ಶತದಿನೋತ್ಸವದ ಸಂಭ್ರಮದಲ್ಲಿ 'ಕೆಜಿಎಫ್-2'; ವಿಡಿಯೋ ಹಂಚಿಕೊಂಡು ಧನ್ಯವಾದ ತಿಳಿಸಿದ ಹೊಂಬಾಳೆ ಫಿಲ್ಮ್ಸ್

Published : Jul 22, 2022, 04:01 PM IST
 ಶತದಿನೋತ್ಸವದ ಸಂಭ್ರಮದಲ್ಲಿ 'ಕೆಜಿಎಫ್-2'; ವಿಡಿಯೋ ಹಂಚಿಕೊಂಡು ಧನ್ಯವಾದ ತಿಳಿಸಿದ ಹೊಂಬಾಳೆ ಫಿಲ್ಮ್ಸ್

ಸಾರಾಂಶ

ದಾಖಲೆ ದಾಖಲೆ ಬರೆದಿರುವ ಕೆಜಿಎಫ್-2 ಸಿನಿಮಾ ರಿಲೀಸ್ ಆಗಿ 100 ದಿನಗಳಾಗಿದೆ. ಶತದಿನೋತ್ಸವದ ಸಂಭ್ರಮದಲ್ಲಿರುವ ಕೆಜಿಎಫ್-2 ತಂಡ ಸಂತಸವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಕೆಜಿಎಫ್-2 ಸಿನಿಮಾದ ವಿಡಿಯೋ ತುಣುಕನ್ನು ಶೇರ್ ಮಾಡುವ ಮೂಲಕ ಹೊಂಬಾಳೆ ಫಿಲ್ಮ್ಸ್ ಅಭಿಮಾನಿಗಳಿಗೆ ಅವರಿಗೆ ಧನ್ಯವಾದ ತಿಳಿಸಿದೆ.

ಭಾರತ ಮಾತ್ರವಲ್ಲದೇ ಇಡೀ ವಿಶ್ವವೇ ಸ್ಯಾಂಡಲ್ ವುಡ್ ಕಡೆ ತಿರುಗಿ ನೋಡುವಂತೆ ಮಾಡಿದ ಸಿನಿಮಾ ಕೆಜಿಎಫ್-2. ರಾಕಿಂಗ್ ಸ್ಟಾರ್ ಯಶ್, ಪ್ರಶಾಂತ್ ನೀಲ್ ಮತ್ತು ಹೊಂಬಾಳೆ ಫಿಲ್ಮ್ಸ್ ಕಾಂಬಿನೇಷನ್‌ನಲ್ಲಿ ಬಂದ ಕೆಜಿಎಫ್-2 ಚಿತ್ರಕ್ಕೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಕನ್ನಡ ಚಿತ್ರ ಪ್ರೇಕ್ಷಕರು ಮಾತ್ರವಲ್ಲದೇ ಎಲ್ಲಾ ಭಾಷೆಯ ಪ್ರೇಕ್ಷಕರು ಕೆಜಿಎಫ್-2 ನೋಡಿ ಮೆಚ್ಚಿಕೊಂಡಿದ್ದಾರೆ. ಬಾಕ್ಸ್ ಆಫೀಸ್ ನಲ್ಲೂ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿದೆ. ಬಾಲಿವುಡ್‌ನಲ್ಲೇ ಸಿನಿಮಾ ಬರೋಬ್ಬರಿ 434 ಕೋಟಿ ಬಾಚಿಕೊಂಡಿದೆ. ದಾಖಲೆ ದಾಖಲೆ ಬರೆದಿರುವ ಕೆಜಿಎಫ್-2 ಸಿನಿಮಾ ರಿಲೀಸ್ ಆಗಿ 100 ದಿನಗಳಾಗಿದೆ. ಶತದಿನೋತ್ಸವದ ಸಂಭ್ರಮದಲ್ಲಿರುವ ಕೆಜಿಎಫ್-2 ತಂಡ ಸಂತಸವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಕೆಜಿಎಫ್-2 ಸಿನಿಮಾದ ವಿಡಿಯೋ ತುಣುಕನ್ನು ಶೇರ್ ಮಾಡುವ ಮೂಲಕ ಹೊಂಬಾಳೆ ಫಿಲ್ಮ್ಸ್ ಅಭಿಮಾನಿಗಳಿಗೆ ಅವರಿಗೆ ಧನ್ಯವಾದ ತಿಳಿಸಿದೆ.

