ಸೌತ್​ನಲ್ಲಿ ಛಾನ್ಸ್​ ಬೇಕಿದ್ರೆ ನಟ, ನಿರ್ದೇಶಕ, ನಿರ್ಮಾಪಕ ಮಾತ್ರವಲ್ಲ, ಅವ್ರ ಜೊತೆನೂ... ಅಂದಿನ ಘಟನೆ ಹೇಳಿದ ನಟಿ

ದಕ್ಷಿಣ ಸಿನಿಮಾಗಳಲ್ಲಿ ಮಿಂಚಬೇಕು ಎಂದ್ರೆ ನಟ, ನಿರ್ದೇಶಕ, ನಿರ್ಮಾಪಕ ಮಾತ್ರವಲ್ಲ, ಅವ್ರ ಜೊತೆನೂ ಮಂಚ... ಎನ್ನುವ ಮೂಲಕ ಕರಾಳ ಅನುಭವ ಹಂಚಿಕೊಂಡಿದ್ದಾರೆ ನಟಿ ರತನ್​ ರಾಜಪೂತ್​ 
 

Ratan Raajputh about casting couch in south industry and explained how she avoid this suc

ಬಾಲಿವುಡ್​ ಮಾತ್ರವಲ್ಲದೇ ಬಹುತೇಕ ಸಿನಿ ಇಂಡಸ್ಟ್ರಿಯ ತಾರೆಯರು ಇದಾಗಲೇ ಸಿನಿಮಾದಲ್ಲಿ ತಮಗಾಗಿರುವ ಲೈಂಗಿಕ ದೌರ್ಜನ್ಯಗಳು ಕುರಿತು ಮಾತನಾಡಿದ್ದಾರೆ. ಕಾಸ್ಟಿಂಗ್​ ​ ಕೌಚ್​ (casting couch) ಎನ್ನುವುದು ಕೆಲ ವರ್ಷಗಳಿಂದ ಸಿನಿರಂಗದಲ್ಲಿ ಬಹಳ ಸದ್ದು ಮಾಡಿದ ಶಬ್ದ. 2018ರಲ್ಲಿ ನಟಿ ಶ್ರುತಿ ಹರಿಹರನ್​ ಅವರು ತಮಗೆ ಆಗಿರುವ ಕಹಿ ಘಟನೆಗಳನ್ನು ಹಂಚಿಕೊಂಡಿದ್ದರು. ನಂತರ ಮೀ ಟೂ ಎಂಬ ದೊಡ್ಡ ಅಭಿಯಾನವೇ ಶುರುವಾಯಿತು. ಅಲ್ಲಿಂದೀಚೆಗೆ ಹಲವು ನಟಿಯರು ಮುನ್ನೆಲೆಗೆ ಬಂದು ತಮ್ಮ ಮೇಲಾಗಿದ್ದ ಲೈಂಗಿಕ ದೌರ್ಜನ್ಯಗಳ ಕುರಿತು ಹೇಳಿಕೊಂಡರು. ಅಲ್ಲಿಂದ ಮೀ ಟೂ ಹಾಗೂ ಕಾಸ್ಟಿಂಗ್​ ​ ಕೌಚ್​ ಎನ್ನುವುದು ದೊಡ್ಡ ಸ್ವರೂಪ ಪಡೆದುಕೊಂಡಿತು. ನಟನಾ ಕ್ಷೇತ್ರದಲ್ಲಿ ಮಾತ್ರವಲ್ಲದೇ ಇತರ ಕ್ಷೇತ್ರಗಳಲ್ಲಿನ ಮಹಿಳೆಯರೂ ಇದರ ಬಗ್ಗೆ ವಿವರಣೆ ನೀಡತೊಡಗಿದರು. ಇದಾದ ಬಳಿಕ ಇತ್ತೀಚಿನ ವರ್ಷಗಳಲ್ಲಿ ಹಲವು ನಟಿಯರು ಈ ಬಗ್ಗೆ ಭಯಾನಕ ಘಟನೆಗಳನ್ನು ನೆನಪಿಸಿಕೊಳ್ಳುತ್ತಿದ್ದಾರೆ.

