ಫ್ಯಾನ್ ಫೋನ್ ಕಸಿದ ಸಲ್ಮಾನ್: ಕೋಪವೇ ಈತನ ದುಷ್ಮನ್!

Published : Jan 28, 2020, 06:29 PM IST
ಫ್ಯಾನ್ ಫೋನ್ ಕಸಿದ ಸಲ್ಮಾನ್: ಕೋಪವೇ ಈತನ ದುಷ್ಮನ್!

ಸಾರಾಂಶ

ಅಭಿಮಾನಿಯ ಮೊಬೈಲ್ ಕಸಿದ ಸಲ್ಲುಭಾಯ್| ಸೆಲ್ಫಿ ಕ್ಲಿಕ್ಕಿಸಲು ಮುಂದಾದ ಅಭಿಮಾನಿಗೆ ಶಾಕ್ ಕೊಟ್ಟ ಸಲ್ಲು| ಪಣಜಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಘಟನೆ| ಸಲ್ಮಾನ್ ಖಾನ್ ಆಕ್ರೋಶಕ್ಕೆ ಬೆದರಿದ ಅಭಿಮಾನಿ| ಅನುಮತಿ ಇಲ್ಲದೇ ಸೆಲ್ಫಿ ಕ್ಲಿಕ್ಕಿಸಿದ್ದಕ್ಕೆ ಸಲ್ಲು ಗರಂ|

ಪಣಜಿ(ಜ.28): ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ಮತ್ತೆ ವಿವಾದವೊಂದನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಅಭಿಮಾನಿಯೊಬ್ಬನ ಫೋನ್ ಕಸಿದು ಸಲ್ಲುಭಾಯ್ ಸುದ್ದಿಯಾಗಿದ್ದಾರೆ.

ಗೋವಾ ರಾಜಧಾನಿ ಪಣಜಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಅನುಮತಿ ಇಲ್ಲದೇ ಸೆಲ್ಫಿ ಕ್ಲಿಕ್ಕಿಸಲು ಮುಂದಾದ ಅಭಿಮಾನಿಯೋರ್ವನ ಫೋನ್’ನ್ನು ಸಲ್ಮಾನ್ ಕಿತ್ತುಕೊಂಡಿದ್ದಾರೆ.

ಸಲ್ಮಾನ್‌‌ಗೆ ಸಾಲ ಭೀತಿ: ಕಾಕಾ ಕೊಟ್ಟ ಸಾಲವಿನ್ನೂ ತೀರಿಸಿಲ್ಲ ಬ್ಯಾಡ್ ಬಾಯ್!

ವಿಮಾನ ನಿಲ್ದಾಣದಿಂದ ಸಲ್ಮಾನ್ ಹೊರ ಬರುತ್ತಿದ್ದಂತೇ, ಅಭಿಮಾನಿಯೋರ್ವ ಸೆಲ್ಫಿ ಕ್ಲಿಕ್ಕಿಸಲು ಮುಂದಾಗಿದ್ದಾನೆ. ಇದರಿಂದ ಕೆರಳಿದ ಸಲ್ಮಾನ್ ಕೂಡಲೇ ಆತನ ಮೊಬೈಲ್ ಕಸಿದುಕೊಂಡು ಮುನ್ನಡೆದಿದ್ದಾರೆ. ಈ ವೇಳೆ ಸಲ್ಮಾನ್ ಭದ್ರತಾ ಸಿಬ್ಬಂದಿ ಅಭಿಮಾನಿಯನ್ನು ತಡೆದು ಸಲ್ಲುಭಾಯ್‌ಗೆ ದಾರಿ ಮಾಡಿಕೊಟ್ಟಿದ್ದಾರೆ.

ಕಿಚ್ಚನಿಗೆ ಸಲ್ಮಾನ್ ಅಮೂಲ್ಯ ಗಿಫ್ಟ್... ಕಾರಣ ಏನಂತೆ!

ಸಲ್ಮಾನ್ ಖಾನ್ ಅಭಿಮಾನಿ ಮೊಬೈಲ್ ಕಸಿದುಕೊಂಡು ಮುನ್ನಡೆಯುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. 
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Film Etiquette: ಥಿಯೇಟರ್‌ನಲ್ಲಿ ಸಿನಿಮಾ ನೋಡ್ತೀರಾ? ಈ 10 ತಪ್ಪುಗಳನ್ನು ಮಾತ್ರ ಮಾಡ್ಬೇಡಿ!
ಜನ್ಮಾಷ್ಟಮಿಗೆ ನಟ ರಾಮ್ ಚರಣ್ ಅವಳಿ ಮಕ್ಕಳ ಸ್ಪೆಷಲ್ ಸರ್ಪ್ರೈಸ್: ಕೃಷ್ಣ-ರಾಧೆಯ ಲುಕ್ ವೈರಲ್