ಸಮಂತಾ ರುತ್ ಪ್ರಭು ಅವರ SSLC ಮಾರ್ಕ್ಸ್‌ಕಾರ್ಡ್ ಮತ್ತೆ ವೈರಲ್ ಆಗಿದೆ. ಈ ಬಗ್ಗೆ ಸ್ಟಾರ್ ನಟಿ ಪ್ರತಿಕ್ರಿಯೆ ನೀಡಿದ್ದಾರೆ.
ದಕ್ಷಿಣ ಭಾರತದ ಸಿನಿಮಾರಂಗದ ಖ್ಯಾತ ನಟಿ ಒಬ್ಬರಾದ ಸಮಂತಾ ರುತ್ ಪ್ರಭು ಒಂದಲ್ಲೊಂದು ಕಾರಣಕ್ಕೆ ಸದಾ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗಷ್ಟೆ ಸಮಂತಾ ಶಾಕುಂತಲಂ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಆದರೆ ಆ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಹೀನಾಯ ಸೋಲು ಕಂಡಿದೆ. ಆದರೂ ಸಮಂತಾ ಖ್ಯಾತಿ ಕಮ್ಮಿ ಆಗಿಲ್ಲ. ತೆಲುಗು ಜೊತೆಗೆ ಹಿಂದಿಯಲ್ಲೂ ಸಮಂತಾ ಬ್ಯುಸಿಯಾಗಿದ್ದಾರೆ. ಸದ್ಯ ಸಿಟಾಡೆಲ್ ವೆಬ್ ಸೀರಿಸ್ ಮೂಲಕ ಸುದ್ದಿಯಲ್ಲಿರುವ ನಟಿ ಸಮಂತಾ ಅವರ 10 ನೇ ತರಗತಿ ಮಾರ್ಕ್ಸ್‌ಕಾರ್ಡ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಸಮಂತಾ ಮಾರ್ಕ್ಸ್‌ಕಾರ್ಡ್ ನೋಡಿದ ಫ್ಯಾನ್ಸ್ ಅದ್ಭುತ ನಟಿ ಮಾತ್ರವಲ್ಲ ಪ್ರತಿಭಾವಂತ ವಿದ್ಯಾರ್ಥಿ ಕೂಡ ಹೌದು.
ಸಮಂತಾ ಅವರ 10 ನೇ ತರಗತಿ ಮಾರ್ಕ್ಸ್‌ಕಾರ್ಡ್ ಸಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅಂದಹಾಗೆ ಈ ಮಾರ್ಕ್ಸ್‌ಕಾರ್ಡ್ ವೈರಲ್ ಆಗುತ್ತಿರುವುದು ಇದೇ ಮೊದಲ್ಲ. ಈ ಮೊದಲು ಸಹ ಅನೇಕ ಬಾರಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಸಮಂತಾ ಎಲ್ಲಾ ಸಬ್ಜೆಕ್ಟ್‌ನಲ್ಲೂ 80 ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ್ದಾರೆ. ಗಣಿತದಲ್ಲಿ 100 ಮತ್ತು ಭೂಗೋಳಶಾಸ್ತ್ರ ಮತ್ತು ಸಸ್ಯಶಾಸ್ತ್ರವನ್ನು ಹೊರತುಪಡಿಸಿ ಉಳಿದ ಎಲ್ಲಾ ಸಬ್ಜೆಕ್ಟ್‌ಗಳಲ್ಲಿ 90 ಅಂಕಗಳಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಮತ್ತೆ ವೈರಲ್ ಆಗಿರುವ ಮಾರ್ಕ್ಸ್‌ಕಾರ್ಡ್ ಅನ್ನು ಸಮಂತಾ ಶೇರ್ ಮಾಡಿದ್ದಾರೆ. 'ಹಾ..ಹಾ...ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ' ಎಂದು ಹೇಳಿದ್ದಾರೆ. ಸಂತಾ ಪ್ರತಿಕ್ರಿಯೆಗೆ ಅಭಿಮಾನಿಗಳು ಹಾರ್ಟ್ ಇಮೋಜಿ ಹಾಕಿ ಪ್ರೀತಿ ವ್ಯಕ್ತಪಪಡಿಸುತ್ತಿದ್ದಾರೆ.
