ಕಾಂತಾರ ಗೆಟಪ್‌ನಲ್ಲಿ ಬಂದ ತಹಶೀಲ್ದಾರ್ ನೋಡಿ ಜಿಲ್ಲಾಧಿಕಾರಿ ಶಾಕ್

Published : Nov 15, 2022, 02:57 PM ISTUpdated : Nov 15, 2022, 04:30 PM IST
ಕಾಂತಾರ ಗೆಟಪ್‌ನಲ್ಲಿ ಬಂದ ತಹಶೀಲ್ದಾರ್ ನೋಡಿ ಜಿಲ್ಲಾಧಿಕಾರಿ ಶಾಕ್

ಸಾರಾಂಶ

ಆಂಧ್ರ ಪ್ರದೇಶದ ತಹಶೀಲ್ದಾರ್ ಒಬ್ಬರು ಕಾಂತಾರ ಗೆಟಪ್ ನಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ. ತಹಶೀಲ್ದಾರ್ ಲುಕ್ ಜಿಲ್ಲಾಧಿಕಾರಿಯ ಗಮನ ಸೆಳೆದಿದೆ.

ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿರುವ ಕಾಂತಾರ ಸಿನಿಮಾ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದ್ದೆ. ಸಿನಿಮಾ ರಿಲೀಸ್ ಆಗಿ 50 ದಿನಗಳನ್ನು ಪೂರೈಸಿದರೂ ಕಾಂತಾರ ಹವಾ ಇನ್ನೂ ಕಡಿಮೆ ಆಗಿಲ್ಲ. ಕನ್ನಡದಲ್ಲಿ ಮಾತ್ರವಲ್ಲದೇ ಪರ ಭಾಷೆಯಲ್ಲೂ ಕಾಂತಾರ ಸಿನಿಮಾಗೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಾಕ್ಸ್ ಆಫೀಸ್ ನಲ್ಲೂ ಭರ್ಜರಿ ಕಮಾಯಿ ಮಾಡಿದೆ. ಈಗಾಗಲೇ 350 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ 400 ಕೋಟಿಯತ್ತ ಮುನ್ನುಗ್ಗುತ್ತಿದೆ ಸಿನಿಮಾ. ಪಕ್ಕದ ತೆಲುಗು ನಾಡಲ್ಲೂ ಕಾಂತಾರ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಎಷ್ಟರ ಮಟ್ಟಿಗೆ ಎಂದರೆ ಆಂಧ್ರ ಪ್ರದೇಶದ ತಹಶೀಲ್ದಾರ್ ಒಬ್ಬರು ಕಾಂತಾರ ವೇಷದಲ್ಲೇ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ. ಆಂಧ್ರ ಪ್ರದೇಶದ ಕೊತವಲಸದ ತಹಶೀಲ್ದಾರ್ ಪ್ರಸಾದ್ ರಾವ್ ಅವರು ಇತ್ತೀಚಿಗೆ ಕಾಂತಾರ ಗೆಟಪ್‌ ಹಾಕುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ತಹಶೀಲ್ದಾರ್ ಪ್ರಸಾದ್ ರಾವ್  ಅವರ ಲುಕ್ ಗುಂಟೂರು ಜಿಲ್ಲಾಧಿಕಾರಿ ಅವರ ಗಮನ ಸೆಳೆದಿದೆ. 

ಗುಂಟೂರಿನ ನಾಗಾರ್ಜುನ ಯೂನಿವರ್ಸಿಟಿಯಲ್ಲಿ ಆಂಧ್ರ ಪ್ರದೇಶ ತೆರಿಗೆ ಇಲಾಖೆಯ ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಇದರಲ್ಲಿ ಹಲವು ಅಧಿಕಾರಿಗಳು ಭಾಗಿ ಆಗಿದ್ದರು. ಈ ವೇಳೆ ವಿಜಯನಗರಂ ಜಿಲ್ಲೆಯ ತಹಶೀಲ್ದಾರ್​ ಪ್ರಸಾದ್​ ರಾವ್​ ಅವರು ಕನ್ನಡದ ಕಾಂತಾರ ಸಿನಿಮಾದ ಗೆಟಪ್​ನಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದರು. ಪ್ರಸಾದ್ ರಾವ್ ಅವತಾರ ಕಂಡು ಅಲ್ಲಿದ್ದ ಎಲ್ಲರಿಗೂ ಅಚ್ಚರಿ ಪಟ್ಟರು. ವೇಷ ಮಾತ್ರವಲ್ಲದೇ ಅವರು ಕಾಂತಾರ ಚಿತ್ರದ ಡೈಲಾಗ್ ಕೂಡ ಹೇಳಿ ಗಮನ ಸೆಳೆದರು.

