ಸೆಕ್ಸ್‌ ಬಾಂಬ್‌ ಎಂದೇ ಖ್ಯಾತರಾಗಿದ್ದ ನಟಿಗೆ ಮುಳುವಾದ ಬೋಲ್ಡ್‌ ದೃಶ್ಯ! ತುತ್ತು ಅನ್ನಕ್ಕೂ ಈಗ ಪರದಾಟ

By Suvarna News  |  First Published Jul 19, 2023, 5:35 PM IST

ಸೆಕ್ಸ್‌ ಬಾಂಬ್‌ ಎಂದು ಖ್ಯಾತಿ ಪಡೆದಿದ್ದ ನಟಿಯ ದುರಂತ ಜೀವನದ ಕಥೆಯಿದು. ಬೋಲ್ಡ್‌ ದೃಶ್ಯಗಳೇ ಈಕೆಗೆ ಮುಳುವಾಯ್ತು. ಈಕೆ ಯಾರು?
 


50-60ರ ದಶಕದಲ್ಲಿ ಬಾಲಿವುಡ್‌ ಆಳಿದ ನಟಿಯರಲ್ಲಿ ಒಬ್ಬರು ರೆಹಾನಾ ಸುಲ್ತಾನ್ (Rehana Sultan).  ಅಷ್ಟರಮಟ್ಟಿಗೆ ಕೀರ್ತಿ ಗಳಿಸಿದ್ದ ನಟಿಯೀಕೆ. ಹೆಣ್ಣುಮಕ್ಕಳು ಬಣ್ಣದ ಲೋಕಕ್ಕೆ ಕಾಲಿಡಲು ಹೆದರಿಸುತ್ತಿದ್ದ, ಸಿನಿಮಾಗಳಲ್ಲಿ ನಟಿಸಿದರೆ ಅವರನ್ನು ಅಸಹ್ಯ ಮನೋಭಾವದಿಂದ ನೋಡುತ್ತಿದ್ದ ಸಂದರ್ಭದಲ್ಲಿಯೇ ಸೆಕ್ಸ್‌ ಬಾಂಬ್‌ ಎಂದು ಖ್ಯಾತಿ ಪಡೆದಿದ್ದು ರೆಹಾನಾ ಸುಲ್ತಾನ್‌. ಇವರ ಖ್ಯಾತಿ ಎಷ್ಟರಮಟ್ಟಿಗೆ ಇತ್ತೆಂದರೆ, 19 ನೇ ವಯಸ್ಸಿನಲ್ಲಿ ಇಡೀ ಜಗತ್ತೇ ಈಕೆಯ ಕಾಲಬುಡದಲ್ಲಿತ್ತು ಎನ್ನುವಂತಿತ್ತು.  ಪ್ರತಿಷ್ಠಿತ ಫಿಲ್ಮ್ ಆಂಡ್ ಟೆಲಿವಿಷನ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದಿಂದ (ಎಫ್‌ಟಿಐಐ) ಬಾಲಿವುಡ್ ಚಲನಚಿತ್ರವೊಂದರಲ್ಲಿ ಪ್ರಮುಖ ಪಾತ್ರವನ್ನು ಪಡೆದ ಮೊದಲ ನಟಿ ಎನಿಸಿದವರು ಈಕೆ.  ಆಕೆಯ ಮೊದಲ ಎರಡು ಚಿತ್ರಗಳು ಭಾರಿ ಯಶಸ್ಸನ್ನು ಕಂಡವು.  ಎರಡನೆಯ ಚಿತ್ರ ಆಕೆಗೆ ರಾಷ್ಟ್ರೀಯ ಪ್ರಶಸ್ತಿಯನ್ನು ತಂದುಕೊಟ್ಟಿತು.

