ʼಸೂಪರ್‌ಸ್ಟಾರ್ʼ ದಳಪತಿ ವಿಜಯ್ ಅವರು ರಾಜಕೀಯದಲ್ಲಿ ಆಕ್ಟಿವ್ ಆಗಲು ದೊಡ್ಡ ಯೋಜನೆ ಹಾಕಿದ್ದಾರೆ. ಈ ನಡುವೆ ಅವರು ಸಿನಿಮಾಗಳನ್ನು ಮಾಡೋದಿಲ್ಲ ಎಂದು ಹೇಳಲಾಗುತ್ತಿದೆ. ಹೀಗಾಗಿ ಇವರ ಕೊನೇ ಸಿನಿಮಾ ʼಜನ ನಾಯಗನ್ʼ ದೊಡ್ಡ ಮಟ್ಟದ ಕ್ರೇಜ್ ಹುಟ್ಟಿಸಿದೆ. ಹಾಗಾದರೆ ರಿಲೀಸ್ ಡೇಟ್ ಯಾವಾಗ?
ದಳಪತಿ ವಿಜಯ್ ಈಗಾಗಲೇ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದು, ಇನ್ನು ಚಿತ್ರರಂಗದ ದೂರ ಆಗಲಿದ್ದಾರಂತೆ. ದೊಡ್ಡ ಮಟ್ಟದ ಅಭಿಮಾನಿಗಳನ್ನು ಹೊಂದಿರೋ ʼಆಕ್ಷನ್ ಸ್ಟಾರ್ʼ ವಿಜಯ್ ಕೊನೇ ಸಿನಿಮಾ ರಿಲೀಸ್ ಆಗೋಕೆ ರೆಡಿ ಆಗಿದೆ.
ಕೊನೇ ಸಿನಿಮಾಕ್ಕೆ ಕ್ರೇಜ್ ಜಾಸ್ತಿ!
ವಿಜಯ್ ಅವರ ಕೊನೆಯ ಸಿನಿಮಾ ಎಂದು 'ಜನ ನಾಯಗನ್' ಚಿತ್ರವನ್ನು ಪರಿಗಣಿಸಲಾಗಿದೆ. ಈ ಸಿನಿಮಾ ನೋಡಲು ಪ್ರೇಕ್ಷಕರು ಕಾಯುತ್ತಿದ್ದಾರೆ. ಎಚ್ ವಿನೋದ್ ನಿರ್ದೇಶಿನದ ಈ ಸಿನಿಮಾವನ್ನು ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಗಿದೆ. ವಿಜಯ್ ಅವರ ಕೊನೆಯ ಸಿನಿಮಾ ಎನ್ನಲಾಗುತ್ತಿರುವ ಕಾರಣದಿಂದಾಗಿ ಚಿತ್ರದ ಬಗ್ಗೆ ದೊಡ್ಡ ಮಟ್ಟದ ಕ್ರೇಜ್ ಶುರುವಾಗಿದೆ. ಈಗ ಸಿನಿಮಾ ರಿಲೀಸ್ ದಿನಾಂಕ ಕೂಡ ಘೋಷಣೆಯಾಗಿದೆ.
ಟೋಪಿ ತೊಟ್ಟು, ನಮಾಜ್ ಮಾಡಿ ಇಫ್ತಾರ್ ಪಾರ್ಟಿಯಲ್ಲಿ ಭಾಗಿಯಾದ ನಟ ದಳಪತಿ ವಿಜಯ್!
‘ಜನ ನಾಯಗನ್’ ರಿಲೀಸ್ ಯಾವಾಗ?
