ರಿಷಬ್ ನಟನೆಯ 'ಛತ್ರಪತಿ ಶಿವಾಜಿ' ಚಿತ್ರ ಬರಲ್ವಾ..? ರಿತೇಶ್ ದೇಶಮುಖ್ 'ರಾಜಾ ಶಿವಾಜಿ' ಆಗಿ ರಿಲೀಸ್​ಗೆ ರೆಡಿ!

ರಿಷಬ್ ನಟನೆಯ 'ಛತ್ರಪತಿ ಶಿವಾಜಿ' ಚಿತ್ರ ಬರಲ್ವಾ..? ರಿತೇಶ್ ದೇಶಮುಖ್ 'ರಾಜಾ ಶಿವಾಜಿ' ಆಗಿ ರಿಲೀಸ್​ಗೆ ರೆಡಿ!

Published : Apr 03, 2026, 04:29 PM ISTUpdated : Apr 03, 2026, 04:32 PM IST

ಕಳೆದ ವರ್ಷ ರಿಷಬ್ ಶೆಟ್ಟಿ ನಟನೆಯಲ್ಲಿ ದಿ ಪ್ರೈಡ್ ಆಫ್ ಭಾರತ್ ಛತ್ರಪತಿ ಶಿವಾಜಿ ಮಹಾರಾಜ್ ಅನ್ನೋ ಸಿನಿಮಾ ಅನೌನ್ಸ್ ಆಗಿತ್ತು. ಸಂದೀಪ್ ಸಿಂಗ್ ಈ ಚಿತ್ರವನ್ನ ಡೈರೆಕ್ಟ್ ಮಾಡಲಿದ್ದು, ಜನವರಿ 21, 2027ಕ್ಕೆ ರಿಲೀಸ್ ಅಂತ ಅನೌನ್ಸ್ ಮಾಡಲಾಗಿತ್ತು. 

ಶಿವಾಜಿ ಸಮರ
ರಿತೇಶ್ ದೇಶಮುಖ್ ನಟನೆ ನಿರ್ದೇಶನದ ರಾಜಾ ಶಿವಾಜಿ

ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ (Rishab Shetty) ನಟನೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜ್ ಸಿನಿಮಾ ಅನೌನ್ಸ್ ಆಗಿದ್ದು ಗೊತ್ತೇ ಇದೆ. 2027ರ ಜನವರಿಗೆ ಈ ಸಿನಿಮಾ ರಿಲೀಸ್ ಅಂತ ಅನೌನ್ಸ್ ಮಾಡಲಾಗಿತ್ತು. ಈಗ ನೋಡಿದ್ರೆ ಬಾಲಿವುಡ್​ನಲ್ಲಿ ರಿತೇಷ್ ದೇಶಮುಖ್ (Riteish Deshmukh) ತಮ್ಮದೇ ನಟನೆ ನಿರ್ದೇಶನದಲ್ಲಿ ರಾಜಾ ಶಿವಾಜಿ ಅನ್ನೋ ಸಿನಿಮಾ ಮಾಡಿದ್ದಾರೆ. ಹಾಗಾದ್ರೆ ರಿಷಬ್ ಶಿವಾಜಿ ಪಾತ್ರ ಮಾಡೋದಿಲ್ವಾ..? ಏನಿದು ಶಿವಾಜಿ ಸಮರ..? ಇಲ್ಲಿದೆ ನೋಡಿ ಆ ಕುರಿತ ಸ್ಟೋರಿ.

ರಿಷಬ್ ನಟನೆಯ ಛತ್ರಪತಿ ಶಿವಾಜಿ ಚಿತ್ರ ನಿಂತೋಯ್ತಾ..?
ಕಳೆದ ವರ್ಷ ರಿಷಭ್ ಶೆಟ್ಟಿ ನಟನೆಯಲ್ಲಿ ದಿ ಪ್ರೈಡ್ ಆಫ್ ಭಾರತ್ ಛತ್ರಪತಿ ಶಿವಾಜಿ ಮಹಾರಾಜ್ ಅನ್ನೋ ಸಿನಿಮಾ ಅನೌನ್ಸ್ ಆಗಿತ್ತು. ಸಂದೀಪ್ ಸಿಂಗ್ ಈ ಚಿತ್ರವನ್ನ ಡೈರೆಕ್ಟ್ ಮಾಡಲಿದ್ದು, ಜನವರಿ 21,  2027ಕ್ಕೆ ರಿಲೀಸ್ ಅಂತ ಅನೌನ್ಸ್ ಮಾಡಲಾಗಿತ್ತು. ರಿಷಬ್ ಛತ್ರಪತಿ ವೇಷದಲ್ಲಿರೋ ಪೋಸ್ಟರ್ ಕೂಡ ರಿಲೀಸ್ ಆಗಿತ್ತು.

