ಪ್ರಿಯಾಂಕಾ ಚೋಪ್ರಾ ಬುಟ್ಟಿಗೆ ಹಾಲಿವುಡ್ ಹುಡುಗ ನಿಕ್ ಜೋನಾಸ್‌ ಜಾರಿ ಬಿದ್ದಿದ್ದು ಹೇಗೆ?

By Shriram Bhat  |  First Published Oct 17, 2024, 3:51 PM IST

ಅಮೆರಿಕಾದ ಪಾಪ್ ಸಿಂಗರ್ ನಿಕ್ ಜೊನಾಸ್ ಅವರನ್ನು ಲವ್ ಮಾಡಿ, 2018ರಲ್ಲಿ ಮದುವೆಯಾಗಿದ್ದಾರೆ ನಟಿ ಪ್ರಿಯಾಂಕಾ ಚೋಪ್ರಾ. ಆದರೆ, ಅವರಿಬ್ಬರ ಲವ್ ಆಗಿದ್ದು ಹೇಗೆ? ಎಲ್ಲಿ ಸಿಕ್ಕಿದ್ದು? ಎಲ್ಲಿ ಓಕೆ ಅಂದಿದ್ದು?..


ಸದ್ಯ ಹಾಲಿವುಡ್‌ಗೆ ಹಾರಿ ಅಲ್ಲಿಯೇ ಹಾಯಾಗಿರುವ ಭಾರತೀಯ ಮೂಲದ ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಜಗತ್ತಿನ ಬಹುತೇಕ ಎಲ್ಲರಿಗೂ ಗೊತ್ತು. ವಿಶ್ವಸುಂದರಿ ಪಟ್ಟ ಪಡೆದು ಬಾಲಿವುಡ್ ಸಿನಿಮಾರಂಗಕ್ಕೆ ಕಾಲಿಟ್ಟ ಪ್ರಿಯಾಂಕಾ ಚೋಪ್ರಾ, ಬಳಿಕ ಹಿಂತಿರುಗಿ ನೋಡಲಿಲ್ಲ. ಬಾಲಿವುಡ್ ಚಿತ್ರರಂಗದಲ್ಲಿ ಸ್ಟಾರ್ ನಟಿಯಾಗಿ ಮೆರೆದು ಸಾಕಷ್ಟು ಹೆಸರು ಮಾಡಿದ್ದಾರೆ ನಟಿ ಪ್ರಿಯಾಂಕಾ ಚೋಪ್ರಾ. ಇದೀಗ, ಅಮೆರಿಕಾ ಸೊಸೆಯಾಗಿರುವ ಪ್ರಿಯಾಂಕಾ, ಹಾಲಿವುಡ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. 

ಅಮೆರಿಕಾದ ಪಾಪ್ ಸಿಂಗರ್ ನಿಕ್ ಜೊನಾಸ್ (Nick Jonas) ಅವರನ್ನು ಲವ್ ಮಾಡಿ, 2018ರಲ್ಲಿ ಮದುವೆಯಾಗಿದ್ದಾರೆ ನಟಿ ಪ್ರಿಯಾಂಕಾ ಚೋಪ್ರಾ. ಬಳಿಕ ಅವರು ಸಹಜವಾಗಿ ಗಂಡ ನಿಕ್ ಜೊನಾಸ್ ಹುಟ್ಟೂರು ಅಮೇರಿಕಕ್ಕೆ ಹಾರಿದ್ದಾರೆ. ಗಂಡನೊಂದಿಗೆ ಸುಖ-ಸಂಸಾರ ಮಾಡಿಕೊಂಡಿರುವ ನಟಿ ಪ್ರಿಯಾಂಕಾ ಚೋಪ್ರಾ ಅವರು ಅಲ್ಲಿನ ಹಾಲಿವುಡ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಆದರೆ, ಕೆಲವರ ಮನಸ್ಸಲ್ಲಿ, ನಟಿ ಪ್ರಿಯಾಂಕಾ ಚೋಪ್ರಾ ಅವರು ನಿಕ್ ಜೊನಾಸ್ ಅವರನ್ನು ಭೇಟಿಯಾಗಿದ್ದು ಹೇಗೆ ಎಂಬ ಪ್ರಶ್ನೆ ಇರಬಹುದು. ಅದಕ್ಕೆ ಇಲ್ಲಿದೆ ಉತ್ತರ, ನೋಡಿ.. 

Tap to resize

Latest Videos

ಟೈಗರ್ ಪ್ರಭಾಕರ್ ಸಾವಿನ ಹಿಂದಿದೆ ದೊಡ್ಡ ಕರಾಳ ಸತ್ಯ! ಗ್ಯಾಂಗ್ರಿನ್ ಆಗಿದ್ದು ಹೇಗೆ ಗೊತ್ತಾ?

