RRR Song Launch: ಕನ್ನಡದಲ್ಲಿ ಅಷ್ಟಾಗಿ ಮಾತನಾಡಕ್ಕೆ ಬರಲ್ಲವೆಂದ ರಾಜಮೌಳಿ

By Suvarna NewsFirst Published Nov 26, 2021, 5:57 PM IST
Highlights

ಕನ್ನಡದಲ್ಲಿ ಅಷ್ಟಾಗಿ ಮಾತನಾಡಕ್ಕೆ ಬರಲ್ಲ, ನೀವೇ ಅಡ್ಜಸ್ಟ್ ಮಾಡಿಕೊಳ್ಳಬೇಕು. ಕರ್ನಾಟಕದಲ್ಲಿ ನಾನೇ ಬಂದು ಮಾತನಾಡುತ್ತಿದ್ದೇನೆ. ಕರ್ನಾಟಕದಲ್ಲಿ ಮುಂದಿನ ತಿಂಗಳು ಗ್ರ್ಯಾಂಡ್ ಆಗಿ ಟ್ರೇಲರ್ ರಿಲೀಸ್ ಮಾಡಿ, ಎಲ್ಲರಿಗೂ ಸಂದರ್ಶನ ಕೊಡುತ್ತೇನೆ ಎಂದು ಎಸ್‌.ಎಸ್‌.ರಾಜಮೌಳಿ ಹೇಳಿದರು.

ಎಸ್‌.ಎಸ್‌.ರಾಜಮೌಳಿ (SS Rajamouli) ನಿರ್ದೇಶನದ ಬಹು ನಿರೀಕ್ಷಿತ ಚಿತ್ರ 'ಆರ್‌ಆರ್‌ಆರ್‌' (RRR) (ರೈಸ್‌–ರೋರ್‌–ರಿವೋಲ್ಟ್‌) ಚಿತ್ರದ ಫಸ್ಟ್‌ಲುಕ್, ಪೋಸ್ಟರ್, ಪ್ರೋಮೋ ಹಾಗೂ ಹಾಡು ಈಗಾಗಲೇ ಬಿಡುಗಡೆಯಾಗಿ ಸಿನಿರಸಿಕರಲ್ಲಿ ಸಾಕಷ್ಟು ಕುತೂಹಲವನ್ನು ಹುಟ್ಟುಹಾಕಿದೆ. ಇದೀಗ ರಾಜಮೌಳಿ ಈ ಚಿತ್ರದ 'ಜನನಿ' (Janani) ಸಾಂಗ್​ ರಿಲೀಸ್​ ಮಾಡುವುದಕ್ಕೆ ಬೆಂಗಳೂರಿಗೆ ಆಗಮಿಸಿದ್ದರು. ಸಾಂಗ್​ ರಿಲೀಸ್​ಗೂ ಮೊದಲು ರಾಜಮೌಳಿ ಕನ್ನಡದಲ್ಲಿ ಮಾತು ಶುರು ಮಾಡಿದರು. ಎಲ್ಲರೂ ಚೆನ್ನಾಗಿದ್ದೀರಾ? ಎರಡು ವಿಷಯದಲ್ಲಿ ಕ್ಷಮಿಸಬೇಕು. ಒಂದು ಕನ್ನಡದಲ್ಲಿ ಅಷ್ಟಾಗಿ ಮಾತನಾಡಕ್ಕೆ ಬರಲ್ಲ, ನೀವೇ ಅಡ್ಜಸ್ಟ್ ಮಾಡಿಕೊಳ್ಳಬೇಕು. ಕರ್ನಾಟಕದಲ್ಲಿ ನಾನೇ ಬಂದು ಮಾತನಾಡುತ್ತಿದ್ದೇನೆ. 

