ಪಿಗ್ಗಿ ಜತೆಯಲ್ಲಿದ್ದರೆ, ಬ್ರಷ್ ಮಾಡೋದೂ ಮರೀತಾರಾ ನಿಕ್?

Suvarna News   | Asianet News
Published : Jan 28, 2020, 03:51 PM IST
ಪಿಗ್ಗಿ ಜತೆಯಲ್ಲಿದ್ದರೆ, ಬ್ರಷ್ ಮಾಡೋದೂ ಮರೀತಾರಾ ನಿಕ್?

ಸಾರಾಂಶ

ಲಾಸ್‌ ಏಂಜಲೀಸ್‌ನಲ್ಲಿ ಅದ್ಧೂರಿಯಾಗಿ ನಡೆದ ಗ್ರ್ಯಾಮಿ 2020 ಕಾರ್ಯಕ್ರಮಲ್ಲಿ ಪಾಲ್ಗೊಂಡ ನಿಕ್‌ ಜೋನಾಸ್‌ ಹಾಗೂ ಪತ್ನಿ ಪ್ರಿಯಾಂಕಾ ಚೋಪ್ರಾ ಸಾಮಾಜಿಕ ಜಾಲತಾಣದಲ್ಲಿ ಫುಲ್‌ ಟ್ರೋಲ್ ಆಗಿದ್ದಾರೆ. ಪ್ರಿಯಾಂಕಾ ಡ್ರೆಸ್‌ಗೆ ನೆಟ್ಟಿಗರು ಗರಂ ಆಗಿದ್ದರು. ಮತ್ತೊಂದೆಡೆ ಪಿಗ್ಗಿ ಜೊತೆಯಿದ್ದರೆ ನಿಕ್ ಹಲ್ಲು ಉಜ್ಜೋಲ್ವಾ? ಏನಿದು, ಮಂದಿ ಹಿಂಗ್ಯಾಕ್ ಕೇಳಿಕ್ಕತ್ಯಾರ?  

ಬಾಲಿವುಡ್‌ ಇಂಟ್ರೆಸ್ಟಿಂಗ್ ಕಪಲ್‌ ಪ್ರಿಯಾಂಕಾ ಚೋಪ್ರಾ ಮತ್ತು ನಿಕಿಲ್ ಜೊನಾಸ್‌ ದಿನೇ ದಿನೇ ಬಿ-ಟೌನ್‌ ಗಮನ ಸೆಳೆಯುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಲಾಸ್‌ ಏಂಜಲೀಸ್‌ನಲ್ಲಿ ನಡೆದ ಅದ್ಧೂರಿ 'Grammy 2020' ಕಾರ್ಯಕ್ರಮದಲ್ಲಿ ಈ ಜೋಡಿ ಜತೆಯಾಗಿಯೇ ಪಾಲ್ಗೊಂಡಿತ್ತು. ಗಂಡ-ಹೆಂಡ್ತಿ ಎಂದ ಮೇಲೆ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದರಲ್ಲಿ ಏನಿಲ್ಲ ವಿಶೇಷ ಬಿಡಿ. ಆದರೆ, ಪಿಗ್ಗಿ ಹಾಕ್ಕೊಂಡ ಡ್ರೆಸ್ ಸಿಕ್ಕಾಪಟ್ಟೆ ಸದ್ದು ಮಾಡಿದ್ದು, ಅದು ಗೌನೋ, ನೈಟಿಯೋ.... ಒಟ್ಟಿನಲ್ಲಿ ವಿಚಿತ್ರವಾದ ಫ್ಯಾಷನ್‌ಗೆ ಮೊರೆ ಹೋಗಿ ತಮ್ಮ ಅಡಗಿಸಿಟ್ಟಿದ್ದ ಸೌಂದರ್ಯ ಅನಾವರಣಗೊಳಿಸಿಕೊಂಡಿದ್ದರು. 

ಅಯ್ಯೋ! ಪ್ರಿಯಾಂಕಾ ಚೋಪ್ರಾಗೆ ಯಾಕಿಷ್ಟು ಹೀಲ್ಸ್ ಕ್ರೇಜ್, 80 ಪೇರ್ ಕಮ್ಮಿನಾ?

