ರಾಂಗ್‌ ರೂಟ್‌ನಲ್ಲಿ ಬಂದದ್ದೂ ಅಲ್ದೇ ಪೊಲೀಸರ ಮೇಲೆಯೇ ಹರಿಹಾಯ್ದು ಸಮವಸ್ತ್ರ ಹರಿದ ನಟಿ!

By Suvarna NewsFirst Published Feb 28, 2024, 2:02 PM IST
Highlights

ರಾಂಗ್‌ ರೂಟ್‌ನಲ್ಲಿ ಬಂದ ಬಗ್ಗೆ ಪ್ರಶ್ನಿಸಿದ ಟ್ರಾಫಿಕ್‌ ಪೊಲೀಸ್‌ ಮೇಲೆ ಹಲ್ಲೆ ಮಾಡಿದ್ದಾರೆ ಈ ನಟಿ. ವೈರಲ್‌ ವಿಡಿಯೋ ಬಳಿಕ ಮಾಡಿದ್ದೇನು?
 

ಕೆಲವು ದೊಡ್ಡ ಮನುಷ್ಯರಿಗೆ ತಾವು ಮಾಡಿದ್ದೆಲ್ಲವೂ ಸರಿ ಎನ್ನಿಸುತ್ತದೆ. ಶ್ರೀಮಂತಿಕೆ, ಪ್ರಸಿದ್ಧಿಯ ಮದ ನೆತ್ತಿಗೇರುವ ಕಾರಣ, ಯಾವುದೇ ಕಾನೂನು ಉಲ್ಲಂಘನೆ ಮಾಡಿದರೂ ಅವರನ್ನು ಯಾರೂ ಪ್ರಶ್ನಿಸುವಂತಿಲ್ಲ ಎನ್ನುವ ಮನೋಭಾವ ಇರುತ್ತದೆ. ಅದರಲ್ಲಿಯೂ ಕೆಲವು ಸೆಲೆಬ್ರಿಟಿಗಳಿಗೆ ಈ ಹುಚ್ಚು ಅಧಿಕವಾಗಿರುತ್ತದೆ.  ಹಲವು ನಟ, ನಟಿಯರು, ಶ್ರೀಮಂತರ ಮಕ್ಕಳು ಡ್ರಂಕ್‌ ಆಂಡ್‌ ಡ್ರೈವ್‌ ಕೇಸ್‌ನಲ್ಲಿ ಸಿಲುಕಿದ್ದಾಗ ಆಗಿರುವ ರಾದ್ಧಾಂತಗಳ ವರದಿ ಆಗುತ್ತಲೇ ಇರುತ್ತದೆ. ಇದೀಗ ಅಂಥದ್ದೇ ಒಂದು ಘಟನೆ ನಡೆದಿದೆ. ನಟಿಯೊಬ್ಬರು ರಾಂಗ್‌ ರೂಟ್‌ನಲ್ಲಿ ಬಂದಿದ್ದೂ ಅಲ್ಲದೇ, ಕರ್ತವ್ಯ ನಿರತ ಪೊಲೀಸರಿಗೇ ಆವಾಜ್‌ ಹಾಕಿ ಸುದ್ದಿಯಾಗಿದ್ದಾರೆ.

ಅಂದಹಾಗೆ ಈ ನಟಿಯ ಹೆಸರು ಸೌಮ್ಯ ಜಾನು. ಇವರ ಪರಿಚಯ ಇದ್ದವರು ಕಮ್ಮಿಯೇ. ಏಕೆಂದರೆ, ಟಾಲಿವುಡ್ ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ನಟಿಸುವ ಈ ನಟಿ ಮಾಡಿರುವ ರಾದ್ಧಾಂತದಿಂದ ಭಾರಿ ಫೇಮಸ್‌ ಆಗಿದ್ದಾರೆ ಈಕೆ. ತಮ್ಮ ಜಾಗ್ವಾರ್ ಕಾರಿನಲ್ಲಿ ಪ್ರಯಾಣಿಸುವಾಗ ರಾಂಗ್ ರೂಟ್‌ನಲ್ಲಿ ಕಾರು ಚಲಾಯಿಸಿದ್ದ ನಟಿ, ಟ್ರಾಫಿಕ್ ಪೊಲೀಸ್‌ಗೆ ಆವಾಜ್‌ ಹಾಕಿ ಭಾರಿ ಸುದ್ದಿಯಾಗಿದ್ದಾರೆ. ಟ್ರಾಫಿಕ್‌ ಪೊಲೀಸ್‌  ಕಾರು ತಡೆದು . ದಂಡ ಕಟ್ಟುವಂತೆ ಹೇಳಿದ್ದ ಕಾರಣ, ಈಕೆಯ ಕೋಪ ನೆತ್ತಿಗೇರಿದೆ. ಎಷ್ಟೆಂದರೂ ಸೆಲೆಬ್ರಿಟಿ ಅಲ್ಲವೆ? ತಾವ್ಯಾಕೆ ದಂಡ ಕಟ್ಟಬೇಕು ಎಂದು ಕೇಳಿದ್ದೂ ಅಲ್ಲದೇ ನಡು ರಸ್ತೆಯಲ್ಲಿಯೇ  ಗಲಾಟೆ ಶುರು ಮಾಡಿದ್ದಾರೆ.

