Ranbir Kapoor ಮನೆಗೆ ಮಗಳು ಬಂದರೂ ಜಿಮ್‌ಗೆ ಹೋಗ್ತಿದ್ದಾರಂತೆ ರಣಬೀರ್; ಕಾಲೆಳೆದ ನೆಟ್ಟಿಗರು...

Published : Nov 15, 2022, 04:26 PM ISTUpdated : Nov 15, 2022, 05:21 PM IST
Ranbir Kapoor ಮನೆಗೆ ಮಗಳು ಬಂದರೂ ಜಿಮ್‌ಗೆ ಹೋಗ್ತಿದ್ದಾರಂತೆ ರಣಬೀರ್; ಕಾಲೆಳೆದ ನೆಟ್ಟಿಗರು...

ಸಾರಾಂಶ

ಒಂದು ದಿನವೂ ಮಿಸ್ ಮಾಡದೆ ಜಿಮ್‌ಗೆ ಹೋಗ್ತಿದ್ದಾರಂತೆ ರಣವೀರ್ ಕಪೂರ್. ಪಪ್ಪು ಅಪ್ಪ ಆಗ್ಬಿಟ್ಟಾ.... 

ಬಾಲಿವುಡ್ ಚಾಕೊಲೇಟ್ ಬಾಯ್‌ ರಣಬೀರ್ ಕಪೂರ್ ನವೆಂಬರ್ 6ರಂದು ಕುಟುಂಬಕ್ಕೆ ಜ್ಯೂನಿಯರ್ ಆಲಿಯಾ ಭಟ್‌ನ ಬರ ಮಾಡಿಕೊಂಡರು. ಲಿಟಲ್‌ ಪ್ರಿನ್ಸೆಸ್‌ ಆಗಮನ ವರ್ಲ್ಡ್‌ ವೈಡ್‌ ಸುದ್ದಿಯಾಗಿತ್ತು, ಹೀಗಿರುವಾಗ ರಣಬೀರ್ ಮತ್ತು ಆಲಿಯಾ ಲೈಮ್‌ಲೈಟ್‌ನಿಂದ ದೂರ ಉಳಿಯುಬೇಕು ಆದರೆ ಜನ ಸಾಮಾನ್ಯರಂತೆ ಕೂಲ್ ಪೇರೆಂಟಿಂಗ್‌ ಮಾಡಲು ಮುಂದಾಗಿದ್ದಾರೆ. ಈಗ ರಣಬೀರ್‌ ಜೊತೆ ಜಿಮ್ ಟ್ರೈನರ್ ಫೋಟೋ ಹಂಚಿಕೊಂಡು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

ರಣಬೀರ್ ಕಪೂರ್ ಪರ್ಸನಲ್ ಜಿಮ್ ಟ್ರೈನರ್ ಡ್ರೂ ನೀಲ್ ಇನ್‌ಸ್ಟಾಗ್ರಾಂನಲ್ಲಿ ಫೋಟೋ ಹಂಚಿಕೊಂಡು 'ಜಿಮ್‌ನ ಮಿಸ್ ಮಾಡಲು ರಣಬೀರ್‌ ಕಪೂರ್‌ಗೆ ಒಳ್ಳೆಯ ಕಾರಣಗಳಿದ್ದರೂ ಒಂದು ದಿನವೂ ತಪ್ಪಿಸದೆ ಜಿಮ್‌ಗೆ ಬಂದಿದ್ದಾರೆ. ಮಗಳು ಬಂದಿದ್ದಾಳೆ ಅಂತ ಒಂದು ವಾರವಾದ್ದರೂ ಜಿಮ್‌ ಕ್ಲಾಸ್‌ಗಳನ್ನು ಮಿಸ್ ಮಾಡಬಹುದಿತ್ತು ಆದರೆ ಎಷ್ಟು ಪ್ರಾಮಾಣಿಕವಾಗಿ ಬಂದಿದ್ದಾರೆ ನೋಡಿ. ಏನೇ ಇರಲಿ ಆಲಿಯಾ ಮತ್ತು ರಣಬೀರ್ ಇಬ್ಬರಿಗೂ ಶುಭವಾಗಲಿ' ಎಂದು ಬರೆದುಕೊಂಡಿದ್ದಾರೆ. 