16ನೇ ವಯಸ್ಸಿನಲ್ಲಿ ಸಮಂತಾ ಹೇಗಿದ್ದರು ನೋಡಿದ್ರಾ? ಆಗಲೇ ಫೇಮಸ್ ಈ ಸ್ಟಾರ್ ನಟಿ!
ಸಮಂತಾ ಮಾರ್ಕ್ಸ್‌ಕಾರ್ಡ್ ಶೇರ್ ಮಾಡಿರುವ ಅಭಿಮಾನಿಗಳು ಹಾಡಿಹೊಗಳುತ್ತಿದ್ದಾರೆ. ಸ್ಯಾಮ್ ಉತ್ತಮ ವಿದ್ಯಾರ್ಥಿ, ಉತ್ತಮ ಮಗಳು, ಅದ್ಭುತ ನಟಿ ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ಟಾಪರ್ ಎಂದು ಹೇಳಿದ್ದಾರೆ. ತನ್ನ ಅದ್ಭುತ ನಟನೆ ಮೂಲಕವೇ ಸಮಂತಾ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಸಮಂತಾ ಯಾವಾಗಲೂ ತನ್ನ ಅಭಿಮಾನಿಗಳಿಗೆ ಸ್ಫೂರ್ತಿಯಾಗಿದ್ದಾರೆ. ಕೇವಲ ತನ್ನ ನಟನಾ ಕೌಶಲ್ಯಕ್ಕಾಗಿ ಮಾತ್ರವಲ್ಲದೆ ತನ್ನ ವೈಯಕ್ತಿಕ ಜೀವನವನ್ನು ಹೇಗೆ ನಿಭಾಯಿಸುದ್ದಾರೆ ಎಂಬುದು ಕೂಡ ಮುಖ್ಯವಾಗಿದೆ. ವಿಚ್ಛೇದನ, ಆರೋಗ್ಯ ಸಮಸ್ಯೆ ಹೀಗೆ ಕಠಿಣ ಸಮಯವನ್ನು ಗೆದ್ದು ಹೊರಬಂದ ಸಮಂತಾ ಅನೇಕರಿಗೆ ಸ್ಫೂರ್ತಿಯಾಗಿದ್ದಾರೆ.
Ha ha this has surfaced again 😁❤️ Awww https://t.co/UMQlxH1dsX
— Samantha (@Samanthaprabhu2)Jr.NTR ಬಳಿಕ ಸಮಂತಾ; ಪಾಶ್ಚಿಮಾತ್ಯರ ಶೈಲಿಯಲ್ಲಿ ಇಂಗ್ಲಿಷ್ ಮಾತಾಡಿದ ಸ್ಯಾಮ್, ಹಿಗ್ಗಾಮುಗ್ಗ ಟ್ರೋಲ್
ಸಮಂತಾ ಸಿನಿಮಾ ವಿಚಾರಕ್ಕೆ ಬರುವುದಾರೇ ಶಾಕುಂತಲಂ ಬಳಿಕ ತೆಲುಗಿನಲ್ಲಿ ಖುಷಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ವಿಜಯ್ ದೇವರಕೊಂಡ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಸಿಟಾಡೆಲ್ ಸೀರಿಸ್ ನಲ್ಲಿ ಬ್ಯುಸಿಯಾಗಿದ್ದಾರೆ. ದಿ ಫ್ಯಾಮಿಲಿ ಮ್ಯಾನ್-2 ಸೀರಿಸ್ ಬಳಿಕ ಸಮಂತಾ ಸಿಟಾಡೆಲ್ ಭಾರತೀಯ ವರ್ಷನ್‌ನಲ್ಲಿ ನಟಿಸುತ್ತಿದ್ದಾರೆ. ಸಮಂತಾ ಮತ್ತು ಬಾಲಿವುಡ್ ಸ್ಟಾರ್ ವರುಣ್ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ದಿ ಫ್ಯಾಮಿಲಿ ಮ್ಯಾನ್ ಸೀರಿಸ್‌ಗೆ ಆಕ್ಷನ್ ಕಟ್ ಹೇಳಿದ್ದ ರಾಜ್ ಮತ್ತು ಡಿಕೆ ಸಿಟಾಡೆಲ್ ಸೀರಿಸ್‌ಗೂ ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ಶೂಟಿಂಗ್ ಪ್ರಾರಂಭವಾಗಿದ್ದು ಇಬ್ಬರೂ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ.