ಹಾಗಿದ್ದರೆ ಯಾರದು, ಏನಾಗಿತ್ತು ಕಥೆ? ಇಲ್ಲಿದೆ ಅದಕ್ಕೆ ಉತ್ತರ.. ನಟ ಸಂಜಯ್ ದತ್ ತಮ್ಮ ಮೊಟ್ಟಮೊದಲ ಸಿನಿಮಾ 'ರಾಕಿ (Rocky)'ಯಲ್ಲಿ ನಾಯಕಿಯಾಗಿ ಜತೆಯಾಗಿ ನಟಿಸಿದ್ದ ಟೀನಾ ಮುನಿಮ್ ಜತೆ ಲವ್‌ಗೆ ಬಿದ್ದಿದ್ದರು ಎನ್ನಲಾಗಿದೆ. ಸಂಜಯ್ ದತ್ ಡ್ರಗ್ಸ್‌ಗೆ ಹೆಚ್ಚು ಅಡಿಕ್ಟ್ ಆಗುವವರೆಗೂ ಟೀನಾ-ಸಂಜಯ್ ಸಂಬಂಧ ಹಾಗೇ ಇತ್ತಂತೆ..
ಬಾಲಿವುಡ್ ಬ್ಯಾಡ್ ಬಾಯ್ ಎಂದೇ ಕುಖ್ಯಾತಿ ಹೊಂದಿದ್ದವರು ನಟ ಸಂಜಯ್ ದತ್. ಬಾಲಿವುಡ್ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಶುರುವಿನಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದ ಸಂಜಯ್ ದತ್ (Sanjay Dutt)ಕಾಲಕಳೆದಂತೆ ದುರ್ಶಚಟಗಳ ದಾಸರಾದರು. ಡ್ರಗ್ಸ್‌ಗೆ ಅಡಿಕ್ಟ್ ಆದ ಸಂಜಯ್ ದತ್ ಸಿನಿಮಾ ಸೆಟ್‌ಗಳಲ್ಲಿ ವಿಚಿತ್ರವಾಗಿ ಆಡಲು ಶುರುಮಾಡಿದ್ದರಂತೆ. ಈ ಕಾರಣಕ್ಕೆ ಅವರು ಹಲವು ಒಳ್ಳೆಯ ಅವಕಾಶಗಳನ್ನು ಕಳೆದುಕೊಂಡಿದ್ದರು ಎನ್ನಲಾಗಿದೆ. ಕೆಲವು ಡ್ರಗ್ಸ್ ಕೇಸ್‌ಗಳಲ್ಲಿ ಸಿಕ್ಕಿಹಾಕಿಕೊಂಡಿದ್ದ ನಟ ಸಂಜಯ್ ದತ್ ಒಮ್ಮೆ ಪರವಾನಿಗೆ ಇಲ್ಲದೇ ಗನ್ ಇಟ್ಟುಕೊಂಡಿದ್ದ ಕಾರಣಕ್ಕೆ ಹಲವು ಕಾಲ ಜೈಲುವಾಸ ಸಹ ಅನುಭವಿಸಿದ್ದರು.
ಸಂಜಯ್ ದತ್ ಬಯೋಪಿಕ್ ತೆರೆಗೆ ಬಂದಿದ್ದು, ಬಾಕ್ಸ್ ಆಫೀಸ್‌ನಲ್ಲಿ ಸೂಪರ್ ಹಿಟ್ ಆಗಿದ್ದು ಎಲ್ಲವೂ ಈಗ ಇತಿಹಾಸ. ರಣಬೀರ್ ಕಪೂರ್ (Ranbir Kapoor) ನಾಯಕರಾಗಿ ನಟಿಸಿದ್ದ ನಟ ಸಂಜಯ್ ದತ್ ಅವರ ಬಯೋಪಿಕ್‌ನಲ್ಲಿ ನಟನ ಜೀವನದ ಹಲವು ಸೀಕ್ರೆಟ್‌ಗಳನ್ನು ರಿವೀಲ್ ಮಾಡಲಾಗಿದೆ. ಅದರಲ್ಲಿ ಒಂದು ನಾಯಕಿ ನಟಿಯೊಬ್ಬರ ಜತೆ ಲವ್ ಅಫೇರ್ ಇಟ್ಟುಕೊಂಡಿದ್ದ ನಟ ಸಂಜಯ್ ದತ್ ಅದು ಬ್ರೇಕಪ್ ಆದಾಗ ಭಾರೀ ಕೋಪಗೊಂಡು ಬಾಲಿವುಡ್‌ನ ಒಬ್ಬರು ಸೂಪರ್ ಸ್ಟಾರ್‌ಗೆ ಹೊಡೆಯಲು ಹೋಗಿದ್ದರಂತೆ.
