ರಣವೀರ್ ಸಿಂಗ್ ದಂಪತಿ ಮುಂಬೈನಲ್ಲಿ ಹೊಸ ಮನೆ ಖರೀದಿ ಮಾಡಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಐಷಾರಾಮಿ ಮನೆ ಖರೀದಿ ಮಾಡಿರುವ ರಣವೀರ್ ಸಿಂಗ್ , ಹೊಸ ಮನೆಯ ಪ್ರಕ್ರಿಯೆ ಜುಲೈ 8ಕ್ಕೆ ಪೂರ್ಣಗೊಂಡಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಬಾಲಿವುಡ್ ಸ್ಟಾರ್ ಕಪಲ್ ದೀಪಿಕಾ ಪಡುಕೋಣೆ (Deepika Padukone) ಮತ್ತು ರಣವೀರ್ ಸಿಂಗ್ (Ranveer Singh) ಒಂದಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ದೀಪಿಕಾ ಮತ್ತು ರಣವೀರ್ ದಂಪತಿ ಇತ್ತೀಚಿಗಷ್ಟೆ ವಿದೇಶಿ ಪ್ರವಾಸಕ್ಕೆ ತೆರಳಿದ್ದರು. ನಿನ್ನ (ಜುಲೈ 10) ಮುಂಬೈ ವಾಪಾಸ್ ಆಗಿರುವ ಈ ದಂಪತಿ ಇದೀಗ ಹಗೊಸ ಮನೆ ವಿಚಾರವಾಗಿ ಸದ್ದು ಮಾಡುತ್ತಿದ್ದಾರೆ. ಹೌದು ರಣವೀರ್ ಸಿಂಗ್ ದಂಪತಿ ಮುಂಬೈನಲ್ಲಿ ಹೊಸ ಮನೆ ಖರೀದಿ ಮಾಡಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಐಷಾರಾಮಿ ಮನೆ ಖರೀದಿ ಮಾಡಿರುವ ರಣವೀರ್ ಸಿಂಗ್ , ಹೊಸ ಮನೆಯ ಪ್ರಕ್ರಿಯೆ ಜುಲೈ 8ಕ್ಕೆ ಪೂರ್ಣಗೊಂಡಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಅಂದಹಾಗೆ ಸದ್ಯ ದೀಪಿಕಾ ದಂಪತಿ ಖರೀದಿ ಮಾಡಿರುವ ಮನೆ ಶಾರುಖ್ ಖಾನ್ (Shah Rukh Khan) ಅವರ ಮನ್ನತ್ (Mannat) ನಿವಾಸ ಮತ್ತು ಸಲ್ಮಾನ್ ಖಾನ್ (Salman Khan) ಅವರ ಗ್ಯಾಲಾಕ್ಸಿ ನಿವಾಸದ ಪಕ್ಕದಲ್ಲೇ ಇದೆಯಂತೆ. ಇದೀಗ ದೀಪಿಕಾ ದಂಪತಿಗೆ ಶಾರುಖ್ ಮತ್ತು ಸಲ್ಮಾನ್ ಇಬ್ಬರೂ ಪಕ್ಕದ ಮನೆಯವರಾಗಿದ್ದಾರೆ. ಅಂದಹಾಗೆ ರಣವೀರ್ ಸಿಂಗ್ ಖರೀದಿ ಮಾಡಿರುವ ಹೊಸ ಮನೆ ಸಮುದ್ರದ ವೀವ್ಯೂ ಇದೆಯಂತೆ. 16, 17, 18 ಮತ್ತು 19ನೇ ಮಹಡಿ ಇವರದ್ದಾಗಿದೆ. 19ನೇ ಮಹಡಿಯಲ್ಲಿ ಪಾರ್ಕಿಂಗ್ ಜಾಗ ಕೂಡ ಇದೆಯಂತೆ. ಹೊಸ ಅಪಾರ್ಟ್ಮೆಂಟ್ 11,266 ಚದರ ಅಡಿ ಕಾರ್ಪೆಟ್ ಪ್ರದೇಶ ಮತ್ತು 1,300 ಚದರ ಅಡಿ ವಿಶೇಷ ಟೆರೇಸ್ ಹೊಂದಿದೆ.
