ಹೃತಿಕ್​ ರೋಷನ್​ ಮದ್ವೆ: ಅಪ್ಪ Rakesh Roshan ಹೀಗ್ಯಾಕೆ ಹೇಳಿದ್ರು?

Published : Mar 04, 2023, 09:44 AM IST
ಹೃತಿಕ್​ ರೋಷನ್​ ಮದ್ವೆ: ಅಪ್ಪ Rakesh Roshan ಹೀಗ್ಯಾಕೆ ಹೇಳಿದ್ರು?

ಸಾರಾಂಶ

ಕೆಲ ವರ್ಷಗಳಿಂದ ಡೇಟಿಂಗ್​ನಲ್ಲಿರುವ ನಟ ಹೃತಿಕ್​ ರೋಷನ್​ ಮತ್ತು ಗಾಯಕಿ ಸಬಾ ಆಜಾದ್​ ಅವರು ಮದುವೆಯಾಗಲಿದ್ದಾರೆ ಎನ್ನುವ ಸುದ್ದಿ ಹರಡಿದ್ದು, ಈ ಬಗ್ಗೆ ತಂದೆ ರಾಕೇಶ್​ ರೋಶನ್​ ಕುತೂಹಲದ ಹೇಳಿಕೆ ಕೊಟ್ಟಿದ್ದಾರೆ. ಏನದು?   

ಬಾಲಿವುಡ್ ನಟ ಹೃತಿಕ್ ರೋಷನ್ (Hrithik Roshan) ಅವರು ಗಾಯಕಿ ಸಬಾ ಆಜಾದ್ (Saba Azad) ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಬಹಳ ಹಳೆಯದು.  ಹೃತಿಕ್ ರೋಷನ್ ಮತ್ತು ಸಬಾ ಆಜಾದ್ ಆಗಾಗ್ಗೆ ಒಟ್ಟಿಗೆ ಕಾಣಿಸಿಕೊಳ್ಳುತ್ತಾರೆ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಪರಸ್ಪರರ ಪೋಸ್ಟ್‌ಗಳಿಗೆ ಪ್ರತಿಕ್ರಿಯಿಸುತ್ತಲೇ ಇರುತ್ತಾರೆ. ಇದನ್ನೆಲ್ಲಾ ನೋಡಿದ ಜನರು ಇಬ್ಬರೂ ಸಂಬಂಧದಲ್ಲಿದ್ದಾರೆ ಎಂದು ಊಹಿಸಿದ್ದಾರೆ.  ಕೈ ಕೈಹಿಡಿದು ಓಡಾಡುತ್ತಿದ್ದ ಈ ಜೋಡಿ ಇತ್ತೀಚಿಗಷ್ಟೆ ಸಾರ್ವಜನಿಕವಾಗಿಯೇ ವಿಮಾನ ನಿಲ್ದಾಣದಲ್ಲಿ ಲಿಪ್ ಕಿಸ್ ಮಾಡಿಯೂ ತಮ್ಮ ಸಂಬಂಧವನ್ನು ಬಹಿರಂಗಪಡಿಸಿದ್ದರು.    ನಿರ್ದೇಶಕ ಕರಣ್ ಜೋಹರ್ ಅವರ  ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿಯೂ ಈ ಜೋಡಿ ಕಾಣಿಸಿಕೊಂಡಿತ್ತು. ಆಗ ಹೃತಿಕ್ ರೋಷನ್​ ಈಕೆ ತನ್ನ ಗೆಳತಿ ಎಂದು ಹೇಳಿದ್ದರು ಎನ್ನಲಾಗಿದೆ. ಆದರೆ ತಮ್ಮ ಸಂಬಂಧದ ಕುರಿತು ಇಬ್ಬರೂ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.

ಆದರೆ ಇವರಿಬ್ಬರೂ ಮದುವೆಯಾಗುತ್ತಿದ್ದಾರೆ ಎಂಬ ಸುದ್ದಿ ಮಾತ್ರ ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ ಬಹು ಜೋರಾಗಿ ಬರುತ್ತಿವೆ. ಹೃತಿಕ್​ ಅಭಿಮಾನಿಗಳು ಇದಾಗಲೇ ಶುಭಾಶಯಗಳ ಸುರಿಮಳೆಯನ್ನೂ ಗೈಯುತ್ತಿದ್ದಾರೆ. ಆದರೆ ಕುತೂಹಲದ ಸಂಗತಿ ಏನೆಂದರೆ, ಈ ಮದುವೆಯ ಕುರಿತು  ಹೃತಿಕ್ ರೋಷನ್ ತಂದೆ ರಾಕೇಶ್ ರೋಷನ್ (Rakesh Roshan) ಕೌತುಕದ ಪ್ರತಿಕ್ರಿಯೆ ನೀಡಿದ್ದಾರೆ.  ತಮ್ಮ ಪುತ್ರ ಹೃತಿಕ್ ರೋಷನ್ ಮತ್ತು ಸಾಬಾ ಆಜಾದ್ ಅವರ ವಿವಾಹದ (Marraige) ಕುರಿತು ಮಾತನಾಡಿರುವ ಅವರು,  ಕುಟುಂಬದಲ್ಲಿ ಯಾವುದೇ ಮದುವೆಯ ಬಗ್ಗೆ ತಮಗೆ ತಿಳಿದಿಲ್ಲ ಎಂದಿದ್ದಾರೆ! ನಾನು ಮದುವೆ ಬಗ್ಗೆ ಇನ್ನೂ ಏನೂ ಕೇಳಿಲ್ಲ. ಹೃತಿಕ್ ರೋಷನ್ ಮತ್ತು ಸಬಾ ಆಜಾದ್ ಪರಸ್ಪರ ಅರ್ಥಮಾಡಿಕೊಳ್ಳಲು ಮತ್ತು ತಿಳಿದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಇದನ್ನು ಬಿಟ್ಟು ನಮ್ಮ ಕುಟುಂಬದಲ್ಲಿ ಯಾವುದೇ ಮದುವೆಗಳ ಬಗ್ಗೆಯೂ ನನಗೆ ಗೊತ್ತಿಲ್ಲ ಎಂದಿದ್ದಾರೆ.

