ಜನ್ಮದಿನದ ಸಂಭ್ರಮದಲ್ಲಿ ಕಂಗನಾ ರಣಾವತ್; ದೇವಿ ದರ್ಶನ ಪಡೆದು ನಟಿ ಹೇಳಿದ್ದೇನು?

By Shruiti G Krishna  |  First Published Mar 23, 2022, 1:46 PM IST

ಬಾಲಿವುಡ್ ನಟಿ ಕಂಗನಾ ರಣಾವತ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 35ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಕಂಗನಾ ವೈಷ್ಣೋದೇವಿ ದರ್ಶನ ಪಡೆದು ಸಂತಸ ಪಟ್ಟಿದ್ದಾರೆ. 


ಬಾಲಿವುಡ್ ಸ್ಟಾರ್ ನಟಿ ಕಂಗನಾ ರಣಾವತ್(Kangana ranaut) ಹುಟ್ಟುಹಬ್ಬದ(Birthday) ಸಂಭ್ರಮದಲ್ಲಿದ್ದಾರೆ. ಬಾಲಿವುಡ್ ನ ವಿವಾದಾತ್ಮಕ ನಟಿ, ಕಿರಿಕ್ ನಟಿ ಎಂದೇ ಖ್ಯಾತಿಗಳಿಸಿರುವ ಕಂಗನಾ ಇಂದು (ಮಾರ್ಚ್ 23) ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಅಂದಹಾಗೆ ಕಂಗನಾ 35ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಜನ್ಮದಿನದ ವಿಶೇಷವಾಗಿ ಕಂಗನಾ ವೈಷ್ಣೋದೇವಿ ದೇಗುಲಕ್ಕೆ ಭೇಟಿ ನೀಡಿ ದೇವರ ಆಶೀರ್ವಾದ ಪಡೆದಿದ್ದಾರೆ.

ಕಂಗನಾ ದೇಗುಲಕ್ಕೆ ಭೇಟಿ ನೀಡಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಸುಂದರ ಫೋಟೋಗಳನ್ನು ಶೇರ್ ಮಾಡುವ ಮೂಲಕ ವೈಷ್ಣೋದೇವಿ ದೇವಿ ದರ್ಶನ(vaishno devi temple) ಪಡೆದಿರುವುದಾಗಿ ಕಂಗನಾ ಹೇಳಿದ್ದಾರೆ. ಜೊತೆಗೆ ಅಪಾರ ಪ್ರೀತಿ ಮತ್ತು ಆಶೀರ್ವಾದ ನೀಡಿದ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ.

Tap to resize

Latest Videos

ಕುಟುಂಬದ ಜೊತೆ ದೇವಸ್ಥಾನಕ್ಕೆ ಹೋಗುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ವಿಶೇಷ ದಿನದಂದು ಸುಂದರವಾದ ವರ್ಣರಂಜಿತ ಸಲ್ವಾರ್ ಸೂಟ್ ಧರಿಸಿದ್ದಾರೆ. ನೀಲಿ ಬಣ್ಣದ ಕುರ್ತಾ ಮತ್ತು ಕೆಂಪು ಬಣ್ಣದ ಪ್ಯಾಂಟ್ ಧರಿಸಿದ್ದಾರೆ. ಹಳದಿ ಬಣ್ಣದ ದುಪ್ಪಟ ಹಾಕಿದ್ದಾರೆ. ಕಂಗನಾ ಫೋಟೋಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕಂಗನಾ ರಣಾವತ್ ಜೊತೆ ಸಹೋದರಿ ರಂಗೋಲಿ ಚಂದೇಲ್ ಕೂಡ ಕ್ಯಾಮರಾಗೆ ಪೋಸ್ ನೀಡಿದ್ದಾರೆ.

ಕಂಗನಾರ Lock Uppನಲ್ಲಿ ರವೀನಾ ಟಂಡನ್‌? 16 ಬಂಧಿತರು ಮತ್ಯಾರು?

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಕಂಗನಾ, 'ಇಂದು ಜನ್ಮದಿನದ ವಿಶೇಷ ಸಂದರ್ಭದಲ್ಲಿ ಭಗವತಿ ವೈಷ್ಣೋದೇವಿ ಅವರ ಮತ್ತು ನನ್ನ ಹೆತ್ತವರ ಆಶೀರ್ವಾದದೊಂದಿಗೆ ಈ ವರ್ಷವನ್ನು ಎದುರುನೋಡುತ್ತಿದ್ದೇನೆ. ನಿಮ್ಮ ಪ್ರೀತಿ ಮತ್ತು ಆಶೀರ್ವಾದಕ್ಕೆ ಧನ್ಯವಾದಗಳು' ಎಂದು ಹೇಳಿದ್ದಾರೆ.

ಕಂಗನಾ ರಣಾವತ್ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಧಾಕಡ್ ಮತ್ತು ತೇಜಸ್ ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ. ನಟನೆ ಜೊತೆಗೆ ನಿರ್ದೇಶನದಲ್ಲೂ ಕಂಗನಾ ಬ್ಯುಸಿಯಾಗಿದ್ದಾರೆ. ಮೂರು ಬಾರಿ ಅತ್ಯುತ್ತಮ ನಟನೆಗೆ ಉತ್ತಮ ನಟಿ ರಾಷ್ಟ್ರಪ್ರಶಸ್ತಿಯನ್ನು ಪಡೆದಿದ್ದಾರೆ.

ಕಂಗನಾ ರಣಾವತ್ ನಡೆಸಿಕೊಡೋ Lock UPP ರಿಯಾಲಿಟೋ ಶೋ ಟೀಸರ್ ನೋಡಿದ್ರಾ?

ಸದಾ ವಿವಾದಗಳ ಮೂಲಕ ಸದ್ದು ಮಾಡುವ ಕಂಗನಾ ಒಂದಲ್ಲೊಂದು ವಿಚಾರಗಳನ್ನು ಕೆಣಕುತ್ತಾ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗುತ್ತಿರುತ್ತಾರೆ. ಬಾಲಿವುಡ್ ನಲ್ಲಿ ಬಹುತೇಕರ ವಿರುದ್ಧ ಹರಿಹಾಯ್ದಿರುವ ಕಂಗನಾ ಅನೇಕರ ವಿರೋಧ ಕಟ್ಟಿಕೊಂಡಿದ್ದಾರೆ. ಸದ್ಯ ಕಂಗನಾ ಕಿರುತೆರೆಯಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ಲಾಕ್ ಅಪ್ ಎನ್ನುವ ರಿಯಾಲಿಟಿ ಶೋ ನಡೆಸಿಕೊಡುತ್ತಿರುವ ಕಂಗನಾ ವಾರಾಂತ್ಯದಲ್ಲಿ ಕಿರುತೆರೆ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ.

ಕಂಗನಾ ಕೊನೆಯದಾಗಿ ತಲೈವಿ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಇದೀಗ ತೇಜಸ್ ಮತ್ತು ಧಾಕಡ್ ಮುಗಿಸಿರುವ ಕ್ವೀನ್ ನಟಿ ಮುಂದಿನ ಸಿನಿಮಾದ ತಯಾರಿಯಲ್ಲಿದ್ದಾರೆ.

 

click me!