16980ರ ದಶಕದಲ್ಲಿ ಬಿಡುಗಡೆಯಾದ ಒಂದು ಬಾಲಿವುಡ್ ಸಿನಿಮಾ ಭಾರತೀಯ ರೈಲ್ವೆಗೆ ನಷ್ಟವನ್ನುಂಟುಮಾಡಿತು. ಚಿತ್ರದ ಚಿತ್ರೀಕರಣದ ಸಮಯದಲ್ಲಿ ರೈಲಿಗೆ ಹಾನಿಯುಂಟಾಯಿತು.
ಮುಂಬೈ: ಬಹುತೇಕ ಸಿನಿಮಾಗಳ ಎಂಟ್ರಿ ಮತ್ತು ಎಂಡ್ ಸೀನ್‌ಗಳು ರೈಲ್ವೆಯಲ್ಲಿ ಚಿತ್ರೀಕರಣ ಮಾಡಲಾಗುತ್ತದೆ. ರೈಲ್ವೆ ನಿಲ್ದಾಣದ ಅಥವಾ ಟ್ರೈನ್‌ನಲ್ಲಿ ಶೂಟಿಂಗ್ ಮಾಡಿದರೆ ಯಶಸ್ಸು ಸಿಗುತ್ತೆ ಎಂಬ ನಂಬಿಕೆಯೂ ಬಣ್ಣದ ಲೋಕದಲ್ಲಿದೆ. ಹಾಗಾಗಿ ಕೆಲ ನಿರ್ದೇಶಕರು ಚಿತ್ರದ ಒಂದು ದೃಶ್ಯದಲ್ಲಾದರೂ ರೈಲು ತರಲು ಪ್ರಯತ್ನಿಸುತ್ತಾರೆ. ಆದರೆ 1980ರಲ್ಲಿ ಬಿಡುಗಡೆಯಾದ ಬಾಲಿವುಡ್ ಸಿನಿಮಾದಿಂದ ಭಾರತೀಯ ರೈಲ್ವೆ ನಷ್ಟವನ್ನು ಅನುಭವಿಸಿತ್ತು. ಚಿತ್ರತಂಡ ನಷ್ಟ ಭರಿಸಲು ಹಿಂದೇಟು ಹಾಕಿತ್ತು. 1980ರ ಕಾಲಘಟ್ಟದ ಸ್ಟಾರ್ ಕಲಾವಿದರು ನಟಿಸಿದರೂ ಚಿತ್ರಕ್ಕೆ ಯಶಸ್ಸು ಸಿಗಲಿಲ್ಲ. ಹಾಕಿದ ಬಂಡವಾಳ ಮಾತ್ರ ಹಿಂದಿರುಗಿತ್ತು ಎಂದು ವರದಿಯಾಗಿದೆ.
1980ರಲ್ಲಿ "ಬರ್ನಿಂಗ್ ಟ್ರೈನ್" ಸಿನಿಮಾ ರಿಲೀಸ್ ಆಗಿತ್ತು. ಈ ಚಿತ್ರವನ್ನು ಮಹಾಭಾರತ ಖ್ಯಾತಿಯ ಬಿಎಆರ್ ಚೋಪ್ರಾ ನಿರ್ಮಾಣ ಮಾಡಿದ್ರೆ ಮಗ ರವಿ ಚೋಪ್ರಾ ಆಕ್ಷನ್ ಕಟ್ ಹೇಳಿದ್ದರು. 1980ರ ಕಾಲಘಟ್ಟದ ಸ್ಟಾರ್‌ಗಳಾದ ಧರ್ಮೇಂದ್ರ, ಜೀತೇಂದ್ರ, ವಿನೋದ್ ಖನ್ನಾ, ಹೇಮಾ ಮಾಲಿನಿ, ಪರ್ವಿನ್ ಬಾಬಿ, ನೀತು ಸಿಂಗ್ ಮತ್ತು ಡ್ಯಾನಿ ಸೇರಿದಂತೆ ದೊಡ್ಡ ತಾರಾಬಳಗವನ್ನು ಕಾಸ್ಟ್ ಮಾಡಲಾಗಿತ್ತು. ಭಾರೀ ನಿರೀಕ್ಷೆ ಮೂಡಿಸಿದ್ದ ಈ ಸಿನಿಮಾ ಪ್ರೇಕ್ಷಕರನ್ನು ಚಿತ್ರಮಂದರಕ್ಕೆ ಕರೆ ತರುವಲ್ಲಿ ಭಾಗಶಃ ವಿಫಲವಾಗಿತ್ತು. ಇಷ್ಟು ಮಾತ್ರವಲ್ಲದೇ ಈ ಚಿತ್ರದಲ್ಲಿ ಭಾರತೀಯ ರೈಲ್ವೆ ಸಹ ನಷ್ಟವನ್ನು ಅನುಭವಿಸವಿತ್ತು. ಈ ಚಿತ್ರವನ್ನು ಭಾಗಶಃ ರೈಲಿನಲ್ಲಿಯೇ ಚಿತ್ರೀಕರಣ ಮಾಡಲಾಗಿತ್ತು.