ಕರ್ನಾಟಕದಲ್ಲಿ ಮುಂದಿನ ತಿಂಗಳು ಗ್ರ್ಯಾಂಡ್ ಆಗಿ ಟ್ರೇಲರ್ (Trailer) ರಿಲೀಸ್ ಮಾಡಿ, ಎಲ್ಲರಿಗೂ ಸಂದರ್ಶನ ಕೊಡುತ್ತೇನೆ ಎಂದರು. ಕಂಪ್ಲೀಟ್ ಟೀಮ್ ಜೊತೆಗೆ ಮುಂದಿನ ತಿಂಗಳು ಕರ್ನಾಟಕಕ್ಕೆ ಬರುತ್ತೇವೆ. ಆರ್‌ಆರ್‌ಆರ್‌ ಸಿನಿಮಾದಲ್ಲಿ ಎಲ್ಲಾ ಆ್ಯಕ್ಷನ್‍ಗಳು ಸೂಪರ್ ಆಗಿದೆ. ಎಮೋಷನಲ್ ದೃಶ್ಯಗಳು ತುಂಬಾ ಇದೆ. ಬ್ಯಾಂಗ್ ಗ್ರೌಂಡ್ ಮ್ಯೂಸಿಕ್ ಸಹ ಚೆನ್ನಾಗಿದೆ. ಇವತ್ತು ನಿಮ್ಮ ಜೊತೆ ಅನುಭವ ಶೇರ್ ಮಾಡಿದಕ್ಕೆ ಖುಷಿಯಾಗುತ್ತಿದೆ ಎಂದು ಸಿನಿಮಾ ಕುರಿತಾಗಿ ಕೆಲವು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಬಳಿಕ ರಾಜಮೌಳಿ ಅವರು ಪತ್ನಿ ರಮಾ ರಾಜಮೌಳಿ (Rama Rajamouli) ಜೊತೆಗೆ ಸದಾಶಿವನಗರದಲ್ಲಿರುವ ಅಪ್ಪು (Puneeth Rajkumar) ಮನೆಗೆ ತೆರಳಿದ್ದಾರೆ. ಪುನೀತ್ ಕುಟುಂಬಸ್ಥರಿಗೆ ರಾಜಮೌಳಿ ಸಾಂತ್ವನ ಹೇಳಿ ಧೈರ್ಯ ತುಂಬಿದ್ದಾರೆ. 

'ಆರ್‌ಆರ್‌ಆರ್‌' ಚಿತ್ರದ ಹೊಸ ಹಾಡು ರಿಲೀಸ್: ರಾಮ್​ ಚರಣ್​, ಜ್ಯೂ.ಎನ್​ಟಿಆರ್​ ಜಬರ್ದಸ್ತ್ ಡ್ಯಾನ್ಸ್

ಆರ್‌ಆರ್‌ಆರ್‌' ಚಿತ್ರದ  'ಜನನಿ' ಹಾಡು  5 ಭಾಷೆಗಳಲ್ಲಿ ಬಿಡುಗಡೆಯಾಗಿದೆ. ಕನ್ನಡ ವರ್ಷನ್‌ನ ಹಾಡು ಕೂಡ ಯೂಟ್ಯೂಬ್‌ನಲ್ಲಿ  (YouTube) ಸಖತ್ ಸೌಂಡು ಮಾಡುತ್ತಿದೆ. 'ಜನನಿ' ಹಾಡು ಹೆಚ್ಚು ಭಾವನಾತ್ಮಕ ಮೂಡಿಬಂದಿದ್ದು, ರಾಮ್​ ಚರಣ್, ಆಲಿಯಾ ಭಟ್​, ಅಜಯ್​ ದೇವಗನ್​, ಜ್ಯೂ. ಎನ್​ಟಿಆರ್ ಮುಂತಾದ ಕಲಾವಿದರು ಎಮೋಷನಲ್​ ಸೀನ್‌ಗಳಲ್ಲಿ ಅಭಿನಯಿಸಿದ್ದಾರೆ. ಹಾಡಿಗೆ ಸಾಹಿತ್ಯ, ಸಂಗೀತ ಹಾಗೂ ತಮ್ಮ ತಂಡದ ಜೊತೆಗೆ ಗಾಯನವನ್ನೂ ಎಂಎಂ ಕೀರವಾಣಿ (M.M. Keeravaani) ಅವರೇ ನಿಭಾಯಿಸಿದ್ದಾರೆ. ಈಗಾಗಲೇ ಬಿಡುಗಡೆ ಆಗಿರುವ 'ದೋಸ್ತಿ' ಹಾಗೂ 'ಹಳ್ಳಿ ನಾಟು' ಹಾಡುಗಳನ್ನು ನೋಡಿ ಸಿನಿಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ಹಾಗೂ ಈ ಚಿತ್ರದ ಕರ್ನಾಟಕದ ವಿತರಣೆ ಹಕ್ಕನ್ನು ಕೆವಿಎನ್‌ (KVN) ಪ್ರೊಡಕ್ಷನ್‌ ಸಂಸ್ಥೆ ಪಡೆದುಕೊಂಡಿದೆ.