ಅಲಹಾಬಾದ್‌ನಲ್ಲಿ ಜನಿಸಿದ ರೆಹಾನಾ ಸುಲ್ತಾನ್ ಅವರು ಪುಣೆಯ ಫಿಲ್ಮ್ ಅಂಡ್ ಟೆಲಿವಿಷನ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಮೂಲಕ ಹದಿಹರೆಯದಲ್ಲಿ ಸಿನಿಮಾದ (Cinema) ಮೂಲಕ ತಮ್ಮ ಪ್ರಯತ್ನವನ್ನು ಪ್ರಾರಂಭಿಸಿದರು. 1967 ರಲ್ಲಿ ಶಾದಿ ಕಿ ಪೆಹಲಿ ಸಾಲ್ಗೀರಾ ಎಂಬ ಚಿತ್ರದ ಮೂಲಕ ಪದಾರ್ಪಣೆ ಮಾಡಿದರು.  1970 ರಲ್ಲಿ, 19 ನೇ ವಯಸ್ಸಿನಲ್ಲಿ, ಅವರು ದಸ್ತಕ್ ಮೂಲಕ ಬೋಲ್ಡ್ ಪಾತ್ರದಲ್ಲಿ ನಟಿಸಿದರು. ಅವರ ಮುಂದಿನ ಚಿತ್ರ ಚೇತನಾ. ಈ ಚಿತ್ರವು ಲೈಂಗಿಕ ಕಾರ್ಯಕರ್ತೆಯರ ಪುನರ್ವಸತಿಯನ್ನು ಕೇಂದ್ರೀಕರಿಸಿತ್ತು. ಇಲ್ಲಿಯೂ ಈಕೆಯದ್ದು ಬೋಲ್ಡ್‌ ದೃಶ್ಯವೇ. ಈಕೆಯನ್ನು ಕಂಡು ಆಗಿನ ಯುವಕರು ನಿದ್ದೆಗೆಟ್ಟಿದ್ದರು. ರೆಹಾನಾ ಅವರ ಒಂದೇ ಒಂದು ಝಲಕ್‌ ನೋಡಲು ಸಿಕ್ಕರೆ ಸಾಕು ಎನ್ನುತ್ತಾ ಹಾತೊರೆಯುತ್ತಿದ್ದರು. ಈಗಿನಂತೆ ಬೋಲ್ಡ್‌ ದೃಶ್ಯಗಳನ್ನು ನೋಡಲು ಯಾವುದೇ ವೇದಿಕೆ ಇರದ ಒಂದು ವರ್ಗದ ಪ್ರೇಕ್ಷಕರಿಗೆ ಈಕೆಯೇ ದೇವತೆಯಂತೆ ಕಂಡದ್ದೂ ಇದೆ.

Tap to resize

Latest Videos

ಆಂಧ್ರದ ರಾಜಕೀಯದಲ್ಲಿ ಕೋಲಾಹಲ: ಪವನ್​ ಕಲ್ಯಾಣ್-ರೋಜಾ ಮಧ್ಯೆ ಬಂದ ಸನ್ನಿ ಲಿಯೋನ್​!

ಇಂತಿಪ್ಪ ನಟಿಗೆ ಈಗ 72 ವರ್ಷ ವಯಸ್ಸು. ಒಂದೆಡೆ ವಯೋ ಸಹಜ ಸಮಸ್ಯೆಯಾದರೆ ಇನ್ನೊಂದೆಡೆ ತುತ್ತು ಅನ್ನಕ್ಕೂ ಪರದಾಡುವ ಸ್ಥಿತಿ! ಹೌದು. ಈಗ ಆಕೆಯ ಜೀವನ  ಅಧೋಗತಿಗೆ ಹೋಗಿದೆ. ಎಲ್ಲವೂ ಅಯೋಮಯವಾಗಿದೆ. ನಟಿ ತೀವ್ರ ಆರ್ಥಿಕ ಸಂಕಷ್ಟದಲ್ಲಿ ಬದುಕುತ್ತಿದ್ದಾರೆ. ಅಷ್ಟಕ್ಕೂ ಅವರ ಈ ಸಂಕಷ್ಟಕ್ಕೆ ಕಾರಣ ಅದೇ ಬೋಲ್ಡ್‌ ದೃಶ್ಯಗಳು. ಏಕೆಂದರೆ, ಒಮ್ಮೆ ಇಂಥ ನಟನೆಗೆ ಒಗ್ಗಿಕೊಂಡುಬಿಟ್ಟರೆ ಅಂಥವರಿಗೆ ಬೇರೆ ಚಿತ್ರಗಳು ಸಿಗುವುದು ಆಗ ಕಷ್ಟವೇ ಆಗಿತ್ತು. ಈಗಿನ ಸ್ಥಿತಿಯಲ್ಲಿ ಬಹುತೇಕ ನಟಿಯರು ಪೈಪೋಟಿಗೆ ಬಿದ್ದು ತಮ್ಮ ದೇಹ ಪ್ರದರ್ಶನ ಮಾಡುತ್ತಾರೆ. ಆದರೆ ಆಗಿನ ಕಾಲದಲ್ಲಿ ಇಂಥ ದೃಶ್ಯಗಳು ಒಂದು ವರ್ಗಕ್ಕೆ ಖುಷಿ ಕೊಟ್ಟಿದ್ದರೆ, ಇದರಿಂದಲೇ ನಟಿಯ ಸಿನಿ ಜೀವನವೂ ಅಂತ್ಯ ಕಂಡಿತು.
 
