
ಬಹುಭಾಷಾ ನಟಿ ರೆಜಿನಾ ಕಸ್ಸಂದ್ರ(Regina Cassandra) ಮತ್ತೆ ಸುದ್ದಿಯಲ್ಲಿದ್ದಾರೆ. ನಟಿ ರೆಜಿನಾ ತಮಿಳು, ತೆಲುಗು, ಹಿಂದಿ ಮತ್ತು ಕನ್ನಡ ಸಿನಿಮಾರಂಗದಲ್ಲೂ ಮಿಂಚಿದ್ದಾರೆ. ಕನ್ನಡದಲ್ಲಿ ರೆಜಿನಾ ಸೂರ್ಯಕಾಂತಿ ಸಿನಿಮಾದಲ್ಲಿ ನಟಿಸಿದ್ದಾರೆ. ಸೋದರಿಯ ಪಾತ್ರದಿಂದ ನಾಯಕಿಯಾಗಿ ಮತ್ತು ವಿಲನ್ ಆಗಿಯೂ ಬಣ್ಣಹಚ್ಚುವ ಮೂಲಕ ರೆಜಿನಾ ಅಭಿಮಾನಿಗಳ ಮನಗೆದ್ದಿದ್ದಾರೆ. ಹಲವಾರು ಯಶಸ್ವಿ ಸಿನಿಮಾಗಳಲ್ಲಿ ನಟಿಸಿರುವ ನಟಿ ರೆಜಿನಾ ಸದ್ಯ ಮೆಗಾಸ್ಟಾರ್ ಚಿರಂಜೀವಿ(Chiranjeevi) ನಟನೆಯ ಬಹುನಿರೀಕ್ಷೆಯ ಆಚಾರ್ಯ(Acharya) ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ರೆಜಿನಾ, ಮೆಗಾಸ್ಟಾರ್ ಜೊತೆ ಐಟಂ ಹಾಡಿಗೆ ಹೆಜ್ಜೆ ಹಾಕಿದ್ದಾರೆ.
ಈ ಬಗ್ಗೆ ನಟಿ ರೆಜಿನಾ ಮಾತನಾಡಿದ್ದಾರೆ. ಆಂಗ್ಲ ವೆಬ್ ಪೋರ್ಟಲ್ ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ರೆಜಿನಾ ಇದೇ ನನ್ನ ಮೊದಲ ಮತ್ತು ಕೊನೆಯ ಐಟಂ ಡಾನ್ಸ್ ಆಗಿರಲಿದೆ ಎಂದು ಹೇಳಿದ್ದಾರೆ. ರೆಜಿನಾ ಅವರ ಈ ಹೇಳಿಕೆ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ. ನಟಿ ರೆಜಿನಾ ಒಂದು ವೇಳೆ ಐಟಂ ಡಾನ್ಸ್ ಮಾಡುವುದಾದರೆ ಅದು ಚಿರಂಜೀವಿ ಅವರ ಜೊತೆ ಮಾತ್ರ, ಬೇರೆ ಯಾರ ಜೊತೆಯೂ ಮಾಡುವುದಿಲ್ಲ ಎಂದು ಹೇಳಿದ್ದರು. ಅದರಂತೆ ರೆಜಿನಾಗೆ ಚಿರು ಜೊತೆ ಹೆಜ್ಜೆ ಹಾಕುವ ಅವಕಾಶ ಸಿಕ್ಕಿದ್ದು ಫುಲ್ ಖುಷ್ ಆಗಿದ್ದಾರೆ. ಚಿರಂಜೀವಿ ಅದ್ಭುತ ಡಾನ್ಸರ್ ಹಾಗಾಗಿ ಅವರ ಜೊತೆ ಮಾತ್ರ ಐಟಂ ಡಾನ್ಸ್ ಮಾಡುವುದಾಗಿ ಹೇಳಿದ್ದರು.
ಕೈಯಲ್ಲಿ ಎಣ್ಣೆ ಬಾಟಲ್ ಹಿಡಿದು ತಮ್ಮ ಜರ್ನಿ ನೆನಪಿಸಿಕೊಂಡ 'ಸೂರ್ಯವಂಶ' ನಟಿ!