ನೀಲಿ ಬಣ್ಣದ ಟೀ-ಶರ್ಟ್, ಕಪ್ಪು ಬಣ್ಣ ಶರ್ಟ್ಸ್‌ ಮತ್ತು ನೀಲಿ ಬಣ್ಣದ ಶೂ ಧರಿಸಿ ರಣಬೀರ್‌ ವರ್ಕೌಟ್‌ ಮಾಡಿ ತುಂಬಾನೇ ಸ್ವೆಟ್ ಅಗಿದ್ದಾರೆ. 'ಬ್ರಹ್ಮಾಸ್ತ್ರ ಸಿನಿಮಾದಲ್ಲಿ ರಣಬೀರ್ ಒಳ್ಳೆಯ ಶೇಪ್‌ನಲ್ಲಿ ಕಾಣಿಸಿಕೊಂಡಿದ್ದರು ಅದರ ಹಿಂದಿರುವ ವ್ಯಕ್ತಿ ನೀವೇ ಎಂದು ನನಗೆ ಗೊತ್ತಿರಲಿಲ್ಲ' ಎಂದು ಒಬ್ಬ ಅಭಿಮಾನಿ ಕಾಮೆಂಟ್ ಮಾಡಿದ್ದರೆ ಮತ್ತೊಬ್ಬ ಅಭಿಮಾನಿ 'ಬಿ-ಟೌನ್‌ನಲ್ಲಿರುವ ಬೆಸ್ಟ್‌ ವ್ಯಕ್ತಿ ಆರ್‌ಕೆ' ಎಂದಿದ್ದಾರೆ. ದಿನದಿಂದ ದಿನಕ್ಕೆ ರಣಬೀರ್ ಅಭಿಮಾನಿಗಳು ಹೆಚ್ಚಾಗುತ್ತಿದ್ದಾರೆ. 

ಮಗು ನೋಡಲು ರೂಲ್ಸ್‌:

ಇಂಡಸ್ಟ್ರಿಗೆ ಸಂಬಂಧಿಸಿದ ಸೆಲೆಬ್ರಿಟಿಗಳು ಮತ್ತು ಸಂಬಂಧಿಕರು  ಮಗುವನ್ನು ನೋಡಲು ತುಂಬಾ ಉತ್ಸುಕರಾಗಿದ್ದಾರೆ. ಅದಕ್ಕಾಗಿಯೇ ಮಗಳ ಆರೋಗ್ಯವನ್ನು ಪರಿಗಣಿಸಿ, ತಮ್ಮ ಮಗಳನ್ನು ನೋಡಲು ಬಯಸುವವರಿಗಾಗಿ ದಂಪತಿಗಳು   ಮಾರ್ಗಸೂಚಿಯನ್ನು ಸಹ ಸಿದ್ಧಪಡಿಸಿದ್ದಾರೆ, ಅದನ್ನು ಎಲ್ಲರೂ ಅನುಸರಿಸುವುದು ಕಡ್ಡಾಯವಾಗಿದೆ.  ಅಷ್ಟಕ್ಕೂ ಏನಿದೆ ಮಾರ್ಗಸೂಚಿಯಲ್ಲಿ ಏನಿದೆ ಗೊತ್ತಾ?

ಆಲಿಯಾ -ರಣಬೀರ್‌, ದೀಪಿಕಾ- ರಣವೀರ್‌; ಬಾಲಿವುಡ್‌ನ ಫೇಮಸ್‌ ಕಪಲ್‌ ಬಾಲ್ಯದ ಫೋಟೋಸ್

ದಂಪತಿಗಳು ತಮ್ಮ ಮಗಳಿಗೆ ಮನೆಯಲ್ಲಿ ಆರೋಗ್ಯಕರ ವಾತಾವರಣವನ್ನು ಒದಗಿಸಲು ಬಯಸುತ್ತಾರೆ ಮತ್ತು ತಮ್ಮ ಮನೆಗೆ ಬರುವ ಯಾವುದೇ ಆಪ್ತ ಸ್ನೇಹಿತರು ಅಥವಾ ಸಂಬಂಧಿಕರು ಮೊದಲು ಕೋವಿಡ್ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ ಎಂದು ನಿರ್ಧರಿಸಿದ್ದಾರೆ. ವರದಿ ನೆಗೆಟಿವ್ ಬಂದ ನಂತರವೇ ಅವರು ತಮ್ಮ ಮನೆಗೆ ಪ್ರವೇಶಿಸಬಹುದು. ಮಗಳ ಆರೋಗ್ಯದ ಬಗ್ಗೆ ದಂಪತಿ ಯಾವುದೇ ಚಾನ್ಸ್‌ ತೆಗೆದುಕೊಳ್ಳಲು ಬಯಸುವುದಿಲ್ಲ ಎಂದು ಹೇಳಲಾಗುತ್ತಿದೆ.   

ಆಲಿಯಾ ಇಲ್ಲ ಅಂದ್ರೆ ತಿಂಡಿ ತಿನ್ನಲ್ಲ:

ಅಯಾನ್ ಮುಖರ್ಜಿ ಜೊತೆ ಬ್ರಹ್ಮಾಸ್ತ್ರ ಸಿನಿಮಾ ಬಗ್ಗೆ ಮಾತನಾಡುವಾಗ ಅನ್‌ಸ್ಕ್ರೀನ್ ಕ್ಯಾರೆಕ್ಟ್‌ ಮತ್ತು ಆಫ್‌ಸ್ಕ್ರೀನ್‌ ಕ್ಯಾರೆಕ್ಟರ್‌ನಲ್ಲಿ ಎಷ್ಟು ಹೊಂದಾಣಿಕೆ ಇದೆ ಎಂದು ರಣಬೀರ್ ರಿವೀಲ್ ಮಾಡಿದ್ದಾರೆ. 'ನಾನು ಇಂಡಿಪೆಂಡೆಂಟ್‌ ಅಂತ ಎಲ್ಲೇ ಹೋದ್ದರೂ ಹೇಳಿಕೊಳ್ಳುತ್ತೀನಿ ಆದರೆ ರಿಯಾಲಿಟಿ ಬೇರೆ ಇದೆ. ನಾನು ಅಲಿಯಾ ಮೇಲೆ ತುಂಬಾ ಡಿಪೆಂಡ್ ಆಗಿರುವೆ. ಆಲಿಯಾ ಪಕ್ಕದಲ್ಲಿ ಇಲ್ಲ ಅಂದ್ರೆ ನಾನು ತಿಂಡಿನೂ ತಿನ್ನುವುದಿಲ್ಲ ಬಾತ್‌ರೂಮ್‌ಗೂ ಹೋಗುವುದಿಲ್ಲ. ಆಲಿಯಾ ಎಲ್ಲಿದ್ದಾಳೆ ಎಂದು ತಿಳಿದುಕೊಂಡ ಮೇಲೆ ನನ್ನ ಕೆಲಸ ಆರಂಭಿಸುವುದು. ನನ್ನ ಪಕ್ಕ ಆಲಿಯಾ ಇದ್ದರೆ ಧೈರ್ಯ ಹೆಚ್ಚಾಗುತ್ತದೆ ಜೊತೆಗಿದ್ದೀವಿ ಅಂದ್ರೆ ನಾವು ರೊಮ್ಯಾನ್ಸ್‌ ಮಾಡ್ತೀವಿ ಅಂತಲ್ಲ  ಸುಮ್ಮನೆ ಕುಳಿತುಕೊಳ್ಳಬೇಕು ಅಂತಲ್ಲ ಕಣ್ಣಿಗೆ ಕಾಣಿಸಿಕೊಂಡರೆ ಅಷ್ಟೇ ಸಾಕು' ಎಂದು ರಣಬೀರ್ ಹೇಳಿದ್ದಾರೆ.

Karan Johar ಸೆಕ್ಸ್‌ ಲೈಫ್‌ ಬಗ್ಗೆ ಕ್ಯೂರಿಯಾಸಿಟಿ ಜಾಸ್ತಿ; ಶಾರುಖ್-ರಣಬೀರ್ ಶೋಗೆ ಬರದಿರಲು ಇದೇ ಕಾರಣ!

ಹಾಸಿಗೆಯಲ್ಲಿ ಹೊರಳಾಡುತ್ತಾಳೆ:

ಆಲಿಯಾ ಭಟ್‌ ಬಗ್ಗೆಇಷ್ಟ ಆಗುವ ಒಂದು ಗುಣ ಕಷ್ಟ ಆಗುವ ಒಂದು ಗುಣದ ಬಗ್ಗೆ ರಣಬೀರ್ ಹೇಳಬೇಕಿತ್ತು. 'ಆಲಿಯಾ ಭಟ್‌ brilliant. ಆಕೆ ಏನೇ ಮಾಡಿದ್ದರೂ ಅದ್ಭುತವಾಗಿ ಮಾಡುತ್ತಾಳೆ ಈ ಗುಣ ನನಗೆ ಇಷ್ಟ. ಇಷ್ಟವಿಲ್ಲದ ಗುಣ ಅಂದ್ರೆ ಆಕೆ ಮಲಗುವಾಗ ನನಗೆ ಒಂದು ಸಮಸ್ಯೆ ಆಗುತ್ತೆ. ಮಲಗುವಾಗ ಸರಿಯಾಗಿರುತ್ತಾಳೆ ಆಮೇಲೆ ನಿಧಾನಕ್ಕೆ ಜರಗುತ್ತಾಳೆ ಇದರಿಂದ ನಾನು ಮಲಗುವ ಜಾಗ ಕಡಿಮೆ ಆಗುತ್ತದೆ. ಅಕೆ ತಲೆ ಒಂದು ಕಡೆ ಇರುತ್ತೆ ಕಾಲುಗಳು ಮತ್ತೊಂದು ಕಡೆ ಮುಖ ಮಾಡಿರುತ್ತದೆ. ನಾನು ಒಂದು ಮೂಲೆಯಲ್ಲಿ ಮಲಗಿರಬೇಕು. ಈ ಸಮಸ್ಯೆಗೆ ಉತ್ತರ ಸಿಕ್ಕಿಲ್ಲ ಆದರೂ ಸಹಿಸಿಕೊಳ್ಳುತ್ತಿರುವೆ' ಎಂದು ರಣಬೀರ್ ಹೇಳಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?
ಅಖಂಡ 2 ರಿಲೀಸ್ ನಿಲ್ಲೋಕೆ ಅಸಲಿ ಕಾರಣ ಇದೇನಾ? ಅಷ್ಟಕ್ಕೂ ಬಾಲಯ್ಯ ಮುಂದೆ ಏನ್ಮಾಡ್ತಾರೆ?