ಇದೇ ವರ್ಷ ಗರ್ಲ್‌ಫ್ರೆಂಡ್ ಜೊತೆ ಹೃತಿಕ್ ರೋಷನ್ ಮದುವೆ; ಇಲ್ಲಿದೆ ವಿವರ
 
ಗಮನಾರ್ಹ ಸಂಗತಿ ಏನೆಂದರೆ,  ಹೃತಿಕ್ ರೋಷನ್ ಮತ್ತು ಸಬಾ ಆಜಾದ್ ಅವರ ಸಂಬಂಧದ ಬಗ್ಗೆ ಚರ್ಚೆ ಶುರುವಾದದ್ದು ಕಳೆದ ವರ್ಷ ಅಂದರೆ 2022ರ  ಫೆಬ್ರವರಿಯಲ್ಲಿ.  ವಾಸ್ತವವಾಗಿ, ಈ ಜೋಡಿ   ಒಟ್ಟಿಗೆ ಕಾಣಿಸಿಕೊಳ್ಳಲು ಶುರು ಮಾಡಿದ್ದು ಆಗಲೇ.  ಇಬ್ಬರೂ ಪರಸ್ಪರ ಡೇಟಿಂಗ್ (Dating) ಮಾಡುತ್ತಿದ್ದಾರೆ ಎಂಬ ಬಿಗ್​ ಟೌನ್​ನಲ್ಲಿ ಗುಸುಗುಸು ಶುರುವಾಗಿತ್ತು.  ಹೃತಿಕ್ ರೋಷನ್ ಮತ್ತು ಸಾಬಾ ಆಜಾದ್ ಟ್ವಿಟರ್ ಮೂಲಕ ಭೇಟಿಯಾಗಿದ್ದಾರೆ ಎಂದು ಹೇಳಲಾಗಿದೆ. ಟ್ವಿಟರ್​ನಲ್ಲಿ ಇಬ್ಬರೂ ಸಂಕ್ಷಿಪ್ತವಾಗಿ ಮಾತುಕತೆ ನಡೆಸಿದ್ದರು, ನಂತರ ಇಬ್ಬರೂ  ಊಟಕ್ಕೆ ಒಟ್ಟಿಗೇ ಹೋಗಿದ್ದರು. ಅಲ್ಲಿ ಪ್ರೀತಿಯ ವಿಷಯದ ಮಾತುಕತೆ ನಡೆಸಲಾಯಿತು ಎನ್ನಲಾಗಿದೆ.  

ಅಂದಹಾಗೆ ಹೃತಿಕ್ ರೋಷನ್ ಸುಸಾನ್​ ಖಾನ್​ (Sussanne Khan) ಅವರನ್ನು ಮೊದಲು ಮದುವೆಯಾಗಿದ್ದರು. ಈ ಜೋಡಿಗೆ  ರಿಹಾನ್ ಮತ್ತು ರಿಧಾನ್ ಮಕ್ಕಳಿದ್ದಾರೆ. ನಂತರ ದಂಪತಿ ವಿಚ್ಛೇದನ ಪಡೆದಿದ್ದಾರೆ. 2014ರಲ್ಲಿ ವಿಚ್ಛೇದನದ ಬಳಿಕ ಸಾಬಾ ಜೊತೆ ಡೇಟಿಂಗ್​ ಶುರು ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಹೃತಿಕ್ ಸಿನಿಮಾ ವಿಚಾರಕ್ಕೆ ಬರುವುದಾದರೆ ಕೊನೆಯದಾಗಿ ವಿಕ್ರಮ್ ವೇದ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಸದ್ಯ ಹೃತಿಕ್ ಫೈಟರ್ (Fighter) ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾಲ್ಲಿ ನಾಯಕಿಯಾಗಿ ದೀಪಿಕಾ ಪಡುಕೋಣೆ ನಟಿಸುತ್ತಿದ್ದಾರೆ. ಇನ್ನು ಅನಿಲ್ ಕಪೂರ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಮೊದಲ ಬಾರಿಗೆ ದೀಪಿಕಾ ಮತ್ತು ಹೃತಿಕ್ ಕಾಣಿಸಿಕೊಳ್ಳುತ್ತಿದ್ದು ಪಠಾಣ್ ನಿರ್ದೇಶಕ ಸಿದ್ಧಾರ್ಥ್ ಆನಂದ್ ಸಾರಥ್ಯದಲ್ಲಿ ಸಿನಿಮಾ ಮೂಡಿಬರುತ್ತಿದೆ. 

Anikha Surendran: 'ಬ್ರಾ' ಬಗ್ಗೆ ಪಾಠ ಮಾಡಿದ್ದ ನಟಿಯಿಂದ ಈಗ ಲಿಪ್​ಲಾಕ್​ ಅನುಭವ
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?