Radhika Kumaraswamy: ಏಳು ಭಾಷೆಗಳಲ್ಲಿ ಏಕಕಾಲದಲ್ಲಿ ನಾಯಕಿ- ಏನಿದು ಹೊಸ ಸುದ್ದಿ?

Published : May 06, 2023, 02:57 PM IST
Radhika Kumaraswamy: ಏಳು ಭಾಷೆಗಳಲ್ಲಿ ಏಕಕಾಲದಲ್ಲಿ ನಾಯಕಿ- ಏನಿದು ಹೊಸ ಸುದ್ದಿ?

ಸಾರಾಂಶ

ರಾಧಿಕಾ ಕುಮಾರಸ್ವಾಮಿ ತಮ್ಮ ಅಭಿಮಾನಿಗಳಿಗೆ ಭರ್ಜರಿ ಗುಡ್​ ನ್ಯೂಸ್​ ಕೊಟ್ಟಿದ್ದಾರೆ. ಏಕಕಾಲದಲ್ಲಿ ಏಳು ಭಾಷೆಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ.  ಏನಿದು ಸುದ್ದಿ?   

ಅಮ್ಮನಾದ ಮೇಲೂ 36ನೇ ವಯಸ್ಸಿನಲ್ಲಿಯೂ 20ರ ಚೆಲುವೆಯಂತೆ ಕಂಗೊಳಿಸುತ್ತಿದ್ದಾರೆ ನಟಿ  ರಾಧಿಕಾ ಕುಮಾರಸ್ವಾಮಿ (Radhika Kumaraswamy). ಈಗಾಗಲೇ ಹಲವಾರು ಚಿತ್ರಗಳಲ್ಲಿ ಚಿತ್ರ ರಸಿಕರ ಹೃದಯ ಕದ್ದ ಈ ನಟಿ, ಕೆಲ ವರ್ಷ ಚಿತ್ರರಂಗದಿಂದ ದೂರ ಸರಿದಿದ್ದರು. ದಮಯಂತಿ (Damayanti) ಸಿನಿಮಾ ಮೂಲಕ ಕಮ್‌ಬ್ಯಾಕ್‌ ಮಾಡಿದ್ದರು. ಕನ್ನಡ, ತೆಲುಗು, ತಮಿಳಿನಲ್ಲಿ ಬಿಡುಗಡೆ ಆಗಿದ್ದ ಈ ಸಿನಿಮಾ ಬಳಿಕ ಅವರ ಬೇರಾವ ಚಿತ್ರ ತೆರೆಗೆ ಬಂದಿರಲಿಲ್ಲ. ಇದೀಗ ಮತ್ತೊಂದು ಹೊಸ ಪ್ರಾಜೆಕ್ಟ್‌ ಮೂಲಕ ತೆರೆ ಮೇಲೆ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ. ಇವರು ನಾಯಕಿಯಾಗಿ ನಟಿಸುತ್ತಿರುವ ‘ಅಜಾಗ್ರತ’ (Ajagrata) ಚಿತ್ರದ ಮುಹೂರ್ತ ಸಮಾರಂಭ ಇದೇ  13 ರಂದು ಹೈದರಾಬಾದಿನ  ರಾಮನಾಯ್ಡು ಸ್ಟುಡಿಯೋದಲ್ಲಿ ನಡೆಯಲಿದೆ‌. ಈ ಚಿತ್ರದ ವಿಶೇಷ ಏನೆಂದರೆ, ‘ಅಜಾಗ್ರತ’ ಚಿತ್ರ ಒಂದೇ ಭಾಷೆಯಲ್ಲಿ ತಯಾರಾಗುತ್ತಿಲ್ಲ. ಬದಲಿಗೆ  ಏಳು ಭಾಷೆಯಲ್ಲಿ ಈ ಚಿತ್ರ ರಿಲೀಸ್​ ಆಗಲಿದೆ. ಈ ಸಿನಿಮಾದ ಮೂಲಕ ರಾಧಿಕಾ ಕುಮಾರಸ್ವಾಮಿ ಅವರು ಸಪ್ತಭಾಷೆಯ ನಾಯಕಿನೂ  ಆಗುತ್ತಿದ್ದಾರೆ. ಸಪ್ತ ಭಾಷೆಯಲ್ಲಿ ನಿರ್ಮಾಣ ಆಗುತ್ತಿರುವ  ಈ ಚಿತ್ರದ ಒಂದಷ್ಟು ಅಧಿಕೃತ ಮಾಹಿತಿ ಇದೀಗ ಹೊರ ಬಿದ್ದಿದೆ. ಪ್ರತಿ ಭಾಷೆಯಲ್ಲೂ ಆಯಾ ಭಾಷೆಯ  ನಟರು ಅಭಿನಯಿಸುತ್ತಿದ್ದಾರೆ.   ಬಹು ಭಾಷೆಯ ಬಹು ತಾರೆಯರ ಈ ಚಿತ್ರದಲ್ಲಿ ನುರಿತ ತಂಡವೇ ಇದೆ. ನುರಿತ ಪ್ರತಿಭಾವಂತರೇ ಆಯ್ಕೆ ಆಗಿದ್ದಾರೆ ಎನ್ನಲಾಗಿದೆ. 

