ಪಾಪರಾಜಿಗಳಿಗೆ ಬೆಡ್‌ರೂಮಿಗೇ ಇನ್ವೈಟ್ ಮಾಡಿದ್ದೇಕೆ ಸೈಫ್ ಆಲಿ ಖಾನ್?

By Suvarna NewsFirst Published Mar 4, 2023, 9:40 AM IST
Highlights

ತಮ್ಮನ್ನು ಹಿಂಬಾಲಿಸಿ ಫೋಟೋಗೆ ಪೋಸ್​ ಕೊಡುವಂತೆ ಕಿರಿಕಿರಿ ಮಾಡಿದ ಛಾಯಾಚಿತ್ರಕಾರರ ವಿರುದ್ಧ ಗರಂ ಆದ ನಟ ಸೈಫ್​ ಅಲಿ ಖಾನ್​ ಹೇಳಿದ್ದೇನು?
 

ಇತ್ತೀಚೆಗೆ, ನಟಿ ಆಲಿಯಾ ಭಟ್​ (Alia Bhat) ಅವರು ತಮ್ಮ ಮನೆಯ ಲಿವಿಂಗ್​ ರೂಂನಲ್ಲಿ ಇದ್ದಾಗ ಎದುರಿಗಿದ್ದ ಮನೆಯವರು ಫೋಟೋ ಕ್ಲಿಕ್​ ಮಾಡಿದ್ದರು. ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿತ್ತು. ಇದರಿಂದ  ಆಲಿಯಾ ಭಟ್‌ ಗರಂ ಆಗಿ  ನನ್ನ ಪರ್ಸನಲ್ ಜೀವನಕ್ಕೆ ಧಕ್ಕೆಯಾಗುತ್ತಿದೆ ಎಂದು  ಮುಂಬೈ ಪೊಲೀಸರಿಗೆ ದೂರು ಸಲ್ಲಿಸಿದ್ದು ನೆನಪಿದೆಯಲ್ಲವೆ? ಸೆಲೆಬ್ರಿಟಿ ಜೀವನವೇ ಹಾಗೆ. ಎಲ್ಲಿಗೆ ಹೋದರೂ ಕ್ಯಾಮೆರಾ ಕಣ್ಣುಗಳ ಅವರ  ಮೇಲೆ ಇರುತ್ತದೆ. ಈಗ ಅಂಥದ್ದೇ ಸರದಿ ಕರೀನಾ ಕಪೂರ್​ ಹಾಗೂ ಸೈಫ್​ ಅಲಿ ಖಾನ್​ (Saif Ali Khan) ಅವರದ್ದು. ಪತ್ನಿ ಕರೀನಾ (Kareena Kapoor) ಜೊತೆ ಸೈಫ್​ ಹೋಗುತ್ತಿದ್ದ ವೇಳೆ ಫೋಟೋ ಕ್ಲಿಕ್ಕಿಸಲಾಗಿದೆ. ಇದರನ್ನೇನು ಹೊಸ ವಿಷಯವಿಲ್ಲ. ಸಾರ್ವಜನಿಕವಾಗಿ ಗುರುತಿಸಿಕೊಂಡಾಗ ಹೀಗೆಯೇ ಆಗುತ್ತದೆ. ಕೆಲವೊಮ್ಮೆ ತಮ್ಮ ಫೋಟೋ ವೈರಲ್​ ಆಗಲೆಂದೇ ಎಷ್ಟೋ ನಟ-ನಟಿಯರು ಚಿತ್ರ-ವಿಚಿತ್ರ ವೇಷ ತೊಟ್ಟು ಬರುವುದೂ ಉಂಟು. ಇನ್ನು ಕೆಲವರು ಟ್ರೋಲ್​ ಆಗಿ ಫೇಮಸ್​ ಆಗಲಿ ಎಂದೂ ಬಟ್ಟೆ ತೊಡುವುದು ಉಂಟು. ಇದು ಒಂದೆಡೆಯಾದರೆ, ಖಾಸಗಿ ಬದುಕಿಗೂ ತೀರಾ ಧಕ್ಕೆಯಾಗುವಂತೆ ಹೋದಲ್ಲಿ, ಬಂದಲ್ಲಿ ಜನರು ಫೋಟೋ ಕ್ಲಿಕ್​ ಮಾಡುವುದೂ ಉಂಟು.