ಆದ್ರೆ ಈ ಶಿವಾಜಿ ಬರೋದಕ್ಕೂ ಮುನ್ನ ಬಾಲಿವುಡ್​ನಲ್ಲಿ ಮತ್ತೊಬ್ಬ ಶಿವಾಜಿ ಬಂದಾಗಿದೆ. ಹೌದು ಶಿವಾಜಿ ಮಹಾರಾಜರ ಕಥೆಯುಳ್ಳ ರಾಜಾ ಶಿವಾಜಿ ಅನ್ನೋ ಸಿನಿಮಾ ಮರಾಠಿ, ಹಿಂದಿ ಮತ್ತು ತೆಲುಗುನಲ್ಲಿ ಸಿದ್ದವಾಗಿದ್ದು, ಇದೇ ಮೇ 1 ಕ್ಕೆ ದೇಶಾದ್ಯಂತ ರಿಲೀಸ್ ಆಗ್ತಾ ಇದೆ.

ಜಿಯೋ ಸ್ಟುಡಿಯೋಸ್ ಜೊತೆಗೂಡಿ ಜೆನಿಲಿಯಾ ದೇಶಮುಖ್ ಈ ಸಿನಿಮಾವನ್ನ ನಿರ್ಮಾಣ ಮಾಡಿದ್ರೆ, ರಿತೇಶ್ ದೇಶಮುಖ್ ಶಿವಾಜಿ ಪಾತ್ರಕ್ಕೆ ಬಣ್ಣ ಹಚ್ಚೋದ್ರ ಜೊತೆಗೆ ಖುದ್ದು ಸಿನಿಮಾವನ್ನ ನಿರ್ದೇಶನ ಕೂಡ ಮಾಡಿದ್ದಾರೆ. ರಿತೇಶ್ ಮಹಾರಾಷ್ಟ್ರ ಮಾಜಿ ಸಿಎಂ ವಿಲಾಸ್ ರಾವ್ ದೇಶಮುಖ್ ಪುತ್ರ. ಮರಾಠ ಸಮುದಾಯಕ್ಕೆ ಸೇರಿದ ರಿತೇಶ್​ಗೆ ಶಿವಾಜಿ ಮಹಾರಾಜರ ಕುರಿತ ಸಿನಿಮಾ ಮಾಡೋದು ಬಹುಕಾಲದ ಕನಸಾಗಿತ್ತಂತೆ , ಫೈನಲಿ ಈ ಚಿತ್ರವನ್ನ ಮಾಡೋ ಆ ಮೂಲಕ ಕನಸನ್ನ ಈಡೇರಿಸಿಕೊಂಡಿದ್ದಾರೆ.

ರಿತೇಶ್, ಜೆನಿಲಿಯಾ ಜೊತೆಗೆ ಸಂಜಯ್ ದತ್, ಅಭಿಷೇಕ್ ಬಚ್ಚನ್, ವಿದ್ಯಾ ಬಾಲನ್, ಮಹೇಶ್ ಮಾಂಜ್ರೇಕರ್ ಸೇರಿದಂತೆ ಚಿತ್ರದಲ್ಲಿ ದೊಡ್ಡ ತಾರಾಬಳಗವೇ ಇದೆ. ಅಷ್ಟೇ ಅಲ್ಲದೇ ಸಲ್ಮಾನ್ ಖಾನ್ ಈ ಸಿನಿಮಾ ಸ್ಪೆಷಲ್ ಅಪೀಯರೆನ್ಸ್ ಮಾಡಿದ್ದಾರೆ.

