ರಾಣಿ ಪಾತ್ರಕ್ಕಾಗಿ ನಟಿ ಧರಿಸಿದ ಬಿಕಿನಿ ಬರೋಬ್ಬರಿ 1.46 ಕೋಟಿ ರೂಪಾಯಿಗೆ ಹರಾಜು!

By Chethan Kumar  |  First Published Jul 28, 2024, 10:37 PM IST

ನಟಿಯರು ಬಿಕಿನಿಯಲ್ಲಿ ಕಾಣಿಸಿಕೊಳ್ಳುವುದು ಹೊಸದೇನಲ್ಲ. ಆದರೆ ಈ ಬಿಕಿನಿ ಹರಾಜಿನಲ್ಲಿ ದಾಖಲೆ ಮೊತ್ತಕ್ಕೆ ಮಾರಾಟವಾಗುತ್ತಿರುವುದು ಇದೇ ಮೊದಲು ಇದೀಗ ನಟಿ ಧರಿಸಿದ್ದ ಬಿಕಿನಿ ಬರೋಬ್ಬರಿ 1.46 ಕೋಟಿ ರೂಪಾಯಿಗೆ ಹರಾಜಾಗಿದೆ.
 


ಲಾಸ್ ಎಂಜಲ್ಸ್(ಜು.28) ಬಿಕಿನಿ ಫೋಸ್ ಈಗ ಕಾಮನ್. ಸಿನಿಮಾದಲ್ಲಿ ಮಾತ್ರವಲ್ಲ, ಸೋಶಿಯಲ್ ಮೀಡಿಯಾದಲ್ಲೂ ಸೆಲೆಬ್ರೆಟಿಗಳು ಬಿಕಿನಿಯಲ್ಲಿ ಕಾಣಿಸಿಕೊಳ್ಳುತ್ತಾರೆ. ಬಿಕಿನಿ ತೊಟ್ಟು ವೈರಲ್ ಆದ ಫೋಟೋಗಳು ವಿಡಿಯೋಗಳು ಒಂದೆರೆಡಲ್ಲ. ಆದರೆ ಕಳಚಿಟ್ಟ ಬಿಕನಿ ಈ ಮಟ್ಟಿಗೆ ಸದ್ದು ಮಾಡುತ್ತಿರುವುದು ಇದೇ ಮೊದಲು. ಹೌದು, ಖ್ಯಾತ ನಟಿಯ ಬಿಕಿನಿ ಇದೀಗ ಹರಾಜಿನಲ್ಲಿ ಬರೋಬ್ಬರಿ 1.46 ಕೋಟಿ ರೂಪಾಯಿಗೆ ಮಾರಾಟವಾಗಿದೆ. ದಿವಂಗತ ನಟಿ ಕ್ಯಾರಿ ಫಿಶರ್ ಧರಿಸಿದ ಬಿಕಿನಿ ದಾಖಳೆ ಮೊತ್ತಕ್ಕೆ ಹರಾಜಾಗಿದೆ.

ಸ್ಟಾರ್ ವಾರ್ ಚಿತ್ರದಲ್ಲಿ ಕ್ಯಾರಿ ಫಿಶರ್ ರಾಣಿ ಲಿಯಾ ಪಾತ್ರ ನಿರ್ವಹಿಸಿದ್ದರು. ಪ್ರಮುಖವಾಗಿ ಸ್ಟಾರ್ ವಾರ್ 6ನೇ ಎಪಿಸೋಡ್‌ನಲ್ಲಿ ನಟಿ ಕ್ಯಾರಿ ಫಿಶರ್ ಮರೂನ್ ಹಾಗೂ ಗೋಲ್ಡನ್ ಬಣ್ಣದ ವಿಶೇಷ ಬಿಕಿನಿ ಧರಿಸಿದ್ದರು. ಪಾತ್ರಕ್ಕೆ ಹೊಂದಿಕೊಳ್ಳುವ  ಬಿಕಿನಿ 1977ರಿಂದ 1983ರ ಅವಧಿಯಲ್ಲಿ ಭಾರಿ ಸಂಚಲನ ಸೃಷ್ಟಿಸಿತ್ತು. ಬಿಕಿನಿಯಲ್ಲಿ ಬ್ರಾ ಮೇಲೆ ಧರಿಸಿದ್ದ ಗೋಲ್ಡನ್ ಆಭರಣ ರೀತಿಯ ಡ್ರೆಸ್, ಕೈಗಳಿಗೆ ಧರಿಸಿದ್ದ ತೋಳ್ಬಳೆ, ಸೊಂಟಕ್ಕೆ ಧರಿಸಿದ್ದ ರಿಂಗ್ ಸೇರಿದಂತೆ ಫುಲ್ ಸೆಟ್ ಹರಾಜಾಗಿದೆ. 

