ಇಬ್ಬರು ಖ್ಯಾತ ನಟರನ್ನು ಬ್ಯಾನ್ ಮಾಡಿದ ಮಲಯಾಳಂ ಚಿತ್ರರಂಗ; ಕಾರಣವೇನು?

Published : Apr 26, 2023, 10:49 AM IST
ಇಬ್ಬರು ಖ್ಯಾತ ನಟರನ್ನು ಬ್ಯಾನ್ ಮಾಡಿದ ಮಲಯಾಳಂ ಚಿತ್ರರಂಗ; ಕಾರಣವೇನು?

ಸಾರಾಂಶ

ಮಲಯಾಳಂ ಚಿತ್ರರಂಗ ಇಬ್ಬರು ಖ್ಯಾತ ನಟರನ್ನುಬ್ಯಾನ್ ಮಾಡಿದೆ. ಅಶಿಸ್ತು ತೋರಿದ ಕಾರಣ ಇಬ್ಬರನ್ನು ಬ್ಯಾನ್ ಮಾಡಲಾಗಿದೆ ಎಂದು ಕೇರಳ ನಿರ್ಮಾಪಕರ ಸಂಘ ಮಾಹಿತಿ ನೀಡಿದೆ. 

ಮಲಯಾಳಂ ಸಿನಿಮಾರಂಗದಿಂದ ಇಬ್ಬರು ಖ್ಯಾತ ನಟರನ್ನು ಬ್ಯಾನ್ ಮಾಡಿದೆ.  ನಟರಾದ ಶ್ರೀನಾಥ್ ಬಾಸಿ ಹಾಗೂ ಶೇನ್ ನಿಗಮ್  ಇಬ್ಬರನ್ನು ಅಶಿಸ್ತಿನ ಕಾರಣ ಬ್ಯಾನ್ ಮಾಡಲಾಗಿದೆ. ಶೂಟಿಂಗ್ ಸೆಟ್​ನಲ್ಲಿ  ಅಶಿಸ್ತು ತೋರಿದ ಕಾರಣ ಈ ಇಬ್ಬರಿಗೆ ಬ್ಯಾನ್ ಶಿಕ್ಷೆ ನೀಡಲಾಗಿದೆ. ಫಿಲಂ ಎಂಪ್ಲಾಯಿ ಅಸೋಸಿಯೇಷನ್ ಆಫ್ ಕೇರಳ ಹಾಗೂ ಕೇರಳ ಸಿನಿಮಾ ನಿರ್ಮಾಪಕರ ಸಂಘ ಜಂಟಿಯಾಗಿ ಈ ನಿರ್ಧಾರ ತೆಗೆದುಕೊಂಡಿದೆ. ಜನಪ್ರಿಯ ಮಲಯಾಳಂ ಸಿನಿಮಾ ಕುಂಬಳಂಗಿ ನೈಟ್ಸ್ ನಲ್ಲಿ ಶ್ರೀನಾಥ್ ಬಾಸಿ ಹಾಗೂ ಶೇನ್ ನಿಗಮ್ ಒಟ್ಟಿಗೆ ನಟಿಸಿದ್ದರು. ಹೋಮ್ ಸೇರಿದಂತೆ ಅನೇಕ ಹಿಟ್ ಸಿನಿಮಾಗಳಲ್ಲಿ ಇಬ್ಬರು ನಟಿಸಿದ್ದಾರೆ.

ಈ ಇಬ್ಬರು ನಟರ ವಿರುದ್ಧ ಸಾಕಷ್ಟು ದೂರುಗಳು ಕೇಳಿಬರುತ್ತಿದ್ದ ಕಾರಣ ಫಿಲಂ ಎಂಪ್ಲಾಯಿ ಅಸೋಸಿಯೇಷನ್ ಆಫ್ ಕೇರಳ, ಕೇರಳ ಸಿನಿಮಾ ನಿರ್ಮಾಪಕರ ಸಂಘ ಹಾಗೂ ಅಸೋಸಿಯೇಷನ್ ಆಫ್ ಮಲಯಾಳಂ ಮೂವಿ ಆರ್ಟಿಸ್ಟ್ ಒಕ್ಕೂರಲಿನ ನಿರ್ಧಾರ ತೆಗೆದುಕೊಂಡು ಈ ಇಬ್ಬರು ನಟರ ಮೇಲೆ ನಿಷೇಧ ಹೇರಿದೆ. ಇವರಿಬ್ಬರೂ ಇನ್ನು ಮುಂದೆ ಯಾವುದೇ ಸಿನಿಮಾಗೆ ಸಹಿ ಹಾಕಬಾರದು,  ಹಾಗೂ ಈ ಇಬ್ಬರು ನಟರು ಇರುವ ಸಿನಿಮಾಕ್ಕೆ ಸಹಕಾರ ನೀಡದೇ ಇರಲು ಈ ಸಂಘಟನೆಗಳು ನಿರ್ಧರಿಸಿವೆ.

