ತೆಲುಗು ನಟಿ ಸಮಂತಾ ಇನ್ಸ್ಟಾಗ್ರಾಮ್ ನಲ್ಲಿ ಮಾಜಿ ಪತಿ ನಾಗಚೈತನ್ಯ ಅವರನ್ನು ಅನ್ ಫಾಲೋ ಮಾಡಿದ್ದಾರೆ. ನಾಗಾರ್ಜುನ್ ಮತ್ತು ಅಖಿಲ್ ಅಕ್ಕಿನೇನಿ ಅವರನ್ನು ಫಾಲೋ ಮಾಡುತ್ತಿದ್ದಾರೆ.
ತೆಲುಗು ನಟಿ ಸಮಂತಾ (Samantha) ಮತ್ತು ನಾಗಚೈತನ್ಯ(Naga Chaitanya) ವಿಚ್ಛೇದನ ನೀಡಿ ತಿಂಗಳಾಗಿದೆ. ಇಬ್ಬರು ದೂರ ದೂರ ಆಗಿ ತಿಂಗಳ ಬಳಿಕ ಸಮಂತಾ ಇನ್ಸ್ಟಾಗ್ರಾಮ್ ನಲ್ಲಿ ನಾಗ ಚೈತನ್ಯ ಅವರನ್ನು ಅನ್ ಫಾಲ್ ಮಾಡಿದ್ದಾರೆ. ಕಳೆದ ವರ್ಷ ಅಕ್ಟೋಬರ್ ನಲ್ಲಿ ಇಬ್ಬರೂ ವಿಚ್ಛೇದನ ನೀಡುವ ಮೂಲಕ ಸಂಚಲನ ಮೂಡಿಸಿದ್ದರು. ಬೆಸ್ಟ ಕಪಲ್ ಎನಿಸಿಕೊಂಡಿದ್ದ ಈ ಜೋಡಿಯ ವಿಚ್ಛೇದನ ಸುದ್ದಿ ಅಭಿಮಾನಿಗಳಿಗೆ ಆಘಾತ ನೀಡಿತ್ತು.
ವಿಚ್ಛೇದನದ ಬಳಿಕ ಸಮಂತಾ ಸಿಕ್ಕಾಪಟ್ಟೆ ಟ್ರೋಲಿಗೆ ಗುರಿಯಾಗಿದ್ದರು. ಆದರೆ ಈ ಬಗ್ಗೆ ನಾಗಚೈತನ್ಯ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಸೈಲೆಂಟ್ ಆಗಿಯೇ ಇದ್ದ ಸಮಂತಾ ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಶೇರ್ ಮಾಡುತ್ತಾ ಸಕ್ರೀಯರಾಗಿದ್ದರು. ಇದೀಗ ನಾಗಚೈತನ್ಯ ಅವರನ್ನು ಅನ್ ಫಾಲೋ ಮಾಡಿ ಮತ್ತೆ ಸುದ್ದಿಯಾಗಿದ್ದಾರೆ.
ಇತ್ತೀಚಿಗಷ್ಟೆ ಸಮಂತಾ ಮದುವೆ ಸೀರೆಯನ್ನು ಹಿಂತಿರುಗಿಸಿದ್ದಾರೆ ಎನ್ನುವ ಮಾತು ಕೇಳಿಬಂದಿತ್ತು. ಸಮಂತಾ ಮತ್ತು ನಾಗಚೈತನ್ಯ ಮತ್ತೆ ಒಂದಾಗುತ್ತಾರೆ ಎನ್ನುವ ಸುದ್ದಿ ಹರಡಿದ್ದ ಬೆನ್ನಲ್ಲೇ ಸಮಂತಾ ಸೀರೆ ಪಾವಾಸ್ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದರು. ಈ ಮೂಲಕ ಮತ್ತೆ ಒಂದಾಗಲಿದ್ದಾರೆ ಎನ್ನುವ ವದಂತಿಗೆ ಬ್ರೇಕ್ ಹಾಕಿದ್ದರು. ಇದೀಗ ಅನ್ ಫಾಲೋ ಮಾಡುವ ಮೂಲಕ ನಾಗಚೈತನ್ಯ ನೆನೆಪುಗಳಿಂದ ಸಂಪೂರ್ಣ ದೂರ ಸರಿಯಲು ಪ್ರಯತ್ನಿಸುತ್ತಿದ್ದಾರೆ.
Samantha ಯಿಂದ Sonam Kapoorವರೆಗೆ Diabetes ಹೊಂದಿರುವ ಸ್ಟಾರ್ಸ್!
