ನಟಿಯಾಗುವ ನಿರೀಕ್ಷೆಯಲ್ಲಿ ರೀನಿ ಸೇನ್​: ಅವಿವಾಹಿತೆ ಸುಷ್ಮಿತಾ ಸೇನ್​ ಪುತ್ರಿಯ ಕಥೆಯಿದು...

By Suchethana D  |  First Published Jul 28, 2024, 5:36 PM IST

ಮಾಜಿ ವಿಶ್ವ ಸುಂದರಿ ಸುಷ್ಮಿತಾ ಸೇನ್​ ಪುತ್ರಿ ರೀನಿ ಸೇನ್​ ಬಣ್ಣದ ಲೋಕದ ಕನಸು ಕಾಣುತ್ತಿದ್ದಾರೆ. ಅವಿವಾಹಿತೆಯಾಗಿರುವ ಸುಷ್ಮಿತಾ ಸೇನ್​ ಪುತ್ರಿಯ ಕಥೆ ಏನು?
 


ಮಾಜಿ ವಿಶ್ವ ಸುಂದರಿ ಸುಷ್ಮಿತಾ ಸೇನ್​  ಪುತ್ರಿ ರೀನಿ ಸೇನ್​ ನಟಿಯಾಗುವ ಕನಸು ಹೊತ್ತಿದ್ದಾರೆ. ಬಾಲ್ಯದಿಂದಲೂ ನಟನೆಯ ಬಗ್ಗೆ ಆಸಕ್ತಿ ಹೊಂದಿರುವ ರೀನಿ ಅವರು ಅವಕಾಶಕ್ಕಾಗಿ ಕಾದು ಕುಳಿತಿದ್ದಾರೆ. ಅಷ್ಟಕ್ಕೂ ಯಾರೀ ರೀನಿ ಸೇನ್​? ಸುಷ್ಮಿತಾ ಸೇನ್​ ಅವಿವಾಹಿತೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯ. ಹಾಗಿದ್ದರೆ ಈ ಪುತ್ರಿ ಯಾರು ಎಂಬ ಪ್ರಶ್ನೆಗೆ ಉತ್ತರ, ರೀನಿ ಅವರು ಸುಷ್ಮಿತಾ ಸೇನ್​ ಅವರ ದತ್ತು ಪುತ್ರಿ! ಹೌದು. ಇನ್ನು ಮದುವೆಯಾಗದೆ ಸಿಂಗಲ್ ಆಗಿರುವ ಸುಶ್ಮಿತಾ ಸದ್ಯ ಗೆಳೆಯ ರೋಷ್ಮಾನ್ ಶಾನ್ ಜೊತೆ ಹಸೆಮಣೆ ಏರಲು ಸಜ್ಜಾಗಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಕಳೆದ ಎರಡು ವರ್ಷದಿಂದ ಮಾಡೆಲ್ ರೋಹ್ಮಾನ್ ಶಾಲ್ ಜೊತೆ ಡೇಟಿಂಗ್ ನಲ್ಲಿರುವ ಸುಶ್ಮಿತಾ ಈಗ ಅದೆ ಬಾಯ್ ಫ್ರೆಂಡ್ ಜೊತೆ ಮದುವೆಯಾಗುವ ನಿರ್ಧಾರ ಮಾಡಿದ್ದಾರಂತೆ. ಆದರೆ ಈ ಬಗ್ಗೆ ಸುಶ್ಮಿತಾ ಎಲ್ಲಿಯೂ ಅಧಿಕೃತವಾಗಿ ಹೇಳಿಕೊಂಡಿಲ್ಲ. ಆದರೆ, ನಟಿ ಸುಶ್ಮಿತಾ ಸೇನ್ ರೀನಿ ಮತ್ತು ಅಲಿಶಾ ಎಂಬ ಎರಡು ಹೆಣ್ಣುಮಕ್ಕಳನ್ನು ದತ್ತು ಪಡೆದು ಎಲ್ಲರಿಗೂ ಮಾದರಿಯಾಗಿದ್ದಾರೆ.

ನಟಿ 2000ದಲ್ಲಿ ರೆನೀ ಹಾಗೂ 2010ರಲ್ಲಿ ಅಲಿಶಾರನ್ನು ದತ್ತು ಪಡೆದಿದ್ದರು. ಅದಾದ ಬಳಿಕ ಗಂಡುಮಗುವನ್ನು ದತ್ತು ಪಡೆದರು ಎಂದು ಸುದ್ದಿಯಾಗಿದ್ದರೂ ಅದು ಸುಳ್ಳು ಎಂದು ತಿಳಿಯಿತು. ನಟಿ ಸುಷ್ಮಿತಾ ಸೇನ್‌ ತನಗೆ 24 ವರ್ಷ ಇದ್ದಾಗ ಮೊದಲ ಮಗು ರೀನಾಳನ್ನು ದತ್ತು ಪಡೆದಿದ್ದಾರೆ.  11 ವರ್ಷದ ಬಳಿಕ ಮತ್ತೊಂದು ಮಗಳನ್ನು ದತ್ತು ಪಡೆಯುವ ಮೂಲಕ ನಿಜವಾದ ದೇವತೆ ಎಂದು ಎನಿಸಿದ್ದಾರೆ.