Tap to resize

Latest Videos

ಬಿಕಿನಿಯಲ್ಲಿ ಸ್ವಿಮ್ಮಿಂಗ್ ಪೂಲ್‌ಗೆ ಇಳಿದ ಬಿಗ್ ಬಾಸ್ ಸುಂದರಿ, ಸ್ಪರ್ಧಿ ವಿಡಿಯೋಗೆ ಭರ್ಜರಿ ಕಮೆಂಟ್!

ದಲ್ಲಾಸ್‌ನ ಹೆರಿಟೇಜ್ ಆಕ್ಷನ್ ಸಂಸ್ಥೆ ಈ ಬಿಕಿನಿಯನ್ನು ಹರಾಜು ಹಾಕಿತ್ತು. ಕ್ಯಾರಿ ಫಿಶನ್ ನಿಧನರಾಗಿ 8 ವರ್ಷಗಳು ಉರುಳಿಸಿದೆ. ಆದರೆ ಸಿನಿ ರಸಿಕರ ಮನದಲ್ಲಿ ಕ್ಯಾರಿ ಫಿಶನ್ ಹಚ್ಚ ಹಸುರಾಗಿದ್ದಾರೆ. ಅವರ ಪಾತ್ರಗಳು ಈಗಲೂ ಕಾಡುತ್ತದೆ. 1970ರಲ್ಲಿ ಸಿನಿ ಬದುಕಿಗೆ ಕಾಲಿಟ್ಟ ಅಮೆರಿಕ ನಟಿ ಕ್ಯಾರಿ ಫಿಶರ್ 1977ರ ವೇಳೆಗೆ ಅತ್ಯಂತ ಜನಪ್ರಿಯ ನಟಿಯಾಗಿ ಗುರುತಿಸಿಕೊಂಡಿದ್ದರು.

ಕ್ಯಾರಿ ಫಿಶರ್ 2016ರ ಡಿಸೆಂಬರ್ 27ರಂದು ನಿಧನರಾಗಿದ್ದಾರೆ. ತಮ್ಮ 60ನೇ ವಯಸ್ಸಿನಲ್ಲೂ ಕ್ಯಾರಿ ಅಭಿಯನದ ಮೂಲದ ಪ್ರೇಕ್ಷಕರನ್ನು ಮೋಡಿ ಮಾಡಿದ್ದರು. ಕ್ಯಾರಿ ಫಿಶರ್ ಅಭಿನಯಿಸಿದ ಸ್ಟಾರ್ ವಾರ್ಸ್ , ಲಾಸ್ಟ್ ಜೆಡಿ ಸೀರಿಸ್ ಮರಣನಂತರ ಅಂದರೆ 2017ರಲ್ಲಿ ಬಿಡುಗಡೆ ಕಂಡಿತ್ತು.ಇನ್ನು 2019ರಲ್ಲಿ ದಿ ರೈಸ್ ಆಫ್ ಸ್ಕೈವಾಕರ್ ಬಿಡುಗಡೆಯಾಗಿದೆ.  

 

And one of the most memorable costumes in film history--the Carrie Fisher "Princess Leia" production- made bikini; *THE* gold bikini--just sold for $175,000. https://t.co/dtac8J5qpo pic.twitter.com/b7aZoctCcm

— Heritage Auctions (@HeritageAuction)

 

1975ರಲ್ಲಿ ತೆರೆಕಂಡ ಶಾಂಪೂ, 1980ರಲ್ಲಿ ತೆರೆಕಂಡ ದಿ ಬ್ಲೂಸ್ ಬ್ರದರ್ಸ್, 1986ರಲ್ಲಿ ತೆರೆ ಕಂಡ ಹನ್ನಾ ಅಂಡ್ ಸಿಸ್ಟರ್, 1989ರ ದಿ ಬರ್ಬ್ಸ್, ವೆನ್ ಹ್ಯಾರಿ ಮೆಟ್ ಸ್ಯಾಲಿ, 2008ರ ದಿ ವುವೆನ್ ಸೇರಿದಂತೆ ಹಲವು ಚಿತ್ರಗಳು ಕ್ಯಾರಿ ಫಿಶರ್‌ನ್ನು ದಿಗ್ಗಜನ ನಟಿಯನ್ನಾಗಿ ಮಾಡಿತ್ತು. ಹಲವು ಪ್ರಶಸ್ತಿಗಳು ಮುಡಿಗೇರಿತ್ತು.

ರೆಡ್ ಹಾಟ್ ಬಿಕಿನಿಯಲ್ಲಿ ಸನ್ನಿ ಲಿಯೋನ್, ಥಾಯ್ಲೆಂಡ್ ಸ್ವಿಮ್ಮಿಂಗ್ ಪೂಲ್ ವಿಡಿಯೋ ಔಟ್!
 

click me!