83 Teaser: ಭಾರತ ವಿಶ್ವಕಪ್ ಗೆದ್ದ ರೋಚಕ ಕ್ಷಣಗಳು ತೆರೆಯ ಮೇಲೆ, ಕಪಿಲ್ ದೇವ್ ಪಾತ್ರದಲ್ಲಿ ರಣವೀರ್ ರಾಕಿಂಗ್

By Suvarna News  |  First Published Nov 26, 2021, 2:52 PM IST
  • ಭಾರತ ವಿಶ್ವಕಪ್ ಗೆದ್ದ ರೋಚಕ ಕ್ಷಣಗಳು ತೆರೆಯ ಮೇಲೆ
  • ಕಪಿಲ್ ದೇವ್ ಕುರಿತ ಸಿನಿಮಾದಲ್ಲಿ ರಣವೀರ್ ಸಿಂಗ್ ರಾಕಿಂಗ್
  • ಮ್ಯಾಚ್ ಗೆದ್ದಿದ್ದ ಅದ್ಭುತ ಕ್ಯಾಚ್ ತೋರಿಸೋ ಟೀಸರ್ ವೈರಲ್
  • 83 ಟೀಸರ್‌ಗೆ ಭರ್ಜರಿ ರೆಸ್ಪಾನ್ಸ್

ಮುಂಬೈ(ಫೆ.05): ಭಾರತಕ್ಕೆ ಚೊಚ್ಚಲ ವಿಶ್ವಕಪ್ ಜಯಿಸಿಕೊಟ್ಟ, ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಕಪಿಲ್ ದೇವ್(Kapil Dev) ಅವರ ಜೀವನ ಚರಿತ್ರೆ ಆಧಾರಿತ ಚಿತ್ರ ‘83’,2019ರ ಆಗಸ್ಟ್ 30ರಂದು ತೆರೆ ಕಾಣಲಿದೆ ಎಂದು ಚಿತ್ರ ನಿರ್ದೇಶಕ ಕಬೀರ್ ಖಾನ್(Kabir Khan) ತಿಳಿಸಿದ್ದರು. ಕಪಿಲ್ ದೇವ್ ಅವರ ಪಾತ್ರವನ್ನು ಬಾಲಿವುಡ್‌ನ(Bollywood) ಖ್ಯಾತ ನಟ ರಣವೀರ್ ಸಿಂಗ್ ನಿರ್ವಹಿಸುತ್ತಿದ್ದಾರೆ. 1983ರಲ್ಲಿ ವಿಶ್ವಕಪ್ ಜಯಿಸಿದ ಭಾರತ ತಂಡದಲ್ಲಿದ್ದ ಆಟಗಾರರು ಕಪಿಲ್ ಅವರ ಹಾವಭಾವ ಕುರಿತು ರಣವೀರ್‌ಗೆ ಮಾಹಿತಿ ನೀಡುತ್ತಿರುವುದು ಮತ್ತೊಂದು ವಿಶೇಷ. ರಣ್‌ವೀರ್ 83ರ ವಿಶ್ವಕಪ್ ವಿಜೇತ ತಂಡದ ನಾಯಕ ಕಪಿಲ್ ದೇವ್ ಜತೆ ಈ ಹಿಂದೆ ತೆಗೆಸಿಕೊಂಡಿದ್ದ ಫೋಟೋ ಸಾಮಾಜಿಕ ತಾಣದಲ್ಲಿ ಮತ್ತೊಮ್ಮೆ ವೈರಲ್ ಆಗಿದೆ.

ಕಬೀರ್ ಖಾನ್ ಅವರ ಬಹುನಿರೀಕ್ಷಿತ ಸಿನಿಮಾ '83'ರ ಟೀಸರ್ ಹೊರಬಿದ್ದಿದೆ. ಶುಕ್ರವಾರ ಬೆಳಗ್ಗೆ ಸಿನಿಮಾ ಟೀಸರ್ ರಿಲೀಸ್ ಆಗಿದ್ದು ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸಿನಿಮಾ ಟ್ರೈಲರ್ ನವೆಂಬರ್ 30ರಂದು ರಿಲೀಸ್ ಆಗಲಿದೆ. ಟೀಸರ್ ಭಾರತೀಯ ಕ್ರಿಕೆಟ್ ಇತಿಹಾಸದ ಅದ್ಭುತ ದಿನದ ಗ್ರೇಸ್ಕೇಲ್ ದೃಶ್ಯದೊಂದಿಗೆ ಪ್ರಾರಂಭವಾಗುತ್ತದೆ. ಜೂನ್.25, 1983, ಸ್ಥಳ ಲಾರ್ಡ್ಸ್ ಕ್ರಿಕೆಟ್ ಸ್ಟೇಡಿಯಂ ಲಂಡನ್. ಕಪಿಲ್ ದೇವ್ ಅವರ ಪಾತ್ರ ಮಾಡಿರೋ ರಣವೀರ್ ಸಿಂಗ್ ಬಾಲ್ ಕ್ಯಾಚ್ ಹಿಡಿಯಲು ಹಾರುವ ದೃಶ್ಯದೊಂದಿಗೆ ಟೀಸರ್ ಕೊನೆಯಾಗುತ್ತದೆ.

