ನಿಜವಾಗ್ಲೂ ಇದು 21ನೇ ಶತಮಾನನಾ ಎಂದು ಕೆಂಡಾಮಂಡಲವಾದ Urfi Javed!

Published : Apr 26, 2023, 02:37 PM IST
ನಿಜವಾಗ್ಲೂ ಇದು 21ನೇ ಶತಮಾನನಾ ಎಂದು ಕೆಂಡಾಮಂಡಲವಾದ Urfi Javed!

ಸಾರಾಂಶ

ತಮ್ಮ ವಿಚಿತ್ರ ಡ್ರೆಸ್​ನಲ್ಲಿ ಸುದ್ದಿಯಲ್ಲಿಯೋ ಉರ್ಫಿ ಜಾವೇದ್​ಗೆ ಮುಂಬೈ ರೆಸ್ಟೋರೆಂಟ್​ನಲ್ಲಿ ಎಂಟ್ರಿ ಕೊಟ್ಟಿಲ್ವಂತೆ. ನಟಿ ಹೇಳಿದ್ದೇನು?  

ಉರ್ಫಿ ಜಾವೇದ್​ (Uorfi Javed) ಎಂದಾಕ್ಷಣ ಎಲ್ಲರ ಕಣ್ಣುಮುಂದೆ ಬರುವುದು ಅತ್ಯಂತ ಕನಿಷ್ಠ ಉಡುಪು ಅಥವಾ ಉಡುಪೇ ಇಲ್ಲದ ನಟಿಯ ರೂಪ. ಚುಮುಚುಮು ಚಳಿಯಲ್ಲಿಯೂ ಮೈಮೇಲೆ ತುಂಡು ಬಟ್ಟೆಯುಟ್ಟು ಪಡ್ಡೆ ಹುಡುಗರ ಬಿಸಿ ಏರಿಸ್ತಿರೋ ಈ ನಟಿ  ಸೋಷಿಯಲ್ ಮೀಡಿಯಾದಲ್ಲಿ  (Social media) ಸೆನ್ಸೇಷನ್ ಕ್ರಿಯೇಟ್​ ಮಾಡ್ತಿರೋದು ಹೊಸ ವಿಷಯವೇನಲ್ಲ. ಪ್ರತಿದಿನವೂ ಎಂಬಂತೆ ವಿಶಿಷ್ಟ ರೀತಿಯಲ್ಲಿ ಉಡುಗೆ ತೊಟ್ಟು ಅದರ ಫೋಟೋಶೂಟ್​ ಮಾಡಿಸಿಕೊಂಡು ಜಾಲತಾಣದಲ್ಲಿ ಪೋಸ್ಟ್​ ಮಾಡುವುದರಲ್ಲಿ ಉರ್ಫಿಯದ್ದು ಎತ್ತಿದ ಕೈ. ಕೆಲವೊಮ್ಮೆ ಬಟ್ಟೆಯೂ ಇಲ್ಲದೆ, ಕೈಗೆ ಸಿಕ್ಕ ವಸ್ತುಗಳಿಂದ ಖಾಸಗಿ ಅಂಗಗಳನ್ನು ಮುಚ್ಚಿಕೊಂಡು ಪೋಸ್​ ನೀಡಿರುವ ಫೋಟೋಗಳೂ ಕಮ್ಮಿಯೇನಲ್ಲ. ದಿನವೂ ಬಟ್ಟೆಗಳಿಂದಲೇ ಟ್ರೋಲ್​ (Troll) ಆಗುವುದು ಎಂದರೆ ತುಂಬಾ ಖುಷಿಯಂತೆ ಕಾಣುವ ಈ ನಟಿ ಈಗ ಫಜೀತಿಯಲ್ಲಿ ಸಿಲುಕಿದ್ದಾರೆ!