ರಣವೀರ್ ಸಿಂಗ್ ಮತ್ತು ಅವರ ತಂದೆಯ ಸಂಸ್ಥೆಯು ಈ ಮನೆ ಖರೀದಿಸಲು ಒಟ್ಟು 7.13 ಕೋಟಿ ಮೌಲ್ಯದ ಸ್ಟ್ಯಾಂಪ್ ಪಾವತಿಸಿದೆ. ಇಷ್ಟೆಲ್ಲ ಇರುವ ಈ ಹೊಸ ಮನೆಯ ಬೆಲೆ ಕೇಳಿದ್ರೆ ನಿಜಕ್ಕೂ ಅಚ್ಚರಿ ಪಡುತ್ತೀರಿ. ಐಷಾರಾಮಿ ಮನೆ ಅಂದ್ಮೇಲೆ ಬೆಲೆ ಕೂಡ ಅಷ್ಟೆ ಇರಲಿದೆ. ಅಂದಹಾಗೆ ಈ ಮನೆಯ ಬೆಲೆ ಬರೋಬ್ಬರಿ 118.94 ಕೋಟಿ ರೂಪಾಯಿ.
ವ್ಯಾನಿಟಿ ವ್ಯಾನ್‌ನಲ್ಲಿ ಸೆಕ್ಸ್ ನಿಂದ ಹನಿಮೂನ್ ವರೆಗೆ ಎಲ್ಲಾ ವಿಷಯ ಬಿಚ್ಚಿಟ್ಟ ರಣವೀರ್
ಇನ್ನು ರಣವೀರ್ ಸಿಂಗ್ ಸಿನಿಮಾ ವಿಚಾರಕ್ಕೆ ಬರುವುದಾದರೆ ಸದ್ಯ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಅಲಿಯಾ ಭಟ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಸಿನಿಮ ಕರಣ್ ಜೋಹರ್ ಸಾರಥ್ಯದಲ್ಲಿ ಮೂಡಿಬರುತ್ತಿದೆ. ನಿರ್ದೇಶನದ ಜೊತೆಗೆ ನಿರ್ಮಾಣದ ಜವಾಬ್ದಾರಿ ಕೂಡ ಕರಣ್ ಮೇಲಿದೆ. ಇನ್ನು ರೋಹಿತ್ ಶೆಟ್ಟಿ ನಿರ್ದೇಶನದ ಸರ್ಕ ಸ್ ಸಿನಿಮಾದ ಚಿತ್ರೀಕರಣದಲ್ಲಿಯೂ ನಿರತರಾಗಿದ್ದಾರೆ. ಇನ್ನು ತಮಿಳು ನಿರ್ದೇಶಕ ಶಂಕರ್ ಜೊತೆ ಅನ್ನಿಯನ್ ರಿಮೇಕ್ ಕೂಡ ರಣವೀರ್ ಕೈಯಲ್ಲಿದೆ.
ಕೊಂಕಣಿ ಸಮಾವೇಶದಲ್ಲಿ ಅಭಿಮಾನಿಗಳನ್ನು ನಗೆಗಡಲಲ್ಲಿ ತೇಲಿಸಿದ ವೀರ್‌ದೀಪ್ಸ್: ವಿಡಿಯೋ ವೈರಲ್
ದೀಪಿಕಾ ಪಡುಕೋಣೆ ಸಹ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಶಾರುಖ್ ಖಾನ್ ಜೊತೆ ಪಠಾಣ್ ಸಿನಿಮಾದ ಚಿತ್ರೀಕರಣ ಮುಗಿಸಿರುವ ದೀಪಿಕಾ ಸದ್ಯ ಪ್ರಭಾಸ್ ಜೊತೆ ಇನ್ನು ಹೆಸರಿಡದ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಮೊದಲ ಬಾರಿಗೆ ದೀಪಿಕಾ ತೆಲುಗು ಸ್ಟಾರ್ ಪ್ರಭಾಸ್ ಜೊತೆ ನಟಿಸುತ್ತಿದ್ದಾರೆ. ಈ ಸಿನಿಮಾಕ್ಕೆ ನಾಗ್ ಅಶ್ವಿನ್ ಆಕ್ಷನ್ ಕಟ್ ಹೇಳುತ್ತಿದ್ದಾರೆ.