
ಬಾಲಿವುಡ್ ಖ್ಯಾತ ನಿರ್ಮಾಪಕ, ನಿರ್ದೇಶಕ ಕರಣ್ ಜೋಹರ್ ಅವರ ಪ್ರಸಿದ್ಧ ಕಾಫಿ ವಿತ್ ಕರಣ್ ಶೋ ಮತ್ತೆ ಪ್ರಸಾರವಾಗುತ್ತಿದೆ. ಈ ಬಾರಿ ಕಾಫಿ ವಿತ್ ಕರಣ್ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಮೊದಲ ಬಾರಿಗೆ ಒಟಿಟಿಯಲ್ಲಿ ಕಾಫಿ ವಿತ್ ಕರಣ್ ಶೋ ಪ್ರಸಾರವಾಗುತ್ತಿದೆ. ಅಂದಹಾಗೆ ಇದು 7ನೇ ಸೀಸನ್ ಆಗಿದೆ. ಈಗಾಗಲೇ ಕಾಫಿ ವಿತ್ ಕರಣ್ ಶೋನಲ್ಲಿ ಸಾರಾ ಅಲಿ ಖಾನ್ ಮತ್ತು ಜಾನ್ವಿ ಕಪೂರ್ ಅವರ ಎಪಿಸೋಡ್ ಪ್ರಸಾರವಾಗಿತ್ತು. ಇದೀಗ ಸಮಂತಾ ಎಪಿಸೋಡ್ ಪ್ರಸಾರವಾಗಿದೆ. ಸಮಂತಾ ಮೊದಲ ಬಾರಿಗೆ ಕರಣ್ ಜೋಹರ್ ಶೋನಲ್ಲಿ ಕಾಣಿಸಿಕೊಂಡಿದ್ದಾರೆ. ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ ಜೊತೆ ಸಮಂತಾ ಕಾಫಿ ವಿತ್ ಕರಣ್ ಕಾರ್ಯಕ್ರಮಕ್ಕೆ ಹಾಜರಾಗಿದ್ದರು.
ಅಕ್ಷಯ್ ಕುಮಾರ್ ಮತ್ತು ಸಮಂತಾ ಭಾಗಿಯಾಗಿದ್ದ ಎಪಿಸೋಡ್‌ನ ಪ್ರೋಮೋನೇ ಸಿಕ್ಕಾಪಟ್ಟೆ ಕುತೂಹಲ ಮೂಡಿಸಿತ್ತು. ಸಮಂತಾ, ಕರಣ್ ಮುಂದೆ ಯಾವೆಲ್ಲ ವಿಚಾರಗಳನ್ನು ಶೇರ್ ಮಾಡಲಿದ್ದಾರೆ, ವಿಚ್ಛೇದನದ ಬಗ್ಗೆ ಏನು ಹೇಳುತ್ತಾರೆ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಕೊನೆಗೂ ಸಮಂತಾ ನಾಗಚೈತನ್ಯ ಜೊತೆಗಿನ ಡಿವೋರ್ಸ್ ಬಗ್ಗೆ ಮಾತನಾಡಿದ್ದಾರೆ. ವಿಚ್ಛೇದನದ ಬಳಿಕ ತುಂಬಾ ಕಷ್ಟ ಆಯ್ತು ಎನ್ನುವ ನಿಜವನ್ನು ಒಪ್ಪಿಕೊಂಡಿದ್ದಾರೆ. ಸಮಂತಾ ಮತ್ತು ನಾಗರಚೈತನ್ಯ ವಿಚ್ಛೇದನದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದರು. ಆದರೆ ಈ ಬಗ್ಗೆ ಸಮಂತಾ ಯುವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಇದೀಗ ಮೊದಲ ಬಾರಿಗೆ ಕರಣ್ ಶೋನಲ್ಲಿ ಮಾತನಾಡಿದ್ದಾರೆ.
ಕರಣ್ ಜೋಹರ್, ಸಮಂತಾ ಪತಿ ನಾಗಚೈತನ್ಯರಿಂದ ದೂರ ಆದ ಬಳಿಕ ಎಂದು ಹೇಳುತ್ತಿದ್ದಂತೆ ಸಮಂತಾ 'ಎಕ್ಸ್ ಪತಿ' ಎಂದು ಸರಿಪಡಿಸಿದರು. ಬಳಿಕ ಕರಣ್ ಎಕ್ಸ್ ಪತಿ ಎಂದು ಸೇರಿಸಿಕೊಂಡರು. ಸಿಕ್ಕಾಪಟ್ಟೆ ಟ್ರೋಲ್‌ಗೆ ಗುರಿಯಾದ ಸಮಂತಾ ಅಂದು ಟ್ರೋಲಿಗರ ವಿರುದ್ಧ ಯಾವುದೇ ದೂರು ನೀಡಿರಲಿಲ್ಲ. ಈ ಬಗ್ಗೆ ಮಾತನಾಡಿ, 'ನಾನು ಅದರ ಬಗ್ಗೆ ದೂರು ನೀಡಲು ಸಾಧ್ಯವಾಗಲಿಲ್ಲ. ಏಕೆಂದರೆ ನಾನು ಪಾರದರ್ಶಕವಾಗಿರಲು ಇಷ್ಟಪಡುತ್ತೇನೆ ಮತ್ತು ನನ್ನ ಜೀವನದ ಬಹಳಷ್ಟು ಸಂಗತಿಗಳನ್ನು ಬಹಿರಂಗಪಡಿಸಲು ಆಯ್ಕೆ ಮಾಡಿಕೊಂಡೆ. ವಿಚ್ಛೇದನ ಬಳಿಕ ನಾನು ಅಪ್ ಸೆಟ್ ಆಗಿಲ್ಲ, ಆಗ ನಾನು ಜನರಿಗೆ ಸರಿಯಾದ ಉತ್ತರವನ್ನು ಕೊಡುವುದು ನನ್ನ ಜವಾಬ್ದಾರಿಯಾಗಿತ್ತು. ಜನರಿಗೆ ಕೇಳುವ ಹಕ್ಕಿದೆ ಆದರೆ ಆ ಸಮಯದಲ್ಲಿ ನಾನು ಅದನ್ನು ಮಾಡಲಿಲ್ಲ' ಎಂದು ಅವರು ಹೇಳಿದರು.