ತನ್ನ ಬೋಲ್ಡ್ ಮತ್ತು ವಿಚಿತ್ರ ಡ್ರೆಸ್‌ನಿಂದ ಸುದ್ದಿಯಲ್ಲಿರುವ ಉರ್ಫಿ, ಇತ್ತೀಚೆಗೆ  ಮುಂಬೈನ ರೆಸ್ಟೋರೆಂಟ್‌ಗೆ ಎಂಟ್ರಿ ಸಿಗಲಿಲ್ಲವಂತೆ! ಈ ಕುರಿತು, ಉರ್ಫಿ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ (Post) ಹಾಕುವ ಮೂಲಕ ತಮ್ಮ ನೋವನ್ನು ವ್ಯಕ್ತಪಡಿಸಿದ್ದಾರೆ. ನಾವು ನಿಜವಾಗಿಯೂ 21 ನೇ ಶತಮಾನದಲ್ಲಿ ಬದುಕುತ್ತಿದ್ದೇವೆಯೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದ್ದಾರೆ. ನಟಿಯ ಪೋಸ್ಟ್ ನೋಡಿದ ನಂತರ, ಅವರ ಫ್ಯಾಷನ್ ಸೆನ್ಸ್‌ನಿಂದ ಮಾತ್ರ ಅವರಿಗೆ ಈ ರೆಸ್ಟೋರೆಂಟ್‌ಗೆ ಎಂಟ್ರಿ ನೀಡಲಾಗಿಲ್ಲ ಎಂಬುದು ಸ್ಪಷ್ಟವಾಗಿದೆ.

Urfi Javed: ಮುಸ್ಲಿಮರೂ ಮನೆ ಕೊಡ್ತಿಲ್ಲ, ಏನ್​ ಮಾಡ್ಲಿ? ಟ್ವಿಟರ್​ನಲ್ಲಿ ಉರ್ಫಿ ಗೋಳು

 'ಇದು ನಿಜವಾಗಿಯೂ 21 ನೇ ಶತಮಾನದ (21st Century) ಮುಂಬೈಯೇ? ಇಂದು ನನಗೆ ರೆಸ್ಟೋರೆಂಟ್‌ಗೆ ಪ್ರವೇಶವನ್ನು ನಿರಾಕರಿಸಲಾಗಿದೆ. ನನ್ನ ಫ್ಯಾಷನ್ ಆಯ್ಕೆಯನ್ನು ನೀವು ಒಪ್ಪದಿದ್ದರೂ ಪರವಾಗಿಲ್ಲ. ಆದರೆ ಈ ಕಾರಣದಿಂದಾಗಿ ನೀವು ನನ್ನನ್ನು ನಿರ್ಣಯಿಸಬೇಕು. ಈ ರೀತಿ ನಡೆಸಿಕೊಳ್ಳುವುದು ಸರಿಯಲ್ಲ ಮತ್ತು ಅದು ಸರಿ ಎಂದು ನಿಮಗನಿಸಿದರೆ ಅದನ್ನು ಒಪ್ಪಿಕೊಳ್ಳಿ. ಯಾವುದೇ ಕ್ಷಮೆ ಕೋರಬೇಡಿ' ಎಂದು ಅಸಮಾಧಾನ ವ್ಯಕ್ತಪಡಿಸಿದ ಉರ್ಫಿ ಇದರೊಂದಿಗೆ ಜೊಮಾಟೊ ಮುಂಬೈಗೆ ಟ್ಯಾಗ್ ಮಾಡಿದ್ದಾರೆ ಮತ್ತು ಈ ವಿಷಯವನ್ನು ಪರಿಶೀಲಿಸುವಂತೆ ಮನವಿ ಮಾಡಿದ್ದಾರೆ.
 
ನಿರ್ದೇಶಕ ನೀರಜ್ ಪಾಂಡೆ ಅವರ ಕಚೇರಿಯಿಂದ ತಮಗೆ ಬೆದರಿಕೆ ಕರೆ ಬಂದಿದೆ ಎಂದು ಉರ್ಫಿ ಜಾವೇದ್ ಇತ್ತೀಚೆಗೆ ಬಹಿರಂಗಪಡಿಸಿದಾಗ ಸುದ್ದಿಯಲ್ಲಿದ್ದರು. ಈ ಕುರಿತು ನಟಿ  ಸಾಮಾಜಿಕ ಮಾಧ್ಯಮದಲ್ಲಿ, 'ನನ್ನ ಜೀವನಕ್ಕೆ ಸುಸ್ವಾಗತ. ಪ್ರತಿದಿನ ಹೊಸ ಕಿರುಕುಳ. ನಾನು ಸಾಮಾನ್ಯವಾಗಿ ಅಂತಹ ಕರೆಗಳನ್ನು ನಿರ್ಲಕ್ಷಿಸುತ್ತೇನೆ, ಆದರೆ ಈ ಬಾರಿ ಅವರು ನನ್ನ ಕಾರಿನ ಸಂಖ್ಯೆಯನ್ನು ತಿಳಿದಿದ್ದಾರೆ. ಅವರು ಮೊದಲು ನನ್ನನ್ನು ಸಭೆಗೆ (Meeting) ಕರೆದರು ಮತ್ತು ಇದು ದುರುದ್ದೇಶಪೂರ್ವಕವಾಗಿ ಕರೆದದ್ದು  ಎಂದು ನಾನು ಅರಿತುಕೊಂಡಾಗ , ಅವರು ನನಗೆ ಬೆದರಿಕೆ ಹಾಕಿದರು, ನಾನು ತೀವ್ರ ಅನಾರೋಗ್ಯದಿಂದ ಬಳಲುತ್ತಿರುವಾಗ ಇದೆಲ್ಲವೂ ನಡೆಯುತ್ತಿದೆ' ಎಂದಿದ್ದರು. 

