ಬಾಲಿವುಡ್‌ ಮಂದಿಗೆ ಪ್ರಭಾಸ್ ಯಾರೆಂದು ಸಹ ಗೊತ್ತಿರ್ಲಿಲ್ಲ; ರಾಣಾ ದಗ್ಗುಬಾಟಿ

Published : Mar 04, 2023, 11:24 AM IST
ಬಾಲಿವುಡ್‌ ಮಂದಿಗೆ ಪ್ರಭಾಸ್ ಯಾರೆಂದು ಸಹ ಗೊತ್ತಿರ್ಲಿಲ್ಲ; ರಾಣಾ ದಗ್ಗುಬಾಟಿ

ಸಾರಾಂಶ

ಬಾಲಿವುಡ್ ಮಂದಿಗೆ ದಕ್ಷಿಣ ಭಾರತದ ಪ್ರಸಿದ್ಧ ನಟರ ಬಗ್ಗೆಯೂ ಗೊತ್ತಿರಲಿಲ್ಲ ಎಂದು ರಾಣಾ ದಗ್ಗುಬಾಟಿ ಹೇಳಿದ್ದಾರೆ. 

ದಕ್ಷಿಣ ಭಾರತದ ಖ್ಯಾತ ನಟ ರಾಣಾ ದಗ್ಗುಬಾಟಿ ಸದ್ಯ ರಾಣಾ ನಾಯ್ಡು ಸಿನಿಮಾದ ಪ್ರಮೋಷನ್ ನಲ್ಲಿ ಬ್ಯುಸಿಯಾಗಿದ್ದಾರೆ. ರಾಣಾ ನಾಯ್ಡುಗಾಗಿ ಅನೇಕ ವಾಹಿನಿಗಳಿಗೆ ಸಂದರ್ಶನಗಳನ್ನು ನೀಡುತ್ತಿದ್ದಾರೆ. ರಾಣಾ ದಗ್ಗುಬಾಟಿ ಬಾಹುಬಲಿ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರಹೊಮ್ಮಿದರು. ಬಾಹುಬಲಿ ಸೀರಿಸ್ ರಾಣಾ ದಗ್ಗುಬಾಟಿಗೆ ದೊಡ್ಡ ಮಟ್ಟದ ಸಕ್ಸಸ್ ಜೊತೆಗೆ ಮಾರುಕಟ್ಟೆಯನ್ನು ವಿಸ್ತರಿಸಿಕೊಂಡರು. ಸದ್ಯ ಸಂದರ್ಶನದಲ್ಲಿ ಮಾತನಾಡಿದ ರಾಣಾ ಬಾಲಿವುಡ್ ಮಂದಿಗೆ ಸೌತ್ ಸಿನಿಮಾರಂಗದ ಬಗ್ಗೆ ಹೆಚ್ಚು ಗೊತ್ತಿರಲಿಲ್ಲ, ಪ್ರಸಿದ್ಧ ಕಲಾವಿದರ ಬಗ್ಗೆಯೂ ತಿಳಿದಿರಲಿಲ್ಲ ಎಂದು ಹೇಳಿದ್ದಾರೆ. ಆರ್ ಆರ್ ಆರ್ ನಂತರ ದಕ್ಷಿಣ ಭಾರತದ ಸಿನಿಮಾಗಳ ಬಗ್ಗೆ ರಾಣಾ ಮಾತನಾಡಿದ್ದಾರೆ. 

ರಾಣಾ ನಾಯ್ಡು ಸಿನಿಮಾದಲ್ಲಿ ರಾಣಾ ದಗ್ಗಬಾಟಿ ತನ್ನ ಚಿಕ್ಕಪ್ಪ ವೆಂಕಟೇಶ್ ದಗ್ಗುಬಾಟಿ ಜೊತೆ ಕಾಣಿಸಿಕೊಂಡಿದ್ದಾರೆ. ಸಿನಿಮಾ ಪ್ರಮೋಷನ್ ನಲ್ಲಿ ರಾಣಾಗೆ ಸೌತ್ ಸಿನಿಮಾಗಳ ಸಕ್ಸಸ್ ಗಳ ಬಗ್ಗೆ ಕೇಳಲಾಯಿತು. ಕೆಲವು ವರ್ಷಗಳ ಹಿಂದೆ ಹಿಂದಿ ಸ್ನೇಹಿತರ ಜೊತೆಗಿನ ಸಂಭಾಣೆಯನ್ನು ಬಿಚ್ಚಿಟ್ಟರು. 'ನಾನು ಬಾಹುಬಲಿ ಚಿತ್ರೀಕರಣದ ಸಮಯದಲ್ಲಿ ಕೆಲವು ವರ್ಷಗಳಿಂದ ಸ್ನೇಹಿತರಿಂದ ದೂರವಿದ್ದೆ, ನಾನು ಸ್ನೇಹಿತನನ್ನು ಭೇಟಿಯಾದಾಗ ನಾನು ಚಿತ್ರದ ಬಗ್ಗೆ ಹೇಳಿದೆ.  ಬಾಹಬಲಿ ಪಾತ್ರದಲ್ಲಿ ಯಾರು ನಟಿಸುತ್ತಿದ್ದಾರೆ ಎಂದು ಅವರು ಕೇಳಿದಾಗ, ನಾನು ಪ್ರಭಾಸ್ ಎಂದು ಹೇಳಿದೆ,ಅವರು ‘ಯಾರು ಪ್ರಭಾಸ್?’ ಎಂದು ಕೇಳಿದರು. ನನಗೆ ಅದನ್ನು ಹೇಗೆ ವಿವರಿಸಬೇಕೆಂದು ತಿಳಿಯಲಿಲ್ಲ' ಎಂದು ಹೇಳಿದರು.