ಕರಣ್ ಜೋಹರ್ ಬಳಿಕ ಸಮಂತಾ ಅವರಲ್ಲಿ, ಈಗ ಹೇಗಿದ್ದೀರಿ? ಎಂದು ಕೇಳಿದರು. ಅದಕ್ಕೆ ಸ್ಯಾಮ್, 'ವಿಚ್ಛೇದನದ ಬಳಿಕ ಕಷ್ಟವಾಗಿತ್ತು. ಆದರೆ ಈಗ ಚೆನ್ನಾಗಿದೆ. ಫೈನ್.. ಹಿಂದೆಂದಿಗಿಂತಲೂ ಈಗ ಮತ್ತಷ್ಟೂ ಬಲಶಾಲಿಯಾಗಿದ್ದೇನೆ' ಎಂದು ಹೇಳಿದರು.
ಸಮಂತಾರನ್ನು ಎತ್ತಿ ಕುಣಿದಾಡಿದ ಅಕ್ಷಯ್ ಕುಮಾರ್: ವಿಡಿಯೋ ವೈರಲ್
ಎಪಿಸೋಡ್ ಪ್ರಾರಂಭದಲ್ಲಿ ಅಕ್ಷಯ್ ಕುಮಾರ್ ಸಮಂತಾ ಅವರನ್ನು ಎತ್ತಿಕೊಂಡು ಎಂಟ್ರಿ ಕೊಟ್ಟಿದ್ದಾರೆ. ಬಳಿಕ ಸಮಂತಾ ಜೊತೆ ಡಾನ್ಸ್ ಮಾಡಿ ಅವರನ್ನು ಎತ್ತಿಕೊಂಡು ಕುಣಿದಿದ್ದಾರೆ. ಕರಣ್ ಜೋಹರ್ ಈ ಬಗ್ಗೆ ಮಾತನಾಡಿ ನಂಬರ್ ಒನ್ ನಟಿ, ನಂಬರ್ ಒನ್ ಸ್ಟಾರ್ ತೋಳಲ್ಲಿ ಎಂದು ಹೇಳಿದರು. ಸಮಂತಾ, ಕರಣ್ ಶೋಗೆ ರೆಡ್ ಮತ್ತು ಪಿಂಕ್ ಬಣ್ಣದ ಡ್ರೆಸ್ ನಲ್ಲಿ ಕಂಗೊಳಿಸಿದ್ದರು.
ಕಾಫಿ ವಿತ್ ಕರಣ್ 7 ಶೋ ಜುಲ್ 7ರಂದಿ ಪಾರಂಭವಾಗಿದೆ. ಡೆಸ್ನಿ ಪ್ಲಸ್ ಹಾಟ್ ಸ್ಟಾರ್ ನಲ್ಲಿ ಪ್ರಸಾರವಾಗುತ್ತಿದೆ. ಈ ಶೋನಲ್ಲಿ ಈಗಾಗಲೇ ಅಲಿಯಾ ಭಟ್ ಮತ್ತು ರಣ್ವೀರ್ ಸಿಂಗ್ ಮತ್ತು ಸಾರಾ ಅಲಿ ಖಾನ್ ಮತ್ತು ಜಾನ್ವಿ ಕಪೂರ್ ಎಪಿಸೋಡ್ ಪ್ರಸಾರವಾಗಿದೆ. ಸದ್ಯ ಸ್ಯಾಮ್ ಮತ್ತು ಅಕ್ಷಯ್ ಕುಮಾರ್ ಎಪಿಸೋಡ್ ಕೂಡ ಪ್ರಸಾರವಾಗಿದೆ. ಇನ್ನು ಕಿಯಾರಾ ಅಡ್ವಾನಿ ಮತ್ತು ಶ್ರದ್ಧಾ ಕಪೂರ್ ಮತ್ತು ವಿಜಯ್ ದೇವರಕೊಂಡ, ಅನನ್ಯಾ ಪಾಂಡೆ ಮತ್ತು ಟೈಗರ್ ಶ್ರಾಫ್ ಮತ್ತು ಕೃತಿ ಸನೂನ್ ಎಪಿಸೋಡ್ ಪ್ರಸಾರ ಬಾಕಿ ಇದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.