ದುಃಖಿಸುವ ಅಗತ್ಯವಿಲ್ಲ, ಕೃಷ್ಣಗಾರು ಸ್ವರ್ಗದಲ್ಲಿ ಡ್ಯೂಯೆಟ್ ಹಾಡ್ತಿರಬಹುದು ಎಂದ ಆರ್‌ಜಿವಿ

By Anusha KbFirst Published Nov 15, 2022, 3:39 PM IST
Highlights

ಸದಾಕಾಲ ವಿವಾದಗಳ ಕಾರಣದಿಂದಲೇ ಸುದ್ದಿಯಲ್ಲಿರುವ ನಿರ್ದೇಶಕ ರಾಮ್‌ಗೋಪಾಲ್ ವರ್ಮಾ, ಈಗ ಮಹೇಶ್ ಬಾಬು ತಂದೆ ಸಾವಿನ ವಿಚಾರದಲ್ಲೂ ಹಾಸ್ಯ ಮಾಡುವ ಮೂಲಕ ನೆಟ್ಟಿಗರು ಹಾಗೂ ಟಾಲಿವುಡ್ ಪ್ರಿನ್ಸ್ ಮಹೇಶ್‌ಬಾಬು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಹೈದರಾಬಾದ್‌: ಸದಾಕಾಲ ವಿವಾದಗಳ ಕಾರಣದಿಂದಲೇ ಸುದ್ದಿಯಲ್ಲಿರುವ ನಿರ್ದೇಶಕ ರಾಮ್‌ಗೋಪಾಲ್ ವರ್ಮಾ, ಈಗ ಮಹೇಶ್ ಬಾಬು ತಂದೆ ಸಾವಿನ ವಿಚಾರದಲ್ಲೂ ಹಾಸ್ಯ ಮಾಡುವ ಮೂಲಕ ನೆಟ್ಟಿಗರು ಹಾಗೂ ಟಾಲಿವುಡ್ ಪ್ರಿನ್ಸ್ ಮಹೇಶ್‌ಬಾಬು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಟಾಲಿವುಡ್‌ ಸಿನಿಮಾ ಲೋಕದ ಹಿರಿಯ ನಟ ಹಾಗೂ ಟಾಲಿವುಡ್ ಪ್ರಿನ್ಸ್ ಮಹೇಶ್‌ಬಾಬು ಅವರ ತಂದೆ ಕೃಷ್ಣಮೂರ್ತಿ ಅವರು ಇಂದು ಮುಂಜಾನೆ ಹೈದರಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಕೃಷ್ಣಮೂರ್ತಿ ಅವರ ಅಭಿಮಾನಿಗಳು ಟಾಲಿವುಡ್ ಗಣ್ಯರು, ಮಹೇಶ್‌ಬಾಬು ಅಭಿಮಾನಿಗಳು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಸಾಕಷ್ಟು ಜನ ನಟ ಕೃಷ್ಣಮೂರ್ತಿ ನಿಧನಕ್ಕೆ ಸಂತಾಪ ವ್ಯಕ್ತಪಡಿಸುತ್ತಿದ್ದಾರೆ.

ಇಂತಹ ಸಂದರ್ಭದಲ್ಲಿಯೂ ನಿರ್ದೇಶಕ ರಾಮ್‌ಗೋಪಾಲ್‌ ವರ್ಮಾ (Ram gopal Verma) ಅವರು ಹಾಸ್ಯ ಮಾಡಲು ಮುಂದಾಗಿದ್ದು, ಇದು ನೆಟ್ಟಿಗರನ್ನು ಕೆರಳಿಸಿದೆ. ಟ್ವಿಟ್ಟರ್‌ ಪೇಜ್‌ನಲ್ಲಿ ಈ ಬಗ್ಗೆ ಬರೆದುಕೊಂಡ ರಾಮ್‌ಗೋಪಾಲ್ ವರ್ಮಾ, ಯಾರೂ ಕೂಡ ಬೇಸರಿಸಬೇಕಾದ ಅಗತ್ಯವಿಲ್ಲ. ಏಕೆಂದರೆ ಕೃಷ್ಣ ಅವರು ಹಾಗೂ ವಿಜಯ ನಿರ್ಮಲಾ ಅವರು ಸ್ವರ್ಗದಲ್ಲಿ ಜೊತೆಯಾಗಿ ನರ್ತಿಸುತ್ತಾ ಖುಷಿಯಿಂದ ಇರಲಿದ್ದಾರೆ ಎಂಬ ಬಗ್ಗೆ ಖಚಿತತೆ ಇದೆ ಎಂದು ಬರೆದುಕೊಂಡ ರಾಮ್‌ಗೋಪಾಲ್‌ ವರ್ಮಾ, ಅಲ್ಲಿ ಕೃಷ್ಣ ಹಾಗೂ ನಟಿ ವಿಜಯ ನಿರ್ಮಲಾ ನರ್ತಿಸಿರುವ ಹಾಡೊಂದರ ಯೂಟ್ಯೂಬ್ ವಿಡಿಯೋವೊಂದನ್ನು ಪೋಸ್ಟ್ ಮಾಡಿಕೊಂಡಿದ್ದಾರೆ. 

