ತಮ್ಮ ಜೀವನದ ಹಲವು ಘಟನೆಗಳನ್ನು ವಿವರಿಸಿರುವ ನಟ ರಣಬೀರ್ ಕಪೂರ್ ಅವರಿಗೆ 71ನೇ ವಯಸ್ಸಿನಲ್ಲಿ ಸಾಯುವ ಆಸೆ ಇತ್ತಂತೆ. ಇದಕ್ಕೆ ಕಾರಣ ಹೀಗಿದೆ...
ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಅವರನ್ನು ಸಿನಿಮಾಗಳಲ್ಲಿ ಮತ್ತು ನಿಜ ಜೀವನದಲ್ಲಿ ಜನರು ತುಂಬಾ ಇಷ್ಟಪಡುತ್ತಾರೆ. ಅದು ಆನ್‌ಸ್ಕ್ರೀನ್ ಅಥವಾ ಆಫ್ ಸ್ಕ್ರೀನ್ ಆಗಿರಲಿ, ಅವರ ಕೆಮಿಸ್ಟ್ರಿ ಎಲ್ಲೆಡೆ ಇಷ್ಟವಾಗುತ್ತದೆ. ಇತ್ತೀಚೆಗೆ ರಣಬೀರ್ ಕಪೂರ್ ನಿಖಿಲ್ ಕಾಮತ್ ಅವರ ಪಾಡ್‌ಕಾಸ್ಟ್‌ನಲ್ಲಿ ಕಾಣಿಸಿಕೊಂಡಿದ್ದರು. ಈ ವೇಳೆ ತಮ್ಮ ಜೀವನದ ಹಲವು ವಿಷಯಗಳ ಕುರಿತು ಮಾತನಾಡಿದ್ದಾರೆ. ಅಷ್ಟಕ್ಕೂ ರಣಬೀರ್ ಕಪೂರ್ ಅವರು ತಮ್ಮ ವೈಯಕ್ತಿಯ ಜೀವನದ ಕುರಿತು ಓಪನ್ಅಪ್ ಆಗಿದ್ದು ಕಡಿಮೆ. ಏಕೆಂದ್ರೆ ಅವರಿಗೆ ಹೀಗೆ ಮಾತನಾಡುವುದಕ್ಕೆ ಹೆದರಿಕೆ ಎಂದಿದ್ದಾರೆ. ಇದೇ ಕಾರಣದಿಂದಾಗಿಯೇ ಸೋಷಿಯಲ್ ಮೀಡಿಯಾದಲ್ಲಿ ಕೂಡ ಅವರು ಕಾಣಿಸಿಕೊಳ್ಳುವುದಿಲ್ಲ. ಕುತೂಹಲ ಎಂದರೆ ಸಾಮಾಜಿಕ ಜಾಲತಾಣದಲ್ಲಿ ಯಾವುದೇ ಖಾತೆ ಹೊಂದಿಲ್ಲ. ಆದರೆ ಇದೀಗ ಕೆಲವು ವಿಷಯಗಳನ್ನು ಶೇರ್ ಮಾಡಿಕೊಂಡಿದ್ದಾರೆ.
ಮದುವೆಯಾದ ಮೇಲೆ ಹೇಗೆ ತಮ್ಮ ಜೀವನ ಬದಲಾಯಿತು, ರಾಹಾ ಬಂದ ಮೇಲೆ ಮತ್ತಷ್ಟು ಹೇಗೆ ಬದಲಾದೆ ಎಂಬ ಬಗ್ಗೆ ನಟ ಹೇಳಿಕೊಂಡಿದ್ದಾರೆ. ಮದುವೆಯ ನಂತರ ಜೀವನದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಆಲಿಯಾ ಮತ್ತು ನಾನು ಒಬ್ಬರಿಗೊಬ್ಬರು ಹೊಂದಿಕೊಳ್ಳುತ್ತಿದ್ದೇವೆ. ಇದರಿಂದ ನಾವು ಒಟ್ಟಿಗೆ ಬದುಕುವ ಸಾಮರ್ಥ್ಯ ಹೊಂದಿದ್ದೇವೆ. ಆಲಿಯಾ ಕೂಡ ಎರಡನ್ನೂ ಚೆನ್ನಾಗಿ ಬ್ಯಾಲೆನ್ಸ್ ಮಾಡುತ್ತಿದ್ದಾಳೆ ಎನ್ನುತ್ತಲೇ ಮಗಳು ಹುಟ್ಟಿದ ಮೇಲೆ ಆದ ಬದಲಾವಣೆ ಕುರಿತು ನಟ ಹೇಳಿಕೊಂಡಿದ್ದಾರೆ. ರಾಹಾ ಜನಿಸಿದ ಬಳಿಕ ನನ್ನ ಇಡೀ ಜೀವನವೇ ಬದಲಾಗಿ ಹೋಯಿತು ಎಂದಿರುವ ನಟ, ಆಗಲೇ ಆರೋಗ್ಯದ ಬಗ್ಗೆ ಕಾಳಜಿ ಮೂಡಿತು. ಇದು ಎಷ್ಟರ ಮಟ್ಟಿಗೆ ಎಂದರೆ ನಾನು ಸ್ಮೋಕ್ ಮಾಡುವುದನ್ನೇ ಬಿಟ್ಟುಬಿಟ್ಟೆ ಎಂದಿದ್ದಾರೆ.
