ ವೆಬ್​ ಸೀರಿಸ್​ ತಾಲಿಯಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.  ಇದರಲ್ಲಿ ಅವರದ್ದು  ಮಂಗಳಮುಖಿ (Transgender) ಪಾತ್ರ. ಈ ಸೀರಿಸ್‌ನಲ್ಲಿ ಸುಷ್ಮಿತಾ, ಸಾಮಾಜಿಕ ಕಾರ್ಯಕರ್ತೆಯಾಗಿ ಗುರುತಿಸಿಕೊಂಡಿರುವ ತೃತೀಯಲಿಂಗಿ ಗೌರಿ ಸಾವಂತ್‌ ಅವರ ಪಾತ್ರದಲ್ಲಿ ನಟಿಸಿದ್ದಾರೆ.  

ಕೆಲ ದಿನಗಳ ಹಿಂದೆ ಇವರಿಗೆ ಹೃದಯಾಘಾತವಾಗಿತ್ತು. ಆ ವಿಚಾರವನ್ನು ಸುಶ್ಮಿತಾ ಸೇತ್ ತಡವಾಗಿ ಬಹಿರಂಗ ಪಡಿಸಿದ್ದರು. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಹೇಳಿಕೊಂಡಿದ್ದರು. ಫಿಟ್ ಅಂಡ್ ಫೈನ್ ಆಗಿದ್ದ ನಟಿ ಸುಶ್ಮಿತಾ ಸೇತ್ ಅವರಿಗೆ ಹೃದಯಾಘಾತವಾದ ವಿಚಾರ ಅಭಿಮಾನಿಗಳಲ್ಲಿ ಶಾಕ್ ನೀಡಿತ್ತು. ಇದೀಗ ಮೊದಲ ಬಾರಿಗೆ ಸುಶ್ಮಿತಾ ಸೇತ್ ಅವರಿಗೆ ವಿಡಿಯೋ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ. ತನಗೆ ಮಾಸಿವ್ ಆರ್ಟ್ ಆಟ್ಯಾಕ್ ಆಗಿತ್ತು, 95 % ಬ್ಲಾಕೇಜ್ ಇತ್ತು ಎಂದು ಹೇಳಿದ್ದಾರೆ. ಪ್ರತಿದಿನ ವರ್ಕೌಟ್, ಯೋಗ  ಮಾಡುತ್ತಿದ್ದ ಸುಷ್ಮಿತಾ ಸೇನ್ ಅವರಿಗೆ ಹಾರ್ಟ್ ಅಟ್ಯಾಕ್ ಆಗಿದ್ದು ಅನೇಕರಿಗೆ ಶಾಕ್ ನೀಡಿತ್ತು. ಇದೀಗ ಸುಷ್ಮಿತಾ ಚೇತರಿಸಿಕೊಂಡಿದ್ದಾರೆ. 