ನಟಿ-ನಿರ್ಮಾಪಕಿ ಆಗುವ ಮೊದಲು 'ಸ್ಯಾಂಡಲ್‌ವುಡ್ ಸ್ವೀಟಿ' ರಾಧಿಕಾ ಲೈಫ್‌ನಲ್ಲಿ ಏನೇನೆಲ್ಲಾ ಆಗಿತ್ತು?
ಹಾಗಿದ್ದರೆ ಯಾರದು, ಏನಾಗಿತ್ತು ಕಥೆ? ಇಲ್ಲಿದೆ ಅದಕ್ಕೆ ಉತ್ತರ.. ನಟ ಸಂಜಯ್ ದತ್ ತಮ್ಮ ಮೊಟ್ಟಮೊದಲ ಸಿನಿಮಾ 'ರಾಕಿ (Rocky)'ಯಲ್ಲಿ ನಾಯಕಿಯಾಗಿ ಜತೆಯಾಗಿ ನಟಿಸಿದ್ದ ಟೀನಾ ಮುನಿಮ್ (Tina Munim)ಜತೆ ಲವ್‌ಗೆ ಬಿದ್ದಿದ್ದರು ಎನ್ನಲಾಗಿದೆ. ಸಂಜಯ್ ದತ್ ಡ್ರಗ್ಸ್‌ಗೆ ಹೆಚ್ಚು ಅಡಿಕ್ಟ್ ಆಗುವವರೆಗೂ ಟೀನಾ-ಸಂಜಯ್ ಸಂಬಂಧ ತುಂಬಾ ಸ್ಟ್ರಾಂಗ್ ಆಗಿಯೇ ಇತ್ತಂತೆ. ಆದರೆ, ಸಂಜಯ್ ದುಶ್ಚಟಗಳ ದಾಸನಾದಾಗ ಟೀನಾ ದೂರವಾದರು. ಆದನ್ನು ಅಪಾರ್ಥ ಮಾಡಿಕೊಂಡ ಸಂಜಯ್, ಅವಳು ಆಗ ನಟಿಸುತ್ತಿದ್ದ 'ಸೌತೇನ್ (Souten)ಸಿನಿಮಾ ನಾಯಕ ನಟ ರಾಜೇಶ್ ಖನ್ನಾ ಮೇಲೆ ಕೋಪಗೊಂಡಿದ್ದರಂತೆ.