ಕೆವಿಎನ್ ಪ್ರೊಡಕ್ಷನ್ಸ್ 'ಜನ ನಾಯಗನ್' ಪೋಸ್ಟರ್ ಶೇರ್ ಮಾಡಿಕೊಂಡಿದೆ. ಈ ಸಿನಿಮಾವು 2026 ರಲ್ಲಿ ಪೊಂಗಲ್ ಹಬ್ಬಕ್ಕಿಂತ ಮುಂಚೆ ಜನವರಿ 9 ರಂದು ರಿಲೀಸ್ ಆಗಲಿದೆ. ಈ ಹಿಂದೆ ವಿಜಯ್ ಅವರ ಅನೇಕ ಸಿನಿಮಾಗಳು ಪೊಂಗಲ್ ಹಬ್ಬದ ಸಮಯದಲ್ಲಿ ಬಿಡುಗಡೆಯಾಗಿವೆ. ಹಾಗಾಗಿ ಈಗಲೂ ಕೂಡ ಪೊಂಗಲ್ ಟೈಮ್‌ಗೆ ಸಿನಿಮಾ ರಿಲೀಸ್ ಆಗಲಿದೆಯಂತೆ. ದಳಪತಿ ವಿಜಯ್ ಕೊನೇ ಸಿನಿಮಾ ಎನ್ನುವ ಕಾರಣಕ್ಕೆ ಈ ಚಿತ್ರ ನೋಡಲು ವೀಕ್ಷಕರು ದೊಡ್ಡ ಮಟ್ಟದಲ್ಲಿ ಬರುವ ಸಾಧ್ಯತೆಗಳಿವೆ. ಇನ್ನು ಪೋಸ್ಟರ್‌ನಲ್ಲಿ ವಿಜಯ್ ದೊಡ್ಡ ಗುಂಪಿನೊಂದಿಗೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದಾರೆ. 'ಜನ ನಾಯಗನ್' ಎಂದರೆ ಜನರ ನಾಯಕ. ಇದನ್ನೇ ಇಟ್ಟುಕೊಂಡು ಕಥೆ ಹೆಣೆಯಲಾಗಿದೆ.
ದಳಪತಿ ವಿಜಯ್ ಪತ್ನಿ ಲಂಡನ್‌ನಲ್ಲಿ ಇರೋದಕ್ಕೆ ಕಾರಣವೇನು?
'ಜನ ನಾಯಗನ್' ದೊಡ್ಡ ಬಜೆಟ್ ಸಿನಿಮಾ
ಈ ಸಿನಿಮಾದಲ್ಲಿ ವಿಜಯ್ ಜೊತೆಗೆ ಪೂಜಾ ಹೆಗಡೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ದಕ್ಷಿಣ ಭಾರತದಲ್ಲಿ ಬ್ಯುಸಿ ಆಗಿರುವ ಪೂಜಾ ಹೆಗಡೆ ಕೆಲ ವರ್ಷಗಳಿಂದ ಸಾಲು ಸಾಲು ಸೋಲು ಸಿಕ್ಕಿತ್ತು. ಈ ಸಿನಿಮಾ ಏನಾಗಲಿದೆಯೋ ಏನೋ! ಇನ್ನು ನಟ ಬಾಬಿ ಡಿಯೋಲ್ ಅವರು ವಿಲನ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಗೌತಮ್ ವಾಸುದೇವ್ ಮೆನನ್, ಪ್ರಿಯಾಮಣಿ, ಶ್ರುತಿ ಹಾಸನ್, ಪ್ರಕಾಶ್ ರಾಜ್, ನರೇನ್, ಮೋಮಿತಾ ಬೈಜು ಮುಂತಾದವರು ಕೂಡ ನಟಿಸಿದ್ದಾರೆ.
ವೆಂಕಟ್ ಕೆ ನಾರಾಯಣ್, ಲೋಥಿನ್, ಜಗದೀಶ್ ಪಳನಿಸಾಮಿ ಮುಂತಾದವರು ಎನ್ ಕೆ ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ 'ಜನ ನಾಯಗನ್' ಸಿನಿಮಾಕ್ಕೆ ಬಂಡವಾಳ ಹೂಡಿದ್ದಾರೆ. ಒಟ್ಟಾರೆಯಾಗಿ ಈ ಚಿತ್ರಕ್ಕೆ ಸುಮಾರು 300 ಕೋಟಿ ರೂಪಾಯಿ ಬಜೆಟ್ ಎಂದು ಹೇಳಲಾಗುತ್ತಿದೆ.