ರೆಡ್‌ ಕಾರ್ಪೆಟ್‌ ಲುಕ್‌ ಸದಾ ವಿಭಿನ್ನವಾಗಿರಬೇಕೆಂದು ಡಿಸೈನರ್‌ಗಳ ಮೊರೆ ಹೋಗುವ ಪ್ರಿಯಾಂಕಾ ಈ ಸಲ ಗ್ರ್ಯಾಮಿ ಲುಕ್‌ನಲ್ಲಿ ಧರಿಸಿದ ಪ್ಲಂಚಿಂಗ್ ನೆಕ್‌ ಗೌನ್‌ ಸಿಕ್ಕಾಪಟ್ಟೆ ಟ್ರೋಲ್‌ ಆಗಿತ್ತು. ರೆಡ್‌ ಕಾರ್ಪೆಟ್‌ ವಾಕ್‌ ನಂತರ ಸಂಗೀತ ಕಾರ್ಯಕ್ರಮವೂ ನಡೆಯಿತು. ಅದರಲ್ಲಿ ಜೋನಾಸ್‌ ಬ್ರದರ್ಸ್ ಸಂಗೀತ ಕಾರ್ಯಕ್ರಮ ನೀಡಿದ್ದಾರೆ. 

ಈ ವೇಳೆ ನಿಕ್‌ ಹಾಡುವಾಗ ಹಲ್ಲಲ್ಲಿ ಕಸ ಸಿಕ್ಕಿ ಹಾಕಿಕೊಂಡಿರುವುದು ಯಾವುದೋ ಪುಣ್ಯಾತ್ಮನ ಕ್ಯಾಮೆರಾದಲ್ಲಿ ಕ್ಯಾಪ್ಚರ್ ಆಗಿದೆ. ನೆಟ್ಟಿಗರು ಕೇಳಬೇಕಾ, ಸಿಕ್ಕಿದ್ದೇ ಸೀರುಂಡೆ ಎಂದು ಅದನ್ನೂ ಟ್ರಾಲ್ ಮಾಡಿದ್ದಾರೆ. ಸದಾ ತಮ್ಮ ದಾಂಪತ್ಯದ ಬಗ್ಗೆ ಹೊಗಳಿಕೊಳ್ಳುವ ಈ ಜೋಡಿಗೆ ಹಿಗ್ಗಾಮುಗ್ಗಾ ಕಾಮೆಂಟ್ ಮಾಡಿದ್ದಾರೆ. ಏನಣ್ಣೋ ಮಡದಿ ಜೊತೆಯಲ್ಲಿದ್ದರೆ ಬ್ರಷ್ ಮಾಡೋದೂ ಮರೆತೀಯಾ? ಎಂದೇ ಕೇಳಿದ್ದಾರೆ. ನಿಕ್ ಹಲ್ಲಿಗೆ ಕಸ ಸಿಕ್ಕಿರುವ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.

ನಿಕ್ ಮದುವೆಯಾದ ಮೇಲೆ ಪ್ರಿಯಾಂಕಾ ವೇಷ ನೋಡ್ರಣ್ಣ! ಹುದುಗಿಸಿಟ್ಟ ಎಲ್ಲ ಸೌಂದರ್ಯ ಅನಾವರಣ!

ಏನೋ ಒಟ್ಟಿನಲ್ಲಿ ಹಾಲಿವುಡ್- ಬಾಲಿವುಡ್ ಸಂಗಮದಂತಿರುವ ಪಿಗ್ಗಿ-ನಿಕ್ ಜೋಡಿ ಮೇಲೆ ಮಂದಿ ಸದಾ ಕಣ್ಣಿಟ್ಟಿರುತ್ತಾರೆ. ಏನ್ ಮಾಡಿದ್ರೂ ಸುದ್ದಿಯಾಗುತ್ತಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ವೈದ್ಯರ ವರದಿ ಬಳಿಕ ಜೈಲಿನಲ್ಲಿ ನಟ ದರ್ಶನ್‌ಗೆ ಫಿಸಿಯೋಥೆರಪಿ ಚಿಕಿತ್ಸೆ ಸ್ಥಗಿತ
ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?