ಆದರೆ ಸೌತ್​ ಇಂಡಸ್ಟ್ರಿಯ ಬಗ್ಗೆ ಭಯಾನಕ ಘಟನೆಯನ್ನು ತಿಳಿಸಿದ್ದಾರೆ ಹಿಂದಿಯ ಖ್ಯಾತ ಕಿರುತೆರೆ ನಟಿ ರತನ್ ರಜಪೂತ್. ಜನಪ್ರಿಯ ಕಿರುತೆರೆಯ 'ಅಗ್ಲೇ ಜನಮ್ ಮೋಹೆ ಬಿಟಿಯಾ ಹಿ ಕಿಜೋ' ಕಾರ್ಯಕ್ರಮ ಮೂಲಕ ಪ್ರತಿ ಮನೆಯಲ್ಲೂ ಛಾಪು ಮೂಡಿಸಿರುವ  ರತನ್ ಅವರು ಸದ್ಯ ಬಣ್ಣ ಲೋಕದಿಂದ ದೂರ ಇದ್ದಾರೆ.  ನಟಿ ಈಗ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳು ಮತ್ತು ವ್ಲಾಗ್‌ಗಳ ಮೂಲಕ ಅಭಿಮಾನಿಗಳೊಂದಿಗೆ ಸಂಪರ್ಕ ಸಾಧಿಸುತ್ತಿದ್ದಾರೆ. ಇತ್ತೀಚೆಗೆ, ಅವರು ಕಿರುತೆರೆಯಲ್ಲಿನ ಕಾಸ್ಟಿಂಗ್ ಕೌಚ್ ಅಭ್ಯಾಸವನ್ನು ಬಹಿರಂಗಪಡಿಸುವ ಮೂಲಕ ಎಲ್ಲರಿಗೂ ಆಘಾತ ನೀಡಿದ್ದರು. ಈಗ ಅವರು ದಕ್ಷಿಣ ಉದ್ಯಮದ ಕರಾಳ ಸತ್ಯವನ್ನು ಬಯಲು ಮಾಡಿದ್ದಾರೆ.  

Latest Videos

ನನಗೆ ಮೂಡ್​ ಬಂದರೆ 3 ದಿನಕ್ಕೊಮ್ಮೆ... ಜಾಲತಾಣದಲ್ಲಿ ಹಲ್​ಚಲ್​ ಸೃಷ್ಟಿಸಿದ ಬಿಗ್​ಬಾಸ್​ ಸೋನು ಗೌಡ ವೈರಲ್​ ವಿಡಿಯೋ

ರತನ್ ರಾಜಪೂತ್​ ತಮ್ಮ ಇತ್ತೀಚಿನ ಸಂದರ್ಶನದಲ್ಲಿ, ಜನರು ದಕ್ಷಿಣ ಚಿತ್ರರಂಗವನ್ನು ತುಂಬಾ ಆದರ್ಶಪ್ರಾಯವೆಂದು ಪರಿಗಣಿಸುತ್ತಾರೆ, ಆದರೆ ಅಲ್ಲಿಯೂ ಕಾಸ್ಟಿಂಗ್ ಕೌಚ್ ತುಂಬಾ ಪ್ರಚಲಿತವಾಗಿದೆ ಎಂದಿದ್ದಾರೆ.   ರತನ್ ಅವರು ಲಾಲಿ ಪಾತ್ರದಲ್ಲಿ ಕಾಣಿಸಿಕೊಂಡಾಗ, ದಕ್ಷಿಣ ಚಿತ್ರೋದ್ಯಮದಿಂದ ಕೆಲಸಕ್ಕಾಗಿ ಅನೇಕ ಕರೆಗಳು ಬಂದಿದ್ದವು. ಆದಾಗ್ಯೂ, ಅವರೆಲ್ಲರೂ ನನಗೆ  ರಾಜಿ ಮಾಡಿಕೊಳ್ಳಲು  ಕೇಳಿದ್ದರು ಎಂದಿದ್ದಾರೆ. ಆ ದಿನಗಳನ್ನು ನೆನಪಿಸಿಕೊಳ್ಳುತ್ತಾ, ರತನ್ ಅವರು, ದಕ್ಷಿಣ ಉದ್ಯಮದ ಕರಾಳ ಸತ್ಯವನ್ನು ಬಹಿರಂಗಪಡಿಸಿದ್ದಾರೆ.  'ನನಗೆ ದಕ್ಷಿಣದಿಂದ, ಕೆಲವು ಉತ್ತಮ ನಿರ್ದೇಶಕರಿಂದ ಅನೇಕ ಕರೆಗಳು ಬರುತ್ತಿದ್ದವು, ಆದರೆ ಅದರ ಜೊತೆಗೆ ಅವರು ರತನ್ ಜಿ, ನೀವು ಸ್ವಲ್ಪ ತೂಕ ಹೆಚ್ಚಿಸಿಕೊಳ್ಳಬೇಕು, ನೀವು ತುಂಬಾ ತೆಳ್ಳಗಿದ್ದೀರಿ ಎಂದು ಹೇಳುತ್ತಿದ್ದರು' ಈ ಬೇಡಿಕೆಗೆ ತಾನು ಒಪ್ಪಿಕೊಂಡು ಆ ನಿಟ್ಟಿನಲ್ಲಿ ರಾಜಿ ಮಾಡಿಕೊಂಡಿದ್ದೆ ಎಂದಿದ್ದಾರೆ.
 