Actor Krishna Death: ಟಾಲಿವುಡ್‌ ಸೂಪರ್‌ಸ್ಟಾರ್‌ ಮಹೇಶ್‌ ಬಾಬು ತಂದೆ ಇನ್ನಿಲ್ಲ

1971 ತೆಲುಗು ಕೌಬಾಯ್ ಸಿನಿಮಾ ಮೊಸಗಲ್ಲಕು ಮೋಸಗಾಡು (Mosagallaku Mosagadu) ಎಂಬ ಚಿತ್ರದ ಹಾಡೊಂದನ್ನು ಪೋಸ್ಟ್ ಮಾಡಿದ್ದು, ಆ ಹಾಡಿನಲ್ಲಿ ಕೃಷ್ಣ ಹಾಗೂ ನಟಿ ವಿಜಯ ರೋಮ್ಯಾನ್ಸ್‌ (Romance) ಮಾಡುವ ದೃಶ್ಯವಿದೆ. ಹೀಗೆ ಪೋಸ್ಟ್ ಮಾಡುತ್ತಿದ್ದಂತೆ ಸಿಟ್ಟಿಗೆದ್ದ ನೆಟ್ಟಿಗರು, ಆರ್‌ಜಿವಿ (RGV) ವಿರುದ್ಧ ತಮ್ಮ ಆಕ್ರೋಶ  ಹೊರಹಾಕಿದ್ದಾರೆ. ಇಂತಹ ಸಂದರ್ಭದಲ್ಲಿಯೂ ಈ ರೀತಿಯ ತಮಾಷೆ ಬೇಕೆ ಎಂದು ಕೆಲವರು ಪ್ರಶ್ನಿಸಿದ್ದಾರೆ. ಮತ್ತೆ ಕೆಲವರು ಸ್ವರ್ಗ ನರಕದ ಬಗ್ಗೆ ನಿಮಗೆ ನಂಬಿಕೆ ಇದೆಯೇ ಎಂದು ಪ್ರಶ್ನಿಸಿದ್ದಾರೆ. ಆತನಿಗೆ ಸ್ವರ್ಗದ ಮೇಲೆ ಮಾತ್ರ ನಂಬಿಕೆ ಇದೆ ನರಕದ ಮೇಲೆ ಇಲ್ಲ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ನೀನು ಕೂಡ ಅಲ್ಲಿಗೆ ಬೇಗ ಹೋಗು ಎಂದು ಕೆಲವರು ಏಕವಚನದಲ್ಲಿ ಆರ್‌ಜಿವಿಯನ್ನು ನಿಂದಿಸಿದ್ದಾರೆ. ಮತ್ತೆ ಕೆಲವರು ನಿಮ್ಮ ಯೋಚನೆ ಅದ್ಭುತ ಎಂದು ಶ್ಲಾಘಿಸಿದ್ದಾರೆ. ಮತ್ತೆ ಕೆಲವರು ಇಲ್ಲೂ ಎರಡೇ ತಿಂಗಳಲ್ಲಿ ಅಪ್ಪ ಅಮ್ಮ ಇಬ್ಬರನ್ನು ಕಳೆದುಕೊಂಡ ಮಹೇಶ್ ಬಾಬು ಸ್ಥಿತಿ ನೆನೆದು ಶೋಕ ವ್ಯಕ್ತಪಡಿಸಿದ್ದಾರೆ. 