Tap to resize

Latest Videos

ನಾನು ಸಿಂಗಲ್​ ಎಂದ ಸುಷ್ಮಿತಾ: ನಿನ್​ ಜೊತೆ ಆರು ವರ್ಷ ಇದ್ದೋನು ನಾನೇ ಕಣೆ ಅಂದ ಈ ತರುಣ!
 
ಅಂದಹಾಗೆ ಮಾಜಿ ವಿಶ್ವ ಸುಂದರಿ, ಬಾಲಿವುಡ್​ ನಟಿ ಸುಷ್ಮತಾ ಸೇನ್​ ಅವರಿಗೆ ಈಗ 48 ವರ್ಷ ವಯಸ್ಸು. ಕೆಲ ದಿನಗಳ ಹಿಂದಷ್ಟೇ ಅವರು ತಮ್ಮ ಹುಟ್ಟಿನ ದಿನಾಂಕವನ್ನು ಬದಲಿಸಿಕೊಂಡಿದ್ದಾರೆ. ತಮ್ಮ ಸೋಷಿಯಲ್​ ಮೀಡಿಯಾ ಖಾತೆಯಲ್ಲಿ ಹುಟ್ಟಿದ ದಿನಾಂಕವನ್ನು ಬದಲಿಸಿಕೊಂಡಿದ್ದು ಅದರ ಪ್ರಕಾರ ಅವರಿಗೆ ಈಗ ಒಂದೂವರೆ ವರ್ಷ ವಯಸ್ಸು! ಹೌದು. 19 ನವೆಂಬರ್​ 1975ರಲ್ಲಿ ಹುಟ್ಟಿರುವ ನಟಿ ಇದೀಗ ತಮ್ಮ ಹುಟ್ಟಿದ ದಿನಾಕವನ್ನು 27ನೇ ಫೆಬ್ರವರಿ 2023 ಎಂದು ಬದಲಿಸಿಕೊಂಡಿದ್ದಾರೆ. ಅಷ್ಟಕ್ಕೂ ಅವರೇನೂ ತಮ್ಮ ವಯಸ್ಸನ್ನು ಕಡಿಮೆ ಮಾಡಿಕೊಳ್ಳಲು ಹೀಗೆ ಮಾಡಿದ್ದಲ್ಲ. ಬದಲಿಗೆ ಇದರ ಹಿಂದಿದೆ ಕುತೂಹಲದ ಕಾರಣ. ಸುಷ್ಮಿತಾ ಸೇನ್​ ಕಳೆದ ವರ್ಷ ಅಂದ್ರೆ 2023ರ ಫೆಬ್ರುವರಿ 27ರಂದು ಹೃದಯಾಘಾತಕ್ಕೆ ಒಳಗಾಗಿದ್ದು ಮರುಜನ್ಮ ಪಡೆದಿದ್ದಾರೆ. ಈ ದಿನವನ್ನು ಸ್ಮರಿಸಿಕೊಂಡಿರುವ ನಟಿ, ನಿಜವಾಗಿಯೂ ನನಗೆ ಜನ್ಮ ಸಿಕ್ಕಿರುವುದು ಈ ದಿನ ಎಂದು ಸೋಷಿಯಲ್​ ಮೀಡಿಯಾದಲ್ಲಿ ದಿನಾಂಕವನ್ನು ಬದಲಿಸಿಕೊಂಡು ಗಮನ ಸೆಳೆದಿದ್ದಾರೆ.  ಅವರು ತಮ್ಮ ವೆಬ್ ಸೀರೀಸ್ ಆರ್ಯ ಸೀಸನ್ 3 ಶೂಟಿಂಗ್​ನಲ್ಲಿ ಇರುವಾಗ  ಭಾರಿ ಹೃದಯಾಘಾತಕ್ಕೆ ಒಳಗಾಗಿದ್ದರು. ಶಸ್ತ್ರಚಿಕಿತ್ಸೆಗೆ ಒಳಗಾದ ನಂತರ, ಅವರು ಗಮನಾರ್ಹವಾಗಿ ಚೇತರಿಸಿಕೊಂಡರು. ಆದ್ದರಿಂದ ಈ ದಿನವು ತಮ್ಮ ಜೀವನದ ಪ್ರಮುಖ ಕ್ಷಣ ಎಂದು ನಟಿ ಹೇಳಿದ್ದಾರೆ.