ಈ ಬಗ್ಗೆ ಮಾತನಾಡಿರುವ ರೆಜಿನಾ, 'ಇದು ನಿಜಕ್ಕೂ ಉತ್ತಮ ಅನುಭವವಾಗಿತ್ತು. ನನಗೆ ತುಂಬಾ ವಿಶೇಷವಾಗಿದೆ. ನಾನು ಚಿರಂಜೀವಿ ಅವರ ಸೋದರಳಿಯ ಸಾಯಿ ಧರ್ಮ್ ತೇಜ್ ಜೊತೆ ಒಂದು ಸಿನಿಮಾ ಮಾಡಿದ್ದೇನೆ. ಅದರಲ್ಲಿ ಚಿರು ಅವರ ಅವರ್ ಗ್ರೀನ್ ಹಾಡನ್ನು ರಿಮೇಕ್ ಮಾಡಿದ್ದೇವೆ. ಇದೀಗ ಅವರ ಜೊತೆ ಡಾನ್ಸ ಮಾಡಿದ್ದೇನೆ. ಸಮಯಕ್ಕೆ ಸರಿಯಾಗಿ ಸೆಟ್ ನಲ್ಲಿ ಇರುತ್ತಾರೆ ಅವರನ್ನು ನೋಡಿ ಇತರರು ಕಲಿಯುವುದು ತುಂಬಾ ಇದೆ. ಇದು ನನ್ನ ಮೊದಲು ಮತ್ತು ಕೊನೆಯ ಐಟಂ ಡಾನ್ಸ್ ಆಗಿರಲಿದೆ' ಎಂದು ಹೇಳಿದರು.
'ಇದು ನನ್ನ ಬಕೆಟ್ ಲಿಸ್ಟ್ ನಲ್ಲಿತ್ತು. ನಾನು ಇದನ್ನು ಮಾಡಿದ್ದೇನೆ. ನಾನು ಐಟಂ ಡಾನ್ಸ್ ಮಾಡಲು ಇಷ್ಟಪಡುವುದಿಲ್ಲ. ಆದರೆ ನೃತ್ಯ ನನಗೆ ತುಂಬಾ ಇಷ್ಟ' ಎಂದು ಹೇಳಿದ್ದಾರೆ.
Whiskey ಪ್ರಚಾರ ಮಾಡಿದ ರೆಜಿನಾ; ಎಣ್ಣೆನೇ ಬೇಕಿತ್ತಾ ನಿಮಗೆ? ಎಂದು ಕಾಲೆಳೆದ ನೆಟ್ಟಿಗರು
ಇನ್ನು ತನ್ನ ಜೀವನ ಶೈಲಿ ಬಗ್ಗೆ ಮಾತನಾಡಿದ ರೆಜಿನಾ, ನಾನು ತೆಲುಗು ಹಿಂದಿ ಚಿತ್ರೀಕರಣಕ್ಕಾಗಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಓಡಾಡುತ್ತಿರುತ್ತೇನೆ. ನಾನು ಕಾರು, ವಿಮಾನ, ವ್ಯಾನಿಟಿ ವ್ಯಾನ್ ಗಳಲ್ಲಿ ಮಲಗುತ್ತೇನೆ. 5-6 ವರ್ಷಗಳಿಂದ ಇದು ನನ್ನ ಜೀವನದ ಒಂದು ಭಾಗವಾಗಿದೆ. ನಿರಂತರವಾಗಿ ಶೂಟಿಂಗ್ ಮಾಡುತ್ತಿರುತ್ತೇನೆ. ಈ ಜೀವನ ಶೈಲಿಗೆ ಒಗ್ಗಿಕೊಂಡಿದ್ದೇನೆ ಮತ್ತು ನನ್ನ ಕೆಲಸದ ಒಂದು ಭಾಗವಾಗಿದೆ ಎಂದಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇರುವ ರೆಜಿನಾ ಆಚಾರ್ಯ ಸಿನಿಮಾ ಬಿಡುಗಡೆಗೆ ಕಾಯುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.