undefined
ಡೆಮು & ಮೆಮು ರೈಲುಗಳ ನಡುವಿನ ವ್ಯತ್ಯಾಸ ಏನು? ಇವುಗಳ ಸಾಮಾರ್ಥ್ಯ ಎಷ್ಟು?
ನೂರಾರು ಪ್ರಯಾಣಿಸುತ್ತಿರುವ ಚಲಿಸುತ್ತಿರುವ ರೈಲಿನಲ್ಲಿ ಕೆಲವರ ಸಂಚಿನಿಂದ ಬೆಂಕಿ ಕಾಣಿಸಿಕೊಳ್ಳುತ್ತದೆ. ಇದರ ಜೊತೆಗೆ ರೈಲಿನ ಬ್ರೇಕ್ ಫೇಲ್ ಆಗಿ ವೇಗ ಹೆಚ್ಚಾಗುತ್ತದೆ. ರೈಲನ್ನು ಹೇಗೆ ನಿಲ್ಲಿಸಲಾಗುತ್ತೆ ಎಂಬುವುದೇ ಚಿತ್ರದ ಒನ್ ಲೈನ್ ಸ್ಟೋರಿ. ಧರ್ಮೇಂದ್ರ-ವಿನೋದ್ ಖನ್ನಾ ಆಕ್ಷನ್ ಸೀನ್‌ಗಳು ಇಂದಿಗೂ ಪ್ರೇಕ್ಷಕರನ್ನು ಕುರ್ಚಿಯ ತುದಿಗೆ ತಂದು ಕೂರಿಸುತ್ತದೆ. ಈ ಚಿತ್ರದ ಆಕ್ಷನ್ ಸೀನ್‌ಗಳ ಚಿತ್ರೀಕರಣಕ್ಕಾಗಿ ಹಾಲಿವುಡ್‌ನಿಂದ ತಂತ್ರಜ್ಞರನ್ನು ಕರೆಸಲಾಗಿತ್ತು ಚಿತ್ರದಲ್ಲಿ ಸ್ಪೆಷಲ್ ಎಫೆಕ್ಟ್ ಸಹ ಬಳಸಿಕೊಳ್ಳಲಾಗಿತ್ತು.
ಕೆಲ ಮಾಧ್ಯಮಗಳ ವರದಿ ಪ್ರಕಾರ, ಚಿತ್ರದ ನಿರ್ಮಾಣ ಸಂಸ್ಥೆ ರೈಲೊಂದನ್ನು ಬಾಡಿಗೆಗೆ ಪಡೆದುಕೊಂಡಿತ್ತು. ಈ ಚಿತ್ರದ ನಿರ್ಮಾಣದಿಂದ ರೈಲ್ವೆ ನಷ್ಟ ಅನುಭವಿಸಿತ್ತು. ರೈಲಿನಲ್ಲಿ ಶೆಲ್ ದಾಳಿ, ಬೆಂಕಿ ಹಚ್ಚಿ ಚಿತ್ರೀಕರಣ ಮಾಡಿದ್ದರಿಂದ ಹಲವು ನಷ್ಟವುಂಟಾಗಿತ್ತು. ಸಿನಿಮಾ ನಿರ್ಮಾಪಕರಿಂದ ರೈಲ್ವೆ ಇಲಾಖೆ ಪರಿಹಾರ ಕೇಳಿದಾಗ ನಮ್ಮಿಂದ ಯಾವುದೇ ನಷ್ಟ ಉಂಟಾಗಿಲ್ಲ ಎಂದು ಜಾರಿಕೊಂಡಿತ್ತು. ಈ ಚಿತ್ರ ಯುಟ್ಯೂಬ್‌ನಲ್ಲಿದ್ದು, ವೀಕ್ಷಿಸಬಹುದಾಗಿದೆ.
ರೈಲುಗಳು ಗಂಟೆಗಟ್ಟಲೇ ನಿಂತರೂ ಇಂಜಿನ್ ಯಾಕೆ ಆಫ್ ಮಾಡಲ್ಲ?