ಅಂದಹಾಗೆ ಸಮಂತಾ ಇನ್ಸ್ಟಾಗ್ರಾಮ್ ನಲ್ಲಿ ನಾಗಚೈತನ್ಯ ಸಹೋದರ ಅಖಿಲ್ ಅಕ್ಕಿನೇನಿ ಮತ್ತು ನಾಗಾರ್ಜುನ್ ಅವರನ್ನು ಫಾಲೋ ಮಾಡುತ್ತಿದ್ದಾರೆ. ಇನ್ನು ನಾಗಚೈತನ್ಯ ಸಹ, ಸಮಂತಾ ಅವರನ್ನು ಫಾಲೋ ಮಾಡುತ್ತಿದ್ದಾರೆ. ಆದರೆ ಸಮಂತಾ ಅನ್ ಫಾಲೋ ಮಾಡಿದ್ದಾರೆ. ನಾಗಚೈತನ್ಯ ಅವರನ್ನು ಅನ್ ಫಾಲೋ ಮಾಡಿದ ಬಳಿಕ ಸಮಂತಾ ಪೋಸ್ಟ್ ಒಂದನ್ನು ಶೇರ್ ಮಾಡಿದ್ದಾರೆ. Mymommasaid ಎಂದು ಹ್ಯಾಶ್ ಟ್ಯಾಗ್ ಹಾಕಿ ಪೋಸ್ಟ್ ಹಂಚಿಕೊಂಡಿದ್ದಾರೆ. ಕೆಲವೊಮ್ಮೆ ಒಳಗಿನ ಶಕ್ತಿಯು ಉರಿಯುವ ದೊಡ್ಡ ಜ್ವಾಲೆಯಲ್ಲ. ಸಣ್ಣ ಕಿಡಿಯಾಗಿದ್ದು ಅದು ನಿಧಾನವಾಗಿ ಪಿಸುಗುಟ್ಟುತ್ತದೆ ಎಂದು ಹೇಳಿದ್ದಾರೆ.
ನಟಿ ಸಮಂತಾ ಮತ್ತೊಂದು ಹಾಟ್ ಲುಕ್ ನೋಡಿ ಹೊಟ್ಟೆ ಉರ್ಕೊಳ್ತಿದ್ದಾರೆ ಹೆಣ್ಹೈಕಳು!!
ಸಮಂತಾ ನಾಗ ಚೈತನ್ಯ ಅವರನ್ನು ಅನ್ ಫಾಲೋ ಮಾಡುವ ಮೊದಲು ಮಾಜಿ ಪತಿಯ ಜೊತೆಗಿದ್ದ ಎಲ್ಲಾ ಫೋಟೋಗಳನ್ನು ಡಿಲೀಟ್ ಮಾಡಿದ್ದರು. ಮಾಜಿ ಪತಿಯಿಂದ ಸಂಪೂರ್ಣ ದೂರ ಆಗುತ್ತಿರುವ ಸಮಂತಾ ಎಲ್ಲಾ ಸಂಬಂಧಗಳನ್ನು ನಿಧಾನವಾಗಿ ಕಡಿದುಕೊಳ್ಳುತ್ತಿದ್ದಾರೆ. ವಿಚ್ಛೇದನದ ಬಳಿಕ ಸಮಂತಾ ನಟನೆಯಲ್ಲಿ ಬ್ಯುಸಿಯಾಗಿದ್ದಾರೆ. ದಿ ಫ್ಯಾಮಿಲಿ ಮ್ಯಾನ್ 2 ಸಕ್ಸಸ್ ಬಳಿಕ ಸಮಂತಾ ಬೇಡಿಕೆ ಮತ್ತಷ್ಟು ಹೆಚ್ಚಾಗಿದೆ. ಪುಷ್ಪಾ ಚಿತ್ರದ ಐಟಂ ಹಾಡಿಗೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸದ್ಯ ತಮಿಳು ಮತ್ತು ತೆಲುಗು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಸಮಂತಾ ಬಾಲಿವುಡ್ ಕಡೆ ಮುಖ ಮಾಡಲಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿದೆ. ಸದ್ಯ ಯಶೋದ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಬಹುಭಾಷೆಯಲ್ಲಿ ತಯಾರಾಗುತ್ತಿದೆ. ಈಗಾಗಲೇ ಚಿತ್ರೀಕರಣ ಪ್ರಾರಂಭವಾಗಿದ್ದು, ಚಿತ್ರದಲ್ಲಿ ಆಕ್ಷನ್ ದೃಶ್ಯಗಳು ಜಾಸ್ತಿ ಇರಲಿದೆಯಂತೆ. ಸ್ಟಂಟ್ ನಿರ್ದೇಶನ ಮಾಡಲು ಹಾಲಿವುಡ್ ನಿಂದ ಸ್ಟಂಟ್ ಮಾಸ್ಟರ್ ಸಮಂತಾ ಸಿನಿಮಾಗೆ ಎಂಟ್ರಿ ಕೊಟ್ಟಿದ್ದಾರೆ.