
ಕೆಲ ತಿಂಗಳ ಹಿಂದೆ ನಟಿ ಶಿಲ್ಪಾ ಶೆಟ್ಟಿ ಪತಿ, ಉದ್ಯಮಿ ರಾಜ್ ಕುಂದ್ರಾ ಹೋದಲ್ಲಿ, ಬಂದಲ್ಲಿ ಮುಖ ಮುಚ್ಚಿಕೊಂಡು ಹೋಗುತ್ತಿದ್ದುದು ಭಾರಿ ಸದ್ದು ಮಾಡಿತ್ತು. ಬ್ಲೂ ಫಿಲ್ಮ್‌ಂ ಕೇಸ್‌ನಲ್ಲಿ ತಗ್ಲಾಕ್ಕೊಂಡಿದ್ದ ರಾಜ್ ಕುಂದ್ರಾ ಈ ರೀತಿಯಾಗಿ ಎಲ್ಲೆಡೆ ಮುಖ ಮುಚ್ಚಿಕೊಂಡು ತಿರುಗಾಡುತ್ತಿದ್ದರು. ಮಾಸ್ಕ್ ಹಾಕಿಕೊಂಡೇ ಭಾಷಣವನ್ನೂ ಮಾಡುತ್ತಿದ್ದರು. ಇದಕ್ಕಾಗಿ ಸಕತ್ ಟ್ರೋಲ್‌ಗೂ ಒಳಗಾಗಿದ್ದರು. ಇದೀಗ ಕುತೂಲಹದ ವಿಷಯ ಎನ್ನುವಂತೆ, ರಣವೀರ್ ಸಿಂಗ್ (Ranveer Singh) ಕೂಡ ಮುಖವನ್ನು ಸಂಪೂರ್ಣ ಮುಚ್ಚಿಕೊಂಡು ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ನಟ-ನಟಿಯರ ಹಿಂದೆ ಪಾಪರಾಜಿಗಳು ಇರುವುದು ಸಹಜ. ಫೋಟೋ, ವಿಡಿಯೋಶೂಟ್ ಮಾಡಿಸಿಕೊಳ್ಳುವ ಸಲುವಾಗಿ ಪಾಪರಾಜಿಗಳಿಗೆ ದುಡ್ಡು ಕೊಟ್ಟು ನಟರು ಕರೆಸಿಕೊಳ್ಳುತ್ತಾರೆ ಎಂದು ಇದಾಗಲೇ ನಟಿ ಪ್ರಿಯಾಮಣಿ ಹೇಳಿದ್ದಾರೆ. ಅದೇನೇ ಇದ್ದರೂ ಇದೀಗ ರಣವೀರ್ ಸಿಂಗ್ ಪಾಪರಾಜಿಗಳ ಕ್ಯಾಮೆರಾ ಕಣ್ಣಿಗೆ ಸಿಕ್ಕಿಬಿದ್ದಿದ್ದಾರೆ. ಅಷ್ಟಕ್ಕೂ ರಣವೀರ್ ಸಿಂಗ್ ಭಿನ್ನ ಶೈಲಿಯಲ್ಲಿ ಕಾಣಿಸಿಕೊಳ್ಳುವುದು ಮಾಮೂಲು. ಆದರೆ ಇದೀಗ ಸಂಪೂರ್ಣ ಮುಖ ಮುಚ್ಚಿಕೊಂಡು ಹೋಗಿದ್ದರಿಂದ ಎಲ್ಲರೂ ಶಿಲ್ಪಾ ಶೆಟ್ಟಿ ಪತಿಯಂತೆ ಏನಾದ್ರೂ ಎಡವಟ್ಟು ಆಯ್ತಾ ಎಂದು ನಟನ ಕಾಲೆಳೆಯುತ್ತಿದ್ದಾರೆ.