 ಮಾಜಿ ಮಿಸ್ ಯೂನಿವರ್ಸ್‌, ಬಾಲಿವುಡ್ ನಟಿ ಸುಶ್ಮಿತಾ ಸೇನ್‌ (Sushmita Sen) ರಿಲೆಷನ್‌ಶಿಪ್‌ಗಳ ಕಾರಣದಿಂದ ಸುದ್ದಿಯಾಗುವುದು ಹೊಸದೇನಲ್ಲ. ಕೆಲ ದಿನಗಳ ಹಿಂದೆ ನಟಿ ಸಕತ್​  ಸದ್ದು ಮಾಡಿದ್ದರು. ಅವರ ಮತ್ತು ಅವರ ಮಾಜಿ ಪ್ರೇಮಿ  ರೋಹ್ಮನ್ ಶಾಲ್ (Rohman Shawl) ಅವರ ವೀಡಿಯೋ ಒಂದು ವೈರಲ್‌ ಆಗಿತ್ತು. ಮತ್ತೆ ಇವರಿಬ್ಬರು ಡೇಟಿಂಗ್‌ ಮಾಡುತ್ತಿದ್ದಾರೆ ಎಂದು ವರದಿಯಾಗಿತ್ತು.  ಸುದೀರ್ಘ ಸಂಬಂಧದ ನಂತರ,  ಡಿಸೆಂಬರ್ 2021 ರಲ್ಲಿ ಸುಶ್ಮಿತಾ ಸೇನ್‌ ರೋಹ್ಮನ್ ಶಾಲ್‌ ಅವರೊಂದಿಗೆ ಬ್ರೇಕಪ್‌ ಆಗಿರವ ವಿಷಯ ಘೋಷಿಸಿದ್ದರು. ಅವರ ಬ್ರೇಕಪ್‌ ನಂತರವೂ ಇಬ್ಬರು ಸ್ನೇಹಿತರಾಗಿ ಮುಂದುವರೆದರು. ರೋಹ್ಮನ್ ಅವರು ಹೆಚ್ಚಾಗಿ ಸೇನ್ ಕುಟುಂಬದೊಂದಿಗೆ ಕಾಣಿಸಿಕೊಂಡರು. ನಂತರ ಮತ್ತೆ  ಇಬ್ಬರು ಮತ್ತೆ ಒಂದಾಗಿರುವಂತೆ ವಿಡಿಯೋ ವೈರಲ್​ ಆಗಿತ್ತು.   ಆದರೆ ಇದರ ನಡುವೆಯೇ, ಐಪಿಎಲ್ ಸಂಸ್ಥಾಪಕ,  ಉದ್ಯಮಿ ಲಲಿತ್ ಮೋದಿ   59 ವಯಸ್ಸಿನಲ್ಲಿ ಮತ್ತೆ ಸುಷ್ಮಿತಾ ಜೊತೆ ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂದು ಸದ್ದು ಮಾಡಿತ್ತು.   ಲಲಿತ್ ಮೋದಿ ಕಳೆದ ವರ್ಷ  ಸುಷ್ಮಿತಾ ಸೇನ್ ಅವರೊಂದಿಗಿನ ಕೆಲವು ಸಕತ್​ ಕ್ಲೋಸ್​ ಎನಿಸುವ  ಚಿತ್ರಗಳನ್ನು ಪೋಸ್ಟ್ ಮಾಡಿ ಸಾಕಷ್ಟು ಸಂಚಲನ ಸೃಷ್ಟಿಸಿದ್ದರು. ಜೊತೆಗೆ  ಸುಷ್ಮಿತಾ ಮೇಲಿನ ಪ್ರೀತಿಯನ್ನು ಹೇಳಿಕೊಂಡಿದ್ದರು. ಇನ್ನೇನು ಇವರಿಬ್ಬರ ಮದುವೆಯೇ ಆಗಿ ಹೋಗಿದೆ ಎಂದು ಸುದ್ದಿಯಾಗಿತ್ತು. ಈ ವಿಷಯದ ಬಗ್ಗೆ ನಟಿ ಮೌನ ವಹಿಸಿದ್ದರೂ, ಲಲಿತ್ ಮೋದಿ ಆ ಪೋಸ್ಟ್​ ಅನ್ನು ಕೆಲ ದಿನ ಡಿಲೀಟ್​ ಮಾಡದೇ ಇಟ್ಟುಕೊಂಡಿದ್ದರು. ಇದಾದ ಬಳಿಕ ನಟಿ ಸುಷ್ಮಿತಾ ಸೇನ್​ ನಾನು ಸಿಂಗಲ್‌, ಒಂಟಿಯಾಗಿದ್ದೇನೆ ಎನ್ನುವ ಹೇಳಿಕೆ ಕೊಟ್ಟು ಸಕತ್​ ಟ್ರೋಲ್​ಗೂ ಒಳಗಾಗಿದ್ದರು. 

ಸ್ಟೈಲ್​ನಲ್ಲಿ ಅಮ್ಮನನ್ನೇ ಮೀರಿಸ್ತಿದ್ದಾಳೆ ಪುಟಾಣಿ ರಾಹಾ: ಆಲಿಯಾ ಪುತ್ರಿಯ ಕ್ಯೂಟ್​ ವಿಡಿಯೋ ವೈರಲ್​

click me!