ಇದೀಗ ಆಗಿದ್ದೂ ಹಾಗೆಯೇ. ಈ ದಂಪತಿ ಜೋಡಿಯಾಗಿ ಹೋಗುತ್ತಿದ್ದಾಗ, ಕೆಲವರು ಫೋಟೋಗೆ ಪೋಸ್​ (Photo pose) ಕೊಡಲು ಹೋಗಿದ್ದಾರೆ. ದಂಪತಿ ಎಷ್ಟೇ ನಿರಾಕರಿಸಿದರೂ ಪದೇ ಪದೇ ಒತ್ತಾಯ ಮಾಡಿದ್ದಾರೆ. ಇದರಿಂದ ಸೈಫ್​ ಅಲಿ ಗರಂ ಆಗಿದ್ದಾರೆ. ಅಷ್ಟಕ್ಕೂ ಈ ದಂಪತಿ ಹೋಗಿದ್ದು, ನಟಿ ಮಲೈಕಾ ಅರೋರಾ ಅವರ ಬರ್ತ್ಡೇ ಪಾರ್ಟಿಗೆ. ಪಾರ್ಟಿ ಮುಗಿಸಿ ಮಧ್ಯ ರಾತ್ರಿ ವಾಪಸ್​  ಆಗುವಾಗ ಜನರ ಕಣ್ಣಿಗೆ ಕಂಡು ಬಿಟ್ಟಿದ್ದಾರೆ. ಬಿಡುತ್ತಾರೆಯೇ ಅವರು? ಕಿರಿಕಿರಿ ಎನ್ನುವಷ್ಟು ಅವರಿಗೆ ಫೋಟೋಗೆ ಫೋರ್ಸ್​ ಮಾಡಿದ್ದಾರೆ. ಇದರಿಂದ ಅಸಮಾಧಾನ ಹೊರಹಾಕಿದ  ಸೈಫ್​ ಅಲಿ, ಬಂದುಬಿಡಿ ನಮ್ಮ ಬೆಡ್​ರೂಮ್​ಗೆ, ಅಲ್ಲಿಯೂ ಫೋಟೋ ಕ್ಲಿಕ್ಕಿಸಿಕೊಳ್ಳಿ ಎಂದಿದ್ದಾರೆ.

Latest Videos

ಮಗಳೇ ಎಂದು ಬಾಯ್ತುಂಬ ಕರೆದವಳನ್ನೇ ಮದ್ವೆಯಾದ ಈ ಬಾಲಿವುಡ್​ ಸ್ಟಾರ್​!

ಆಗಿದ್ದೇನೆಂದರೆ   ಪಾರ್ಟಿ ಮುಗಿಸಿ ಜೋಡಿ ಮನೆಗೆ ವಾಪಸಾಗುತ್ತಿದ್ದರು.  ಕಾರಿನಿಂದ ಇಳಿಯುತ್ತಿದ್ದಂತೆಯೇ ಫೋಟೋ ಕ್ಲಿಕ್ಕಿಸಲಾಗುತ್ತಿದೆ. ಮೊದಲಿಗೆ ಚೆನ್ನಾಗಿಯೇ ಪೋಸ್​ ಕೊಡುತ್ತಲೇ ದಂಪತಿ ಬಂದರು. ಆದರೆ ಫೋಟೋಗ್ರಾಫರ್​ಗಳು ಸರ್​ ಸರ್​ ಸರ್​ ಎನ್ನುತ್ತಾ ಮತ್ತಷ್ಟು ಫೋಟೋಗೆ ಪೋಸ್​ ಕೇಳಿದರು. ಇದರಿಂದ ಸೈಫ್​ ಅಲಿಗೆ ಕಿರಿಕಿರಿಯಾಗಿದೆ. ಸಹನೆ ಕಳೆದುಕೊಂಡು ಬಂದುಬಿಡಿ ನಮ್ಮ ಬೆಡ್​ರೂಂಗೆ ಎನ್ನುತ್ತಲೇ ಬಾಗಿಲು ಹಾಕಿಕೊಂಡರು. 
 