ಏಪ್ರಿಲ್ 14ರಂದು ಅದ್ದೂರಿಯಾಗಿ ತೆರೆಗೆ ಬಂದ ಕೆಜಿಎಫ್-2 ಸಿನಿಮಾ ಕನ್ನಡ ಸೇರಿದಂತೆ ತಮಿಳು, ತೆಲುಗು, ಮಲಯಾಳಂ, ಹಿಂದಿಯಲ್ಲಿ ರಿಲೀಸ್ ಆಗಿತ್ತು. ಎಲ್ಲಾ ಭಾಷೆಯಲ್ಲೂ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಾಕಿಂಗ್ ಯಶ್ ಖ್ಯಾತಿಯನ್ನು ವಿಶ್ವಮಟ್ಟಕ್ಕೆ ಕೊಂಡೊಯ್ದಿದಿದೆ. ಈ ಸಿನಿಮಾ ಬಳಿಕ ಯಶ್ ಅಭಿಮಾನಿಗಳ ಬಳಗ ಮತ್ತಷ್ಟು ದೊಡ್ಡದಾಗಿದೆ. ಸೌತ್, ಬಾಲಿವುಡ್ ಹಾಗೂ ವಿದೇಶದಲ್ಲೂ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಭಾರತದಲ್ಲಿ ಅತೀ ಹೆಚ್ಚು ಕಲೆಕ್ಷನ್ ಮಾಡಿರುವ ಸಿನಿಮಾಗಳ ಲಿಸ್ಟ್ ನಲ್ಲಿರುವ ಕೆಜಿಎಫ್-2 ಕೋಟಿ ಕೋಟಿ ಬಾಚಿಕೊಂಡಿದೆ. 

ಕುತೂಹಲ ಹೆಚ್ಚಿಸಿದ ಯಶ್ ಮುಂದಿನ ಸಿನಿಮಾ; ಟ್ವಿಟ್ಟರ್‌ನಲ್ಲಿ Yash19 ಟ್ರೆಂಟ್

ವಿಶ್ವ ಮಾರುಕಟ್ಟೆಯಲ್ಲಿ ಕೆಜಿಎಫ್ -2 ಬರೋಬ್ಬರಿ 1250 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಬಾಲಿವುಡ್ ನಲ್ಲೂ ಅತೀ ಹೆಚ್ಚು ಅಂದರೆ 434 ಕೋಟಿ ರೂ. ಬಾಚಿಕೊಂಡಿದೆ. ಸೌತ್ ಸಿನಿಮಾ, ಅದರಲ್ಲೂ ಕನ್ನಡದ ಸಿನಿಮೊವೊಂದು ಈ ಪರಿ ಕಲೆಕ್ಷನ್ ಮಾಡಿರುವುದು ಹಿಂದಿ ಮಂದಿಯನ್ನು ಬೆಚ್ಚಿಬೀಳಿಸಿದೆ. ಕೆಜಿಎಫ್-2 ಕಲೆಕ್ಷನ್ ಭಾರತೀಯ ಸಿನಿಮಾರಂಗಕ್ಕೆ ಅಚ್ಚರಿ ಮೂಡಿಸಿದೆ. ರಾಕಿಂಗ್ ಸ್ಟಾರ್ ಯಶ್ ನಟನೆ, ಸಂಜಯ್ ದತ್ ಪಾತ್ರ, ರವೀನಾ ಟಂಡನ್, ಶ್ರೀನಿಧಿ ಶೆಟ್ಟಿ ಸೇರಿದಂತೆ ಪ್ರತಿಯೊಬ್ಬರ ಪಾತ್ರವೂ ಅಭಿಮಾನಿಗಳ ಹೃದಯ ಗೆದ್ದಿದೆ. ಸದ್ಯ 100ನೇ ದಿನದ ಸಂಭ್ರಮದಲ್ಲಿರುವ ಕೆಜಿಎಫ್-2 ತಂಡ ಸಾಮಾಜಿಕ ಜಾಲತಾಣದಲ್ಲಿ ಸಂತಸ ಹಂಚಿಕೊಂಡಿದೆ. 