ನೋಡುಗರಿಗೆ, ಕೇಳುಗರಿಗೆ ಅಸಹ್ಯ ಅನಿಸಬಾರದು; ಹಾಗೆ ಮಾತನಾಡಬೇಕು: ನಟ ಪ್ರಕಾಶ್ ರಾಜ್
ಮೊದಲೇ ಡ್ರಗ್ಸ್ ಚಟಕ್ಕೆ ಬಿದ್ದಿದ್ದ ನಟ ಸಂಜಯ್ ದತ್ ಕೋಪಗೊಂಡಿದ್ದಾರೆ ಎಂದರೆ ಕೇಳಬೇಕೆ? ರಾಜೇಶ್ ಖನ್ನಾಗೆ ಹೊಡೆಯಲು ಮೆಹಬೂಬ್ ಸ್ಟುಡಿಯೋಸ್ (Mehboob Studios)ಗೆ ಹೋಗಿದ್ದರಂತೆ. ಅಲ್ಲಿ ಶೂಟಿಂಗ್‌ನಲ್ಲಿ ನಿರತರಾಗಿದ್ದ ನಟ ರಾಜೇಶ್ ಖನ್ನಾ ಶೂಟಿಂಗ್ ಮಧ್ಯೆ ವಿಶ್ರಾಂತಿ ವೇಳೆ ಚೇರ್ ಎಳೆದುಕೊಂಡು ಒಂದು ಕಡೆ ಕುಳಿತುಕೊಂಡಾಗ ಅವರ ಎದುರು ಹೋಗಿ ಇನ್ನೊಂದು ಚೇರ್ ಎಳೆದುಕೊಂಡು ಸಂಜಯ್ ದತ್ ಕುಳಿತುಕೊಂಡು ಅವರನ್ನೇ ಗುರಾಯಿಸುತ್ತಿದ್ದರಂತೆ.
ಕೊನೆಗೂ ಅಕ್ಕನಿಗೆ ಒಳ್ಳೇ ಜೋಡಿ ಸಿಕ್ತು; ಜಸ್ಕರಣ್-ಅನುಶ್ರೀ ಫೋಟೋಗೆ ಬಂದೇಬಿಡ್ತು ಕಾಮೆಂಟ್!
ಆದರೆ, ಸಂಜಯ್ ದತ್ ಯಾಕೆ ಬಂದಿದ್ದಾರೆ, ಮನಸ್ಸಿನಲ್ಲಿ ಏನಿದೆ ಎಂಬುದನ್ನು ಅರಿಯದ ರಾಜೇಶ್ ಖನ್ನಾ ಏನು ಮಾಡಬೇಕೆಂದು ತೋಚದೇ 'ಸ್ಟಿಲ್' ಆಗಿದ್ದರಂತೆ. ಆಗ ಸಂಜಯ್ ದತ್ ಕೂಡ 'ಅದೃಷ್ಟವಂತ' ಎಂದು ಭಾವಿಸಿ ಸುಮ್ಮನಾಗಿಬಿಟ್ಟರಂತೆ. ಸಂಜಯ್ ದತ್ ಬಯೋಪಿಕ್‌ನಲ್ಲಿ ಅದೆಷ್ಟೋ ಇಂತಹ ಕಥೆಗಳಿವೆ. ಅದರಲ್ಲೊಂದು ಈ ಟೀನಾ ಮುನಿಮ್-ಸಂಜಯ್‌ದತ್ ಲವ್ ಸ್ಟೋರಿ. ಒಟ್ಟಿನಲ್ಲಿ, ಬಾಲಿವುಡ್ ಬ್ಯಾಡ್ ಬಾಯ್ ಸಂಜಯ್‌ದತ್ ಈಗ ಎಲ್ಲ ದುರ್ಶಚಟಗಳಿಂದ ಅಚೆ ಬಂದಿದ್ದಾರೆ ಎಂಬಂತೆ ಮತ್ತೆ ನಟಿಸುತ್ತಿದ್ದಾರೆ. ಕನ್ನಡದ ವಿಶ್ವವಿಖ್ಯಾತ 'ಕೆಜಿಎಫ್' ಸರಣಿ ಸಿನಿಮಾಗಳಲ್ಲಿ ಕೂಡ ಸಂಜಯ್ ದತ್ ವಿಲನ್ ಆಗಿ ಅಬ್ಬರಿಸಿ ಮೆಚ್ಚುಗೆ ಗಳಿಸಿದ್ದಾರೆ.
ನಟ ವಿನೋದ್ ರಾಜ್ ಮದುವೆ ಗುಟ್ಟಾಗಿ ಇಟ್ಟಿದ್ದು ಯಾಕೆ; ಸ್ಪಷ್ಟ ಉತ್ತರ ಇಲ್ಲಿದೆ ನೋಡಿ!