ರಾಣಾ ದಗ್ಗುಬಾಟಿ ವಿರುದ್ಧ ದೂರು ದಾಖಲು; ಆಸ್ತಿಗಾಗಿ ಜೀವ ಬೆದರಿಕೆ ಹಾಕಿದ್ದು ನಿಜವೇ?

 'ನಾನು ಪ್ರಭಾಸ್ ಅವರ ಕೆಲವು ಚಿತ್ರಗಳ ಹೆಸರನ್ನು ಹೇಳಿದೆ. ಅವರು ಯಾವುದೇ ಚಲನಚಿತ್ರಗಳನ್ನು ನೋಡಿಲ್ಲ. ನನಗೆ ತಿಳಿದಿರುವ ಏಕೈಕ ತೆಲುಗು ನಟ ಚಿನು ಅವರ ಪತಿ ಎಂದು ಅವರು ಹೇಳಿದರು. ಅವನು ಏನು ಹೇಳುತ್ತಾನೆ ಎಂದು ನಾನು ಆಶ್ಚರ್ಯವಾಯಿತು.  ಚಿನು ನಮ್ರತಾ ಶಿರೋಡ್ಕರ್ ಎಂದು ನಾನು ಅರಿತುಕೊಂಡೆ. ಮಹೇಶ್ ಬಾಬು ಅವರ ಬಗ್ಗೆ ಅವರಿಗೆ ತಿಳಿದಿದೆ ಎಂದು ನನಗೆ ಶಾಕ್ ಆಯಿತು. ನಾಲ್ಕೈದು ವರ್ಷಗಳ ಕಾಲ ಕಾಯಿರಿ ಮತ್ತು ನಮ್ಮ ತಂಡ ಇಲ್ಲಿಗೆ ಬರುತ್ತದೆ ಎಂದು ನಾನು ಅವನಿಗೆ ಹೇಳಿದೆ' ಎಂದು ರಾಣಾ ಹಳಯ ಘಟನೆಯನ್ನು ವಿವರಿಸಿದರು. 

ವಿಮಾನ ನಿಲ್ದಾಣದಲ್ಲಿ ಲಗೇಜ್ ನಾಪತ್ತೆ; ಸಿಟ್ಟಿಗೆದ್ದ ನಟ ರಾಣಾ ದಗ್ಗುಬಾಟಿ ಮಾಡಿದ್ದೇನು?

ಆದರೆ ಕಾಲ ಬದಲಾಗಿದೆ. ಸೌತ್ ಸ್ಟಾರ್ ಗಳ ಹವಾ ಬಾಲಿವುಡ್ ನಲ್ಲೂ ಹೆಚ್ಚಾಗಿದೆ. ಅನೇಕ ವರ್ಷಗಳಿಂದ ಮೆರೆಯುತ್ತಿದ್ದ ಬಾಲಿವುಡ್‌ಗೆ ಸೌತ್ ಸಿನಿಮಾಗಳು ನಡುಕಹುಟ್ಟಿಸಿವೆ. ಬಾಲಿವುಡ್ ಭದ್ರಕೋಟೆ ಕೆಡವಿ ಸೌತ್ ಸಿನಿಮಾಗಳು ಆಳುತ್ತಿವೆ, ಅಷ್ಟರ ಮಟ್ಟಗೆ ಬದಲಾಗಿದೆ. ಬಾಹುಬಲಿ ಬಳಿಕ ಸೌತ್ ಸಿನಿಮಾಗಳನ್ನು ನೋಡುವ ರೀತಿ ಬದಲಾಗಿದೆ. ನಿರೀಕ್ಷೆಗಳು ಹೆಚ್ಚಾಗಿವೆ. ಸೌತ್ ಸಿನಿಮಾಗಳ ಬ್ಯಾಕ್ ಟು ಬ್ಯಾಕ್ ಹಿಟ್ ಆಗಿವೆ. ಭಾರತದಲ್ಲಿ ಸಿನಿಮಾದ ಗೋಡೆಗಳನ್ನು ಒಡೆದಿದ್ದಕ್ಕಾಗಿ  ನಿರ್ದೇಶಕ ಎಸ್‌ಎಸ್ ರಾಜಮೌಳಿ ಅವರನ್ನು ರಾಣಾ ಈ ಹಿಂದೆ ಹೊಗಳಿದ್ದರು. ಇದರಲ್ಲಿ ಸುರ್ವೀನ್ ಚಾವ್ಲಾ, ಸುಶಾಂತ್ ಸಿಂಗ್, ಅಭಿಷೇಕ್ ಬ್ಯಾನರ್ಜಿ, ಗೌರವ್ ಚೋಪ್ರಾ ಮತ್ತು ಆಶಿಶ್ ವಿದ್ಯಾರ್ಥಿ ಮುಂತಾದವರು ನಟಿಸಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?