ಇದಾದ ಬಳಿಕ ಮಾತು ಬೇರೆ ಕಡೆ ತಿರುಗಿತ್ತು.  ಒಬ್ಬರು ನನಗೆ ಆಫರ್​ ಕೊಡುವುದಾಗಿ ಹೇಳಿ ನಿಯಮಗಳೆಲ್ಲಾ ನಿಮಗೆ ತಿಳಿದಿದೆ ಅಲ್ಲವೆ ಎಂದು ಪ್ರಶ್ನಿಸಿದರು. ಆಗ ನನಗೆ ಶಾಕ್​ ಆಯಿತು, ಏನು ನಿಯಮ ಎಂದು ಕೇಳಿದೆ. ಅದಕ್ಕೆ ಅವರು, ನೀವು ಸೌತ್​ನಲ್ಲಿ ನೆಲೆಯುರಬೇಕು ಎಂದರೆ  ನಿರ್ದೇಶಕರು, ನಿರ್ಮಾಪಕರು, ನಾಯಕ ನಟ ಮಾತ್ರವಲ್ಲದೇ ಇನ್ನೂ ಒಬ್ಬರ ಜೊತೆ ಅಡ್ಜಸ್ಟ್​  ಮಾಡಿಕೊಳ್ಳಬೇಕು ಎಂದರು. ನಾನು ಅಚ್ಚರಿಯಿಂದ ಅವರ ಬಳಿ ನೋಡಿದೆ. ಆಗ ಅವರು ನಿಮಗೆ ಗೊತ್ತಾಯ್ತು ಎಂದುಕೊಳ್ಳುತ್ತೇನೆ. ಡಿಒಪಿ ಜೊತೆನೂ ಅಡ್ಜಸ್ಟ್​ ಮಾಡಿಕೊಳ್ಳಬೇಕು ಎಂದರು. (DOP ಎಂದರೆ Director of Photography ಅಂದರೆ ಛಾಯಾಚಿತ್ರ ನಿರ್ದೇಶಕರು). ನಂತರ ನಾನು ಆ ಆಫರ್​ ತಿರಸ್ಕರಿಸಿ ಬಂದೆ. ನಾನೂ ಅಂಥ ಆಫರ್​ ಓಕೆ ಅಂದಿದ್ದರೆ ಸೂಪರ್​ಸ್ಟಾರ್​ ಆಗುತ್ತಿದ್ದೆ ಎಂದಿದ್ದಾರೆ.  

ರಾ...ರಾ... ಎಂದ ಚೈತ್ರಾ... ನಾಗವಲ್ಲಿಯಾಗಿ ಫೈರ್ ಬ್ರ್ಯಾಂಡ್​- ಇನ್ನೊಂದೆರಡು ಕಣ್ಣು ಕೊಡಪ್ಪಾ ಅಂತಿರೋ ಫ್ಯಾನ್ಸ್​.

ಅಲ್ಲಿಂದ ನನಗೆ ಸೌತ್​ನಿಂದ ಆಫರ್​ ಬರಲಿಲ್ಲ. ಏಕೆಂದರೆ ಕರೆದಾಗಲೆಲ್ಲವೂ ಇದೇ ಮಾತು ಆಡುತ್ತಿದ್ದರು. ನಾನು ಒಪ್ಪದಿದ್ದ ಕಾರಣ, ನಂತರ ಆಫರ್​ ಕೊಡಲಿಲ್ಲ. ಮೊದ ಮೊದಲಲಿಗೆ  ದಕ್ಷಿಣದಿಂದ ಯಾವುದೇ ಪ್ರಸ್ತಾಪ ಬಂದರೂ ಹೇಸಿಗೆ ಹುಟ್ಟಿ ಅದನ್ನು ಸ್ವೀಕರಿಸಿಲ್ಲ, ಅಲ್ಲಿ ರಾಜಿ ಮಾಡಿಕೊಳ್ಳಲು ನನ್ನಿಂದ ಸಾಧ್ಯವಿಲ್ಲ ಎಂದಿದ್ದಾರೆ.  ಜನರು ಬಾಲಿವುಡ್‌ನಲ್ಲಿ ಏನೇ ಮಾತನಾಡುತ್ತಾರೋ, ಅದೇ ದಕ್ಷಿಣದಲ್ಲೂ ನಡೆಯುತ್ತದೆ' ಎಂದು ರತನ್ ಹೇಳಿದರು. ಇದೇ ವೇಳೆ ಟಾಲಿವುಡ್ ಕೊಂಡಾಡಿರುವ ನಟಿ, ಟಾಲಿವುಡ್​ ಇನ್ನೂ ಚೆನ್ನಾಗಿರಲು ಕಾರಣ ಅವರು ಇನ್ನೂ ತಮ್ಮ ಸಂಸ್ಕೃತಿ, ಪದ್ಧತಿಗಳು, ಬಟ್ಟೆ ಮತ್ತು ಎಲ್ಲವನ್ನೂ ಗೌರವಿಸುತ್ತಾರೆ ಎಂದಿದ್ದಾರೆ.  
 

vuukle one pixel image
click me!