Arrangements of Love: ಡಿವೋರ್ಸ್ ಆದ್ಮೇಲೆ ದ್ವಿಲಿಂಗಿ ಆಗ್ತಿದ್ದಾರೆ ಸಮಂತಾ ರುತ್ ಪ್ರಭು!

By Suvarna News  |  First Published Nov 26, 2021, 12:44 PM IST

ನಟಿ ಸಮಂತಾಗೆ(Samantha) ಅವಕಾಶಗಳ ಬಾಗಿಲು ತೆರೆಯುತ್ತಿದೆ. ವಿಚ್ಚೇದನೆ ನಂತರ ಕೆರಿಯರ್ ಮೇಲೆ ಗಮನ ಕೇಂದ್ರಿಕರಿಸಿರೋ ನಟಿ ಈಗ ಮೊದಲ ಫಾರಿನ್ ಸಿನಿಮಾ(Foreign Movie) ಮಾಡುತ್ತಿದ್ದಾರೆ.


ಸೌತ್ ನಟಿ ಸಮಂತಾ ರುಥ್ ಪ್ರಭು(Samantha Ruth Prabhu) ಕೆರಿಯರ್ ಮೇಲೆ ತಮ್ಮ ಗಮನ ಕೇಂದ್ರೀಕರಿಸಿದ್ದಾರೆ. ಹಾಗೆಯೇ ನಟಿಗೆ ವಿಚ್ಚೇದನೆ ನಂತರ ಹೆಚ್ಚಿನ ಸಿನಿಮಾ ಅಫರ್‌ಗಳೂ ಬರುತ್ತಿವೆ. ತಮಿಳು, ತೆಲುಗು ಸಿನಿಮಾಗಳಲ್ಲಿ ಫೇಮಸ್ ಆದ ನಟಿ ಫ್ಯಾಮಿಲಿ ಮ್ಯಾನ್ 2(Family man 2) ಮೂಲಕ ನಾರ್ತ್‌ ವೀಕ್ಷಕರನ್ನೂ ತಲುಪಿದ್ದಾರೆ. ಹಿಂದಿ ಸಿರೀಸ್‌ನಲ್ಲಿ ಮೊದಲ ಎಂಟ್ರಿಯಲ್ಲೇ ಕಮಾಲ್ ಮಾಡಿದ ನಟಿಗೆ ಈಗ ಭಾರೀ ಅವಕಾಶಗಳು ಸಿಗುತ್ತಿವೆ. ನಟಿ ಸಮಂತಾಗೆ ಈಗ ಫಾರಿನ್ ಸಿನಿಮಾಗಳಲ್ಲಿಯೂ ಅವಕಾಶಗಳು ಲಭ್ಯವಾಗುತ್ತಿದೆ.

ನಾಗ ಚೈತನ್ಯ ಅವರಿಂದ ಬೇರ್ಪಟ್ಟ ನಂತರ ಸಮಂತಾ ಅವರ ವೃತ್ತಿಜೀವನವು ಗಗನಕ್ಕೇರುತ್ತಿದೆ. ಎರಡು ಬ್ಯಾಕ್-ಟು-ಬ್ಯಾಕ್ ದ್ವಿಭಾಷಾ ಚಿತ್ರಗಳಿಗೆ ಟೈಟಲ್ ನೀಡುವುದರಿಂದ ಹಿಡಿದು ತನ್ನ ಮೊದಲ ವಿದೇಶಿ ಚಿತ್ರಕ್ಕೆ ಸಹಿ ಹಾಕುವವರೆಗೆ, ನಟಿ ಎಲ್ಲದರಲ್ಲೂ ಸಕ್ಸಸ್‌ಫುಲ್ ಆಗಿ ಸಾಗುತ್ತಿದ್ದಾರೆ. ನಟಿಯ ಮೊದಲ ವಿದೇಶಿ ಸಿನಿಮಾ, ಅರೇಂಜ್‌ಮೆಂಟ್ಸ್ ಆಫ್ ಲವ್(Arrangements of Love) ಎಂಬ ಶೀರ್ಷಿಕೆಯು ಅದೇ ಹೆಸರಿನ ಕಾದಂಬರಿಯ ರೂಪಾಂತರವಾಗಿದೆ. ಇದನ್ನು ಭಾರತೀಯ ಲೇಖಕ ಟೈಮೆರಿ ಎನ್ ಮುರಾರಿ ಬರೆದಿದ್ದಾರೆ. ನಟಿ ಪತ್ತೇದಾರಿ ಏಜೆನ್ಸಿಯನ್ನು ನಡೆಸುತ್ತಿರುವ ಬಲವಾದ ಮನಸ್ಸಿನ ಉಭಯಲಿಂಗಿ ತಮಿಳು ಮಹಿಳೆಯಾಗಿ ಇದರಲ್ಲಿ ನಟಿಸಲಿದ್ದಾರೆ.