No need to feel sad because I am sure that Krishna garu and Vijayanirmalagaru are having a great time in heaven singing and dancing 💐💐💐 https://t.co/md0sOArEeG via

— Ram Gopal Varma (@RGVzoomin)

 

ಮಹೇಶ್‌ಬಾಬು (Mahesh babu) ತಾಯಿ ಹಾಗೂ ಕೃಷ್ಣಮೂರ್ತಿಯವರ (Krishna Murthy) ಪತ್ನಿ ಇಂದಿರಾದೇವಿ (Indira Devi)ನಿಧನರಾಗಿ ಎರಡು ತಿಂಗಳು ಕೂಡ ಕಳೆದಿಲ್ಲ. ಅಷ್ಟರಲ್ಲಿ ಮಹೇಶ್ ಬಾಬು ತಂದೆ ತೀರಿಕೊಂಡಿದ್ದು, ಮಹೇಶ್ ಬಾಬು ಕುಟುಂಬಕ್ಕೆ ಕೇವಲ ಎರಡು ತಿಂಗಳಲ್ಲಿ ಎರಡೆರಡು ಆಘಾತಗಳು ಎದುರಾಗಿವೆ. 

ನಮ್ಮನ್ನು ತುಂಬಾ ಪ್ರೀತಿಸುತ್ತಿದ್ದರು, ಅತ್ಯಂತ ದುಃಖದ ಸಮಯ; ಭಾವುಕ ಪತ್ರ ಹಂಚಿಕೊಂಡ ಮಹೇಶ್ ಬಾಬು ದಂಪತಿ

80 ವರ್ಷ ವಯಸ್ಸಿನ ನಟ ಕೃಷ್ಣಮೂರ್ತಿಯವರು ಕೆಲ ದಿನಗಳಿಂದ ಅನಾರೋಗ್ಯಕ್ಕೀಡಾಗಿದ್ದು, ಸೋಮವಾರ ನಸುಕಿನ ಜಾವ ಅವರಿಗೆ ತೀವ್ರ ಹೃದಯಾಘಾತವಾಗಿತ್ತು (cardiac arrest). ನಿನ್ನೆಯಿಂದ ಅವರ ಆರೋಗ್ಯ (Health) ತೀವ್ರ ಹದಗೆಟ್ಟಿತ್ತು. ಈ ಹಿನ್ನೆಲೆಯಲ್ಲಿ ಸೋಮವಾರ ನಸುಕಿನ ಜಾವ ಅವರನ್ನು ಹೈದರಾಬಾದ್‌ನ (Hyderabad) ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಸಿಪಿಆರ್‌ ನಡೆಸಿ ಅವರನ್ನು ಐಸಿಯುಗೆ ಶಿಫ್ಟ್‌ ಮಾಡಲಾಗಿತ್ತು. ಆದರೆ ಇಂದು ಮುಂಜಾನೆ ಅವರು ನಿಧನರಾಗಿದ್ದು, ತೆಲುಗು ಚಿತ್ರೋದ್ಯಮದಲ್ಲಿ ಶೋಕ ಆವರಿಸಿದೆ. ಕೃಷ್ಣ ಅವರ ಮೂಲ ಹೆಸರು ಘಟ್ಟಮನೇನಿ ಶಿವ ರಾಮ ಕೃಷ್ಣ ಮೂರ್ತಿ ಆಗಿದ್ದು ಅವರು 350 ಚಿತ್ರಗಳಲ್ಲಿ ನಟಿಸಿದ್ದಾರೆ ಮತ್ತು ಆ ಕಾಲದ ಅಗ್ರ ನಟರಲ್ಲಿ ಒಬ್ಬರಾಗಿದ್ದು, ಅವರು ಯಶಸ್ವಿ ನಿರ್ದೇಶಕ ಮತ್ತು ನಿರ್ಮಾಪಕರೂ ಆಗಿದ್ದರು. ಅವರಿಗೆ 2009 ರಲ್ಲಿ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು.

click me!