ಕನ್ನಡ ಸೇರಿದಂತೆ ಏಳು ಭಾಷೆಗಳಲ್ಲಿ  ರವಿರಾಜ್ ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.  ಯುವ ನಿರ್ದೇಶಕ ಎಂ.ಶಶಿಧರ್ (M. Sashidhar)  ನಿರ್ದೇಶಿಸುತ್ತಿದ್ದಾರೆ. ಎಂ.ಎಸ್.ಸಿ ಇನ್ ಫಿಲಂ ಮೇಕಿಂಗ್ ಕಲಿತಿರುವ ನಿರ್ದೇಶಕ ಶಶಿಧರ್ ವಿ, ಎಫ್ ಎಕ್ಸ್ ನಲ್ಲೂ ಪರಿಣತಿ ಹೊಂದಿದ್ದಾರೆ. ಅಶ್ವಿನಿ ರಾಮ್ ಪ್ರಸಾದ್ ಅವರ ಪುತ್ರ ಅರುಣ್ ರಾಮ್ ಪ್ರಸಾದ್ ಅಭಿನಯದ ‘ಘಾರ್ಗ’ ಚಿತ್ರವನ್ನು ನಿರ್ದೇಶಿಸಿರುವ ಶಶಿಧರ್ ಅವರಿಗೆ ಇದು ಎರಡನೇ ನಿರ್ದೇಶನದ ಚಿತ್ರ. ಅಶ್ವಿನಿ ರಾಮ್‌ ಪ್ರಸಾದ್ ಅವರ ಪುತ್ರ ಅರುಣ್ ರಾಮ್‌ ಪ್ರಸಾದ್ ಈ ಚಿತ್ರದಲ್ಲಿ ನಟಿಸಿದ್ದರು. 'ಅಜಾಗ್ರತ' ಒಂದು ಸೈಕಾಲಜಿಕಲ್  ಕ್ರೈಂ ಥ್ರಿಲ್ಲೆರ್ ಕಥೆ ಹೊಂದಿರುವ ಚಿತ್ರವಾಗಿದೆ. ಏಳು ಭಾಷೆಗಳಲ್ಲಿಯೂ ನೇರ ಚಿತ್ರೀಕರಣವಾಗುತ್ತಿರುವುದು ಇದರ ವಿಶೇಷ. 