Tap to resize

Latest Videos

ಅರೇಂಜ್‌ಮೆಂಟ್ಸ್ ಆಫ್‌ ಲವ್‌ನಲ್ಲಿ ದ್ವಿಲಿಂಗಿ ಮಹಿಳೆಯಾಗಿ ಸಮಂತಾ

2021 ರಲ್ಲಿ ತನ್ನ ಪತಿ ನಾಗ ಚೈತನ್ಯದಿಂದ(Naga chaitanya) ಬೇರ್ಪಟ್ಟ ನಂತರ ಸಮಂತಾ ವೈಯಕ್ತಿಕ ಹಿನ್ನಡೆಯನ್ನು ಹೊಂದಿದ್ದರು. ಆದರೆ ವೃತ್ತಿಪರವಾಗಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಅವರು ದಕ್ಷಿಣದಲ್ಲಿ ಕೆಲವು ದೊಡ್ಡ ಚಿತ್ರಗಳಿಗೆ ಸಹಿ ಹಾಕುತ್ತಿದ್ದಾರೆ. ಈಗ, ನಟಿ ಮೊದಲ ವಿದೇಶಿ ಚಿತ್ರ, ಅರೇಂಜ್ಮೆಂಟ್ಸ್ ಆಫ್ ಲವ್‌ಗೆ ಸಹಿ ಹಾಕಿದ್ದಾರೆ.

A whole new world ♥️
Absolutely thrilled to be a part of Arrangements Of Love .
Thank you sir for picking me to be
Cant wait to begin this exciting journey .. Thankyou always 💕 pic.twitter.com/Nklig8jDOJ

— Samantha (@Samanthaprabhu2)

ಟ್ವಿಟರ್‌ನಲ್ಲಿ ಸಮಂತಾ ಈ ಸುದ್ದಿಯನ್ನು ಅಭಿಮಾನಿಗಳೊಂದಿಗೆ ಶೇರ್ ಮಾಡಿದ್ದಾರೆ. ಒಂದು ಸಂಪೂರ್ಣ ಹೊಸ ಜಗತ್ತು.  ಅರೇಂಜ್‌ಮೆಂಟ್ಸ್‌ ಆಫ್ ಲವ್ ಭಾಗವಾಗಲು ರೋಮಾಂಚನಗೊಂಡಿದ್ದೇನೆ. ನನ್ನನ್ನು #ಅನು ಎಂದು ಆಯ್ಕೆ ಮಾಡಿದ್ದಕ್ಕಾಗಿ ಧನ್ಯವಾದಗಳು ಸರ್ . ಈ ರೋಮಾಂಚಕಾರಿ ಪ್ರಯಾಣವನ್ನು ಪ್ರಾರಂಭಿಸಲು ಇನ್ನಷ್ಟು ಕಾಯಲು ಸಾಧ್ಯವಿಲ್ಲ.. ಧನ್ಯವಾದಗಳು  ಎಂದು ಬರೆದಿದ್ದಾರೆ.

Samantha Style: ಡಿವೋರ್ಸ್ ನಂತ್ರ ಸಖತ್ ಬೋಲ್ಡ್ ಆದ ನಟಿ, ರೆಡ್‌ ಡ್ರೆಸ್‌ ಹಾಟ್ ಲುಕ್

ಸಮಂತಾ ಅರೇಂಜ್‌ಮೆಂಟ್ಸ್ ಆಫ್ ಲವ್ ಚಿತ್ರತಂಡವನ್ನು ಸೇರಿಕೊಂಡಿದ್ದಾರೆ. ವ್ಯಕ್ತಿಯೊಬ್ಬ ದೂರವಾದ ತಂದೆಯನ್ನು ಹುಡುಕುತ್ತಾನೆ. ಪತ್ತೇದಾರಿ ಏಜೆನ್ಸಿಯನ್ನು ನಡೆಸುತ್ತಿರುವ ಸಮಂತಾ ಆತನಿಗೆ ತಂದೆಯೊಂದಿಗೆ ಮತ್ತೆ ಸೇರಲು ಸಹಾಯ ಮಾಡುತ್ತಾಳೆ.

ವರದಿಯ ಪ್ರಕಾರ ಸಮಂತಾ ಪ್ರಗತಿಪರ ದ್ವಿಲಿಂಗಿ ತಮಿಳು ಮಹಿಳೆಯಾಗಿ ನಟಿಸಲಿದ್ದಾರೆ. ಅವರು ಸಂಪ್ರದಾಯವಾದಿ ಪೋಷಕರನ್ನು ಹೊಂದಿರುವ 27 ವರ್ಷದ ಯುವತಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ನಾನು ನನ್ನ ಪ್ರಯಾಣವನ್ನು 'ಅರೇಂಜ್ಮೆಂಟ್ಸ್ ಆಫ್ ಲವ್' ನೊಂದಿಗೆ ಪ್ರಾರಂಭಿಸಿದಾಗ ನನಗೆ ಸಂಪೂರ್ಣ ಹೊಸ ಪ್ರಪಂಚವು ತೆರೆದುಕೊಂಡಿದೆ. ಇದು ಪ್ರೀತಿಯ ಮತ್ತು ವೈಯಕ್ತಿಕ ಕಥೆಯನ್ನು ಹೊಂದಿದೆ ಎಂದಿದ್ದಾರೆ.

ನಾನು ಫಿಲಿಪ್ ಜಾನ್ ಅವರೊಂದಿಗೆ ಕೆಲಸ ಮಾಡಲು ಉತ್ಸುಕನಾಗಿದ್ದೇನೆ, ಅವರ ಪ್ರಾಜೆಕ್ಟ್‌ಗಳನ್ನು ನಾನು ಹಲವು ವರ್ಷಗಳಿಂದ ಹತ್ತಿರದಿಂದ ನೋಡಿದ್ದೇನೆ, 'ಡೌನ್ಟನ್ ಅಬ್ಬೆ' ಯ ದೊಡ್ಡ ಅಭಿಮಾನಿಯಾಗಿದ್ದೇನೆ ಎಂದಿದ್ದಾರೆ.

click me!