ಸಿನಿ ತಾರೆಯರ ಬಹುದೊಡ್ಡ ರಹಸ್ಯ ಬಿಚ್ಚಿಟ್ಟ ಪ್ರಿಯಾಮಣಿ: ನನಗೇ ಶಾಕ್ ಆಯಿತು ಎಂದ ನಟಿ
ಅಷ್ಟಕ್ಕೂ ನಟ ಹೀಗೆ ಮಾಡಲು ಕಾರಣ, ಅವರ ಮುಂಬರುವ ಚಿತ್ರ ‘ಡಾನ್ 3’ ಅಂತೆ! ಫರ್ಹಾನ್ ಅಖ್ತರ್ ನಿರ್ದೇಶನದ ಈ ಸಿನಿಮಾದಲ್ಲಿ ರಣವೀರ್ ಸಿಂಗ್ ಡಾನ್ ಪಾತ್ರ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಇವರದ್ದು ಕುತೂಹಲದ ಗೆಟಪ್ ಇದ್ದು, ಅದು ಮೊದಲೇ ರಿವೀಲ್ ಆಗಬಾರದು ಎನ್ನುವ ಕಾರಣಕ್ಕೆ ಮುಖ ಮುಚ್ಚಿಕೊಂಡಿದ್ದಾರೆ ಎನ್ನಲಾಗಿದೆ. ಅಷ್ಟಕ್ಕೂ ಈ ಚಿತ್ರ ಅಂದರೆ ಡಾನ್ 3’ ಸಿನಿಮಾ ಶೂಟಿಂಗ್ ಆರಂಭ ಆಗಿದೆ ಎಂಬ ಮಾಹಿತಿಯೂ ಇದೆ. ಇದೇ ಕಾರಣಕ್ಕೆ ಮೇಕಪ್ ಮಾಡಿಕೊಂಡಿರುವ ನಟ, ಅದು ಲುಕ್ ರಿವೀಲ್ ಆಗಬಾರದು ಎನ್ನುವ ಕಾರಣಕ್ಕೆ ಮುಖಕ್ಕೆ ಮಾಸ್ಕ್ ಧರಿಸಿ ಸಂಪೂರ್ಣ ಕವರ್ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ಈ ಗೆಟಪ್‌ನಲ್ಲಿ ವಿಭಿನ್ನ ಹೇರ್ಸ್ಟೈಲ್ ಕೂಡ ಒಂದು. ಇದೇ ಕಾರಣಕ್ಕೆ ಅದು ಕೂಡ ಕಾಣಬಾರದು ಎಂದು ಸಂಪೂರ್ಣ ತಲೆಯನ್ನೂ ಕವರ್ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದ್ದು, ಸದ್ಯ ಶೀಘ್ರದಲ್ಲಿ ಬಯಲಾಗಬೇಕಿದೆ. ‘ಡಾನ್’ ಹಾಗೂ ‘ಡಾನ್ 2’ ಸಿನಿಮಾಗಳಲ್ಲಿ ಶಾರುಖ್ ಖಾನ್ ಅವರು ಡಾನ್ ಪಾತ್ರ ಮಾಡಿದ್ದರು. ಈಗ ‘ಡಾನ್ 3’ ಚಿತ್ರದಲ್ಲಿ ರಣವೀರ್ ಸಿಂಗ್ ಅವರು ಈ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ‘ಡಾನ್’ ಸರಣಿಯಲ್ಲಿ ಪ್ರಿಯಾಂಕಾ ಚೋಪ್ರಾ ಅವರು ನಟಿಸಿದ್ದರು. ಅವರು ಈಗ ಅಮೆರಿಕದಲ್ಲಿ ಇರುವ ಕಾರಣ, ಅವರ ಪಾತ್ರದಲ್ಲಿ ಕಿಯಾರಾ ಅಡ್ವಾಣಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ.
ರಾಂಗ್ ರೂಟ್‌ನಲ್ಲಿ ಬಂದದ್ದೂ ಅಲ್ದೇ ಪೊಲೀಸರ ಮೇಲೆಯೇ ಹರಿಹಾಯ್ದು ಸಮವಸ್ತ್ರ ಹರಿದ ನಟಿ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.