100 ಕೋಟಿ ಕೊಟ್ಟರೂ ಈ ನಟನ ಜೊತೆ ನಟಿಸಲ್ಲ ಎನ್ನುತ್ತಲೇ ಭಾರಿ ಆಫರ್​ ರಿಜೆಕ್ಟ್​ ಮಾಡಿದ ನಯನತಾರಾ!
  
 ಹೈದರಾಬಾದ್‌ನ ಬಂಜಾರ ಹಿಲ್ಸ್‌ನಲ್ಲಿ ಈ ಘಟನೆ ನಡೆದಿದೆ. ಸೌಮ್ಯ ಹಾಗೂ ಟ್ರಾಫಿಕ್ ಹೋಮ್ ಗಾರ್ಡ್​​ಗಳ ನಡುವಣ ವಾಗ್ವಾದದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನಟಿ ಟ್ರಾಫಿಕ್ ಹೋಮ್ ಗಾರ್ಡ್​​ಗೆ ಬಾಯಿಗೆ ಬಂದಂತೆ ಬೈದಿದ್ದಾರೆ. ಈ ವೇಳೆ ಅವರು ಟ್ರಾಫಿಕ್ ಗಾರ್ಡ್​ಗಳ ಮೊಬೈಲ್ ಕಸಿದುಕೊಂಡಿದ್ದಾರೆ ಎನ್ನಲಾಗಿದೆ. ಪೊಲೀಸ್‌ರ ಸಮವಸ್ತ್ರವನ್ನೂ ನಟಿ ಹರಿದಿದ್ದಾರೆ ಎನ್ನಲಾಗಿದೆ.  ಈ ಹಿನ್ನೆಲೆಯಲ್ಲಿ ಬಂಜಾರ ಹಿಲ್ಸ್ ಪೊಲೀಸರು ಆಕೆಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದರ ವಿಡಿಯೋ  ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆಯೇ ನಟಿ ಎಚ್ಚೆತ್ತುಕೊಂಡಿದ್ದಾರೆ.


ಘಟನೆಯ ವಿಡಿಯೋ ವೈರಲ್ ಆದ ನಂತರ, ನಟಿ ಸ್ಥಳೀಯ ಚಾನೆಲ್ ಅನ್ನು ಸಂಪರ್ಕಿಸಿದ್ದಾರೆ. ತುರ್ತು ಸಂದರ್ಭದಲ್ಲಿ ರಾಂಗ್‌ ರೂಟ್‌ನಲ್ಲಿ ಕಾರು ಚಲಾಯಿಸಿದೆ ಅದು ತಪ್ಪಾ ಎಂದು ಪ್ರಶ್ನಿಸಿರುವ ನಟಿ, ನಾನು ಯಾವುದೇ ತಪ್ಪು ಮಾಡಿಲ್ಲ ಎಂದಿದ್ದಾರೆ. ಟ್ರಾಫಿಕ್ ಹೋಮ್ ಗಾರ್ಡ್ ನನ್ನನ್ನು ನನ್ನನ್ನು ಕೆಟ್ಟದಾಗಿ ನಿಂದಿಸಿದರು. ಹಾಗಾಗಿ ನಾನು ಗರಂ ಆಗಿದ್ದೆ ಎಂದು ಸ್ಪಷ್ಟನೆ ಕೊಡಲು ಮುಂದಾಗಿದ್ದಾರೆ. ನಾನು ಕುಡಿದು ಕಾರು ಚಲಾಯಿಸುತ್ತಿದ್ದೆ ಎಂದು ಕೆಲವರು ಹೇಳುತ್ತಾರೆ. ಆದರೆ ನನಗೆ ಕುಡಿಯುವ ಅಭ್ಯಾಸವೇ ಇಲ್ಲ, ಬೇಕಿದ್ದರೆ ಪರೀಕ್ಷೆ ಮಾಡಿ ಎಂದಿದ್ದಾರೆ. ಅಂದಹಾಗೆ ನಟಿ, ಸೌಮ್ಯ ಜಾನು 'ತಡಾಕ', 'ಚಂದಮಾನ ಕಥಲು' ಹಾಗೂ 'ಲಯನ್' ಸೇರಿದಂತೆ ಒಂದಷ್ಟು ಸಿನಿಮಾಗಳಲ್ಲಿ ಸಣ್ಣ ಪುಟ್ಟ ಪಾತ್ರಗಳನ್ನು ಮಾಡಿದ್ದಾರೆ.

ಡಿವೋರ್ಸ್‌ ಸುದ್ದಿ ಬೆನ್ನಲ್ಲೇ ಅಭಿಷೇಕ್‌ ಬಚ್ಚನ್‌ ರಹಸ್ಯ ಪೋಸ್ಟ್‌: ಪ್ರಚಾರದ ಹುಚ್ಚು ಅತಿಯಾಯ್ತು ಎಂದ ನೆಟ್ಟಿಗರು!

 

Telugu actress Sowmya Janu attacked a traffic home guard after she was stopped by the guard for driving her Jaguar car on the wrong side in Banjara Hills, Hyderabad. In the video she is admitting that she was driving in the wrong direction but still she is defending her action. pic.twitter.com/mvov3dSVMr

— NCMIndia Council For Men Affairs (@NCMIndiaa)
click me!