Urfi Javed: ರಣಬೀರ್​ ಕಪೂರ್​ ನರಕಕ್ಕೆ ಹೋಗಲಿ ಎಂದು ಉರ್ಫಿ ಹೇಳಿದ್ದೇಕೆ?

 'ನೀರಜ್ ಪಾಂಡೆ ಅವರ ಕಚೇರಿಯಿಂದ ಯಾರೋ ನನಗೆ ಕರೆ ಮಾಡಿದರು.   ನನ್ನನ್ನು ಭೇಟಿಯಾಗಲು ಬಯಸುತ್ತಾರೆ ಎಂದು ಹೇಳಿದರು. ನಾನು ಸಭೆಯ ಮೊದಲು ಯೋಜನೆಯ ಕೆಲವು ವಿವರಗಳನ್ನು ಕಳುಹಿಸಲು ಹೇಳಿದ್ದೇನೆ. ಇದನ್ನು ಕೇಳಿದ ಸಹಾಯಕರು ಕೋಪಗೊಂಡರು ಮತ್ತು ನೀವು ಹೇಗೆ ನೀರಜ್ ಪಾಂಡೆಯನ್ನು ಅವಮಾನಿಸುವ ಧೈರ್ಯ ಮಾಡಿದ್ದೀರಿ, ನಿಮ್ಮ  ಕಾರ್ ನಂಬರ್ (Car number) ಮತ್ತು ನಿಮ್ಮ  ಬಗ್ಗೆ ಎಲ್ಲವೂ ತಿಳಿದಿದೆ ಎಂದು ಬೆದರಿಕೆ ಹಾಕಿದರು.  ನಾನು ಧರಿಸುವ ಬಟ್ಟೆಗಾಗಿ ನನ್ನನ್ನು ಹೊಡೆದು ಸಾಯಿಸಬೇಕು ಎಂದು ಅವರು ಹೇಳಿದರು' ಎಂದು ಉರ್ಫಿ ಬರೆದಿದ್ದಾರೆ. 

ಉರ್ಫಿ ಜಾವೇದ್ ಟಿವಿ ನಟಿ ಮತ್ತು 'ಯೇ ರಿಶ್ತಾ ಕ್ಯಾ ಕೆಹ್ಲಾತಾ ಹೈ' ಮತ್ತು 'ಜಿಜಿ ಮಾ' ದಂತಹ ಧಾರಾವಾಹಿಗಳಲ್ಲಿ ಕೆಲಸ ಮಾಡಿದ್ದಾರೆ. ಅವರು 'ಬಿಗ್ ಬಾಸ್' (Bigg Boss) OTT ಆವೃತ್ತಿಯಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದರು. ವರದಿಗಳನ್ನು ನಂಬುವುದಾದರೆ, 'ಖತ್ರೋನ್ ಕೆ ಖಿಲಾಡಿ' ಹೊಸ ಸೀಸನ್‌ಗಾಗಿ ಅವರನ್ನು ಸಂಪರ್ಕಿಸಲಾಯಿತು, ಆದರೆ ಅವರು ಪ್ರಸ್ತಾಪವನ್ನು ತಿರಸ್ಕರಿಸಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಾಜ್ ಜೊತೆ ರೊಮ್ಯಾಂಟಿಕ್ ಹನಿಮೂನ್ ಟ್ರಿಪ್ ಪ್ಲಾನ್ ಮಾಡಿದ ಸಮಂತಾ.. ಎಲ್ಲಿಗೆ ಹೋಗ್ತಿದ್ದಾರೆ?
ರಶ್ಮಿಕಾ- ಸ್ಮೃತಿ ಇಬ್ಬರ ಎಂಗೇಜ್​ಮೆಂಟೂ ಮುರಿದುಬಿತ್ತು: ಮಂದಣ್ಣ- ಮಂಧಾನ ಹೆಸರಲ್ಲಿ ಏನಿದೆ ಗ್ರಹಚಾರ?