ಭೀಕರ ಅಪಘಾತ: ಬಾಲಿವುಡ್​ ನಟ ಸೋನು ಸೂದ್ ಪತ್ನಿ ಸ್ಥಿತಿ ಗಂಭೀರ- ಕಾರು ನಜ್ಜುಗುಜ್ಜು; ನಟ ಹೇಳಿದ್ದೇನು?

ಬಾಲಿವುಡ್​ ನಟ ಸೋನು ಸೂದ್​ ಅವರ ಪತ್ನಿ, ಸಹೋದರಿ ಮತ್ತು ಅವರ ಮಗ ಪ್ರಯಾಣಿಸುತ್ತಿದ್ದ ಕಾರು ಭೀಕರ ಅಪಘಾತವಾಗಿದೆ. ಡಿಟೇಲ್ಸ್​ ಇಲ್ಲಿದೆ... 
 

Sonu Sood reacts to wife Sonali getting injured in a car accident She had a miraculous escape suc

ಬಾಲಿವುಡ್​ ನಟ ಸೋನು ಸೂದ್​ ಅವರ ಪತ್ನಿ ಪ್ರಯಾಣಿಸುತ್ತಿದ್ದ ಕಾರು ಭೀಕರ ಅಪಘಾತಕ್ಕೆ ಒಳಗಾಗಿದ್ದು, ಪತ್ನಿ ಸೋನಾಲಿ ಸ್ಥಿತಿ ಗಂಭೀರವಾಗಿದೆ. ಈ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಸೋನು ಸೂದ್ ಅವರ ಸಹೋದರಿ ಮತ್ತು ಅವರ ಮಗನಿಗೂ ಭಾರಿ ಪೆಟ್ಟು ಬಿದ್ದಿದ್ದು ಎಲ್ಲರಿಗೂ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕಾರು ಅಪಘಾತದ ಫೋಟೋಗಳು ವೈರಲ್​ ಆಗಿದ್ದು, ಇದರಲ್ಲಿ ಕಾರು ನಜ್ಜುಗುಜ್ಜಾಗಿರುವುದನ್ನು ನೋಡಬಹುದು.  ಮುಂಬೈ ನಾಗ್ಪುರ ಹೆದ್ದಾರಿಯ ಬಳಿ ನಿನ್ನೆ ತಡರಾತ್ರಿ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ.  ಅಪಘಾತದ ಬಗ್ಗೆ ಮಾಹಿತಿ ತಿಳಿದ ತಕ್ಷಣ ಸೋನು ಸೂದ್ ನಾಗ್ಪುರಕ್ಕೆ ತೆರಳಿದ್ದಾರೆ.

 ಕಾರು ಟ್ರಕ್‌ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿರುವುದಾಗಿ ಮಾಹಿತಿ ಲಭ್ಯವಾಗಿದೆ.  ಅಪಘಾತದಲ್ಲಿನ ಕಾರಿನ ಫೋಟೋ ನೋಡಿದಾಗ ಅಪಘಾತ ಅತಿ ವೇಗದಲ್ಲಿ ಸಂಭವಿಸಿದೆ ಎಂದು ತೋರುತ್ತದೆ.  ಈ ಬಗ್ಗೆ ಮಾತನಾಡಿರುವ ನಟ, ಪತ್ನಿ ಸುಧಾರಿಸಿಕೊಳ್ಳುತ್ತಿದ್ದಾರೆ. ಆದರೆ ಗಂಭೀರ ಗಾಯಗಳಾಗಿವೆ. ಅಪಘಾತ ನೋಡಿದರೆ ಪವಾಡಸದೃಶವಾಗಿ ಜೀವ ಉಳಿದಿದೆ ಎಂದಿದ್ದಾರೆ. ಅಪಘಾತದ ಬಳಿಕ ಸೋನಾಲಿ ಸೂದ್ ಹಾಗೂ ಅವರ ಸಹೋದರಿಯ ಮಗನನ್ನು ನಾಗಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಇಬ್ಬರಿಗೂ ತೀವ್ರ ಗಾಯಗಳು ಆಗಿವೆ ಎನ್ನಲಾಗಿದೆ. ಕೂಡಲೇ ಸೋನು ಸೂದ್ ಕೂಡ ಆಸ್ಪತ್ರಗೆ ತೆರಳಿದ್ದಾರೆ. ಮುಂದಿನ 48ರಿಂದ 72 ಗಂಟೆಗಳ ಕಾಲ ಇಬ್ಬರನ್ನೂ ಐಸಿಯುನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುವುದು ಎಂದು ಆಸ್ಪತ್ರೆ ಮೂಲಗಳು ತಿಳಿಸಿರುವುದಾಗಿ  ವರದಿ ಆಗಿದೆ.