ಹೌದು, ನಟಿ ಪ್ರಿಯಾಂಕಾ ಚೋಪ್ರಾ ಅವರು ನಿಕ್ ಜೊನಾಸ್ ಅವರನ್ನು ವ್ಯಾನಿಟಿ ಫೇರ್‌ ಆಸ್ಕರ್ ಪಾರ್ಟಿ (Vanity Fair Oscars party) ಯಲ್ಲಿ ಮೊದಲು ಭೇಟಿಯಾಗಿದ್ದಾರೆ. ಬಳಿಕ, ಅವರಿಬ್ಬರೂ ಒಟ್ಟಿಗೇ ಮೆಟ್‌ ಗಾಲಾ (Met Gala)ಗೆ ಹೋಗಿದ್ದಾರೆ. ಅಷ್ಟರಲ್ಲಾಗಲೇ ಅವರಿಬ್ಬರ ಮಧ್ಯೆ ಲವ್ ಶುರುವಾಗಿ ಅದು ರೊಮಾನ್ಸ್ ಹಂತಕ್ಕೆ ಬಹುಬೇಗನೆ ಹೋಗಿದೆ. ಆದರೆ, ಅವರಿಬ್ಬರೂ ವೈಯಕ್ತಿಕವಾಗಿ ಭೇಟಿಯಾಗಿ ಲಿವ್ ಇನ್ ರಿಲೇಶನ್‌ಶಿಪ್ ಹಾಗು ಮದುವೆ ಹಂತಕ್ಕೆ ಹೋಗಿದ್ದು 2017ರಲ್ಲಿ ಎನ್ನಲಾಗಿದೆ.

ಲವ್, ರೊಮಾನ್ಸ್ ಎಲ್ಲವೂ ಮುಗಿದ ಮೇಲೆ ಪ್ರಿಯಾಂಕಾ ಚೋಪ್ರಾ ಹಾಗೂ ನಿಕ್ ಜೊನಾಸ್ ಜೋಡಿ ಮದುವೆಯಾಗಲು ನಿರ್ಧರಿಸಿದ್ದಾರೆ. ಅದರಂತೆ, ರಾಜಸ್ಥಾನದ ಜೋಧ್‌ಪುರದಲ್ಲಿ ಅವರಿಬ್ಬರೂ ತುಂಬಾ ಗ್ರಾಂಡ್‌ ಆಗಿ ಮದುವೆಯಾಗಿದ್ದಾರೆ. ಸದ್ಯ ಈ ಜೋಡಿ ಅಮೆರಿಕಾದಲ್ಲಿ ನೆಲೆಸಿದ್ದು, ತಮ್ಮತಮ್ಮ ವೃತ್ತಿಜೀವನದಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ, ನಟಿ ಪ್ರಿಯಾಂಕಾ ಚೋಪ್ರಾಗೆ ಹಾಲಿವುಡ್ ಸಿನಿಮಾಗಳಲ್ಲಿ ಅಷ್ಟು ಸುಲಭವಾಗಿ ಚಾನ್ಸ್  ಸಿಕ್ಕಿಲ್ಲ. ಅವರು ಕಳೆದ ಹತ್ತು ವರ್ಷಗಳಿಂದಲೂ ಪ್ರಯತ್ನ ಪಡುತ್ತಿದ್ದರಂತೆ!

ಅಪ್ಪು ಫ್ಯಾನ್ಸ್‌ ಪೇಜ್‌ನಲ್ಲಿ ಶಂಕರ್‌ ನಾಗ್, ಏನೆಲ್ಲಾ ಪೋಸ್ಟ್ ಮಾಡಿದಾರೆ ನೋಡಿ!

ಒಟ್ಟಿನಲ್ಲಿ, ನಟಿ ಪ್ರಿಯಾಂಕಾ ಚೋಪ್ರಾ ಎಲ್ಲಿದ್ದರೂ ಹೇಗಿದ್ದರೂ ಸದಾ ಸುದ್ದಿಯಲ್ಲಂತೂ ಇರುತ್ತಾರೆ. ತಮಗಿಂತ ಹಿರಿಯನಾದ ನಿಕ್ ಜೊನಾಸ್ ಅವರನ್ನು ಮದುವೆಯಾಗಿರುವ ಪ್ರಿಯಾಂಕಾ ಚೋಪ್ರಾ, ಸದ್ಯ ಭಾರತೀಯ ಚಿತ್ರರಂಗದಲ್ಲಿ ಸಕ್ರಿಯರಾಗಿಲ್ಲ. ಅವರೇ ಹೇಳಿರುವಂತೆ, ಅವರಿಗಿನ್ನೂ ಬಾಲಿವುಡ್‌, ಟಾಲಿವುಡ್‌ನಲ್ಲಿ ಅವಕಾಶಗಳು ಇವೆಯಂತೆ, ಕಾಲ್‌ಶೀಟ್ ಕೇಳುತ್ತಿದ್ದಾರಂತೆ. ಆದರೆ, ತುಂಬಾ ದಿನ ಗಂಡನನ್ನು ಬಿಟ್ಟು ಶೂಟಿಂಗ್ ಸಲುವಾಗಿ ನಾನು ಹೊರಗೆ ಇರಲಾಗದು, ಹೀಗಾಗಿ ಭಾರತದ ಯಾವುದೇ ಚಿತ್ರ ಒಪ್ಪಿಕೊಂಡಿಲ್ಲ' ಎಂದಿದ್ದಾರೆ ನಟಿ ಪ್ರಿಯಾಂಕಾ ಚೋಪ್ರಾ. 

click me!