ಸುಳ್ಳಿಗೆ ಹೈಪ್‌ ತರ್ಬೇಕು, ಸತ್ಯಕ್ಕೆ ತಾನಾಗೇ ಹೈಪ್‌ ಸಿಗುತ್ತೆ: ಉಪೇಂದ್ರ ವಿಡಿಯೋ ರಿಲೀಸ್​

ಬಾಲಿವುಡ್​ನ ಹಲವಾರು ಖ್ಯಾತನಾಮರ ಜೊತೆ ತೆರೆ ಹಂಚಿಕೊಂಡಿರೋ ನಟಿ ಸುಷ್ಮಿತಾ, ನಟ ಶಾರುಖ್ ಖಾನ್ ಜೊತೆಗೆ ಮೈನ್ ಹೂ ನಾ (Mai Hum na) ಚಿತ್ರದಲ್ಲಿ ಮತ್ತು ಸಲ್ಮಾನ್​ ಖಾನ್ ಅವರೊಂದಿಗೆ ಮೈನೆ ಪ್ಯಾರ್ ಕ್ಯೂ ಕಿಯಾದಲ್ಲಿ ಕೆಲಸ ಮಾಡಿದ್ದಾರೆ. ಆದ್ದರಿಂದ  ಇತ್ತೀಚಿನ ಸಂದರ್ಶನವೊಂದರಲ್ಲಿ, ಅವಳು ಯಾರೊಂದಿಗೆ ಉತ್ತಮ ಕೆಮೆಸ್ಟ್ರಿ ಹೊಂದಿದ್ದಾರೆ ಎಂದು  ಭಾವಿಸುತ್ತೀರಿ ಎಂದು ಕೇಳಲಾಯಿತು. ಇದಕ್ಕೆ ಸುಷ್ಮಿತಾ ನೀಡಿರುವ ಉತ್ತರ ಎಲ್ಲರನ್ನೂ ಚಕಿತಗೊಳಿಸಿದೆ. ಸಂದರ್ಶನದಲ್ಲಿ ಅವರಿಗೆ,  ಶಾರುಖ್ ಖಾನ್ ಅಥವಾ ಸಲ್ಮಾನ್ ಖಾನ್ ಅವರೊಂದಿಗೆ ಉತ್ತಮ ಯಾರು ಎಂದು ಕೇಳಿದರು. ಆಗ ನಟಿ ಹೇಳಿದ ಮಾತು ಸಕತ್​ ವೈರಲ್​ ಆಗುತ್ತಿದೆ.

ಸುಷ್ಮಿತಾ ಸೇನ್​ ಜೋರಾಗಿ ನಗುತ್ತಾ ಹೇಳಿದ್ದೇನೆಂದರೆ,  ನಾನು ಸಲ್ಮಾನ್ ಖಾನ್​ ಜೊತೆ ಹೆಚ್ಚು ಫ್ರೆಂಡ್ಲಿ ಕೆಮಿಸ್ಟ್ರಿ ಹೊಂದಿರುವಂತೆ ಭಾಸವಾಗಿದ್ದೆ. ಆದರೆ ಶಾರುಖ್ ಖಾನ್​ ಜೊತೆಯಲ್ಲಿದ್ದಾಗ ಅದು ಪ್ರಣಯದಂತೆ ಭಾಸವಾಗುತ್ತದೆ ಎಂದಿದ್ದಾರೆ. ಅಂದಹಾಗೆ,  ಸುಷ್ಮಿತಾ ಸೇನ್ ಮತ್ತು ರೋಹ್ಮನ್ ಬಾಲಿವುಡ್​ನಲ್ಲಿ ಸಖತ್‌ ಫೇಮಸ್‌ ಜೋಡಿ. ಇವರ ಲವ್‌ ಸ್ಟೋರಿ ಎಲ್ಲರ ಗಮನ ಸೆಳೆದಿದೆ. ಆದರೆ ಕೆಲ ತಿಂಗಳ ಹಿಂದೆ ಸುಷ್ಮಿತಾ ಸೇನ್‌ ಇನ್ಸ್ಟಾಗ್ರಾಮ್‌ನಲ್ಲಿ ಭಾವನಾತ್ಮಕ ಪೋಸ್ಟ್ ಅನ್ನು ಹಂಚಿಕೊಂಡಿದ್ದರು. ಈ ಪೋಸ್ಟ್​ನಿಂದ ಇವರಿಬ್ಬರೂ ಬ್ರೇಕಪ್​ ಆಗಿದ್ದಾರೆ ಎಂದೇ ಎಂದುಕೊಳ್ಳಲಾಗಿತ್ತು. 

ಸೀರೆ ಮೇಲಕ್ಕೆತ್ತಿ ಜಾಹ್ನವಿ ಕಪೂರ್​ ತಿರುಪತಿ ದರ್ಶನ: ಇಷ್ಟೆಲ್ಲಾ ಕಷ್ಟಪಡ್ಬೇಡಿ ಎಂದ ಫ್ಯಾನ್ಸ್​

click me!