ನಟ ಪೃಥ್ವಿರಾಜ್ ಜೊತೆ ಲಿಪ್‌ಲಾಕ್ ದೃಶ್ಯ ವೈರಲ್; ಮೌನ ಮುರಿದ 'ಹೆಬ್ಬುಲಿ' ನಟಿ ಅಮಲಾ ಪೌಲ್

Published : Apr 25, 2023, 07:02 PM IST
ನಟ ಪೃಥ್ವಿರಾಜ್ ಜೊತೆ ಲಿಪ್‌ಲಾಕ್ ದೃಶ್ಯ ವೈರಲ್; ಮೌನ ಮುರಿದ 'ಹೆಬ್ಬುಲಿ' ನಟಿ ಅಮಲಾ ಪೌಲ್

ಸಾರಾಂಶ

ನಟ ಪೃಥ್ವಿರಾಜ್ ಸುಕುಮಾರನ್ ಜೊತೆ ಲಿಪ್‌ಲಾಕ್ ದೃಶ್ಯ ವೈರಲ್ ಆಗಿರುವ ಬಗ್ಗೆ ನಟಿ ಅಮಲಾ ಪೌಲ್ ಮೊದಲ ಬಾರಿಗೆ ಮೌನ ಮುರಿದಿದ್ದಾರೆ.

ದಕ್ಷಿಣ ಭಾರತದ ಖ್ಯಾತ ನಟಿಯರಲ್ಲಿ ಅಮಲಾ ಪೌಲ್​  ಕೂಡ ಒಬ್ಬರು. ಆಗಾಗ  ಸುದ್ದಿಯಲ್ಲಿರುವ ಅಮಲಾ ಸಾಮಾಜಿಕ ಜಾಲತಾಣದಲ್ಲೂ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ. ಸಖತ್ ಹಾಟ್ ಆಗಿ ಕಾಣಿಸಿಕೊಳ್ಳುವ ಅಮಲಾ ಬಿಕಿನಿ ಫೋಟೋಶೂಟ್ ಮೂಲಕ ಮಿಂಚುತ್ತಿರುತ್ತಾರೆ. ತೆರೆಮೇಲೆ ಕೂಡ ಅಮಲಾ ಬೋಲ್ಡ್ ಪಾತ್ರಗಳ ಮೂಲಕ ಅಭಿಮಾನಿಗಳ ಮುಂದೆ ಬರುತ್ತಾರೆ.  ಕೇರಳ ಮೂಲದ ನಟಿ ಅಮಲಾ ದಕ್ಷಿಣ ಭಾರತದ ಎಲ್ಲಾ ಭಾಷೆಯಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇದೀಗ ಮತ್ತೆ ಲಿಪ್‌ಲಾಕ್ ದೃಶ್ಯದ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ. ಮಲಯಾಳಂ ಖ್ಯಾತ ನಟ ಪೃಥ್ವಿರಾಜ್ ಸುಕುಮಾರ್ ಜೊತೆ ಎನ್ನುವುದು ಈಗ ವಿಷಯ. 

ಅಮಲಾ ಪೌಲ್ ಮತ್ತು ಪೃಥ್ವಿರಾಜ್ ಸುಕುಮಾರ್ ಇಬ್ಬರೂ ಆಡು ಜೀವಿತಂ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಇತ್ತೀಚೆಗಷ್ಟೆ ಈ ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. ಟ್ರೈಲರ್ ನಲ್ಲಿ ಪೃಥ್ವಿರಾಜ್ ಮತ್ತು ಅಮಲಾ ಇಬ್ಬರೂ ಲಿಪ್‌ಲಾಕ್ ಮಾಡಿರುವ ದೃಶ್ಯ ವೈರಲ್ ಆಗಿದ್ದು ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ಈ ಬಗ್ಗೆ ನಟಿ ಅಮಲಾ ಪೌಲ್ ಪ್ರತಿಕ್ರಿಯೆ ನೀಡಿದ್ದಾರೆ. 'ಚಿತ್ರಕಥೆಗೆ ಲಿಪ್‌ಲಾಕ್ ದೃಶ್ಯ ಅಗತ್ಯವಾಗಿದ್ದರಿಂದ ಮಾಡಿದ್ದೀನಿ' ಎಂದು ಹೇಳಿದ್ದಾರೆ. 

