ದೆವ್ವ ಕರೆಸಲು ಟ್ರೈ ಮಾಡಿದ್ರಂತೆ ಸೈಫ್​ ಅಲಿ ಖಾನ್​! ಏನಪ್ಪಾ ಈ ವಿಷ್ಯ?

By Suvarna News  |  First Published Jul 19, 2023, 10:36 AM IST

 ದೆವ್ವಗಳನ್ನು ಕರೆಸಲು ಹಿಂದೊಮ್ಮೆ  ಸೈಫ್​ ಅಲಿ ಖಾನ್​ ಟ್ರೈ ಮಾಡಿದ ವಿಷಯವನ್ನು  ಬಾಲಿವುಡ್​ನ ಖ್ಯಾತ ನಿರ್ದೇಶಕ ಗೌರವ್​ ಕೆ. ಚಾವ್ಲಾ ಬಹಿರಂಗಪಡಿಸಿದ್ದಾರೆ. 
 


ಬಾಲಿವುಡ್​ನ ಖ್ಯಾತ ನಿರ್ದೇಶಕ ಗೌರವ್​ ಕೆ. ಚಾವ್ಲಾ (Gauravv Chawla) ಇತ್ತೀಚೆಗೆ ಸೈಫ್ ಅಲಿ ಖಾನ್ ಅವರ ಅಲೌಕಿಕ ಶಕ್ತಿಯ ಪ್ರೀತಿಯ ಕುರಿತು  ಕುತೂಹಲಕಾರಿ ಘಟನೆಯನ್ನು ಬಹಿರಂಗಪಡಿಸಿದ್ದಾರೆ.  ಗೌರವ್ ಚಾವ್ಲಾ ಅವರು ಹಾರರ್ ಥ್ರಿಲ್ಲರ್ ವೆಬ್ ಶೋ ಅಧೂರ ನಿರ್ದೇಶಿಸಿದ್ದಾರೆ. ಈ ಸಂದರ್ಭದಲ್ಲಿ ಅವರು ಸೈಫ್​ ಅಲಿ ಖಾನ್​ ಅವರ ಕುರಿತು  ಆಸಕ್ತಿಯ ವಿಚಾರವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಸದ್ಯ ಆದಿಪುರುಷ್​ನ ರಾವಣನ ಪಾತ್ರದಿಂದ ಸಕತ್​ ಟ್ರೋಲ್​ ಆಗುತ್ತಿರುವ ನಟ ಸೈಫ್​ ಅಲಿ ಖಾನ್​ಗೆ ಇಂಥದ್ದೊಂದು ಅಲೌಕಿಕ ಶಕ್ತಿಯ ಪ್ರೀತಿಯಿರುವುದನ್ನು ಕೇಳಿ ಫ್ಯಾನ್ಸ್​ ಹುಬ್ಬೇರಿಸಿದ್ದಾರೆ. ಅಷ್ಟಕ್ಕೂ ಸೈಫ್​ ಅಲಿ ಖಾನ್​ ಅವರು ಓಜೋ ಬೋರ್ಡ್ ಎನ್ನುವ ಆಟದ ಮೂಲಕ ದೆವ್ವಗಳನ್ನು ಕರೆಸಲು ಪ್ರಯತ್ನಿಸಿದ್ದರಂತೆ. ಓಜೋ ಬೋರ್ಡ್​ ಎನ್ನುವುದು  ದೆವ್ವಗಳ ಕರೆಸುವ ವಿದೇಶದ ಪ್ರಸಿದ್ಧ ತಂತ್ರ. ಈ ತಂತ್ರವನ್ನು  ಸೈಫ್  ಟ್ರೈ ಮಾಡಿದ್ದರಂತೆ. ಇದಾಗಲೇ ಸೈಫ್ ಅಲಿ ಖಾನ್  ದೆವ್ವಗಳ ಕುರಿತ ಚಿತ್ರಗಳಲ್ಲಿ ನಟಿಸಿದ್ದು, ಇದೀಗ ಅವರಿಗೆ ಈ ದೆವ್ವಗಳನ್ನು ಕರೆಸಿಕೊಳ್ಳುವ ತಂತ್ರದ ಬಗ್ಗೆಯೂ ಆಸಕ್ತಿ ಇರುವ ಅಂಶವನ್ನು ಗೌರವ್​ ಅವರು ಬಹಿರಂಗಪಡಿಸಿದ್ದಾರೆ.  ನಟ ತಮ್ಮ ಹಿರಿಯರಿಂದ ಬಂದ ಪಟೌಡಿ ಅರಮನೆಯಲ್ಲಿ ಓಜೋ ಗೇಮ್ ಆಡಿದ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
 
ಸಂದರ್ಶನವೊಂದರಲ್ಲಿ ಈ ಕುರಿತು  ವಿವರಿಸಿರುವ ಗೌರವ್​ ಅವರು, ನಾನು ಮತ್ತು ಸೈಫ್ ಅಲಿ ಖಾನ್​ (Saif Ali Khan) ಒಮ್ಮೆ ಹರಿಯಾಣದ ಪಟೌಡಿಯಲ್ಲಿ ಒಯಿಜಾ ಬೋರ್ಡ್ ಆಟವನ್ನು ಒಟ್ಟಿಗೆ ಆಡಿದ್ದೇವೆ. ಸೈಫ್‌ಗೆ ಹಾರರ್‌ನಲ್ಲಿ ಹೆಚ್ಚಿನ ಆಸಕ್ತಿ ಇದೆ ಮತ್ತು ಮರಣಾನಂತರದ ಜೀವನವನ್ನು ಅನ್ವೇಷಿಸಲು ಅವರು ಸಾಕಷ್ಟು ಮುಕ್ತರಾಗಿದ್ದಾರೆ. ಅವರಿಗೆ  ಅಲೌಕಿಕ ಕ್ಷೇತ್ರದಲ್ಲಿ ನಿಜವಾದ ಆಸಕ್ತಿ ಇದೆ ಎಂದು ಹೇಳಿದ್ದಾರೆ. 