ತಹಶೀಲ್ದಾರ್​ ಪ್ರಸಾದ್​ ರಾವ್​ ಅವರಿಗೆ ಕಲೆಯಲ್ಲಿ ಹೆಚ್ಚು ಆಸಕ್ತಿ. ಹಾಗಾಗಿ ಇತ್ತೀಚೆಗೆ ವೈರಲ್ ಆಗಿರುವ ಕಾಂತಾರ ಸಿನಿಮಾದ ವೇಷ ಹಾಕಿ ಬಂದಿದ್ದರು.  ಅವರನ್ನು ನೋಡಿ ಜಿಲ್ಲಾಧಿಕಾರಿಗೂ ಅಚ್ಚರಿಯಾಗಿದ್ದಲ್ಲದೇ ತಹಶೀಲ್ದಾರ್​ ಜೊತೆ ಸೆಲ್ಫಿ ತೆಗೆದುಕೊಂಡಿದ್ದಾರೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. 

Puneeth Rajkumar: ಅಭಿಮಾನಿಯ ಕೈಯಲ್ಲಿ ಕಾಂತಾರ 'ದೈವ'ವಾಗಿ ಅರಳಿದ ಅಪ್ಪು

ಕಾಂತಾರ ಹವಾ ಕನ್ನಡದಲ್ಲಿ ಮಾತ್ರವಲ್ಲದೇ ಪರಭಾಷೆಯಲ್ಲೂ ಜೋರಾಗಿದೆ. ಈಗಲೂ ಅನೇಕ ಕಡೆ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಹಿಂದಿಯಲ್ಲೂ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈಗಾಗಲೇ ಹಿಂದಿಯಲ್ಲಿ ಕಾಂತಾರ ಸಿನಿಮಾ 75 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ಅನೇಕ ದಾಖಲೆಗಳನ್ನು ಬ್ರೇಕ್ ಮಾಡಿರುವ ಕಾಂತಾರ ಇನ್ನು ಯಾವೆಲ್ಲ ದಾಖಲೆ ಮುರಿಯಲಿದೆ ಎನ್ನುವುದು ಕುತೂಹಲ ಮೂಡಿಸಿದೆ. 

'ಕಾಂತಾರಾ' ನೋಡುವಾಗ ಮಹಿಳೆ ಮೇಲೆ ಬಂದ ದೇವರು?: ವಿಡಿಯೋ ವೈರಲ್

ಕಾಂತಾರ ಬಗ್ಗೆ, 

ಕಾಂತಾರ ಸಿನಿಮಾದಲ್ಲಿ ರಿಷಬ್ ಶೆಟ್ಟಿ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ನಟ ಕಿಶೋರ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಮಿಂಚಿದ್ದಾರೆ. ಇನ್ನೂ ನಾಯಕಿಯಾಗಿ ಸಪ್ತಮಿ ಗೌಡ ಬಣ್ಣ ಹಣ್ಣ ಹಚ್ಚಿದ್ದಾರೆ. ಅಚ್ಯುತ್ ಕುಮಾರ್ ಗಮನಾರ್ಹ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಅನೇಕ ರಂಗಭೂಮಿ ಕಲಾವಿದರು ನಟಿಸಿದ್ದಾರೆ.  ಪ್ರತಿಯೊಂದು ಪಾತ್ರಗಳು ಸಹ ಪ್ರೇಕ್ಷಕರ ಹೃದಯ ಗೆದ್ದಿವೆ. ಪ್ರತಿಷ್ಠಿತ ಹೊಂಬಾಳೆ ಫಿಲ್ಮ್ಸ್ ಬ್ಯಾನರ್‌ನಲ್ಲಿ ಸಿನಿಮಾ ಮೂಡಿಬಂದಿದೆ.  

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?
ಅಖಂಡ 2 ರಿಲೀಸ್ ನಿಲ್ಲೋಕೆ ಅಸಲಿ ಕಾರಣ ಇದೇನಾ? ಅಷ್ಟಕ್ಕೂ ಬಾಲಯ್ಯ ಮುಂದೆ ಏನ್ಮಾಡ್ತಾರೆ?