'ಹೆಬ್ಬುಲಿ' ನಟಿ ಅಮಲಾ ಪೌಲ್‌ ಜೊತೆ ಸೆಲ್ಫಿ ಕ್ಲಿಕ್ ಮಾಡಿಕೊಂಡ ಕೋತಿ; ಫೋಟೋ ವೈರಲ್

ಅಂದಹಾಗೆ ಅಮಲಾ ಪೌಲ್ ಈ ತಮಿಳಿನ ಆಡೈ ಸಿನಿಮಾದಲ್ಲಿ ನಗ್ನರಾಗಿ ಕಾಣಿಸಿಕೊಂಡಿದ್ದರು. ಆ ದೃಶ್ಯ ಕೂಡ ಭಾರಿ ವಿವಾದವನ್ನು ಹುಟ್ಟುಹಾಕಿತ್ತು. ಅಂದು ತಮಿಳು ಚಿತ್ರರಂಗದ ಬಹುಚರ್ಚಿತ ದೃಶ್ಯಗಳಲ್ಲಿ ಒಂದಾಗಿತ್ತು. ಆದರೆ ಅಮಲಾ ಪೌಲ್ ಆ ದೃಶ್ಯವನ್ನು ಕಥೆಗೆ ಬೇಕಾದಂತೆ ಧೈರ್ಯದಿಂದ ಕೈಗೆತ್ತಿಕೊಂಡಿದ್ದರು. ಇದೀಗ ಮತ್ತದೆ ದೈರ್ಯದ ಮೂಲಕ ಮತ್ತೊಂದು ಬೋಲ್ಡ್ ದೃಶ್ಯ ಮಾಡಿದ್ದಾರೆ. 

Salaar; ವರ್ಧರಾಜ ಮನ್ನಾರ್ ಆಗಿ ಪ್ರಭಾಸ್ ಸಿನಿಮಾಗೆ ಎಂಟ್ರಿ ಕೊಟ್ಟ ಪೃಥ್ವಿರಾಜ್, ಲುಕ್ ವೈರಲ್

ಆಡು ಜೀವಿತಂ ಮರಳುಭೂಮಿಯಲ್ಲಿ ಕಷ್ಟಪಡುವ ವ್ಯಕ್ತಿಯ ಕುರಿತಾದ ಕಥೆಯನ್ನು ಈ ಚಿತ್ರ ಒಳಗೊಂಡಿದೆ. ಪೃಥ್ವಿರಾಜ್​ ಸುಕುಮಾರನ್ ಅವರಿಗೆ ಇದು​​ ವಿಭಿನ್ನ ಪಾತ್ರವಾಗಿದೆ. ಅವರ ಪತ್ನಿಯ ಪಾತ್ರದಲ್ಲಿ ಅಮಲಾ ಪೌಲ್​ ನಟಿಸಿದ್ದಾರೆ. ಆಡು ಜೀವಿತಂ ಸಿನಿಮಾಗೆ ಬ್ಲೆಸ್ಸಿ ಆಕ್ಷನ್ ಕಟ್ ಹೇಳಿದ್ದಾರೆ. ಇದು ಮಲಯಾಳಂನ ಖ್ಯಾತ ಬರಹಗಾರ ಬೆಂಜಮಿನ್ ಬರೆದ ಆಡು ಜೀವಿದಂ ಕಾದಂಬರಿಯನ್ನು ಆಧರಿಸಿದ ಸಿನಿಮಾವಾಗಿದೆ. ಈ ಸಿನಿಮಾಗೆ ಎ.ಆರ್​. ರೆಹಮಾನ್​ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ಆಸ್ಕರ್​ ಪ್ರಶಸ್ತಿ ಪುರಸ್ಕೃತ ರಸೂಲ್​ ಪೂಕುಟ್ಟಿ ಸೌಂಡ್​ ಡಿಸೈನ್​ ಮಾಡಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ನನ್ನ ತಂದೆ ಕೂಡ ಗುಮ್ಮಡಿ ನರಸಯ್ಯ ಅವರಂತೆಯೇ ಜನರ ಸೇವೆ ಮಾಡಿದವರು: ನಟ ಶಿವಣ್ಣ ಹೇಳಿದ್ದೇನು?