Latest Videos

1952ರಲ್ಲಿ ಮಿಸ್ ಯೂನಿವರ್ಸ್​ ಸ್ಪರ್ಧಿಸಿದ್ದ ಭಾರತದ ಮೊದಲ ಮಹಿಳೆ ಇಂದ್ರಾಣಿ ರೆಹಮಾನ್​ ರೋಚಕ ಕಥೆ ಕೇಳಿ...

ಈ ಘಟನೆಯಿಂದ ಬಹುತೇಕಮಂದಿ ಶಾಕ್​ಗೆ ಒಳಗಾಗಿದ್ದಾರೆ.   ಸೋನು ಸೂದ್ ನಟನೆಗಿಂತಲೂ ಹೆಚ್ಚಾಗಿ ಅವರು  ಉದಾತ್ತ ಕಾರ್ಯಗಳಿಗೆ ಹೆಸರುವಾಸಿಯಾಗಿದ್ದಾರೆ. ಅವರು ನಿರ್ಗತಿಕರಿಗೆ ಸಹಾಯ ಮಾಡಲು ಎಂದಿಗೂ ಹಿಂಜರಿಯುವುದಿಲ್ಲ. ಇದೇ ಕಾರಣಕ್ಕೆ ಜನರು ಆತನನ್ನು ‘ರಿಯಲ್ ಹೀರೋ’  ಎಂಬ ಹೆಸರಿನಿಂದ ಕರೆಯುತ್ತಾರೆ. ಇವರು ಭಾರಿ ಪ್ರಚಾರಕ್ಕೆ ಬಂದಿದ್ದು ಕೊರೋನಾ ಸಂದರ್ಭದಲ್ಲಿ ಹಲವರಿಗೆ ಸಹಾಯ ಮಾಡುವ ಮೂಲಕ. ಆ ಸಮಯದಲ್ಲಿ ಹಲವಾರು ಮಂದಿ ಸೋನು ಅವರನ್ನು ನೆನಪಿಸಿಕೊಂಡಿದ್ದಿದೆ. ಯಾವಾಗಲೂ ಎಲ್ಲರಿಗೂ ಒಳ್ಳೆಯದನ್ನು ಮಾಡುವ ಸೋನು ಸೂದ್‌ ಅವರಿಗೆ ಇದೀಗ ಇಂಥದ್ದೊಂದು ಪರಿಸ್ಥಿತಿ ಬಂದಿರುವುದಕ್ಕೆ ಅಭಿಮಾನಿಗಳು ಶೋಕ ವ್ಯಕ್ತಪಡಿಸುತ್ತಿದ್ದಾರೆ. 

ಸೋನು ಸೂದ್ ಮತ್ತು ಸೋನಾಲಿ ಸೆಪ್ಟೆಂಬರ್ 25, 1996 ರಂದು ವಿವಾಹವಾದರು. ಈ ಜೋಡಿಯ ಪ್ರೇಮಕಥೆ ನಾಗ್ಪುರದಲ್ಲಿ ಎಂಜಿನಿಯರಿಂಗ್ ಓದುತ್ತಿರುವಾಗ ಪ್ರಾರಂಭವಾಯಿತು. ಆ ಸಮಯದಲ್ಲಿ ಸೋನಾಲಿ ಅಲ್ಲಿ ಎಂಬಿಎ ಓದುತ್ತಿದ್ದರು. ಇಬ್ಬರೂ ಹಲವು ವರ್ಷಗಳಿಂದ ಪರಸ್ಪರ ಡೇಟಿಂಗ್ ಮಾಡುತ್ತಿದ್ದರು. ಈ ದಂಪತಿ ಈಗ ಇಬ್ಬರು ಗಂಡು ಮಕ್ಕಳ ಪೋಷಕರು. ಈ ನಟ ತನ್ನ ವೈಯಕ್ತಿಕ ಜೀವನವನ್ನು ವೃತ್ತಿಪರ ಜೀವನದಿಂದ ದೂರವಿಡುತ್ತಾರೆ. 

ಆ ನಟನ ಕಾಲಿಗೆ ಏಟಾಯ್ತು, ಯಶ್​ಗೆ ಸ್ಟಾರ್​ ಪಟ್ಟದ ಜೊತೆ ಭಾವಿ ಪತ್ನಿಯೂ ಸಿಕ್ಕರು! ಈ ರೋಚಕ ಕಥೆ ಕೇಳಿ
  
 

vuukle one pixel image
click me!