ಸ್ಟೈಲ್ನಲ್ಲಿ ಅಮ್ಮನನ್ನೇ ಮೀರಿಸ್ತಿದ್ದಾಳೆ ಪುಟಾಣಿ ರಾಹಾ: ಆಲಿಯಾ ಪುತ್ರಿಯ ಕ್ಯೂಟ್ ವಿಡಿಯೋ ವೈರಲ್
17ನೇ ವಯಸ್ಸಿನಿಂದ ಸಿಗರೇಟ್ ಸೇದೋಕೆ ಆರಂಭಿಸಿದೆ. ಅದು ನನಗೆ ಚಟವಾಗಿತ್ತು. ಕಳೆದ ವರ್ಷ ನಾನು ಸಿಗರೇಟ್ ಬಿಟ್ಟೆ. ನಾನು ತಂದೆ ಆದ ಬಳಿಕ ತುಂಬಾನೇ ಅನಾರೋಗ್ಯಕರ ಜೀವನ ನಡೆಸುತ್ತಿದ್ದೇನೆ ಎನಿಸಿತು. ಅದಕ್ಕಾಗಿ ಸಿಗರೇಟ್ ಸೇದುವುದನ್ನು ತೊರೆದೆ’ ಎಂದಿದ್ದಾರೆ ರಣಬೀರ್. ಆಲಿಯಾ ಗರ್ಭಿಣಿಯಾದಾಗ ನನಗೇನು ಅನಿಸುತ್ತಾ ಇರಲಿಲ್ಲ. ಆದರೆ, ಆಲಿಯಾ ಮಾತ್ರ ಬದಲಾಗುತ್ತಿದ್ದಳು. ಏಕೆಂದ್ರೆ ಅವಳ ಗರ್ಭದಲ್ಲಿ ಮಗು ಇತ್ತು. ಮಗಳು ಜನಿಸಿ ಅದನ್ನು ನನ್ನ ಕೈ ಮೇಲೆ ಇಟ್ಟಾಗ ನನ್ನ ಹೃದಯವನ್ನು ತೆಗೆದು ಯಾರೋ ನನ್ನ ಕೈಮೇಲೆ ಇಟ್ಟ ಭಾವನೆ ಬಂದಿದೆ.
ಇನ್ನೊಂದು ವಿಷಯ ಗೊತ್ತಾ ಎನ್ನುತ್ತಲೇ ಅವರು, ನನಗೆ 71ನೇ ವಯಸ್ಸಿಗೆ ಸಾಯುವ ಆಸೆ ಮುಂಚಿನಿಂದಲೂ ಇತ್ತು. ಅದಕ್ಕೆ ಕಾರಣ 8 ನನ್ನ ಫೆವರೇಟ್ ನಂಬರ್. 7+1=8 ಅಲ್ವಾ. ಅದಕ್ಕಾಗಿಯೇ 71ನೇ ವಯಸ್ಸಿನಲ್ಲಿ ಸಾಯಬೇಕು ಎಂದು ಮೊನ್ನೆ ಮೊನ್ನಯವರೆಗೂ ಅನ್ನಿಸುತ್ತಿತ್ತು. ಆದರೆ ಮಗಳು ಹುಟ್ಟಿದ ಮೇಲೆ ಇನ್ನೂ 30 ವರ್ಷ ಹೆಚ್ಚಿಗೆ ಬದುಕಬೇಕು ಎನ್ನಿಸುತ್ತದೆ. 71 ವರ್ಷ ಅನ್ನೋದು ಬೇಗ ಅನಿಸುತ್ತಿದೆ ಎಂದಿದ್ದಾರೆ. ‘ನಾನು ಈಗ ಮಗಳ ಅಪ್ಪ. ಅದು ನನ್ನ ಜೀವನದ ಗೇಮ್ ಚೇಂಜರ್ ಪಾಯಿಂಟ್. ನಾನು ಈಗಷ್ಟೇ ಜನಿಸಿದ್ದೇನೆ ಎಂದು ಭಾಸವಾಗುತ್ತಿದೆ. ನಾನು ಮತ್ತೆ ಹುಟ್ಟಿದ್ದೇನೆ. ಈ ಮೊದಲು ಜೀವಿಸಿದ್ದು ಒಂದಾದರೆ ಈಗ ಜೀವಿಸುತ್ತಿರೋದು ಮತ್ತೊಂದು ಜೀವನ ಎನಿಸುತ್ತಿದೆ. ಹೊಸ ಭಾವನೆ ಹಾಗೂ ಆಲೋಚನೆಗಳೊಂದಿಗೆ ಬದುಕುತ್ತಿದ್ದೇನೆ ಎಂದಿದ್ದಾರೆ.
ಪ್ರಧಾನಿ ಮೋದಿಯನ್ನು ಭೇಟಿಯಾದಾಗ ಏನಾಯ್ತು? ನಟ ರಣಬೀರ್ ಕಪೂರ್ ವಿಡಿಯೋ ವೈರಲ್