ನಮ್ಮಪ್ಪಂಗೆ ಸಿನಿಮಾ ಫ್ಯಾಮಿಲಿ ಬ್ಯಾಲೆನ್ಸ್‌ ಮಾಡೋಕೆ ಬರುತ್ತೆ: ಸೈಫ್‌ ಅಲಿ ಖಾನ್ ಬುದ್ಧಿವಂತಿಕೆ ಬಗ್ಗೆ ಸಾರಾ ಟಾಂಗ್

 ಸೈಫ್ ಅಲಿ ಖಾನ್ ಅಲೌಕಿಕ ಕ್ಷೇತ್ರದಲ್ಲಿ ನಿಜವಾದ ಆಸಕ್ತಿಯನ್ನು ಹೊಂದಿದ್ದಾರೆ. ಸೈಫ್ ಭೂತದ ಕಥೆಗಳನ್ನು ಸಂಪೂರ್ಣವಾಗಿ ಆನಂದಿಸುತ್ತಾರೆ ಮತ್ತು ಅವರ ಮಗ ತೈಮೂರ್ ಅಲಿ ಖಾನ್ ಕೂಡ ಭಯಾನಕ ಕಾರ್ಯಕ್ರಮಗಳನ್ನು ವೀಕ್ಷಿಸುತ್ತಾರೆ ಎಂದು ಗೌರವ್​ ಚಾವ್ಲಾ ಹೇಳಿದ್ದಾರೆ.  ಸೈಫ್ ಮತ್ತು ಕರೀನಾ ಜೊತೆಗೂಡಿ ಪಟೌಡಿಗೆ ಭೇಟಿ ನೀಡಿದ್ದನ್ನು ಅವರು  ನೆನಪಿಸಿಕೊಂಡಿದ್ದಾರೆ.  ಅಲ್ಲಿ ಅವರು ಓಯಿಜಾ ಬೋರ್ಡ್ (Ouija board) ಆಟವನ್ನು ಆಡುವ ಸೆಷನ್‌ನಲ್ಲಿ ಪಾಲ್ಗೊಂಡರು. ಇಂಗ್ಲೆಂಡಿನ ಸೈಫ್ ಅವರ ಸ್ನೇಹಿತರು ಸಹ ಹಾಜರಿದ್ದರು, ಆತ್ಮಗಳೊಂದಿಗೆ ಸಂಪರ್ಕ ಸಾಧಿಸುವ ಅವರ ಪ್ರಯತ್ನಗಳ ನಡುವೆ ಇಂಗ್ಲಿಷ್ ಸಂಭಾಷಣೆಗಳ ವಿಶಿಷ್ಟ ಮಿಶ್ರಣವನ್ನು ರಚಿಸಿದರು ಎಂದು ಚಾವ್ಲಾ ಅಂದು ನಡೆದ ಘಟನೆಯನ್ನು ಹೇಳಿದರು.
 
ಆ ದಿನ ಏನು ನಡೆಯಿತು ಎಂದು ತಿಳಿಸಿದ ಗೌರವ್​ ಅವರು,  ಬೋರ್ಡ್ ಆಟದ ಮೂಲಕ ದೆವ್ವಗಳನ್ನು ಕರೆಯಲು ಪ್ರಯತ್ನಿಸುತ್ತಿರುವಾಗ, ಸೈಫ್​ ಇಂಗ್ಲಿಷ್​ (English) ಮಾತನಾಡಿದರು. ಆಗ ನಾನು ಹರಿಯಾಣದಲ್ಲಿ ಇಂಗ್ಲಿಷ್ ಮಾತನಾಡುವ ದೆವ್ವಗಳು ಇವೆಯೇ ಎಂದು ಪ್ರಶ್ನಿಸಿದ್ದೆ ಎಂದಿದ್ದಾರೆ.  ಆದರೂ ಅಂದು ನಿರಾಸೆಯಾಯಿತು. ಅಲ್ಲಿದ್ದವರ  ಉತ್ಸಾಹದ ಪ್ರಯತ್ನಗಳ ಹೊರತಾಗಿಯೂ, ಆ ರಾತ್ರಿ ಯಾವುದೇ ಭೂತದ ಮುಖಾಮುಖಿ ನಡೆಯಲಿಲ್ಲ. ಆದರೂ ಅದೊಂದು ಭಯಾನಕ ಅನುಭವವಾಗಿತ್ತು ಎಂದಿದ್ದಾರೆ.  

Tap to resize

Latest Videos

ನಟಿ ಕಿಯಾರಾ ಕ್ಯೂಟ್‌ ಫೋಟೋ ಶೇರ್‌ ಮಾಡಿದ್ರೆ, ಪ್ರೆಗ್ನೆಂಟಾ ಕೇಳ್ತಿದ್ದಾರೆ ಫ್ಯಾನ್ಸ್‌?

click me!