ಅಂದಹಾಗೆ ಕರೀನಾ ಕಪೂರ್​ ಸೈಫ್​ ಅಲಿ ಅವರ ಎರಡನೆಯ ಪತ್ನಿ. ಸೈಫ್​ ಅಲಿ ಖಾನ್​ ಕರೀನಾರಿಗಿಂತಲೂ 10 ವರ್ಷ ದೊಡ್ಡವರು ಮಾತ್ರವಲ್ಲದೇ ಇದಾಗಲೇ ಇನ್ನೊಂದು ಮದುವೆಯಾಗಿ ಮಕ್ಕಳನ್ನೂ ಪಡೆದಿದ್ದರು ಎನ್ನುವ ಕಾರಣಕ್ಕೆ ಈ ಮದುವೆ ಭಾರಿ ಸುದ್ದಿಯಾಗಿತ್ತು.  5 ವರ್ಷಗಳ ಕಾಲ ಲಿವ್-ಇನ್ (Live in relation) ಸಂಬಂಧದಲ್ಲಿದ್ದ ಈ ಜೋಡಿ ಕೊನೆಗೆ ಮದುವೆಯಾಗಿತ್ತು. ಅದಾಗಲೇ ಲವ್ ಜಿಹಾದ್ ಎಂಬ ಬಗ್ಗೆಯೂ ದೊಡ್ಡ ಮಟ್ಟದಲ್ಲಿ ಸುದ್ದಿಯೇ ಆಗಿಬಿಟ್ಟಿತ್ತು. ಸೈಫ್​ ಅಲಿ ಖಾನ್​ ಹಿಂದೊಮ್ಮೆ ಕರೀನಾ ಅವರನ್ನು ಬೇಟಿ... (ಮಗಳೇ) ಎಂದು ಹಿಂದೊಮ್ಮೆ ಕರೆದಿದ್ದರು. ನಂತರ ಆಕೆಯನ್ನೇ  ಮದುವೆಯಾಗಿರುವ ಬಗ್ಗೆ ಭಾರಿ ಟ್ರೋಲ್​ ಕೂಡ ಆಗಿತ್ತು.  ಸೈಫ್ ಅಲಿ ಖಾನ್ ಅವರ ಮೊದಲ ಪತ್ನಿ ಅಮೃತಾ ಸಿಂಗ್​. ಇವರು ಸೈಫ್​ ಅವರಿಗಿಂತಲೂ 12 ವರ್ಷ ದೊಡ್ಡವರು. ಆದರೂ ಲವ್​ ಮಾಡಿ ಇವರ ಮದುವೆ 1991ರಲ್ಲಿ ಇವರ ಮದುವೆಯಾಯಿತು. ಆ ಸಂದರ್ಭದಲ್ಲಿ  ಅಮೃತಾ ಅವರಿಗೆ 33 ವರ್ಷ ವಯಸ್ಸಾಗಿದ್ದರೆ, ಸೈಫ್‌ಗೆ 21 ವರ್ಷ. ಈ ಮದುವೆಗೆ ಕಪೂರ್​ ಕುಟುಂಬವೂ ಆಗಮಿಸಿತ್ತು. ಆಗಿನ್ನೂ ಕರೀನಾಗೆ 11 ವರ್ಷ ವಯಸ್ಸು. ಕರೀನಾ (Kareena Kapoor) ಕೂಡ ಮದುವೆಗೆ ಹೋಗಿದ್ದರು. ಕರೀನಾ ಮದುವೆಗೆ ವಿಷ್​ ಮಾಡಿದಾಗ, ಸೈಫ್​ ಅಲಿ ಖಾನ್​ ಆ ಬಾಲಕಿಯನ್ನು ನೋಡಿ, ಥ್ಯಾಂಕ್ಯೂ ಬೇಟಾ (ಧನ್ಯವಾದ ಮಗಳೇ...) ಎಂದು ಹೇಳಿದ್ದರು!  ಆದರೆ  ಮಗಳೇ ಎಂದು ಹೇಳಿದಾಕೆಯನ್ನೇ ಮುಂದೊಂದು ದಿನ ಪತ್ನಿಯಾಗಿ ಸ್ವೀಕರಿಸುತ್ತೇನೆ ಎಂದು ಅವರು ಕನಸಿನಲ್ಲಿಯೂ ಅಂದುಕೊಂಡಿರಲಿಲ್ಲ. ಈ ವಿಷಯ ಬಹಿರಂಗಗೊಂಡಾಗ ಜೋಡಿ ಭಾರಿ ಟ್ರೋಲ್​ಗೆ ಒಳಗಾಗಿದ್ದೂ ಇದೆ. 2016ರಲ್ಲಿ ಈ ಜೋಡಿಗೆ ತೈಮೂರ್ (Taimur) ಎಂಬ ಮಗ ಜನಿಸಿದರೆ 2020ರಲ್ಲಿ ಜೆಹ್ ಅಲಿ ಖಾನ್ ಜನಿಸಿದರು.  ಸದ್ಯ ಸೈಫ್ ಅಲಿಗೆ ನಾಲ್ವರು ಮಕ್ಕಳು. ಅವರು  ಮೊದಲ ಪತ್ನಿಯ ಮಕ್ಕಳ ಜೊತೆಗೂ ಸಮಯ ಕಳೆಯುತ್ತಾರೆ.

Sharmila Tagore: ಸೈಫ್​ ಅಲಿ ಅಮ್ಮನ ಬಿಕಿನಿ ಫೋಟೋ ನೋಡಿ ಪತಿಯ ರಿಯಾಕ್ಷನ್​ ಹೇಗಿತ್ತು?

 

click me!