ಇತ್ತೀಚೆಗಷ್ಟೇ ಚಿತ್ರದ ಗ್ಲಿಂಪ್ಸ್ (Glimpse) ವಿಡಿಯೋ ಬಿಡುಗಡೆಯಾಗಿ ಯೂಟ್ಯೂಬ್‌ನಲ್ಲಿ ಭರ್ಜರಿ ವೀಕ್ಷಣೆ ಪಡೆದಿತ್ತು.ಗ್ಲಿಂಪ್ಸ್ ವಿಡಿಯೋದಲ್ಲಿ ಅಪ್ಪಟ ದೇಶಿ ಸಿನಿಮಾದಂತಿರುವ ಪಾತ್ರಗಳು ಸಿನಿರಸಿಕರ ಮನಸೆಳೆದಿತ್ತು. ಡಿವಿವಿ ಎಂಟರ್‌ಟೈನ್ಮೆಂಟ್ (DVV Entertainment) ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ವಿ.ವಿಜಯೇಂದ್ರ ಪ್ರಸಾದ್ ಕಥೆ, ಮತ್ತು ಶ್ರೀಕರ್ ಪ್ರಸಾದ್ ಸಂಕಲನವಿದೆ. ಕನ್ನಡ, ತೆಲುಗು, ಮಲಯಾಳಂ ಮತ್ತು ತಮಿಳು ಹಾಗೂ ಹಿಂದಿಯಲ್ಲಿ ರಿಲೀಸ್ ಆಗಲಿರುವ 'ಆರ್‌ಆರ್‌ಆರ್‌' ಚಿತ್ರವು ಇಂಗ್ಲಿಷ್, ಪೋರ್ಚುಗೀಸ್, ಕೊರಿಯನ್, ಟರ್ಕಿಷ್, ಸ್ಪ್ಯಾನಿಶ್‌ ಭಾಷೆಗಳಿಗೆ ಡಬ್ ಆಗಲಿದೆ. ಬಿಗ್‌ ಬಜೆಟ್‌ನಲ್ಲಿ ತಯಾರಾದ ಈ ಚಿತ್ರಕ್ಕೆ ಎಂ.ಎಂ.ಕೀರವಾಣಿ ಸಂಗೀತ ಸಂಯೋಜಿಸಿದ್ದಾರೆ. 

ಜ್ಯೂ.NTR ಹಣೆಯಿಂದ ರಕ್ತ, ರಾಮ್ ಚರಣ್ ಪೊಲೀಸ್: RRR ಚಿತ್ರದ ಸಣ್ಣ ತುಣುಕು

'ಆರ್‌ಆರ್‌ಆರ್‌' ಚಿತ್ರವು 1920ನೇ ಇಸವಿಯ ಆರಂಭದಲ್ಲಿ ಇಬ್ಬರು ಸ್ವಾತಂತ್ರ್ಯ ಹೋರಾಟಗಾರರಾದ ಅಲ್ಲೂರಿ ಸೀತಾರಾಮರಾಜು ಮತ್ತು ಕೊಮರಂ ಭೀಮ್ ಅವರ ಜೀವನವನ್ನು ಆಧರಿಸಿದ ಕಾಲ್ಪನಿಕ ಕಥೆ. ಈ ಚಿತ್ರದಲ್ಲಿ ಚರಣ್ ರಾಮರಾಜು ಪಾತ್ರದಲ್ಲಿ, ಜೂನಿಯರ್ ಎನ್‌ಟಿಆರ್ ಭೀಮ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬಾಲಿವುಡ್ ನಟರಾದ ಅಜಯ್ ದೇವ್‌ಗನ್ (Ajay Devgn) ಮತ್ತು ಆಲಿಯಾ ಭಟ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಒಲಿವಿಯಾ ಮೋರಿಸ್ (Olivia Morris), ಸಮುದ್ರಕನಿ (Samuthirakani), ಅಲಿಸನ್ ಡೂಡಿ (Alison Doody) ಹಾಗೂ ರೇ ಸ್ಟೀವನ್ಸನ್ (Ray Stevenson) ನಟಿಸಿದ್ದಾರೆ. ಜನವರಿ 7, 2022ರಂದು ವಿಶ್ವದಾದ್ಯಂತ 'ಆರ್‌ಆರ್‌ಆರ್‌' ಬಿಡುಗಡೆಯಾಗಲಿದೆ. 
 

click me!