ರೆಹಾನಾ ಅವರು ಬೋಲ್ಡ್‌ ದೃಶ್ಯಗಳಿಂದ (Bold scenes) ಕುಖ್ಯಾತಿಪಡೆದರು. ಅವರ ಚೇತನ್‌ ಚಿತ್ರದ  ಪ್ರಚೋದನಕಾರಿ ಪೋಸ್ಟರ್‌ನ ಬಗ್ಗೆಯೂ ಸಾಕಷ್ಟು ವಿವಾದ ಎದ್ದಿತು. ಈ ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ನಟಿ ರಾಷ್ಟ್ರ ಪ್ರಶಸ್ತಿಯನ್ನು ರೆಹಾನಾ ಪಡೆದರೂ, ಅದು ಸಿನಿ ಪಯಣದ ದುರಂತ ಅಂತ್ಯವೂ ಆಗಿಹೋಯಿತು. ಇದಕ್ಕೆ ಕಾರಣ, ಚೇತನ್‌ ಬಳಿಕ ಈಕೆಗೆ ಸಿಕ್ಕಿದ್ದು, ದಸ್ತಕ್‌ ಚಿತ್ರ. ಅಲ್ಲಿಯೂ ಅಂಥದ್ದೇ ದೃಶ್ಯ.  ರೆಹಾನಾ ಅವರನ್ನು  ಲೈಂಗಿಕ ದೃಶ್ಯಗಳನ್ನು ಚಿತ್ರೀಕರಿಸಲು ಅಗತ್ಯವಿರುವ  ಪಾತ್ರಗಳಿಗೆ ಮಾತ್ರ ಸೀಮಿತ ಮಾಡಲಾಯಿತು. ಇದರಿಂದ ಇದನ್ನು ಹೊರತುಪಡಿಸಿದ ಚಿತ್ರಗಳಲ್ಲಿ ಆಕೆಗೆ ಅವಕಾಶಗಳೇ ಸಿಗಲಿಲ್ಲ. ಇನ್ನೊಂದೆಡೆ ವಿವಾದಗಳು ಸುತ್ತುವರಿದವು.  

ಬರುಬರುತ್ತಾ ಪೋಷಕ ಪಾತ್ರಗಳಿಗೆ ಈಕೆಯನ್ನು ಮೀಸಲು ಮಾಡಲಾಯಿತು. ಖೋಟೆ ಸಿಕ್ಕಾ, ಏಜೆಂಟ್ ವಿನೋದ್ ಮತ್ತು ಕಿಸ್ಸಾ ಕುರ್ಸಿ ಕಾ ಮುಂತಾದ ಯಶಸ್ವಿ ಚಿತ್ರಗಳಲ್ಲಿ ಚಿಕ್ಕಪುಟ್ಟ ಪಾತ್ರಗಳಲ್ಲಿ ಈಕೆ ಕೆಲಸ ಮಾಡಿದರು.  1984 ರಲ್ಲಿ, ಅವರು ಹಮ್ ರಹೇ ನಾ ಹಮ್‌ಗಾಗಿ ಅತ್ಯುತ್ತಮ ಪೋಷಕ ಪಾತ್ರಕ್ಕಾಗಿ ಫಿಲ್ಮ್‌ಫೇರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡರು, ಆದರೆ ಅವರನ್ನು ಸೆಕ್ಸ್‌ ಬಾಂಬ್‌ ಎಂದೇ ಕಾಣುತ್ತಿದ್ದವರಿಗೆ ಬೇರೆಯ ಪಾತ್ರಗಳಲ್ಲಿ ಈಕೆಯನ್ನು ನೋಡಲು ಸಾಧ್ಯವಾಗಲಿಲ್ಲ.  1985 ರಿಂದ, ಅವರು ಕೇವಲ ಎರಡು ಚಿತ್ರಗಳಲ್ಲಿ ಕಾಣಿಸಿಕೊಂಡರು.

Ileana D'Cruz ಬಾಯ್‌ಫ್ರೆಂಡ್‌ ಫೋಟೋ ರಿವೀಲ್​? ಕತ್ರಿನಾಳ ಅಣ್ಣನಾ ಅಂದೋರಿಗೆ ಸಿಕ್ತು ಉತ್ತರ!

ಆದರೆ ಈಗ ಅವರಿಗೆ ಯಾವುದೇ ಕೆಲಸವಿಲ್ಲ. ಯಶಸ್ಸಿನ ಉತ್ತುಂಗದಲ್ಲಿ ಇರುವಾಗಲೇ ಬೋಲ್ಡ್‌ ದೃಶ್ಯಗಳಿಂದ ಅವಕಾಶಗಳನ್ನು ಕಳೆದುಕೊಂಡಿದ್ದ ನಟಿ ಈಗ ತುತ್ತು ಅನ್ನಕ್ಕೂ ಪರದಾಡುವಂತಾಗಿದೆ.  ಸಿನಿ ಮತ್ತು ಟಿವಿ ಕಲಾವಿದರ ಸಂಘ (CINTAA) ಆಕೆಗೆ ಹಣಕಾಸಿನ ನೆರವು ಕೂಡ ನೀಡುತ್ತಿದೆ ಎಂದು ವರದಿಯಾಗಿದೆ. ಆದರೆ ಒಂದೊಮ್ಮೆ ಜಗತ್ತನ್ನೇ ಆಳಿದ್ದ ನಟಿಯ ಪಾಡು ಮಾತ್ರ ಯಾರಿಗೂ ಬೇಡವಾಗಿದೆ.

 

click me!