Tap to resize

Latest Videos

ಮೊದಲ ವಿಶ್ವಕಪ್ ಜಯಿಸಿಕೊಟ್ಟ ನಾಯಕನ ಜೀವನ ಚರಿತ್ರೆ ಮುಂದಿನ ವರ್ಷ ತೆರೆಗೆ

ವಿವ್ ರಿಚರ್ಡ್ ಅವರು ಬ್ಯಾಟ್ ಮಾಡಿದ ಬಾಲ್‌ನ್ನು ಕಪಿಲ್ ದೇವ್ ಕ್ಯಾಚ್ ಹಿಡಿಯೋ ಮೂಲಕ, ವೆಸ್ಟ್ ಇಂಡೀಸನ್ನು ಸೋಲಿಸಿ ಭಾರತ 1983ರ ಕ್ರಿಕೆಟ್ ವರ್ಲ್ಡ್ ಕಪ್ ಗೆಲ್ಲುತ್ತದೆ. 1983 ರ ಕ್ರಿಕೆಟ್ ವಿಶ್ವಕಪ್‌ನಲ್ಲಿ ಭಾರತದ ಅಪ್ರತಿಮ ಗೆಲುವಿನ ಕಥೆಯನ್ನು '83 ತೋರಿಸುತ್ತದೆ. ಚಿತ್ರದಲ್ಲಿ ರಣವೀರ್ ಸಿಂಗ್ ಕಪಿಲ್ ದೇವ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಟೀಸರ್ ಅನ್ನು ಹಂಚಿಕೊಂಡ ರಣವೀರ್ ಸಿಂಗ್, ಭಾರತದ ಶ್ರೇಷ್ಠ ವಿಜಯದ ಹಿಂದಿನ ಕಥೆ. ಶ್ರೇಷ್ಠ ಕಥೆ.

ಕನ್ನಡದಲ್ಲೂ ಸಿನಿಮಾ ಬಿಡುಗಡೆ:

'83 ಡಿಸೆಂಬರ್ 24, 2021 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಹಿಂದಿ, ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂ ಸೇರಿದಂತೆ ಹಲವು ಭಾಷೆಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ. ಕಪಿಲ್ ದೇವ್ ಪತ್ನಿ ರೋಮಿ ದೇವ್ ಆಗಿ ತೆರೆಮೇಲೆ ಕಾಣಿಸಿಕೊಳ್ಳಲು ದೀಪಿಕಾ ಪಡುಕೋಣೆ ಆಯ್ಕೆಯಾಗಿದ್ದಾರೆ ಎಂದು ಬರೆದಿದ್ದಾರೆ.

ಸಿನಿಮಾದ ಚಿತ್ರೀಕರಣವು 2019 ರಲ್ಲಿ ಪ್ರಾರಂಭವಾಯಿತು. ಚಿತ್ರದ ಆರಂಭಿಕ ಬಿಡುಗಡೆ ದಿನಾಂಕವು ಏಪ್ರಿಲ್ 10, 2020 ಎಂದು ನಿಗದಿಯಾಗಿತ್ತು. ಆದರೂ ಕೊರೋನಾದಿಂದಾಗಿ ರಿಲೀಸನ್ನು ಕ್ರಿಸ್ಮಸ್‌ಗೆ ಮುಂದೂಡಲಾಯಿತು. ಕೊರೋನಾ ಮತ್ತು ಲಾಕ್‌ಡೌನ್‌ಗಳಿಂದಾಗಿ ಬಿಡುಗಡೆಯ ದಿನಾಂಕಗಳಲ್ಲಿ ಹಲವಾರು ಬಾರಿ ಬದಲಾವಣೆಗಳಾದ ನಂತರ, ಸಿನಿಮಾ ಕೊನೆಗೂ ಡಿಸೆಂಬರ್ 21, 2021 ರಂದು ತೆರೆಗೆ ಬರಲಿದೆ.

83 ರಲ್ಲಿ ಪಂಕಜ್ ತ್ರಿಪಾಠಿ ಮ್ಯಾನೇಜರ್ PR ಮಾನ್ ಸಿಂಗ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬಲ್ವಿಂದರ್ ಸಿಂಗ್ ಸಂಧು ಪಾತ್ರದಲ್ಲಿ ಅಮ್ಮಿ ವಿರ್ಕ್, ಸೈಯದ್ ಕಿರ್ಮಾನಿಯಾಗಿ ಸಾಹಿಲ್ ಖಟ್ಟರ್ ಮತ್ತು ಸುನಿಲ್ ಗವಾಸ್ಕರ್ ಪಾತ್ರದಲ್ಲಿ ತಾಹಿರ್ ಭಾಸಿನ್ ನಟಿಸಿದ್ದಾರೆ.

click me!