ಕೊಚ್ಚಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೇರಳ ಸಿನಿಮಾ ನಿರ್ಮಾಪಕರ ಸಂಘದ ಅಧ್ಯಕ್ಷ ಎಂ ರಂಜಿತ್, ಶೇನ್ ನಿಗಮ್ ಮತ್ತು ಶ್ರೀನಾಥ್ ಬಾಸಿ ಇಬ್ಬರ ವಿರುದ್ಧ ಸಾಕಷ್ಟು ದೂರುಗಳು ಕೇಳಿ ಬರುತ್ತಿವೆ. ಇಬ್ಬರೂ ಶೂಟಿಂಗ್ ಸೆಟ್‌ನಲ್ಲಿ ಮಾದಕ ವ್ಯಸನದ ಗುಂಗಿನಲ್ಲಿರುತ್ತಾರೆ. ಈ ಇಬ್ಬರೂ ನಟರಿಂದ ಸಿನಿಮಾ ನಿರ್ಮಾಪಕರು, ತಂತ್ರಜ್ಞರು ಮತ್ತು ಸಹ-ನಟರು ಪದೇ ಪದೇ ತೊಂದರೆಗೊಳಗಾಗಿದ್ದಾರೆ' ಎಂದು ಆರೋಪಿಸಿದ್ದಾರೆ. 

ನಟ ಪೃಥ್ವಿರಾಜ್ ಜೊತೆ ಲಿಪ್‌ಲಾಕ್ ದೃಶ್ಯ ವೈರಲ್; ಮೌನ ಮುರಿದ 'ಹೆಬ್ಬುಲಿ' ನಟಿ ಅಮಲಾ ಪೌಲ್

ಶ್ರೀನಾಥ್ ಬಾಸಿ ಬಗ್ಗೆ ಮಾತನಾಡಿದ ನಿರ್ಪಾಕರ, 'ಈ ಮಧ್ಯೆ ಶ್ರೀನಾಥ್ ಬಾಸಿ ಯಾವ ಚಿತ್ರಗಳಿಗೆ ಸಹಿ ಹಾಕಿದ್ದಾರೆ ಎಂಬ ಮಾಹಿತಿ ತಿಳಿದಿಲ್ಲ. ನಿರ್ಮಾಪಕರೊಂದಿಗೆ ಒಪ್ಪಂದ ಮಾಡಿಕೊಳ್ಳುವುದರ ಬಗ್ಗೆ ಮಾತನಾಡುತ್ತಾರೆ. ಇಬ್ಬರು ನಟರ ವರ್ತನೆಯಿಂದ ಚಿತ್ರ ನಿರ್ಮಾಪಕರಿಗೆ ಭಾರಿ ನಷ್ಟವಾಗಿದೆ' ಎಂದು ರೆಂಜಿತ್ ಹೇಳಿದ್ದಾರೆ.

ಆ 45 ನಿಮಿಷಗಳು ನನ್ನ ಬದುಕಿನ ಅತ್ಯುತ್ತಮ ಕ್ಷಣ: ಪ್ರಧಾನಿ ಭೇಟಿ ಬಳಿಕ ಮಲೆಯಾಳಂ ನಟನ ಮಾತು

ಕೆಲವು ವಾರಗಳ ಹಿಂದಷ್ಟೆ, ನಟ ಶೇನ್ ನಿಗಮ್, ಆರ್​ಡಿಎಕ್ಸ್ ಹೆಸರಿನ ಸಿನಿಮಾದಿಂದ ಹೊರಗೆ ಹೋಗಿದ್ದರು. ಆ ಸಿನಿಮಾದಲ್ಲಿ ಶೇನ್ ನಿಗಮ್ ಜೊತೆಗೆ ಲಾಲ್ ಮತ್ತು ಅಂಟೋನಿ ವರ್ಗೀಸ್ ಅಂಥಹಾ ದೊಡ್ಡ ನಟರುಗಳು ಸಹ ಇದ್ದರು. ಸಿನಿಮಾದ ಚಿತ್ರೀಕರಣ 90 ರಷ್ಟು ಮುಗಿದಿತ್ತು. ಆಗ ಶೇನ್ ನಿಗಮ್​ ಸೆಟ್​ನಿಂದ ಹೊರಗೆ ಹೋಗಿದ್ದರು. ಇದು ನಿರ್ಮಾಪಕರಿಗೆ ಹಾಗೂ ಇತರ ನಟರಿಗೆ ತೀವ್ರ ಅಸಮಾಧಾನ ತಂದಿತ್ತು' ಎಂದು ಹೇಳಿದರು. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ರಶ್ಮಿಕಾ- ಸ್ಮೃತಿ ಇಬ್ಬರ ಎಂಗೇಜ್​ಮೆಂಟೂ ಮುರಿದುಬಿತ್ತು: ಮಂದಣ್ಣ- ಮಂಧಾನ ಹೆಸರಲ್ಲಿ ಏನಿದೆ ಗ್ರಹಚಾರ?
ಕೊನೆಗೂ ಅದಿತಿ ರಾವ್ ಹೈದರಿ ಗುಟ್ಟು ರಟ್ಟಾಯ್ತು.. ಎಷ್ಟು ದಿನ ಅಂತ ಮುಚ್ಚಿಡೋಕಾಗುತ್ತೆ ಹೇಳಿ..!?