ರಾಜಾ ಶಿವಾಜಿ ರಿಲೀಸ್​ಗೆ ರೆಡಿ.. ಏನಾಯ್ತು ರಿಷಬ್ ಪ್ರಾಜೆಕ್ಟ್?
ಹೌದು ಇತ್ತ ರಾಜಾ ಶಿವಾಜಿ ಶೂಟಿಂಗ್ ಮುಗಿಸಿ ರಿಲೀಸ್​​ಗೆ ಸಜ್ಜಾದ್ರೆ, ರಿಷಬ್ ಶೆಟ್ಟಿ ನಟನೆಯಲ್ಲಿ ಬರಬೇಕಿದ್ದ ಛತ್ರಪತಿ ಶಿವಾಜಿ ಮಹಾರಾಜ್ ಸಿನಿಮಾ ತಂಡದಿಂದ ಮಾತ್ರ ಯಾವುದೇ ಸುದ್ದಿ ಇಲ್ಲ. ಅಸಲಿಗೆ ಕಾಂತಾರ ಚಾಪ್ಟರ್ -1 ನಂತರ ರಿಷಬ್, ಜೈ ಹನುಮಾನ್ ಸಿನಿಮಾದಲ್ಲಿ ತೊಡಗಿಕೊಂಡಿದ್ದಾರೆ.

ಅಸಲಿಗೆ ರಿಷಬ್ ಶೆಟ್ಟಿ ನಟನೆಯಲ್ಲಿ ಛತ್ರಪತಿ ಶಿವಾಜಿ ಸಿನಿಮಾ ಅನೌನ್ಸ್ ಆದಾಗ ಕನ್ನಡ ಪರ ಸಂಘಟನೆಗಳಿಂದ ವಿರೋಧ ವ್ಯಕ್ತವಾಗಿತ್ತು. ಮರಾಠಿ ದೊರೆ ಪಾತ್ರ ಕನ್ನಡ ನಟ ಮಾಡೋದ್ಯಾಕೆ ಅಂತ ಕೆಲವರು ಕ್ಯಾತೆ ತೆಗೆದಿದ್ರು.

ಈ ವಿರೋಧದ ಕಾರಣಕ್ಕೆ ರಿಷಬ್ ಈ ಚಿತ್ರದಿಂದ ದೂರವಾದ್ರಾ..? ಅಥವಾ ಜೈ ಹನುಮಾನ್ ನಂತರ ಈ ಸಿನಿಮಾ ಸೆಟ್ಟೇರಲಿದೆಯಾ ಗೊತ್ತಿಲ್ಲ..? ಈಗಿನ ಬೆಳವಣಿಗೆ ನೋಡಿದ್ರೆ 2027 ಜನವರಿಗೆ ರಿಷಬ್ ನಟನೆಯ ಛತ್ರಪತಿ ಶಿವಾಜಿ ಸಿನಿಮಾ ತೆರೆಗೆ ಬರೋದು ಅಸಾಧ್ಯ. ಹಾಗಾದ್ರೆ ಯಾವಾಗ ಬರುತ್ತೆ..? ಅಥವಾ ಬರೋದೇ ಇಲ್ವಾ..? ಈ ಪ್ರಶ್ನೆಗಳಿಗೆ ಸದ್ಯಕ್ಕಂತೂ ಉತ್ತರವಿಲ್ಲ. 
ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ...

05:53ನೋರಾ ಫತೇಹಿ ಆಫರ್​ ತಮನ್ನಾ ಪಾಲಾಗಿದ್ದೇಕೆ..? ಬಿಳಿ ಬ್ಯೂಟಿ ನೋಡಿದ್ರೆ ಇನ್ಮುಂದೆ ಭಯ ಪಡ್ತೀರಾ ನೀವು!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
02:58Thalapathy Vijay Jana Nayagan: ಅಂತೂ ಇಂತೂ ಸೆನ್ಸಾರ್ ಆಯ್ತು ಜನನಾಯಗನ್; ಇದೇ ತಿಂಗಳಲ್ಲಿ ತೆರೆಗೆ ಬರುತ್ತಾ?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
04:39ನಟಿ ಸಂಚಿತಾ ಆ*ತ್ಮಹತ್ಯೆಗೆ ಏನು ಕಾರಣ? ಸಹೋದರ ಮಾಡಿದ ಶಾಕಿಂಗ್ ಆರೋಪವೇನು!
05:23ಮತ್ತೆ ಸಲ್ಮಾನ್ ಖಾನ್ ಬೆನ್ನುಬಿದ್ದ 'ಕೃಷ್ಣಮೃಗ'... ದೆಹಲಿ ಹೈಕೋರ್ಟ್‌ನಲ್ಲಿ ಕಾನೂನು ಸಮರ!
Read more