'ಅಘೋರಿ'ಯಾಗಿ ಬಂದ ರಾಧಿಕಾ: 'ಭೈರಾದೇವಿ' ಲುಕ್'ಗೆ ಫ್ಯಾನ್ಸ್ ಫಿದಾ

ಹೀಗೆ ಒಳ್ಳೆ ವಿಭಿನ್ನ ಅನುಭವ ಪಡೆದಿರೋ ಶಶಿಧರ್ ಇದೀಗ 'ಅಜಾಗ್ರತ' ಸಿನಿಮಾ ಮೂಲಕ ಸಪ್ತಭಾಷೆಯಲ್ಲಿ ಸಿನಿಮಾ ಮಾಡುತ್ತಿದ್ದಾರೆ. 'ಅಜಾಗ್ರತ' ಸಿನಿಮಾ ಒಂದು ವಿಶೇಷ ಸಿನಿಮಾ ಅನಿಸುತ್ತಿದೆ. ಈ ಚಿತ್ರದಲ್ಲಿ ಒಂದು ವಿಶೇಷ ಕಥೆಯನ್ನು ತೆಗೆದುಕೊಳ್ಳಲಾಗಿದೆ. ಸೈಕಾಲಾಜಿಕಲ್ ಕ್ರೈಂ ಥ್ರಿಲ್ಲರ್ ಕಥೆಯನ್ನ ಈ ಚಿತ್ರ ಹೊಂದಿದೆ. ಇದಕ್ಕಾಗಿಯೇ ಈ ಸಿನಿಮಾದ ಕೆಲಸ ಕೂಡ ಶುರು ಆಗಿದೆ ಎಂದು ತಿಳಿದುಬಂದಿದೆ. 'ಅಜಾಗ್ರತ' ಸಿನಿಮಾದಲ್ಲಿ ರಾಧಿಕಾ ಕುಮಾರಸ್ವಾಮಿ ಜೊತೆ ಸ್ಪರ್ಶ ರೇಖಾ, ಚಿತ್ರಾ ಶೆಣೈ, ದೇವರಾಜ್, ಸುಚೇಂದ್ರ ಪ್ರಸಾದ್, ವಿನಯ ಪ್ರಸಾದ್ ಅಭಿನಯಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಚಿತ್ರ ಪ್ರೇಮಿಗಳಿಗೆ ಹೊಸ ಅನುಭವ ಕೊಡಲು ಅವರವರ ಭಾಷೆಯಲ್ಲಿ ಚಿತ್ರೀಕರಿಸಿ, ಅವರವರಭಾಷೆ ಯಲ್ಲೇ  'ಅಜಾಗ್ರತ' ಚಿತ್ರವನ್ನು ಬಿಡುಗಡೆ ಮಾಡಲು ಚಿತ್ರ ತಂಡ ತಯಾರಿ ನಡೆಸಿದೆ.
 
ತೆಲುಗು ಭಾಷೆಯ ರಾವ್ ರಮೇಶ್, ಪುಷ್ಮ ಸುನಿಲ್, ತಮಿಳು ಚಿತ್ರರಂಗದಿಂದ ಆದಿತ್ಯ ಮೆನನ್, ಸಮುದ್ರ ಕಣಿ, ಬಾಲಿವುಡ್‌ನ ಶ್ರೇಯಸ್ ತಲಪಾಡಿ ಕೂಡ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಒಟ್ಟಾರೆ, ಸಪ್ತಭಾಷೆಯಲ್ಲಿ ಬರ್ತಿರೋ 'ಅಜಾಗ್ರತ' ಸಿನಿಮಾ ಆಯಾ ಭಾಷೆಯಲ್ಲಿ ತಯಾರಿಯಾಗಿ ಆಯಾ ಭಾಷಾ ಪ್ರೇಮಿಗಳಿಗೆ ಹೊಸ ರೀತಿಯ ಅನುಭವ ಕೊಡಲಿದೆ.

ರಾಧಿಕಾ ಕುಮಾರಸ್ವಾಮಿ ಎಲ್ಲಾ ಸೀರೆಗಳನ್ನು ಡಿಸೈನ್‌ ಮಾಡಿದ್ದು ನಾನೇ: ರವಿಚಂದ್ರನ್

 ಇನ್ನು ರಾಧಿಕಾ ಅವರ  ಭೈರಾದೇವಿ ಸಿನಿಮಾ ಕೂಡ ತೆರೆ ಕಾಣಬೇಕಿದೆ. ಅದರ ಪ್ರಚಾರವನ್ನೂ ಇನ್ನೇನು ಆರಂಭಿಸಬೇಕಿದೆ. ಚಿತ್ರ ಅತಿ ಶೀಘ್ರದಲ್ಲಿಯೇ ಬರುತ್ತದೆ ಅನ್ನುವ ಮಾಹಿತಿ ಕೂಡ ಇದೆ. ಒಟ್ಟಾರೆ, ಭೈರಾದೇವಿ ಬರೋ ಮೊದಲೇ ರಾಧಿಕಾ ಕುಮಾರಸ್ವಾಮಿ ಇನ್ನೂ ಒಂದು ಸಿನಿಮಾ ಈಗ ಒಪ್ಪಿದ್ದಾರೆ.  

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?