ಬೆಳ್ಳಿತೆರೆಯಲ್ಲಿ ಯಶ್ ಪರ್ವ ಆರಂಭ ಆಗಿ ಕಳೆಯಿತು 14 ವರ್ಷ, ಹೇಗಿತ್ತು ಜರ್ನಿ.?

ಕೆಜಿಎಫ್-2 ಸಿನಿಮಾ ಬಳಿಕ ರಾಕಿಂಗ್ ಸ್ಟಾರ್ ಯಶ್ ಯಾವ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಾರೆ ಎನ್ನುವ ಕುತೂಹಲ ಹೆಚ್ಚಾಗಿದೆ. ಯಶ್ ಮುಂದಿನ ಸಿನಿಮಾ ಯಾವಾಗ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಕೆಜಿಎಫ್-2 ರಿಲೀಸ್ ಆಗಿ ಶತದಿನೋತ್ಸವ ಆಚರಿಸಿದ್ರು ಯಶ್ ಮುಂದಿನ ಸಿನಿಮಾ ಅನೌನ್ಸ್ ಮಾಡಿಲ್ಲ. ಯಶ್ 19 ಸಿನಿಮಾ ಎಂದು ಅಭಿಮಾನಿಗಳು ಟ್ವಿಟ್ಟರ್ ನಲ್ಲಿ ಟ್ರೆಂಡ್ ಮಾಡುತ್ತಿರುತ್ತಾರೆ. ಸದ್ಯ ಯಶ್ ಪತ್ನಿ ರಾಧಿಕಾ ಜೊತೆ ಪ್ರವಾಸ ಎಂಜಾಯ್ ಮಾಡುತ್ತಿದ್ದಾರೆ. ಇಟಲಿಯಲ್ಲಿರುವ ರಾಕಿಂಗ್ ಜೋಡಿಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪ್ಯಾನ್ ಇಂಡಿಯಾ ಸ್ಟಾರ್ ಯಾವಾಗ ಹೊಸ ಸಿನಿಮಾ ಘೋಷಣೆ ಮಾಡುತ್ತಾರೆ, ಯಾರ ಜೊತೆ ಸಿನಿಮಾ ಮಾಡುತ್ತಾರೆ ಎಂದು ಕಾಯುತ್ತಿದ್ದಾರೆ.  

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ಪುಷ್ಪಾ 2' ಕಾಲ್ತುಳಿತ ಪ್ರಕರಣ: 'ಎ11' ಆರೋಪಿ ಸ್ಟಾರ್ ನಟ ಅಲ್ಲು ಅರ್ಜುನ್ ಮುಂದಿನ ನಡೆ ಏನು?
ಶಕೀಲಾರನ್ನು ಪ್ರಶಸ್ತಿ ಸಮಾರಂಭಗಳಿಂದ ದೂರವಿಟ್ಟಿದ್ದೇಕೆ ಚಿತ್ರರಂಗ? ಯಾರೂ ಮಾತನ್ನಾಡುತ್ತಿರಲಿಲ್ಲ ಯಾಕೆ?